ಕೊರೊನಾ ವೈರಸ್ ಹುಟ್ಟು ಪತ್ತೆಗೆ WHO ತಂಡದಿಂದ ಚೀನಾ ಭೇಟಿ

ವಾಷಿಂಗ್ಟನ್ , ಜುಲೈ 4: ಕೊರೊನಾ ವೈರಸ್ ಹುಟ್ಟಿನ ಬಗ್ಗೆ ಮಾಹಿತಿ ಪಡೆಯಲು ವಿಶ್ವ ಆರೋಗ್ಯ ಸಂಸ್ಥೆಯ ತಂಡ ಮುಂದಿನ ವಾರ ಚೀನಾಕ್ಕೆ ಭೇಟಿ ನೀಡಲಿದೆ.

Recommended Video

      ತುಂಬಿ ಹರಿದ ಕಾಗಿಣಾ ನದಿ, ನಡುಗಡ್ಡೆಯಲ್ಲಿ ಸಿಲುಕಿದ್ದ 8 ಜನರ ರಕ್ಷಣೆ | Oneindia Kannada

      ಚೀನಾವು ಕೊರೊನಾ ವೈರಸ್ ಹೇಗೆ ಹುಟ್ಟಿಕೊಂಡಿತು ಎಂಬುದರ ಬಗ್ಗೆ ಸರಿಯಾದ ಮಾಹಿತಿ ನೀಡಿಲ್ಲ, ಹೀಗಾಗಿ ತಾವೇ ಖುದ್ದಾಗಿ ಹೋಗಿ ಪರಿಶೀಲನೆ ನಡೆಸಲು ಮುಂದಾಗಿದ್ದಾರೆ.

      ಕೊರೊನಾ ವೈರಸ್ ಹುಟ್ಟಿಕೊಂಡ ಬಗೆ ಹೇಗೆ, ಅದರ ಹುಟ್ಟು, ಅದು ಮನುಷ್ಯನಿಗೆ ಹರಡಿದ್ದು ಹೇಗೆ ಎಂಬುದರ ಕುರಿತು ಅಧ್ಯಯನ ನಡೆಸಲಿದ್ದಾರೆ. ಕೊರೊನಾ ವೈರಸ್ ಇಡೀ ವಿಶ್ವದಾದ್ಯಂತ 5 ಲಕ್ಷ ಮಂದಿಯನ್ನು ಬಲಿತೆಗೆದುಕೊಂಡಿದೆ.

      WHO Team Will Viait China To Investigate Coronavirus Origins

      ಅಧ್ಯಯನ ನಡೆಸಿ ಕೊರೊನಾ ವೈರಸ್ ಹುಟ್ಟಿನ ಕುರಿತು ಮಾಹಿತಿ ಪಡೆದುಕೊಳ್ಳುವುದೇ ಸೂಕ್ತ ಎಂಬ ನಿರ್ಧಾರಕ್ಕೆ ಬಂದಿದ್ದೇವೆ ಎಂದು ವಿಜ್ಞಾನಿ ಡಾ. ಸೌಮ್ಯಾ ಸ್ವಾಮಿನಾಥನ್ ಹೇಳಿದ್ದಾರೆ.

      ಅಧಿಕಾರಿಗಳು ಚೀನಾಗೆ ಹೋಗುವ ಕುರಿತು ಚೀನಾ ಸರ್ಕಾರದ ಜೊತೆ ಮಾತುಕತೆ ನಡೆದಿದೆ. ಮುಂದಿನ ವಾರ ತೆರಳಲಿದ್ದಾರೆ ಎಂದರು.

      ಹೇಗೆ ಪ್ರಾಣಿಯಿಂದ ವೈರಸ್ ಮನುಷ್ಯನಿಗೆ ಹರಡಿದೆ. ಡಿಸೆಂಬರ್ 31 ರಿಂದ ಚೀನಾದಲ್ಲಿ ನ್ಯುಮೋನಿಯಾ ಪ್ರಕರಣಗಳು ಹೆಚ್ಚಾಗಿದ್ದವು.

      ಇದು ಬಾವುಲಿಗಳಿಂದ ಬರುವ ನಿಪಾಹ್ ವೈರಸ್‌ ರೀತಿಯ ಒಂದು ವೈರಸ್, ಸಾಕಷ್ಟು ಬಾವುಲಿಗಳಲ್ಲಿ ಕೊರೊನಾ ವೈರಸ್ ಇರುವುದು ಪತ್ತೆಯಾಗಿದೆ. ಒಟ್ಟು 500 ಬಗೆಯ ಕೊರೊನಾ ವೈರಸ್‌ಗಳಿವೆ.

      ಚೀನಾದಲ್ಲಿ ಕೊರೊನಾ ವೈರಸ್ ವ್ಯಾಪಕವಾಗಿ ಹಡರುತ್ತಿದೆ ಎಂದು ಜನವರಿ 9 ರಂದೇ ವಿಶ್ವ ಆರೋಗ್ಯ ಸಂಸ್ಥೆ ಎಚ್ಚರಿಕೆ ನೀಡಿತ್ತು. ಫೆಬ್ರವರಿ 11 ರಂದು ಅದಕ್ಕೆ ನೋವೆಲ್ ಕೊರೊನಾವೈರಸ್ ಎಂದು ಹೆಸರಿಡಲಾಯಿತು ಬಳಿಕ ಅದನ್ನು ಕೊವಿಡ್-19 ಎಂದು ಕರೆಯಲಾಯಿತು.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+