ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕ್ಯಾಪಿಟಲ್ ಮುತ್ತಿಗೆ ವೇಳೆ ಭಾರತದ ತ್ರಿವರ್ಣ ಧ್ವಜ ಬಳಕೆ ಏಕೆ?

|
Google Oneindia Kannada News

ವಾಷಿಂಗ್ಟನ್, ಜನವರಿ 7: ಯುಎಸ್ಎನಲ್ಲಿ ಅಧಿಕಾರ ಹಸ್ತಾಂತರ ಪ್ರಕ್ರಿಯೆ ಅಂತಿಮ ಹಂತದಲ್ಲಿರುವಾಗ ಡೊನಾಲ್ಡ್ ಟ್ರಂಪ್ ಅವರ ಬೆಂಬಲಿಗರು ಕ್ಯಾಪಿಟಲ್ ಮುತ್ತಿಗೆ ಹಾಕಿ ಪ್ರತಿಭಟನೆ ಮಾಡಿದ್ದಾರೆ. ಈ ವೇಳೆ ಪ್ರತಿಭಟನೆಗಾರರು ಭಾರತದ ತ್ರಿವರ್ಣ ಧ್ವಜ ಹಿಡಿದುಕೊಂಡಿರುವುದು ಕಂಡು ಬಂದಿದೆ. ಈ ಬಗ್ಗೆ ಭಾರತದ ರಾಜಕಾರಣಿ ವರುಣ್ ಗಾಂಧಿ ಪ್ರಶ್ನಿಸಿದ್ದಾರೆ.

ಈ ನಡುವೆ ವಾಷಿಂಗ್ಟನ್ ಡಿಸಿಯಲ್ಲಿ ತುರ್ತು ಪರಿಸ್ಥಿತಿಯನ್ನು ಮೇಯರ್ ಮುರಿಯಲ್ ಬೌಸರ್ ಘೋಷಿಸಿದ್ದಾರೆ, ಸಾರ್ವಜನಿಕ ತುರ್ತು ಪರಿಸ್ಥಿತಿಯನ್ನು ಇನ್ನು 15ದಿನಗಳ ಕಾಲ (ಜನವರಿ 21) ವಿಸ್ತರಿಸಲಾಗಿದೆ, ಎಲ್ಲೆಡೆ ಕರ್ಫ್ಯೂ ಜಾರಿಗೊಳಿಸಲಾಗಿದೆ ಎಂದು ಮೇಯರ್ ಹೇಳಿದ್ದಾರೆ. ಕ್ಯಾಪಿಟಲ್ ಹಿಲ್ಸ್ ಮೇಲೆ ಹಿಂಸಾತ್ಮಕ ದಾಳಿ ಮುಂದುವರೆದಿದ್ದರಿಂದ ಈ ಕ್ರಮ ಅನಿವಾರ್ಯವಾಗಿದೆ ಎಂದು ಮೇಯರ್ ಹೇಳಿದ್ದಾರೆ.

ಅಮೆರಿಕದ ಪ್ರಜಾಪ್ರಭುತ್ವದ ಮೇಲೆ ದಾಳಿ ಎಂದು ಟ್ವಿಟ್ಟರಲ್ಲಿ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿರುವ ಸಂದರ್ಭದಲ್ಲೇ ಪ್ರತಿಭಟನೆಗಾರರ ಜೊತೆ ಭಾರತದ ತ್ರಿವರ್ಣಧ್ವಜ ಕಾಣಿಸಿಕೊಂಡಿದ್ದೇಕೆ ಎಂದು ಹಲವಾರು ಮಂದಿ ಪ್ರಶ್ನಿಸಿದ್ದಾರೆ.

Varun Gandhi questions Why India Flag during US Capital breach protest

ಭಾರತದ ಪ್ರಧಾನಿ ಮೋದಿ ಸೇರಿದಂತೆ ವಿಶ್ವದ ಹಲವು ನಾಯಕರು ಈ ಪ್ರತಿಭಟನೆಯನ್ನು ಖಂಡಿಸಿ, ಶಾಂತಿ ಕಾಪಾಡುವಂತೆ ಕೋರಿದ್ದಾರೆ.

1936ರ ಬರ್ಲಿನ್ ಒಲಿಂಪಿಕ್ಸ್ ನಲ್ಲಿ ಅಡಾಲ್ಫ್ ಹಿಟ್ಲರ್ ಮುಂದೆ ಭಾರತ ಧ್ವಜ ಹಿಡಿದು ನಡೆದ ಘಟನೆಯನ್ನು ಕ್ಯಾಪಿಟಲ್ ಹಿಲ್ಸ್ ಪ್ರತಿಭಟನೆಗೆ ಹೋಲಿಸಲಾಗಿದೆ. ಹಲವಾರು ಮಂದಿ ಭಾರತದ ಧ್ವಜ ತಂದು ಗೊಂದಲ ಮೂಡಿಸಲಾಗುತ್ತಿದೆ. ಇದು ಅನಗತ್ಯ ಎಂದಿದ್ದಾರೆ.

ವರುಣ್ ಗಾಂಧಿ ಟ್ವೀಟಿಗೆ ಪ್ರತಿಕ್ರಿಯಿಸಿರುವ ಅನೇಕ ಮಂದಿ, ನಿಮ್ಮ ನಾಯಕ(ಮೋದಿ) ರು ಟ್ರಂಪ್ ಚುನಾವಣೆ ಸಂದರ್ಭದಲ್ಲಿ ನೆರವಾಗಿದ್ದು ಮರೆತು ಹೋಗಿದೆಯೆ. ಟ್ರಂಪ್ ಬೆಂಬಲಿಸುವ ಇಂಡೋ ಅಮೆರಿಕನ್ನರು ಇದ್ದಾರೆ. ಅವರಲ್ಲೇ ಯಾರೋ ಭಾರತ ಧ್ವಜ ಹಿಡಿದಿರಬಹುದು ಎಂದಿದ್ದಾರೆ.

ಇಂಥ ಪ್ರತಿಭಟನೆಗಳನ್ನು ಬೆಂಬಲಿಸುವ ಆರೆಸ್ಸೆಸ್ ನೆರವು ಪಡೆದುಕೊಳ್ಳುವ ಇಂಡೋ ಅಮೆರಿಕನ್ನರನ್ನು ಉಗ್ರರ ಪಟ್ಟಿಗೆ ಸೇರಿಸಬೇಕು ಎಂದು ಕೆಲವರು ಆಗ್ರಹಿಸಿದ್ದಾರೆ.

ಬಹುಶಃ ಇದು ಕ್ರಿಕೆಟ್ ಮ್ಯಾಚ್ ಎಂದು ತಿಳಿದು ಬಾವುಟ ಹಿಡಿದುಕೊಂಡು ಬಂದಿರಬಹುದು ಎಂದು ಗೇಲಿ ಮಾಡಿದ್ದಾರೆ.

English summary
Indian politician Varun Gandhi questioned Why India Flag is used during US Capital breach protest.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X