• search
  • Live TV
ವಾಷಿಂಗ್ಟನ್ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಅಮೆರಿಕದಲ್ಲಿ ಕೊರೊನಾ ಸಾವಿನ ಸಂಖ್ಯೆ ಬಗ್ಗೆ ಭಯಹುಟ್ಟಿಸಿದ ಅಧ್ಯಯನ

|

ವಾಷಿಂಗ್ಟನ್, ಮಾರ್ಚ್ 26: ಕೊರೊನಾ ವೈರಸ್‌ ಇಷ್ಟೊಂದು ಡೆಡ್ಲಿ ಆಗುತ್ತೆ ಎಂದು ಯಾರೂ ಕೂಡ ಊಹಿಸಿರಲಿಲ್ಲ. ಚೀನಾದಲ್ಲಿ ಉಂಟಾದ ಸಾವುಗಳನ್ನು ಕಂಡು ಬಹುಶಃ ಇದು ಚೀನಾಗೆ ಮಾತ್ರ ಸೀಮಿತ ಎಂದು ಉಳಿದ ದೇಶಗಳು ಆರಾಮಾಗಿ ಇದ್ದವು. ಆದರೆ, ಅದ್ಯಾವಾಗ ಕೊರೊನಾ ಬೇರೆ ಬೇರೆ ದೇಶಗಳಿಗೂ ಹರಡುತ್ತಿದೆ ಎಂದು ಗೊತ್ತಾಯಿತೋ ಆಗ ಇಡೀ ವಿಶ್ವದಲ್ಲಿ ಭಯ ಹುಟ್ಟಿಕೊಂಡಿತ್ತು.

ಮೂರನೇ ವಿಶ್ವಯುದ್ದ ನಡೆಯದೆಯೇ ಜಗತ್ತಿನಲ್ಲಿ ಮಾರಣಹೋಮ ಆಗಬಹುದು ಎಂಬುದಕ್ಕೆ ಚೀನಾ ನಾಂದಿಯಾಯಿತು. ಆದರೆ, ಚೀನಾಗಿಂದ ಘನಘೋರವಾಗಿರುತ್ತೆ ಉಳಿದ ದೇಶಗಳ ಸ್ಥಿತಿ ಎಂದು ಬಳಿಕವೂ ನಿರೀಕ್ಷೆ ಮಾಡಿರಲಿಲ್ಲ. ಇದೀಗ, ಇಟಲಿಯಲ್ಲಿ ಕೊರೊನಾಗೆ ಬಲಿಯಾದವರ ಸಂಖ್ಯೆ ನೋಡುತ್ತಿದ್ದರೆ ಮಾನವ ಸಂಕುಲಕ್ಕೆ ಆತಂಕ ಹುಟ್ಟಿಕೊಂಡಿದೆ.

ಮಾರ್ಚ್ 26 ರಂದು ಭಾರತದಲ್ಲಿ ಅತಿ ಹೆಚ್ಚು ಕೊರೊನಾ ಕೇಸ್ ದಾಖಲು

ಈ ನಡುವೆ ಅಮೆರಿಕದಲ್ಲಿ ಕೊರೊನಾ ಸಾವಿನ ಸಂಖ್ಯೆ ವೇಗವಾಗಿ ಹೆಚ್ಚುತ್ತಿದೆ. ಇದೀಗ, ಅಧ್ಯಯನವೊಂದು ಬಹಿರಂಗಪಡಿಸಿರುವ ಮಾಹಿತಿ ಪ್ರಕಾರ, ಯುಎಸ್‌ನಲ್ಲಿ ಕೊರೊನಾ ಸಾವಿನ ಸಂಖ್ಯೆ ಭಾರಿ ದೊಡ್ಡದಿದೆ ಎನ್ನುತ್ತಿದೆ. ಮುಂದೆ ಓದಿ....

80 ಸಾವಿರ ದಾಟಲಿದೆಯಂತೆ ಸಾವಿನ ಸಂಖ್ಯೆ

80 ಸಾವಿರ ದಾಟಲಿದೆಯಂತೆ ಸಾವಿನ ಸಂಖ್ಯೆ

ಅಮೆರಿಕದಲ್ಲಿ ಕೊರೊನಾ ಸಾವಿನ ಸಂಖ್ಯೆ ಸುಮಾರು 80 ಸಾವಿರ ದಾಟಬಹುದು ಎಂದು ಅಧ್ಯಯನ ವರದಿಯೊಂದು ಹೇಳಿದೆ. ಈ ಸಂಖ್ಯೆಯ ಲೆಕ್ಕಾಚಾರ ನೋಡಿ ಇಡೀ ಜಗತ್ತು ಅಚ್ಚರಿಗೊಂಡಿದೆ. ಯುಎಸ್‌ನಲ್ಲಿ ಇಷ್ಟು ದೊಡ್ಡ ಪ್ರಮಾಣದಲ್ಲಿ ಸಾವು ಸಂಭವಿಸಬಹುದಾ, ಒಂದು ವೇಳೆ ಇದೇ ನಿಜವಾದರೇ ಅಮೆರಿಕ ಕಥೆ ಏನು ಎಂಬ ಆತಂಕದಲ್ಲಿದೆ.

ಈಗ ಸಾವಿರ ಆಗಿದೆ

ಈಗ ಸಾವಿರ ಆಗಿದೆ

ಸದ್ಯ ಅಮೆರಿಕದಲ್ಲಿ ಕೊರೊನಾ ಸೋಂಕಿನಿಂದ ಸತ್ತವರ ಸಂಖ್ಯೆ 1100. ಸುಮಾರು 75,665 ಜನರಲ್ಲಿ ಸೋಂಕು ಕಾಣಿಸಿಕೊಂಡಿದೆ. ಅದರಲ್ಲಿ 1800 ಜನ ಚೇತರಿಕೆ ಕಂಡಿದ್ದಾರೆ ಎನ್ನಲಾಗಿದೆ. ಪ್ರಸ್ತುತ ಸಾವಿರದಲ್ಲಿ ಇರುವ ಸಾವಿನ ಸಂಖ್ಯೆ ಮುಂದಿನ ದಿಗಳಲ್ಲಿ 80 ಸಾವಿರ ಆಗುತ್ತೆ ಎಂದು ಮುನ್ಸೂಚನೆ ನೀಡುತ್ತಿದೆ ಅಧ್ಯಯನ.

ವೈದ್ಯನಿಗೇ ಕೊರೊನಾ: ಚಿಕಿತ್ಸೆ ಪಡೆದವರು ಸೇರಿ 800 ಜನ ಕ್ವಾರಂಟೈನ್‌ನಲ್ಲಿ

ಕೊರೊನಾ ತೀವ್ರ ಆದರೆ...

ಕೊರೊನಾ ತೀವ್ರ ಆದರೆ...

ಏಪ್ರಿಲ್ ತಿಂಗಳಲ್ಲಿ ಕೊರೊನಾ ಸೋಂಕು ಮತ್ತಷ್ಟು ತೀವ್ರವಾಗಲಿದೆ ಎಂದು ಅಧ್ಯಯನಗಳು ಹೇಳುತ್ತಿದೆ. ಏಪ್ರಿಲ್ ಎರಡನೇ ವಾರದ ವೇಳೆಗೆ ಕೊರೊನಾ ಭೀಕರತೆ ಹೆಚ್ಚಾಗುತ್ತದೆ. ಅಂದಾಜಿನ ಪ್ರಕಾರ, ಅಲ್ಲಿಂದ ಒಂದು ದಿನಕ್ಕೆ ಸುಮಾರು 2300 ಜನರು ಸಾಯಬಹುದು ಎಂದು ಹೇಳಲಾಗುತ್ತಿದೆ. ಅಗತ್ಯ ಕ್ರಮ ಕೈಗೊಂಡರೂ, ಸಾಮಾಜಿಕ ಅಂತರ ಕಾಯ್ದುಕೊಂಡರೂ ಇಂತಹ ಸಾವು ಸಂಭವಿಸಬಹುದು ಎನ್ನುತ್ತಿದ್ದಾರೆ.

ಚೀನಾ ಹಿಂದಿಕ್ಕಿದ ಇನ್ನೊಂದು ದೇಶ

ಚೀನಾ ಹಿಂದಿಕ್ಕಿದ ಇನ್ನೊಂದು ದೇಶ

ಚೀನಾ ಬಿಟ್ಟರೆ ಇಟಲಿಯಲ್ಲಿ ಹೆಚ್ಚು ಜನ ಸತ್ತಿದ್ದರು. ಈಗ, ಚೀನಾ ದೇಶವನ್ನು ಹಿಂದಿಕ್ಕಿ ಇಟಲಿಯನ್ನು ಫಾಲೋ ಮಾಡುತ್ತಿದೆ ಸ್ಪೇನ್ ದೇಶ. ಸ್ಪೇನ್ ದೇಶದಲ್ಲಿ ಇದುವರೆಗೂ 4145 ಜನರು ಪ್ರಾಣ ಕಳೆದುಕೊಂಡಿದ್ದಾರೆ. ಬಹುಶಃ ಮುಂದಿನ ದಿನದಲ್ಲಿ ಈ ಸಾವಿನ ಸಂಖ್ಯೆ ಬಹಳ ದೊಡ್ಡ ಮಟ್ಟಕ್ಕೆ ಹೋಗಲಿದೆ. ಒಟ್ಟಾರೆ ಜಗತ್ತಿನಲ್ಲಿ 23,028 ಜನರು ಸಾವನ್ನಪ್ಪಿದ್ದಾರೆ.

21 ದಿನ ಲಾಕ್ ಡೌನ್ ಯಾಕೆ.? ಹಿಂದಿದೆ ವೈಜ್ಞಾನಿಕ ಕಾರಣ.!

English summary
COVID-19 could lead to more than 80,000 deaths in the US and overwhelm hospital capacity nationally as soon as early April even if social distancing measures are respected, new research has showed.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X