• search
  • Live TV
ವಾಷಿಂಗ್ಟನ್ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಟ್ರಂಪ್ ಎಡವಟ್ಟಿನಿಂದ ಲಕ್ಷಾಂತರ ಜನ ಬೀದಿಪಾಲು: ಬಿಡೆನ್ ವಾಗ್ದಾಳಿ

|

ಡೊನಾಲ್ಡ್ ಟ್ರಂಪ್ ಮಾಡಿಕೊಂಡ ಎಡವಟ್ಟಿನ ಪರಿಣಾಮ ಲಕ್ಷಾಂತರ ಅಮೆರಿಕನ್ನರು ಕೆಲಸ ಕಳೆದುಕೊಂಡು ನರಳಾಡುವಂತಾಗಿದೆ ಎಂದು ಬಿಡೆನ್ ಆರೋಪ ಮಾಡಿದ್ದಾರೆ. ಈ ಮೂಲಕ ಅಧ್ಯಕ್ಷೀಯ ಚುನಾವಣೆಯಲ್ಲಿ ಟ್ರಂಪ್-ಬಿಡೆನ್ ಮಧ್ಯೆ ವಾಗ್ದಾಳಿ ಮುಂದುವರಿದಿದೆ. ಜೋ ಬಿಡೆನ್ 'ಡೆಮಾಕ್ರಟಿಕ್' ಅಧ್ಯಕ್ಷೀಯ ಅಭ್ಯರ್ಥಿ ಹಾಗೂ ಟ್ರಂಪ್ ಎದುರಾಳಿಯಾಗಿದ್ದಾರೆ. ಈಗಾಗಲೇ ಚುನಾವಣಾ ಪೂರ್ವ ಸಮೀಕ್ಷೆಗಳು ಜೋ ಬಿಡೆನ್ ಪರ ಫಲಿತಾಂಶ ನೀಡುತ್ತಿರುವ ಬೆನ್ನಲ್ಲೇ ಬಿಡೆನ್ ತಮ್ಮ ಎದುರಾಳಿ ಟ್ರಂಪ್ ವಿರುದ್ಧ ವಾಗ್ದಾಳಿ ಮುಂದುವರಿಸಿದ್ದಾರೆ.

ಲಾಸ್‌ ವೆಗಾಸ್‌ ಹಾಗೂ ನೆವಾಡ ಪ್ರಾಂತ್ಯದಲ್ಲಿ ನಡೆದ ಪ್ರಚಾರ ಸಭೆಯಲ್ಲಿ ಮಾತನಾಡಿದ ಬಿಡೆನ್, ಒಬಾಮ ಹಾಗೂ ನನ್ನ ಆಡಳಿತಾವಧಿಯಲ್ಲಿ ನೆವಾಡ ಪ್ರಾಂತ್ಯದಲ್ಲಿ 2 ಲಕ್ಷಕ್ಕೂ ಹೆಚ್ಚು ಉದ್ಯೋಗ ಸೃಷ್ಟಿಯಾಗಿದ್ದವು. ಈ ಅವಕಾಶಗಳನ್ನೆಲ್ಲಾ ಟ್ರಂಪ್ ತಮ್ಮ ಆಡಳಿತದಲ್ಲಿ ಹಾಳು ಮಾಡಿದ್ದಾರೆ. ಟ್ರಂಪ್‌ ಅಧ್ಯಕ್ಷ ಗಾದಿಗೆ ಏರಿದ ನಂತರ ಉದ್ಯೋಗ ಪ್ರಮಾಣ ಕುಸಿದು ನಿರುದ್ಯೋಗ ಹೆಚ್ಚಾಗಿದೆ.

ಕೆಟ್ಟರೂ ಬುದ್ಧಿ ಬರಲಿಲ್ವಾ..? ಟ್ರಂಪ್ ಮಾಡಿದ ಎಡವಟ್ಟೇನು..?

ಈ ಮೂಲಕ ಟ್ರಂಪ್‌ ಆಡಳಿತದಲ್ಲಿ ಮಧ್ಯಮ ವರ್ಗ ಮತ್ತು ಬಡವರ ಬದುಕು ದುಸ್ತರವಾಗಿದೆ ಎಂದು ಟ್ರಂಪ್‌ಗೆ ಟಾಂಗ್ ಕೊಟ್ಟಿದ್ದಾರೆ.ಬಿಡೆನ್ ಪರ ಡೆಮಾಕ್ರಟಿಕ್ ಪಕ್ಷದ ಘಟಾನುಘಟಿ ನಾಯಕರ ದಂಡು ಪ್ರಚಾರದ ಅಖಾಡಕ್ಕೆ ಇಳಿದು, ಟ್ರಂಪ್ ಸೋಲಿಗೆ ಹವಣಿಸುತ್ತಿದೆ.

‘ಟ್ರಂಪ್ ಮತ್ತೆ ನಿಮಗೆ ಬೇಕಾ..?’

‘ಟ್ರಂಪ್ ಮತ್ತೆ ನಿಮಗೆ ಬೇಕಾ..?’

ಲಾಸ್‌ ವೆಗಾಸ್‌ ಹಾಗೂ ನೆವಾಡ ಪ್ರಾಂತ್ಯದಲ್ಲಿ ನಡೆದ ಪ್ರಚಾರ ಸಭೆಯಲ್ಲಿ ತಮ್ಮ ಭಾಷಣದುದ್ದಕ್ಕೂ ಟ್ರಂಪ್ ವಿರುದ್ಧ ಹರಿಹಾಯ್ದ ಜೋ ಬಿಡೆನ್, ಟ್ರಂಪ್ ಅವರ ವೈಯಕ್ತಿಕ ನಡವಳಿಕೆ ಹಾಗೂ ಅಜಾಗರೂಕ ವರ್ತನೆ ಅಮೆರಿಕದ ಮೇಲೆ ವ್ಯತಿರಿಕ್ತ ಪರಿಣಾಮ ಬೀರಿದೆ ಎಂದರು. ಅಲ್ಲದೆ ನಿಮ್ಮನ್ನ ಕೀಳಾಗಿ ಕಾಣುವ ಅಧ್ಯಕ್ಷನೆಂದರೆ ಟ್ರಂಪ್ ಮಾತ್ರ ಎನ್ನುವ ಮೂಲಕ, ಇನ್ನೊಮ್ಮೆ ಟ್ರಂಪ್ ಅಮೆರಿಕದ ಅಧ್ಯಕ್ಷರಾಗಬೇಕಾ ಎಂದು ಪ್ರಶ್ನಿಸಿದ್ದಾರೆ.

ಟ್ರಂಪ್ ವಿರುದ್ಧ ಕಮಲಾ ವಾಕ್‌ ಪ್ರಹಾರ

ಟ್ರಂಪ್ ವಿರುದ್ಧ ಕಮಲಾ ವಾಕ್‌ ಪ್ರಹಾರ

ಒಂದು ಪ್ರಾಂತ್ಯದಲ್ಲಿ ಬಿಡೆನ್ ಪ್ರಚಾರ ನಡೆಸುತ್ತಿದ್ದರೆ, ಮತ್ತೊಂದು ಭಾಗದಲ್ಲಿ ಕಮಲಾ ಹ್ಯಾರಿಸ್ ಅಬ್ಬರ ಜೋರಾಗಿದೆ. ಅರಿಜೊನಾದಲ್ಲಿ ಪ್ರಚಾರ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಕಮಲಾ ಹ್ಯಾರಿಸ್, ಟ್ರಂಪ್ ಕೊರೊನಾ ಸಂಕಷ್ಟ ನಿಭಾಯಿಸುವಲ್ಲಿ ಎಡವಟ್ಟು ಮಾಡಿಕೊಂಡಿರುವುದೇ ಆರ್ಥಿಕ ಸಂಕಷ್ಟ ಎದುರಾಗುವಂತೆ ಮಾಡಿದೆ ಎಂದರು. ಇಷ್ಟೆಲ್ಲದರ ಮಧ್ಯೆ ಕೊರೊನಾ ವೈರಸ್ ಅಮೆರಿಕ ಚುನಾವಣೆಯಲ್ಲಿ ದೊಡ್ಡ ಅಸ್ತ್ರವಾಗಿ ಬಳಕೆಯಾಗುತ್ತಿದೆ. ಒಂದ್ಕಡೆ ಟ್ರಂಪ್ ಕ್ರಮವನ್ನು ರಿಪಬ್ಲಿಕನ್ಸ್ ಸಮರ್ಥಿಸಿಕೊಂಡರೆ, ಡೆಮಾಕ್ರಟಿಕ್ ಪಡೆ ಟ್ರಂಪ್ ವಿರುದ್ಧ ತೀವ್ರ ವಾಗ್ದಾಳಿ ನಡೆಸುತ್ತಿದೆ.

ಅಮೆರಿಕ ಚುನಾವಣೆ Poll: ಯಾರಿಗೆ ಸೋಲು, ಯಾರಿಗೆ ಗೆಲುವು..?

ಅಖಾಡಕ್ಕೆ ವಾಪಸ್ ಬರ್ತಾರೆ ಟ್ರಂಪ್..!

ಅಖಾಡಕ್ಕೆ ವಾಪಸ್ ಬರ್ತಾರೆ ಟ್ರಂಪ್..!

ಒಂದು ಕಡೆ ಬಿಡೆನ್ ಮತ್ತೊಂದ್ಕಡೆ ಕಮಲಾ ಹ್ಯಾರಿಸ್ ಭರ್ಜರಿ ಚುನಾವಣಾ ಪ್ರಚಾರ ನಡೆಸುತ್ತಿದ್ದಾರೆ. ಆದರೆ ಈ ಹೊತ್ತಲ್ಲಿ ತಮ್ಮ ನಾಯಕ ಇಲ್ಲವಲ್ಲ ಎಂಬ ಕೊರಗು ಟ್ರಂಪ್ ಬೆಂಬಲಿಗರನ್ನ ಕಾಡುತ್ತಿದೆ. ಆದರೆ ಇನ್ನೇನು ಕೆಲವೇ ದಿನಗಳಲ್ಲಿ ಟ್ರಂಪ್ ಕೂಡ ಬಹುದೊಡ್ಡ ಮಟ್ಟದ ಪ್ರಚಾರ ಸಭೆಗಳನ್ನು ಆಯೋಜಿಸಲಿದ್ದಾರೆ ಎಂದು ಹೇಳಲಾಗುತ್ತಿದೆ. ಕೊರೊನಾ ಸೋಂಕಿನಿಂದ ಚೇತರಿಸಿಕೊಂಡಿರುವ ಟ್ರಂಪ್, ಚುನಾವಣಾ ಅಖಾಡಕ್ಕೆ ರೀ ಎಂಟ್ರಿ ಕೊಡೋದು ಪಕ್ಕಾ ಆಗಿದ್ದು ಪ್ರಚಾರ ಸಭೆಗಳ ಡೇಟ್ ಹಾಗೂ ಟೈಂ ಫಿಕ್ಸ್ ಆಗಬೇಕಿದೆ ಅಷ್ಟೇ.

ಸಮೀಕ್ಷೆಗಳಲ್ಲಿ ಸೋಲು ಕಂಡಿರುವ ಟ್ರಂಪ್

ಸಮೀಕ್ಷೆಗಳಲ್ಲಿ ಸೋಲು ಕಂಡಿರುವ ಟ್ರಂಪ್

ಈಗಾಗಲೇ ಚುನಾವಣಾ ಪೂರ್ವ ಸಮೀಕ್ಷೆಗಳಲ್ಲಿ ಡೊನಾಲ್ಡ್ ಟ್ರಂಪ್ ಸೋಲು ಕಂಡಿದ್ದಾರೆ. ಡೆಮಾಕ್ರಟಿಕ್ ಪಕ್ಷದ ಅಭ್ಯರ್ಥಿ ಜೋ ಬಿಡೆನ್ ಟ್ರಂಪ್‌ಗಿಂತ ಮುನ್ನಡೆ ಕಾಯ್ದುಕೊಂಡಿದ್ದಾರೆ. ಹೀಗಾಗಿಯೇ ಟ್ರಂಪ್ ಈ ರೀತಿ ಮತದಾನ ಪ್ರಕ್ರಿಯೆ ಮೇಲೆಯೇ ಆರೋಪ ಮಾಡುತ್ತಿದ್ದಾರೆ ಅನ್ನೋದು ಡೆಮಾಕ್ರಟಿಕ್ ಪಕ್ಷದವರ ಆರೋಪ. ಜಾರ್ಜ್ ಫ್ಲಾಯ್ಡ್ ಹತ್ಯೆ ನಂತರ ಭುಗಿಲೆದ್ದಿರುವ ಜನಾಂಗೀಯ ಸಂಘರ್ಷ ಟ್ರಂಪ್‌ಗೆ ಸಾಕಷ್ಟು ಹಿನ್ನಡೆ ಉಂಟಾಗಿದೆ. ಜೊತೆಗೆ ಕೊರೊನಾ ಸಂಕಷ್ಟ ಹಾಗೂ ಕ್ಯಾಲಿಫೋರ್ನಿಯ ಕಾಡ್ಗಿಚ್ಚು ಕೂಡ ಟ್ರಂಪ್‌ ಮರು ಆಯ್ಕೆಗೆ ದೊಡ್ಡ ಅಡ್ಡಿಯಾಗಿದೆ. ಹೀಗಾಗಿಯೇ ಟ್ರಂಪ್ ಅಂಚೆ ಮತದಾನದ ವಿರುದ್ಧ ಮಾತನಾಡುವ ಮೂಲಕ ಹೊಸ ಕ್ಯಾತೆ ತೆಗೆದಿದ್ದರು ಎಂಬುದು ವಿಪಕ್ಷ ನಾಯಕರ ಆರೋಪವಾಗಿತ್ತು. ಈ ವಾದ, ವಿವಾದ ಹಾಗೂ ಬೇಕು-ಬೇಡಗಳ ನಡುವೆಯೂ ಅಂಚೆ ಮತದಾನ ಮುನ್ನಡೆದಿದ್ದು, ಅಮೆರಿಕ ಅಧ್ಯಕ್ಷರ ಆಯ್ಕೆಗೆ ಕೌಂಟ್‌ಡೌನ್ ಶುರುವಾಗಿದೆ.

ನಿಮಗಿದು ಗೊತ್ತೇ..? ಈಗಾಗಲೇ 40 ಲಕ್ಷ ಅಮೆರಿಕನ್ನರು ವೋಟ್ ಹಾಕಿದ್ದಾರೆ..!

English summary
Biden alleges that the US unemployment rate has increased tremendously in the Trump administration. Biden alleges in an election campaign in province of Nevada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X