ಭಾರತದಿಂದ ಬರುವ ವಿಶೇಷ ವಿಮಾನಗಳಿಗೆ ಅಮೆರಿಕ ನಿರ್ಬಂಧ

ವಾಷಿಂಗ್ಟನ್, ಜೂನ್ 23: ಉಭಯ ದೇಶಗಳ ವಾಯುಯಾನ ಒಪ್ಪಂದವನ್ನು ಭಾರತ ಮುರಿದಿದೆ ಎಂದು ಆರೋಪಿಸಿರುವ ಅಮೆರಿಕವು ಭಾರತದ ವಿಶೇಷ ವಿಮಾನಗಳಿಗೆ ನಿರ್ಬಂಧ ಹೇರಿದೆ.

Recommended Video

      Karnataka government Fixed Charges for COVID-19 Treatment in Private Hospitals | Oneindia Kannada

      ಏಕಾಏಕಿ ಉಂಟಾದ ಕೊರೊನಾ ಬಿಕ್ಕಟ್ಟಿನ ಸಂದರ್ಭದಲ್ಲಿ ಏರ್‌ ಇಂಡಿಯಾವು ಅಮೆರಿಕದಲ್ಲಿರುವ ನಾಗರಿಕರನ್ನು ಕರೆತರಲು ವಿಶೇಷ ವಿಮಾನಗಳು ಕಳುಹಿಸಿದೆ, ಅದೇ ಸಂದರ್ಭದಲ್ಲಿ ಸಾರ್ವಜನಿಕರಿಗೆ ಟಿಕೆಟ್‌ನ್ನು ಕೂಡ ವಿತರಿಸಿದೆ ಎಂದು ಆರೋಪಿಸಲಾಗಿದೆ.

      ಅದೇ ಸಮಯದಲ್ಲಿ ಅಮೆರಿಕದಲ್ಲಿ ಕೂಡ ಭಾರತಕ್ಕೆ ವಿಮಾನ ಹಾರಾಟವನ್ನು ನಿಷೇಧಿಸಿದೆ.ಕೊರೊನಾ ವೈರಸ್ ಆರಂಭಕ್ಕೂ ಮೊದಲಿನ ವೇಳಾಪಟ್ಟಿಯನ್ನು ಏರ್‌ ಇಂಡಿಯಾ ತೋರಿಸುತ್ತಿದೆ.

      US Restricts Special Flights From India

      ಚಾರ್ಟರ್ ವಿಮಾನಗಳ ಹಾರಾಟಕ್ಕೂ ಮುನ್ನ ಭಾರತೀಯ ವಿಮಾನಯಾನ ಸಂಸ್ಥೆಗಳು ಡಾಟ್‌ಗೆ ಅರ್ಜಿ ಸಲ್ಲಿಸಬೇಕು. ಯುಎಸ್ ವಾಹಕಗಳ ಮೇಲಿನ ನಿರ್ಬಂಧವನ್ನು ಭಾರತ ತೆಗೆದುಹಾಕಿದ ಬಳಿಕ ನಿರ್ಬಂಧಗಳನ್ನು ಮರು ಪರಿಶೀಲಿಸಲಾಗುತ್ತದೆ ಎಂದು ಅಮೆರಿಕ ಹೇಳಿದೆ. ಅಮೆರಿಕದಲ್ಲಿ 2 ಮಿಲಿಯನ್ ಕೊರೊನಾ ಸೋಂಕಿತರಿದ್ದು,1 ಲಕ್ಷ ಮಂದಿ ಮೃತರಾಗಿದ್ದಾರೆ.

      ಕೊರೊನಾ ವೈರಸ್ ಬಿಕ್ಕಟ್ಟು ಆರಂಭವಾದ ದಿನದಿಂದ ಇಲ್ಲಿಯವರೆಗೆ ಅಮೆರಿಕದಿಂದ ಲಕ್ಷಾಂತರ ಭಾರತೀಯರನ್ನು ವಾಪಸ್ ಕರೆಸಿಕೊಳ್ಳಲಾಗಿದೆ. ಅಂತಾರಾಷ್ಟ್ರೀಯ ವಿಮಾನಗಳ ಹಾರಾಟ ರದ್ದಾಗಿದ್ದರೂ ವಂದೇ ಭಾರತ್ ಮಿಷನ್ ಯೋಜನೆಯಡಿಯಲ್ಲಿ ಲಕ್ಷಾಂತರ ಪ್ರಯಾಣಿಕರನ್ನು ಕರೆತರಲಾಗಿತ್ತು.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+