• search
  • Live TV
ವಾಷಿಂಗ್ಟನ್ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

24 ಗಂಟೆಯಲ್ಲಿ 1754 ಸಾವು, ಅಮೆರಿಕದಲ್ಲಿ ಸಾವಿನ ಸಂಖ್ಯೆ ಏರಿಕೆ

|

ವಾಷಿಂಗ್ಟನ್, ಮೇ 15: ಕೊರೊನಾ ಮಹಾಮಾರಿ ಯುಎಸ್‌ ದೇಶವನ್ನು ಸ್ಮಶಾನ ಮಾಡುತ್ತಿದೆ. ಪ್ರತಿದಿನವೂ ಸುಮಾರು ಎರಡು ಸಾವಿರದಷ್ಟು ಜನರನ್ನು ಬಲಿ ತೆಗೆದುಕೊಳ್ಳುತ್ತಿದೆ. ಕಳೆದ 24 ಗಂಟೆಯಲ್ಲಿ 1754 ಜನರು ಕೊವಿಡ್ ಸೋಂಕಿಗೆ ಬಲಿಯಾಗಿದ್ದಾರೆ.

ಅಮೆರಿಕದಲ್ಲಿ ಒಟ್ಟು 1,416,528 ಜನರಿಗೆ ಕೊರೊನಾ ಸೋಂಕು ತಗುಲಿದ್ದು, ಈವರೆಗೂ 85,813 ಸಾವನ್ನಪ್ಪಿದ್ದಾರೆ ಎಂದು ಜಾನ್ಸ್ ಹಾಪ್ಕಿನ್ಸ್ ಅಮೆರಿಕ ಸುದ್ದಿ ಸಂಸ್ಥೆ ವರದಿ ಮಾಡಿದೆ.

ನ್ಯೂಯಾರ್ಕ್, ನ್ಯೂಜೆರ್ಸಿ, ಇಲಿನಾಯ್ಸ್, ಮ್ಯಾಸಚೂಸೆಟ್ಸ್ ನಗರಗಳಲ್ಲಿ ಹೆಚ್ಚು ಸೋಂಕಿ ಪತ್ತೆಯಾಗಿದೆ. ಕ್ರಮವಾಗಿ ನಿನ್ನೆ 136, 219, 136, 167 ಪ್ರಕರಣಗಳು ಈ ನಗರಗಳಲ್ಲಿ ದಾಖಲಾಗಿದೆ.

ಆರೋಗ್ಯ ತಜ್ಞರ ಅಭಿಪ್ರಾಯ ಒಪ್ಪಲು ಸಾಧ್ಯವಿಲ್ಲ ಎಂದ ಟ್ರಂಪ್

ಒಟ್ಟಾರೆ ಕೇಸ್‌ ನೋಡುವುದಾರೆ, ನ್ಯೂಯಾರ್ಕ್ ನಗರದಲ್ಲಿ 353,096 ಸೋಂಕಿತರು ವರದಿಯಾಗಿದ್ದು, 27,426 ಜನರು ಸಾವನ್ನಪ್ಪಿದ್ದಾರೆ. ನ್ಯೂ ಜೆರ್ಸಿಯಲ್ಲಿ 144,024 ಜನರಿಗೆ ಕೊವಿಡ್ ತಗುಲಿದ್ದು, 9,946 ಜನರು ಮೃತಪಟ್ಟಿದ್ದಾರೆ.

ಇದುವರೆಗೂ ಜಗತ್ತಿನಲ್ಲಿ ಒಟ್ಟು 45 ಲಕ್ಷ (4,524,652) ಜನರಲ್ಲಿ ಕೊರೊನಾ ದೃಢವಾಗಿದೆ. ಅದರಲ್ಲಿ 303,345 ಜನರು ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ. 1,703,675 ಜನರು ಈ ಸೋಂಕಿನಿಂದ ಚೇತರಿಕೆ ಕಂಡಿದ್ದಾರೆ.

English summary
US records 1,754 coronavirus deaths in 24 hours: Johns Hopkins (AFP news agency).
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X