ಸಂಸತ್‌ನ ಆರ್ಥಿಕ ಪ್ಯಾಕೇಜ್‌ಗೆ ಸಹಿ ಹಾಕಲು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಕಿರಿಕ್

ವಾಷಿಂಗ್ಟನ್, ಡಿಸೆಂಬರ್ 23: ಕೊರೊನಾ ವೈರಸ್‌ನಿಂದ ತತ್ತರಿಸಿರುವ ಅಮೆರಿಕದ ಆರ್ಥಿಕತೆಗೆ ಪುನಶ್ಚೇತನ ನೀಡಲು ಸುಮಾರು 66 ಲಕ್ಷ ಕೋಟಿ ರೂ.ಗಳ (892 ಬಿಲಿಯನ್ ಡಾಲರ್) ಪರಿಹಾರ ಪ್ಯಾಕೇಜ್ ನೀಡಲು ಅಮೆರಿಕದ ಸಂಸತ್ತು ಅನುಮೋದನೆ ನೀಡಿದೆ. ಆದರೆ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಇನ್ನಷ್ಟು ದೊಡ್ಡ ಮೊತ್ತದ ಉತ್ತೇಜನಾಕಾರಿ ಚೆಕ್‌ಗಳನ್ನು ನೀಡುವಂತೆ ಅದನ್ನು ತಿದ್ದುಪಡಿ ಮಾಡದ ಹೊರತು ಸಹಿ ಹಾಕುವುದಿಲ್ಲ ಎಂದು ಬೆದರಿಕೆ ಹಾಕಿದ್ದಾರೆ.

ಕೊರೊನಾ ವೈರಸ್ ಸಂಕಷ್ಟದಿಂದ ಅಮೆರಿಕದ ಜನತೆ ಸಂಕಷ್ಟಕ್ಕೆ ಸಿಲುಕಿದ್ದಾರೆ. ವ್ಯಾಪಾರ ವಹಿವಾಟು, ಉದ್ದಿಮೆಗಳು ಹಣಕಾಸಿನ ಸಂಪನ್ಮೂಲವಿಲ್ಲದೆ ಮುಗ್ಗಟ್ಟು ಅನುಭವಿಸುತ್ತಿವೆ. ಹೀಗಾಗಿ ಈ ಸಂಕಟದ ನಡುವೆ ಜನರಿಗೆ ಸಹಾಯ ಮಾಡುವ ಮಹತ್ವಾಕಾಂಕ್ಷಿ ಉದ್ದೇಶದಿಂದ ಅಲ್ಲಿನ ಸಂಸತ್ತು ಆರ್ಥಿಕ ಪ್ಯಾಕೇಜ್ ಪ್ರಕಟಿಸಿದೆ. ಆದರೆ ಒಂದು ತಿಂಗಳಿಗಿಂತಲೂ ಕಡಿಮೆ ಅವಧಿಯವರೆಗೆ ಕಚೇರಿಯಲ್ಲಿ ಇರಲಿರುವ ನಿರ್ಗಮಿತ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಈ ಪ್ರಯತ್ನಕ್ಕೆ ಕಲ್ಲುಹಾಕಲು ಮುಂದಾಗಿದ್ದಾರೆ.

'ಅವರು ಈಗ ನನ್ನ ಕಚೇರಿಗೆ ಕಳುಹಿಸಲು ಉದ್ದೇಶಿಸುತ್ತಿರುವ ಮಸೂದೆಯು ನಿರೀಕ್ಷೆಗಿಂತ ಬಹಳ ವಿಭಿನ್ನವಾಗಿದೆ. ಇದು ಬಹಳ ಅಪಮಾನಕಾರಿ' ಎಂದು ಟ್ರಂಪ್ ಟ್ವಿಟ್ಟರ್‌ನಲ್ಲಿ ಹಂಚಿಕೊಂಡ ವಿಡಿಯೋದಲ್ಲಿ ಹೇಳಿದ್ದಾರೆ.

 US President Donald Trump Threatens To Not Sign Covid-19 Relief Bill

ಪ್ರತಿ ವ್ಯಕ್ತಿಗೆ 2,000 ಡಾಲರ್ ಮತ್ತು ಜೋಡಿಗಳಿಗೆ 4,000 ಡಾಲರ್‌ನಂತೆ ಉತ್ತೇಜನಾಕಾರಿ ಮೊತ್ತಗಳಿಗೆ ಪರಿಹಾರ ಹೆಚ್ಚಿಸುವುದನ್ನು ಬಯಸಿರುವುದಾಗಿ ಹೇಳಿರುವ ಟ್ರಂಪ್, ಮಸೂದೆಯಲ್ಲಿರುವಂತೆ ಈಗ ವ್ಯಕ್ತಿಗಳಿಗೆ 600 ಡಾಲರ್‌ನಂತೆ ಮಾತ್ರ ಸಿಗಲಿದ್ದು, ಇದು ತೀರಾ ವ್ಯಂಗ್ಯಾತ್ಮಕವಾಗಿದೆ ಎಂದು ಟೀಕಿಸಿದ್ದಾರೆ.

ಟ್ರಂಪ್ ಅವರ ಬೇಡಿಕೆಯಂತೆ ಅಷ್ಟು ಮೊತ್ತದ ಪರಿಹಾರದ ಪ್ಯಾಕೇಜ್ ನೀಡಿದರೆ ಅದು ಸರ್ಕಾರಕ್ಕೆ ಹೊರೆಯಾಗಲಿದೆ. ಆದರೆ ಕೆಲವೇ ದಿನಗಳಲ್ಲಿ ನಿರ್ಗಮಿಸಲಿರುವ ಟ್ರಂಪ್ ಅವರು ಈಗಿನ ಪ್ಯಾಕೇಜ್‌ಗೆ ಸಹಿ ಹಾಕಲು ತಕರಾರು ತೆಗೆದಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+