ಅಮೆರಿಕದಲ್ಲಿ ಹುಟ್ಟಿದ ಮಾತ್ರಕ್ಕೆ ಪೌರತ್ವ ಸಿಗದು: ಹೊಸ ಆದೇಶಕ್ಕೆ ಟ್ರಂಪ್ ಯೋಚನೆ

ವಾಷಿಂಗ್ಟನ್, ಅಕ್ಟೋಬರ್ 31: ವಲಸಿಗರಿಗೆ ನೀಡುತ್ತಿರುವ ಪೌರತ್ವದ ಹಕ್ಕುಗಳನ್ನು ತೆಗೆದುಹಾಕುತ್ತಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಕಣ್ಣು ಈಗ 'ಜನನ ಹಕ್ಕು ಪೌರತ್ವ'ದ ಮೇಲೆ ಬಿದ್ದಿದೆ.

ವಲಸಿಗ ಪೋಷಕರಿಗೆ ಅಮೆರಿಕ ನೆಲದಲ್ಲಿ ಮಗು ಜನಿಸಿದರೆ, ಮಗುವಿಗೆ ಅಲ್ಲಿನ ಪೌರತ್ವ ಲಭ್ಯವಾಗುವ ಅವಕಾಶವನ್ನು ರದ್ದುಗೊಳಿಸಲು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮುಂದಾಗಿದ್ದಾರೆ.

ಸಂದರ್ಶನವೊಂದರಲ್ಲಿ ಮಾತನಾಡಿದ ಟ್ರಂಪ್, ಈ ಕಾನೂನಿನಲ್ಲಿ ಸಾಂವಿಧಾನಿಕ ತಿದ್ದುಪಡಿ ತರಲು ಸಿದ್ಧತೆ ನಡೆಸಿರುವುದಾಗಿ ಹೇಳಿಕೊಂಡಿದ್ದಾರೆ.

US president Donald Trump plans to end birthright citizenship

'ಬೇರೆ ದೇಶದ ವ್ಯಕ್ತಿಗಳು ಇಲ್ಲಿಗೆ ಬಂದು ಮಗುವನ್ನು ಪಡೆದುಕೊಂಡಾಗ, ಆ ಮಗುವನ್ನು ಅಮೆರಿಕದ ಪ್ರಜೆ ಎಂದು ಪರಿಗಣಿಸುವ ಮೂಲಕ ದೇಶದ ಎಲ್ಲ ಸೌಲಭ್ಯ-ಸವಲತ್ತುಗಳನ್ನು ಒದಗಿಸುತ್ತಿರುವ ಜಗತ್ತಿನ ಏಕೈಕ ದೇಶವೆಂದರೆ ಅಮೆರಿಕ' ಎಂದು ಟ್ರಂಪ್ ಹೇಳಿದ್ದಾರೆ.

ಆದರೆ, ವಾಸ್ತವವಾಗಿ ಜಗತ್ತಿನ ಸುಮಾರು 30 ದೇಶಗಳಲ್ಲಿ ಬರ್ಥ್ ರೈಟ್ ಸಿಟಿಜನ್‌ಶಿಪ್ ಕಾನೂನು ಇದೆ.

ಇದು ಅತ್ಯಂತ ಹಾಸ್ಯಾಸ್ಪದ ಕಾನೂನು. ಇದು ಅಂತ್ಯವಾಗಬೇಕು. ಇದರ ಬಗ್ಗೆ ಆದೇಶ ಹೊರಡಿಸಲು ತಮ್ಮ ಕಾನೂನು ಸಲಹೆಗಾರರೊಂದಿಗೆ ಮಾತನಾಡಿದ್ದು, ಅದರ ಪ್ರಕ್ರಿಯೆ ನಡೆಯುತ್ತಿದೆ ಎಂದು ಟ್ರಂಪ್ ತಿಳಿಸಿದ್ದಾರೆ.

ಈ ಸೌಲಭ್ಯವು ಪರಮಾಧಿಕಾರದ ಆದೇಶದೊಂದಿಗೆ ರದ್ದುಗೊಳ್ಳಲಿದೆ ಎಂದಿದ್ದಾರೆ.

ಟ್ರಂಪ್ ಈ ಹೇಳಿಕೆ ನೀಡಿರುವ ಬೆನ್ನಲ್ಲೇ, ಅದರ ವಿರುದ್ಧ ಕಾನೂನು ಸಮರ ನಡೆಸಲು ತಯಾರಿ ಆರಂಭವಾಗಿದೆ.

ಅಮೆರಿಕ ಸಂವಿಧಾನದ 14ನೇ ತಿದ್ದುಪಡಿ ಪ್ರಕಾರ, ಅಮೆರಿಕದಲ್ಲಿ ಜನಿಸಿದ ಎಲ್ಲ ವ್ಯಕ್ತಿಗಳೂ ಸಹಜವಾಗಿಯೇ ಅಲ್ಲಿನ ಪ್ರಜೆಗಳಾಗುತ್ತಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+