ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

6 ಟ್ರಿಲಿಯನ್ ಡಾಲರ್ ಬಜೆಟ್! ಶ್ರೀಮಂತನ ಬಳಿ ಕಿತ್ತು, ಬಡವನಿಗೆ ಕೊಡುವುದು..!

|
Google Oneindia Kannada News

ಸಾಲ.. ಸಾಲ.. ಸಾಲ.. ಆರ್ಥಿಕತೆ ಕುಸಿದು ಜಗತ್ತಿನ ಬಹುಪಾಲು ರಾಷ್ಟ್ರಗಳು ಸಾಲದ ಸುಳಿಗೆ ಸಿಲುಕಿಬಿಟ್ಟಿವೆ. ಹಾಗೇ ಜಗತ್ತು ಕೊರೊನಾ ಕೂಪದಲ್ಲಿ ನರಳುವಾಗ, ಇದ್ಯಾವುದಕ್ಕೂ ಕೇರ್ ಮಾಡದ ಅಮೆರಿಕ ಅಧ್ಯಕ್ಷರು ಬರೋಬ್ಬರಿ 6 ಟ್ರಿಲಿಯನ್ ಡಾಲರ್ ಮೊತ್ತದ ಬಜೆಟ್ ಮಂಡನೆಗೆ ಮುಂದಾಗಿದ್ದಾರೆ.

ಅಮೆರಿಕ ಇತಿಹಾಸ ತಿರುಗಿ ನೋಡುವಂಥ ಬಜೆಟ್ ಇದಾಗಿರಲಿದೆ ಎನ್ನುತ್ತಿದ್ದಾರೆ ಆರ್ಥಿಕ ತಜ್ಞರು. ಎಲ್ಲರಿಗೂ ತಿಳಿದಿರುವಂತೆ ಕೊರೊನಾ ಸೋಂಕಿಗೆ ಹೆಚ್ಚಾಗಿ ನರಳಾಡಿದ್ದು ಅಮೆರಿಕ. ಸುಮಾರು 6 ಲಕ್ಷ ಜನರನ್ನು ಕಳೆದುಕೊಂಡು ಭಾರಿ ಸಂಕಷ್ಟದಲ್ಲಿದೆ. ಇಂತಹ ಹೊತ್ತಲ್ಲೇ ಗಟ್ಟಿ ಮನಸ್ಸು ಮಾಡಿರುವ ಜೋ ಬೈಡನ್, ಅಮೆರಿಕದ ಶ್ರೀಮಂತರಲ್ಲಿ ಕೊಳೆಯುತ್ತಿರುವ ಹಣ ಕಿತ್ತು ಬಡವರಿಗೆ ಹಂಚಲು ಮುಂದಾಗಿದ್ದಾರೆ.

ಹೌದು ಬರೋಬ್ಬರಿ 6 ಟ್ರಿಲಿಯನ್‌ನ ಈ ಬಜೆಟ್‌ಗೆ ಹಣ ಹೊಂದಿಸಲು ಬೈಡನ್ ಹಿಡಿದಿರುವ ದಾರಿ ತೆರಿಗೆ ಹೆಚ್ಚಳ. ಅಮೆರಿಕದಲ್ಲಿ ಲಕ್ಷ ಕೋಟಿಗೆ ಬಾಳುವವರು ಸಾಕಷ್ಟು ಮಂದಿ. ಆದರೆ ಇವರ ಹಣವೆಲ್ಲಾ ಇದ್ದಲ್ಲೇ ಇದ್ದು ವ್ಯರ್ಥವಾಗುತ್ತಿದೆ. ಇದನ್ನ ಟ್ಯಾಕ್ಸ್ ರೂಪದಲ್ಲಿ ಪಡೆದು, ಬಡವರಿಗೆ ಅನುದಾನ ನೀಡಿದರೆ ಅಮೆರಿಕ ಪುಟಿದೇಳುತ್ತದೆ ಎಂಬ ವಿಶ್ವಾಸ ಬೈಡನ್‌ಗೆ. ಅಲ್ಲದೆ ಭಾರಿ ಪ್ರಮಾಣದ ಹಣ ಮೂಲಸೌಕರ್ಯ ಅಭಿವೃದ್ಧಿಗೂ ನೀಡಲು ಜೋ ಬೈಡನ್ ಮುಂದಾಗಿದ್ದಾರೆ.

29 ಟ್ರಿಲಿಯನ್ ಡಾಲರ್ ಸಾಲ..!

29 ಟ್ರಿಲಿಯನ್ ಡಾಲರ್ ಸಾಲ..!

'ಟ್ರಿಲಿಯನ್ ಡಾಲರ್ ಅಂದ್ರೆ ಎಷ್ಟಪ್ಪಾ' ಅಂತಾ ಯೋಚಿಸಬೇಡಿ, ಇದಕ್ಕೆ ಉದಾಹರಣೆ ಕೊಡುವುದಾದರೆ 5 ಟ್ರಿಲಿಯನ್ ಡಾಲರ್ ಆರ್ಥಿಕತೆ ರಾಷ್ಟ್ರವಾಗಿ ಭಾರತವನ್ನು ನಿರ್ಮಿಸಲು ಪ್ರಧಾನಿ ಮೋದಿ ಕನಸು ಕಂಡಿದ್ದರು. ಆದರೆ ಕೊರೊನಾ ಬಳಿಕ ಎಲ್ಲಾ ಕೈಮೀರಿದೆ. ಈ ಲೆಕ್ಕದಲ್ಲೇ ಹೇಳುವುದಾದರೆ 5 ಟ್ರಿಲಿಯನ್ ಡಾಲರ್ ನಮ್ಮ ಊಹೆಗೂ ನಿಲುಕದಷ್ಟು ಮೊತ್ತ, ಆದ್ರೆ ಅಮೆರಿಕ ಮಾಡಿಕೊಂಡಿರುವ ಸಾಲದ ಮುಂದೆ ಇದನ್ನು ಹೋಲಿಸಿದರೆ ಏನೇನೂ ಅಲ್ಲ. ಏಕೆಂದರೆ ಅಮೆರಿಕ ಈವರೆಗೆ ಮಾಡಿರುವ ಸಾಲ ಬರೋಬ್ಬರಿ 24 ಟ್ರಿಲಿಯನ್ ಡಾಲರ್...! ಈ ಸಾಲದ ಮೊತ್ತ ಈಗ 29 ಟ್ರಿಲಿಯನ್‌ಗೆ ಏರಲಿದೆ. ಮೈತುಂಬಾ ಸಾಲ ಮಾಡಿಕೊಂಡಿರುವ ಅಮೆರಿಕ ಮತ್ತೆ ಸಾಲದ ಮೊರೆ ಹೋಗುತ್ತಿದೆ.

ರೊಚ್ಚಿಗೆದ್ದ ರಿಪಬ್ಲಿಕನ್ಸ್..!

ರೊಚ್ಚಿಗೆದ್ದ ರಿಪಬ್ಲಿಕನ್ಸ್..!

ಅಮೆರಿಕದಲ್ಲಿ ಇದೇ ಮೊದಲ ಬಾರಿ 6 ಟ್ರಿಲಿಯನ್ ಡಾಲರ್ ಮೊತ್ತದ ಬೃಹತ್ ಬಜೆಟ್ ಮಂಡಿಸಲು ಜೋ ಬೈಡನ್ ಮುಂದಾಗಿದ್ದಾರೆ. ಆದರೆ ಬೈಡನ್‌ರ ಈ ಪ್ರಸ್ತಾವನೆ ಕೇಳಿದ ಕೂಡಲೇ ರಿಪಬ್ಲಿಕನ್ ಪಕ್ಷದ ಸದಸ್ಯರು ಹಾಗೂ ಜನಪ್ರತಿನಿಧಿಗಳು ಬೈಡನ್ ವಿರುದ್ಧ ರೊಚ್ಚಿಗೆದ್ದಿದ್ದಾರೆ. ಬೈಡನ್ ಸಾಲ ಮಾಡಿ ಬಜೆಟ್‌ನ ಮಂಡಿಸಿದರೆ ಅಮೆರಿಕ ಮುಳುಗಿ ಹೋಗುತ್ತೆ ಎನ್ನುತ್ತಿದ್ದಾರೆ. ಶ್ರೀಮಂತರ ಮೇಲೆ ತೆರಿಗೆ ಹೆಚ್ಚಳ ಮಾಡುವುದರಿಂದ ಆರ್ಥಿಕ ವಿಪತ್ತು ಎದುರಾಗುತ್ತೆ, ಅಮೆರಿಕದಲ್ಲಿ ಹುಟ್ಟಿ ಬೆಳೆದಿರುವ ಕಂಪನಿಗಳು ಜಾಗತಿಕವಾಗಿ ಬಲ ಕಳೆದುಕೊಂಡು ಪದಾಡುತ್ತವೆ ಎಂಬ ಆರೋಪ ಕೇಳಿಬಂದಿದೆ.

ಕೂಲ್.. ಅಂತಿದ್ದಾರೆ ಬೈಡನ್..!

ಕೂಲ್.. ಅಂತಿದ್ದಾರೆ ಬೈಡನ್..!

ಒಂದು ಕಡೆ ರಿಪಬ್ಲಿಕನ್ ಸಂಸದರು, ಶಾಸಕರು ರೊಚ್ಚಿಗೆದ್ದಿದ್ದರೆ ಬೈಡನ್ ಮಾತ್ರ ತಲೆಬಿಸಿ ಮಾಡಿಕೊಂಡಿಲ್ಲ. ಏಕೆಂದರೆ ಬೈಡನ್ ಇದನ್ನೆಲ್ಲಾ ಮೊದಲೇ ಊಹಿಸಿದ್ದರು. ತಮಗೆ ರಿಪಬ್ಲಿಕನ್ ಪಕ್ಷದಿಂದ ತೀವ್ರ ವಿರೋಧ ವ್ಯಕ್ತವಾಗುವುದನ್ನ ತಿಳಿದಿದ್ದರು. ಹೀಗಾಗಿಯೇ ರಿಪಬ್ಲಿಕನ್ಸ್ ಆರೋಪಕ್ಕೆ ಸೂಕ್ಷ್ಮವಾಗಿ ವಿವರಣೆ ನೀಡಿದ್ದಾರೆ. ಶ್ರೀಮಂತರ ಮೇಲೆ ತೆರಿಗೆ ಹೆಚ್ಚಿಸಿದರೆ ಏನೂ ನಷ್ಟವಾಗದು. ಆದರೆ ಇದರಿಂದ ಅಮೆರಿಕನ್ನರ ಕೊಳ್ಳುವ ಶಕ್ತಿ ಹೆಚ್ಚಾಗಿ, ಆರ್ಥಿಕತೆಗೆ ಜೀವ ಬರಲಿದೆ ಎಂದಿದ್ದಾರೆ. ಅಲ್ಲದೆ ಬರು ಬರುತ್ತಾ ಪರಿಸ್ಥಿತಿ ಸರಿಹೋಗುತ್ತದೆ. ಆದರೆ ಇದರಿಂದ ಯಾವುದೇ ಅಪಾಯ ಇಲ್ಲ ಎಂದು ಬೈಡನ್ ಆಡಳಿತ ರಿಪಬ್ಲಿಕನ್ಸ್‌ಗೆ ತಿರುಗೇಟು ನೀಡಿದೆ.

 ಜನರ ಕೊಳ್ಳುವ ಶಕ್ತಿ ಹೆಚ್ಚಿಸಬೇಕು..!

ಜನರ ಕೊಳ್ಳುವ ಶಕ್ತಿ ಹೆಚ್ಚಿಸಬೇಕು..!

ಯಾವುದೇ ಒಂದು ಅರ್ಥ ವ್ಯವಸ್ಥೆ ಚಕ್ರದಂತೆ ಕೆಲಸ ಮಾಡುತ್ತದೆ, ಒಂದ್ಕಡೆ ಉತ್ಪಾದನೆಯಾಗುವ ವಸ್ತುಗಳು ಮತ್ತೊಂದು ಕಡೆ ಮಾರಟವಾಗಿ ಹೋಗಬೇಕು. ಹೀಗೆ ಉತ್ಪಾದನೆ, ಬೇಡಿಕೆ ಸಮವಾಗಿ ಇದ್ದಾಗ ಮಾತ್ರ ಅಲ್ಲಿ ಆರ್ಥಿಕತೆ ಬದುಕಿರುತ್ತದೆ. ಆದರೆ ಕೊರೊನಾ ಬಳಿಕ ಕೋಟ್ಯಂತರ ಅಮೆರಿಕನ್ನರು ಕೆಲಸ ಕಳೆದುಕೊಂಡಿದ್ದಾರೆ. ತುತ್ತು ಅನ್ನಕ್ಕೂ ಅಲ್ಲಿನ ಜನ ಪರದಾಡುತ್ತಿದ್ದಾರೆ. ಲಕ್ಷ ಲಕ್ಷ ಡಾಲರ್ ಸಂಬಳ ಕೊಡುತ್ತಿದ್ದ ಕಂಪನಿಗಳು ಬೀಗ ಹಾಕಿಕೊಂಡು ಎಸ್ಕೇಪ್ ಆಗಿವೆ. ಹೀಗಾಗಿ ಜನರಿಗೆ ಆರ್ಥಿಕ ಸಹಾಯ ಮಾಡಿದರೆ ಅಮೆರಿಕ ಆರ್ಥಿಕತೆ ಮತ್ತೆ ಹಳಿಗೆ ಮರಳಲಿದೆ. ಬೇಡಿಕೆ ಹೆಚ್ಚಾದಂತೆ ಉತ್ಪಾದನೆಗೆ ಒತ್ತು ನೀಡಲಾಗುತ್ತದೆ. ಉತ್ಪಾದನೆ ಮಾಡಬೇಕೆಂದರೆ ಕೆಲಸಗಾರರು ಬೇಕೆ ಬೇಕು. ಹೀಗೆ ಉತ್ಪಾದನೆ ಜೊತೆ ಉದ್ಯೋಗವೂ ಸೃಷ್ಟಿಯಾಗುತ್ತದೆ ಎಂಬುದು ಬೈಡನ್‌ರ ರಣತಂತ್ರ. ಹೀಗಾಗಿಯೇ ದೊಡ್ಡ ರಿಸ್ಕ್‌ಗೆ ಕೈಹಾಕಿದ್ದಾರೆ ಅಮೆರಿಕದ 46ನೇ ಅಧ್ಯಕ್ಷ.

ರಸ್ತೆ, ನೀರಿಗೆ 2.3 ಟ್ರಿಲಿಯನ್..!

ರಸ್ತೆ, ನೀರಿಗೆ 2.3 ಟ್ರಿಲಿಯನ್..!

ಮೂಲ ಸೌಕರ್ಯ ಅಂದರೆ ಮನುಷ್ಯ ಬದಕಲು ಅತ್ಯಗತ್ಯವಾಗಿರುವ ಕುಡಿಯುವ ನೀರು, ಉತ್ತಮ ರಸ್ತೆಗಳ ನಿರ್ಮಾಣ ಹೀಗೆ ಹಲವು ವಿಭಾಗಗಳಿಗೆ ಬಜೆಟ್‌ನಲ್ಲಿ ಹೆಚ್ಚು ಹಣ ನೀಡಲು ಜೋ ಬೈಡನ್ ನಿರ್ಧರಿಸಿದ್ದಾರೆ. ಬೈಡನ್ ಲೆಕ್ಕಾಚಾರದ ಪ್ರಕಾರ ಮೊದಲಿಗೆ 2.3 ಟ್ರಿಲಿಯನ್ ಡಾಲರ್ ಹಣವನ್ನು ಮೂಲ ಸೌಕರ್ಯ ಕ್ಷೇತ್ರ ಪಡೆಯಬೇಕು ಎಂಬುದಾಗಿತ್ತು. ಆದ್ರೆ ಅದನ್ನು ಅಮೆರಿಕನ್ ಕಾಂಗ್ರೆಸ್ ಬದಲಾಯಿಸಿ, ಕಡೆಗೆ 1.7 ಟ್ರಿಲಿಯನ್ ಡಾಲರ್‌ಗೆ ಫಿಕ್ಸ್ ಮಾಡಿದೆ. ಈ ಮೂಲಕ ಇಡೀ ಅಮೆರಿಕ ಇತಿಹಾಸದಲ್ಲೇ ಮೂಲ ಸೌಕರ್ಯ ಮತ್ತೊಮ್ಮೆ ಅತ್ಯುನ್ನತ ಮಟ್ಟಕ್ಕೆ ಏರಲಿದೆ.

ಅಮೆರಿಕನ್ಸ್‌ಗೆ ಅಸ್ತಿತ್ವದ ಪ್ರಶ್ನೆ..!

ಅಮೆರಿಕನ್ಸ್‌ಗೆ ಅಸ್ತಿತ್ವದ ಪ್ರಶ್ನೆ..!

ನಿಮಗೆಲ್ಲಾ ತಿಳಿದಿರಲಿ ಅಮೆರಿಕ ಇಷ್ಟು ಶ್ರೀಮಂತ ರಾಷ್ಟ್ರವಾಗಿ ಬೆಳೆಯಲು ಮೂಲ ಕಾರಣವೇ ಅಲ್ಲಿನ ಮೂಲ ಸೌಕರ್ಯ ಕ್ಷೇತ್ರ. ಯಾವುದೇ ದೇಶದ ಮೂಲ ಸೌಕರ್ಯ ಕ್ಷೇತ್ರ ಬಲವಾದರೆ ಅಲ್ಲಿ ಹೂಡಿಕೆ ಹೆಚ್ಚಾಗುತ್ತದೆ. ಹೂಡಿಕೆ ಹೆಚ್ಚಾದರೆ ಕೈಗಾರಿಕೆಗಳ ಬೆಳವಣಿಗೆ ಹೆಚ್ಚುತ್ತದೆ. ಹೀಗೆ ಕೈಗಾರಿಕೆಗಳು ಬೆಳೆದರೆ ಮತ್ತೆ ತಾನು ಹೂಡಿಕೆ ಮಾಡಿದ್ದ ಲಾಭ ಮರಳಿ ಸರ್ಕಾರಕ್ಕೆ ಸಿಗಲಿದೆ. ಹೀಗೆ 'ಕೆರೆಯ ನೀರನ್ನು ಕೆರೆಗೆ ಚೆಲ್ಲಿ' ಎನ್ನುತ್ತಿದ್ದಾರೆ ಅಮೆರಿಕದ 46ನೇ ಅಧ್ಯಕ್ಷ ಜೋ ಬೈಡನ್. 1800ರ ಆಸುಪಾಸಿನಲ್ಲೂ ಅಮೆರಿಕ ಇದೇ ರೀತಿ ತನ್ನ ಮೂಲ ಸೌಕರ್ಯದ ಅಭಿವೃದ್ಧಿಗೆ ಭಾರಿ ಪ್ರಮಾಣದ ಹಣ ನೀಡಿತ್ತು. ಹೀಗಾಗಿ ಭವಿಷ್ಯದಲ್ಲಿ ನಂ. 1 ರಾಷ್ಟ್ರವಾಗಿ ಗುರುತಿಸಿಕೊಳ್ಳಲು ಸಾಧ್ಯವಾಯಿತು. ಈಗಲೂ ಅದೇ ರಣತಂತ್ರ ಹೂಡಿದ್ದಾರೆ ಜೋ ಬೈಡನ್.

ಗುಣಮಟ್ಟದಲ್ಲೂ ಭಾರಿ ಕುಸಿತ

ಗುಣಮಟ್ಟದಲ್ಲೂ ಭಾರಿ ಕುಸಿತ

ಅಮೆರಿಕ ಹೆಸರಿಗೆ ಮಾತ್ರ ಶ್ರೀಮಂತ ರಾಷ್ಟ್ರ, ಆದರೆ ದೊಡ್ಡ ದೊಡ್ಡ ನಗರಗಳನ್ನ ಬಿಟ್ಟು ಸಣ್ಣಪುಟ್ಟ ಪ್ರದೇಶಗಳ ಪಾಡು ಹೇಳತೀರದು. ರಸ್ತೆಗಳು ಬರೀ ಗುಂಡಿಯಿಂದ ತುಂಬಿಹೋಗಿವೆ ಎಂಬ ಆರೋಪವಿದೆ. ಸಾರಿಗೆ ವ್ಯವಸ್ಥೆ ಕಥೆ ಹೀಗಾದರೆ ಕುಡಿಯುವ ನೀರಿನ ವ್ಯವಸ್ಥೆ ಆ ದೇವರಿಗೇ ಪ್ರೀತಿ. ಜನವಸತಿ ಪ್ರದೇಶಕ್ಕೆ ಸಪ್ಲೈ ಆಗುತ್ತಿರುವ ನೀರಲ್ಲಿ ಹಾವು, ಕಪ್ಪೆ ಹೀಗೆ ನಾನಾ ಅತಿಥಿಗಳ ಹೆಣ ಮನೆ ಕೊಳಾಯಿ ಮೂಲಕ ಬಂದು ಬೀಳುತ್ತಿದೆ. ಸಮಸ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಮಿದುಳು ತಿನ್ನುವ ಅಮೀಬಾ ಸೇರಿದಂತೆ ಹಲವು ಕಂಟಕಗಳು ಅಮೆರಿಕದ ನಿವಾಸಿಗಳನ್ನು ಕಾಡುತ್ತಿದೆ. ಇದನ್ನೆಲ್ಲಾ ಸರಿಮಾಡಲು ಬೈಡನ್ ಮುಂದಾಗಿದ್ದಾರೆ.

ಶಿಕ್ಷಣ, ಸಾಮಾಜಕ್ಕೆ ಆದ್ಯತೆ

ಶಿಕ್ಷಣ, ಸಾಮಾಜಕ್ಕೆ ಆದ್ಯತೆ

ಬೈಡನ್ ಪ್ರಸ್ತಾಪಿಸಿರುವ ಬಜೆಟ್‌ಗೆ ಮೊದಲು ಕಾಂಗ್ರೆಸ್ ಒಪ್ಪಿಗೆ ಸೂಚಿಸಬೇಕು, ಆ ನಂತರ ಬಜೆಟ್ ಜಾರಿಗೆ ಬರಲಿದೆ. ಇಷ್ಟೆಲ್ಲದರ ನಡುವೆ ಸುಮಾರು 1.8 ಟ್ರಿಲಿಯನ್ ಡಾಲರ್ ಹಣವನ್ನು ಶಿಕ್ಷಣ ಕ್ಷೇತ್ರಕ್ಕೂ ಬೈಡನ್ ಆಡಳಿತ ಮೀಸಲಿಡಲಿದೆ. ಅಂದರೆ ಬೈಡನ್ ಪ್ರಸ್ತಾಪಿಸಿದ 6 ಟ್ರಿಲಿಯನ್ ಡಾಲರ್ ಪೈಕಿ ಸುಮಾರು ಸುಮಾರು 1.8 ಟ್ರಿಲಿಯನ್ ಡಾಲರ್ ಹಣ ಶಿಕ್ಷಣ ಸೇರಿದಂತೆ ಸಾಮಾಜಿಕ ಕಾರ್ಯಗಳಿಗೆ ಬಳಕೆಯಾಗಲಿದೆ. ಭವಿಷ್ಯದ ಪ್ರಜೆಗಳನ್ನ ಉತ್ತಮ ವಾತಾವರಣದಲ್ಲಿ ಬೆಳೆಸಲು ಒತ್ತು ನೀಡಿದ್ದಾರೆ ಜೋ ಬೈಡನ್. ಆದರೆ ಬೈಡನ್ ಸಲ್ಲಿರುವ ಪ್ರಸ್ತಾವನೆ ಇನ್ನೂ ಹಲವು ಹಂತ ದಾಟಬೇಕಿದ್ದು, ಮುಂದೆ ಏನಾಗಲಿದೆ ಅನ್ನೋದನ್ನು ಕಾದು ನೋಡಬೇಕಿದೆ.

English summary
US President Joe Biden proposed 6 trillion-dollar worth budget for America.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X