ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

Results are coming! ಟ್ರಂಪ್ ರನ್ನು ಮತ್ತೆ ಅಪ್ಪಿಕೊಂಡಿತಾ ಅಮೆರಿಕ?

|
Google Oneindia Kannada News

ವಾಷಿಂಗ್ಟನ್ ಡಿಸಿ, ನವೆಂಬರ್ 07: ಅಮೆರಿಕ ಅಧ್ಯಕ್ಷರಾಗಿ ಡೊನಾಲ್ಡ್ ಟ್ರಂಪ್ ಆಯ್ಕೆಯಾದ ನಂತರ ನಡೆಯುತ್ತಿರುವ ಮೊದಲ ರಾಷ್ಟ್ರವ್ಯಾಪಿ ಮಧ್ಯಂತರ ಚುನಾವಣೆಯ ಫಲಿತಾಂಶ ಬಹುತೇಕ ಹೊರಬಿದ್ದಿದ್ದು, ಅಮೆರಿಕದ ಜನರು ಮತ್ತೊಮ್ಮೆ ರಿಪಬ್ಲಿಕನ್ ಪಕ್ಷವನ್ನು ಅಪ್ಪಿಕೊಳ್ಳುವ ಲಕ್ಷಣ ಕಂಡುಬರುತ್ತಿದೆ.

ದೀಪಾವಳಿ ವಿಶೇಷ ಪುರವಣಿ

ಆಡಳಿತಾರೂಢ ರಿಪಬ್ಲಿಕನ್(ಜಿಒಪಿ) ಮತ್ತು ವಿರೋಧ ಪಕ್ಷವಾದ ಡೆಮಾಕ್ರೆಟಿಕ್ ಪಕ್ಷಗಳಿಗೆ ಇದು ಜಿದ್ದಾಜಿದ್ದಿಯ ಚುನಾವಣೆ. ಫ್ಲೊರಿಡಾ, ವರ್ಜಿಯಾದಲ್ಲಿ ಡೆಮಾಕ್ರೆಟಿಕ್ ಪಕ್ಷ ಉತ್ತಮ ಪ್ರದರ್ಶನ ತೋರಿದ್ದರೆ, ಕೆಂಟುಕಿಯಲ್ಲಿ ಕಳಪೆ ಪ್ರದರ್ಶನ ತೋರಿದೆ.

ಅಮೆರಿಕ ಸೆನೆಟ್ ನ 100 ಸ್ಥಾನಗಳಲ್ಲಿ 93 ಸ್ಥಾನಗಳ ಫಲಿತಾಂಶ ಈಗಾಗಲೇ ಪ್ರಕಟವಾಗಿದ್ದು, ಶೇ.50 ರಷ್ಟು ಸ್ಥಾನಗಳಲ್ಲಿ ರಿಪಬ್ಲಿಕ್ ಪಕ್ಷ ಮುನ್ನಡೆ ಕಾಯ್ದುಕೊಂಡಿದೆ.

ಮುರಿದ ಬ್ಯಾಲೆಟ್, ಉದ್ದದ ಕ್ಯೂ ಮತ್ತು ಅಕ್ರಮ! ಇದು ಅಮೆರಿಕ ಚುನಾವಣೆ!ಮುರಿದ ಬ್ಯಾಲೆಟ್, ಉದ್ದದ ಕ್ಯೂ ಮತ್ತು ಅಕ್ರಮ! ಇದು ಅಮೆರಿಕ ಚುನಾವಣೆ!

ಅಮೆರಿಕ ಚುನಾವಣೆಯ ಕೆಲವು ಮಹತ್ವದ ಮಾಹಿತಿ ಇಲ್ಲಿದೆ.

ರಿಪಬ್ಲಿಕನ್- ಡೆಮಾಕ್ರೆಟಿಕ್

ರಿಪಬ್ಲಿಕನ್- ಡೆಮಾಕ್ರೆಟಿಕ್

ಡೊನಾಲ್ಡ್ ಟ್ರಂಪ್ ಅವರ ರಿಪಬ್ಲಿಕನ್ ಪಕ್ಷ ಮತ್ತು ಹಿಲರಿ ಕ್ಲಿಂಟನ್ ಅವರ ಡೆಮಾಕ್ರೆಟಿಕ್ ಪಕ್ಷದ ನಡುವೆ ನೇರ ಹಣಾಹಣಿ ಏರ್ಪಟ್ಟಿದೆ. ಸೆನೆಟ್ ನಲ್ಲಿ ರಿಪಬ್ಲಿಕ್ ಪಕ್ಷ ಬಹುಮತ ಪಡೆಯುವುದು ಬಹುತೇಕ ನಿಚ್ಛಳವಾಗಿದ್ದರೆ, ಹೌಸ್ ಆಫ್ ರೆಪ್ರಸೆಂಟೇಟಿವ್ಸ್ ನಲ್ಲಿ ಎರಡೂ ಪಕ್ಷಗಳೂ ಸಮಬಲದ ಹೋರಾಟ ನಡೆಸುತ್ತಿವೆ.

ಅಮೆರಿಕ: ಮತ ಹಾಕಲು ಬಂದರೆ ಅಲ್ಲಿ ಮತಯಂತ್ರವೇ ಕಣ್ಮರೆ!ಅಮೆರಿಕ: ಮತ ಹಾಕಲು ಬಂದರೆ ಅಲ್ಲಿ ಮತಯಂತ್ರವೇ ಕಣ್ಮರೆ!

ರಿಪಬ್ಲಿಕನ್ ಪಕ್ಷದತ್ತ ಮತ್ತೆ ಒಲವು?

ರಿಪಬ್ಲಿಕನ್ ಪಕ್ಷದತ್ತ ಮತ್ತೆ ಒಲವು?

ಡೊನಾಲ್ಡ್ ಟ್ರಂಪ್ ಅಧ್ಯಕ್ಷರಾದ ನಂತರ ಅಮೆರಿಕದಲ್ಲಿ ಸಾಕಷ್ಟು ವಿರೋಧಗಳು ವ್ಯಕ್ತವಾಗಿದ್ದವು. ಆದರೆ ನಂತರ ಡೊನಾಲ್ಡ್ ಟ್ರಂಪ್ ಅವರು ಅಮೆರಿಕನ್ನರಿಗೆ ಮಹತ್ವ ನೀಡಿ, ವಲಸೆ ಬಂದವರನ್ನೂ, ಅನ್ಯ ದೇಶಗಳಿಗೆ ನಂತರದ ಪ್ರಾಶಸ್ತ್ಯ ನೀಡುತ್ತಿರುವುದು ಅಮೆರಿಕನ್ನರಿಗೆ ಟ್ರಂಪ್ ಮೇಲಿನ ವಿಶ್ವಾಸ ಹೆಚ್ಚಿಸಿರುವ ಸಾಧ್ಯತೆ ಇದೆ. ಆದ್ದರಿಂದಲೇ ಮಧ್ಯಂತರ ಚುನಾವಣೆಯಲ್ಲಿ ರಿಪಬ್ಲಿಕನ್ ಮತ್ತೆ ಜಯದತ್ತ ದಾಪುಗಾಲಿಡುತ್ತಿದೆ.

ಇರಾನ್‌ನಿಂದ ಭಾರತ ತೈಲ ಖರೀದಿ ಮಾಡಲು ಅಡ್ಡಿಯಿಲ್ಲ: ಅಮೆರಿಕ ಸಮ್ಮತಿಇರಾನ್‌ನಿಂದ ಭಾರತ ತೈಲ ಖರೀದಿ ಮಾಡಲು ಅಡ್ಡಿಯಿಲ್ಲ: ಅಮೆರಿಕ ಸಮ್ಮತಿ

ಎಷ್ಟು ಸ್ಥಾನಗಳಿಗೆ ಚುನಾವಣೆ?

ಎಷ್ಟು ಸ್ಥಾನಗಳಿಗೆ ಚುನಾವಣೆ?

ಹೌಸ್ ಆಫ್ ರೆಪ್ರಸಂಟೇಟಿವ್ಸ್ (ಪ್ರತಿನಿಧಿ ಸಭೆ) ನ ಎಲ್ಲಾ 435 ಸ್ಥಾನಗಳಿಗೆ ಮತ್ತು ಸಂಸತ್ತಿನ 100 ರಲ್ಲಿ 35 ಸ್ಥಾನಗಳಿಗೆ ಚುನಾವಣೆ ನಡೆಯಿತು. 50 ರಲ್ಲಿ 36 ರಾಜ್ಯಗಳಿಗೆ ಗವರ್ನರ್ ಗಳನ್ನೂ ಈ ಸಂದರ್ಭದಲ್ಲಿ ಆರಿಸಲಾಗುತ್ತಿದೆ.

ಅಕ್ರಮ ನಡೆದಿರುವ ಸಾಧ್ಯತೆ!

ಅಕ್ರಮ ನಡೆದಿರುವ ಸಾಧ್ಯತೆ!

ಕೆಲವೆಡೆ ಮುರಿದ ಬ್ಯಾಲೆಟ್ ಗಳು ಕಂಡುಬಂದರೆ, ಜನರು ಮತ ಚಲಾಯಿಸುವುದಕ್ಕಾಗಿ ಉದ್ದುದ್ದ ಕ್ಯೂನಲ್ಲಿ ಗಂಟೆಗಟ್ಟಲೆ ಕಾಯಬೇಕಾದ ಪರಿಸ್ಥಿತಿ ಬಂತು. ರಿಪಬ್ಲಿಕನ್ ಗೆಲುವು ಸಾಧಿಸಿದ ವರ್ಜಿನಿಯಾದಲ್ಲಿ ಸಾಕಷ್ಟು ಚುನಾವಣಾ ಅಕ್ರಮಗಳು ನಡೆದಿದೆ ಎಂಬ ದೂರು ಕೇಳಿಬಂದಿದೆ. ಆದರೆ 50 ವರ್ಷಗಳ ಇತಿಹಾಸದಲ್ಲೇ ಅಮೆರಿಕದಲ್ಲಿ ಈ ಮಧ್ಯಂತರ ಚುನಾವಣೆಯಲ್ಲಿ ಅತೀ ಹೆಚ್ಚು ಮತದಾನವಾಗಿದೆ ಎನ್ನಲಾಗಿದೆ.

English summary
United States midterm polls: Americans voted to this year's crucial midterm elections. Here are some informations.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X