ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೊರೊನಾ ಮಾನವ ನಿರ್ಮಿತವೇ? US ಗುಪ್ತಚರ ಸಂಸ್ಥೆ ನೀಡಿದ ಮಹತ್ವದ ವರದಿ ಬಯಲು!

|
Google Oneindia Kannada News

ವಾಷಿಂಗ್ಟನ್, ಮೇ 1: ''ವುಹಾನ್ ಇನ್ಸ್ಟಿಟ್ಯೂಟ್ ಆಫ್ ವೈರಾಲಜಿ ಲ್ಯಾಬ್ ನಲ್ಲೇ ಕೊರೊನಾ ವೈರಸ್ 'ಜನ್ಮ'ವಾಗಿದೆ. ಅದಕ್ಕೆ ಬಲವಾದ ಸಾಕ್ಷಿ ನನ್ನ ಬಳಿ ಇದೆ'' ಎಂದು ಅಮೇರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನಿನ್ನೆಯಷ್ಟೇ ಹೇಳಿದ್ದರು.

ಈ ನಡುವೆ, ಕೊರೊನಾ ವೈರಸ್ ಕುರಿತು ಯು.ಎಸ್ ಗುಪ್ತಚರ ಸಂಸ್ಥೆ ಮಹತ್ವದ ವರದಿ ನೀಡಿದೆ. ಕೊರೊನಾ ವೈರಸ್ ಮಾನವ ನಿರ್ಮಿತ ಹೌದೇ, ಅಲ್ಲವೇ? ಎಂಬ ಪ್ರಶ್ನೆ ಎಲ್ಲರ ತಲೆಯಲ್ಲೂ ಕೊರೆಯುತ್ತಿರುವಾಗಲೇ, ಇದಕ್ಕೆ ಯು.ಎಸ್ ಗುಪ್ತಚರ ಸಂಸ್ಥೆ ಉತ್ತರ ಕಂಡುಕೊಂಡಿದೆ.

''ಕೊರೊನಾ ವೈರಸ್ ಮಾನವ ನಿರ್ಮಿತ ಅಲ್ಲ. ಜೆನೆಟಿಕ್ ಆಗಿಯೂ ಮಾರ್ಪಡಿಸಿಲ್ಲ'' ಎಂಬ ಮಹತ್ವದ ವರದಿಯನ್ನು ಯು.ಎಸ್ ಗುಪ್ತಚರ ಸಂಸ್ಥೆ ಸಲ್ಲಿಸಿದೆ.

 ಕೊರೊನಾ ವೈರಸ್ ಮಾನವ ನಿರ್ಮಿತವೇ? ಇಲ್ಲಿದೆ ಉತ್ತರ ಕೊರೊನಾ ವೈರಸ್ ಮಾನವ ನಿರ್ಮಿತವೇ? ಇಲ್ಲಿದೆ ಉತ್ತರ

ಮಾನವ ನಿರ್ಮಿತ ಅಲ್ಲ.!

ಮಾನವ ನಿರ್ಮಿತ ಅಲ್ಲ.!

''ಕೊರೊನಾ ವೈರಸ್ ಮಾನವ ನಿರ್ಮಿತ ಅಲ್ಲ. ಜೆನೆಟಿಕ್ ಆಗಿಯೂ ಮಾರ್ಪಡಿಸಿಲ್ಲ. ಆದರೆ, ಕೊರೊನಾ ವೈರಸ್ ಮೂಲದ ಬಗ್ಗೆ ಇನ್ನೂ ಪರಿಶೀಲನೆ ನಡೆಯುತ್ತಿದೆ. ಸೋಂಕಿತ ಪ್ರಾಣಿಗಳಿಂದ ಕೊರೊನಾ ವೈರಸ್ ಹಬ್ಬಿತೋ ಅಥವಾ ಚೀನಾದ ವುಹಾನ್ ಲ್ಯಾಬ್ ನಿಂದ ಅಚಾನಕ್ಕಾಗಿ ಸೋರಿಕೆ ಆಯ್ತಾ ಎಂಬುದರ ಬಗ್ಗೆ ತನಿಖೆ ನಡೆಯುತ್ತಿದೆ'' ಎಂದು ಯು.ಎಸ್ ಗುಪ್ತಚರ ಸಂಸ್ಥೆ ತಿಳಿಸಿದೆ.

ಲ್ಯಾಬ್ ಗೂ ಮಾಂಸ ಮಾರುಕಟ್ಟೆಗೂ ಕೆಲವೇ ಮೈಲಿ ದೂರ

ಲ್ಯಾಬ್ ಗೂ ಮಾಂಸ ಮಾರುಕಟ್ಟೆಗೂ ಕೆಲವೇ ಮೈಲಿ ದೂರ

''ಮಾಂಸ ಮಾರುಕಟ್ಟೆಯಿಂದ ವುಹಾನ್ ಇನ್ಸ್ಟಿಟ್ಯೂಟ್ ಆಫ್ ವೈರಾಲಜಿ ಕೇವಲ 8 ಮೈಲಿ ದೂರದಲ್ಲಿದೆ. ವುಹಾನ್ ಲ್ಯಾಬ್ ನಲ್ಲಿ ಕೈಗೊಳ್ಳುವ ಸುರಕ್ಷತಾ ಕ್ರಮಗಳ ಬಗ್ಗೆ ಪ್ರಶ್ನೆ ಎದ್ದಿದೆ'' ಎಂದು ಯು.ಎಸ್ ಸೆಕ್ರೆಟರಿ ಪಾಂಪಿಯೋ ಹೇಳಿದ್ದರು.

ತಾರಕಕ್ಕೇರಿದ ಕೊರೊನಾ ಜಟಾಪಟಿ: ಅಮೇರಿಕಾ ಏಟಿಗೆ ಚೀನಾ ತಿರುಗೇಟು!ತಾರಕಕ್ಕೇರಿದ ಕೊರೊನಾ ಜಟಾಪಟಿ: ಅಮೇರಿಕಾ ಏಟಿಗೆ ಚೀನಾ ತಿರುಗೇಟು!

ನಾವು ಅಪರಾಧಿ ಅಲ್ಲ ಎಂದಿದ್ದ ಚೀನಾ

ನಾವು ಅಪರಾಧಿ ಅಲ್ಲ ಎಂದಿದ್ದ ಚೀನಾ

''ಮಾನವ ಸಂಕುಲಕ್ಕೆ ಕೊರೊನಾ ವೈರಸ್ ಶತ್ರುವಾಗಿದೆ. ಕೊರೊನಾ ವೈರಸ್ ನಿಂದ ನಾವು ಕೂಡ ಸಂತ್ರಸ್ತರೇ ಹೊರತು ಅಪರಾಧಿಗಳಲ್ಲ. ಕೊರೊನಾ ವೈರಸ್ ಹರಡಲು ಶುರುವಾದಾಗಿನಿಂದಲೂ, ಚೀನಾ ಪಾರದರ್ಶಕವಾಗಿ, ಜವಾಬ್ದಾರಿಯಿಂದ ನಡೆದುಕೊಳ್ಳುತ್ತಿದೆ. ಕೋವಿಡ್-19 ಹರಡದಂತೆ ತಡೆಯಲು ಪ್ರಾಮಾಣಿಕ ಪ್ರಯತ್ನ ಮಾಡಿದ್ದೇವೆ. ನಾವು ಕೂಡ ವೈರಸ್ ದಾಳಿಗೆ ತುತ್ತಾಗಿದ್ದೇವೆ. ನಾವು ವೈರಸ್ ನ ಸೃಷ್ಟಿಕರ್ತರಲ್ಲ'' ಎಂದು ಚೀನಾದ ವಿದೇಶಾಂಗ ಸಚಿವಾಲಯದ ವಕ್ತಾರ ಗೆಂಗ್ ಶುವಾಂತ್ ಸ್ಪಷ್ಟಪಡಿಸಿದ್ದರು.

ನೈಸರ್ಗಿಕವಾಗಿ ಹುಟ್ಟಿಕೊಂಡಿದ್ದು

ನೈಸರ್ಗಿಕವಾಗಿ ಹುಟ್ಟಿಕೊಂಡಿದ್ದು

''ಕೊರೊನಾ ವೈರಸ್ ಪ್ರಸಕ್ತ ಸ್ಥಿತಿಯಲ್ಲೇ ನೈಸರ್ಗಿಕವಾಗಿ ಹುಟ್ಟಿಕೊಂಡಿದ್ದು, ಬಳಿಕ ಜೀವಿಯೊಂದಕ್ಕೆ ಪ್ರವೇಶವಾಗಿದ್ದು, ಅಲ್ಲಿಂದ ಮಾನವರ ದೇಹ ಪ್ರವೇಶಿಸಿದೆ. ಕೊರೊನಾ ವೈರಸ್ ಕೃತಕವಾಗಿ ಸೃಷ್ಟಿಸಿದ್ದಲ್ಲ, ನೈಸರ್ಗಿಕವಾಗಿ ಹುಟ್ಟಿದ್ದು. ವೈರಾಣುವಿನ ಅನುವಂಶಿಕ ಧಾತುಗಳ ರಚನೆಯನ್ನು ಪರಿಶೀಲಿಸಿದಾಗ ಇದು ಮಾನವ ನಿರ್ಮಿತ ವೈರಾಣುವಲ್ಲ ಎಂದು ತಿಳಿದುಬಂದಿದೆ'' ಅಂತ ಸ್ಕ್ರಿಪ್ಸ್ ಸಂಸ್ಥೆಯ ಸಂಶೋಧಕ ಮತ್ತು ಅಧ್ಯಯನ ವರದಿಯ ಸಹ ಲೇಖಕ ಕ್ರಿಸ್ಟೀನ್ ಆಂಡರ್ ಸನ್ ಈ ಹಿಂದೆ ತಿಳಿಸಿದ್ದರು.

'ಕೊರೊನಾ ಮಾನವ ನಿರ್ಮಿತವಲ್ಲ': ಪುರಾವೆ ಇಲ್ಲದ ಆರೋಪ ಇದು'ಕೊರೊನಾ ಮಾನವ ನಿರ್ಮಿತವಲ್ಲ': ಪುರಾವೆ ಇಲ್ಲದ ಆರೋಪ ಇದು

English summary
US Intelligence agencies have concluded that new Coronavirus was not Manmade.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X