ನವೆಂಬರ್‌ನಲ್ಲಿ ಅಮೆರಿಕ ಮಾರುಕಟ್ಟೆಗೆ ಬರಲಿದೆ ಕೋವಿಡ್ ಔಷಧಿ?
ವಾಷಿಂಗ್ಟನ್, ಸೆಪ್ಟೆಂಬರ್ 03: ಕೋವಿಡ್ ಸೋಂಕಿನ ಔಷಧಿ ಬಗ್ಗೆ ವಿಶ್ವಮಟ್ಟದಲ್ಲಿ ಚರ್ಚೆ ನಡೆಯುತ್ತಿದೆ. ಮಹತ್ವದ ಬೆಳವಣಿಗೆಯೊಂದರಲ್ಲಿ ಅಮೆರಿಕ ನವೆಂಬರ್‌ನಲ್ಲಿ ಔಷಧಿಯನ್ನು ಮಾರುಕಟ್ಟೆಗೆ ಬಿಡುಗಡೆ ಮಾಡುವ ಸಾಧ್ಯತೆ ಇದೆ.
Recommended Video
ಅಮೆರಿಕ ಸರ್ಕಾರ ರಾಜ್ಯಗಳಿಗೆ ನವೆಂಬರ್ 1ರಿಂದ ಕೋವಿಡ್ ಔಷಧಿಗಳನ್ನು ವಿತರಣೆ ಮಾಡಲು ವ್ಯವಸ್ಥೆಗಳನ್ನು ಮಾಡಿಕೊಳ್ಳಿ ಎಂದು ಸೂಚನೆ ಕೊಟ್ಟಿದೆ. ಅಮೆರಿಕ ಅಧ್ಯಕ್ಷೀಯ ಚುನಾವಣೆ ಹಿನ್ನಲೆಯಲ್ಲಿ ಈ ಸೂಚನೆ ಮಹತ್ವ ಪಡೆದುಕೊಂಡಿದೆ.
ಆಗಸ್ಟ್ 27ರಂದು ಅಮೆರಿಕದ ಸಾಂಕ್ರಾಮಿಕ ರೋಗ ನಿಯಂತ್ರಣ ವಿಭಾಗದ ಡೈರೆಕ್ಟರ್ ಬರೆದಿರುವ ಪತ್ರ ಈಗ ಬಹಿರಂಗವಾಗಿದೆ. ವಿವಿಧ ರಾಜ್ಯಗಳಲ್ಲಿ ಔಷಧಿಗಳನ್ನು ಸಂಗ್ರಹಿಸಲು ಮತ್ತು ಆಸ್ಪತ್ರೆಗಳಿಗೆ ತಲುಪಿಸಲು ವ್ಯವಸ್ಥೆ ಮಾಡಿಕೊಳ್ಳಬೇಕು ಎಂದು ಸೂಚಿಸಲಾಗಿದೆ.

ಆರೋಗ್ಯ ಇಲಾಖೆಗೆ ಮೂರು ಪತ್ರಗಳ ಮೂಲಕ ಕೋವಿಡ್‌ಗೆ ಲಸಿಕೆ ಯಾವಾಗ ಸಿಗಬಹುದು ಎಂಬ ಬಗ್ಗೆ ವಿವರಣೆ ನೀಡಿದೆ. ನವೆಂಬರ್‌ನಲ್ಲಿ ಲಸಿಕೆ ಸಿಗಲಿದ್ದು, 2021ರಲ್ಲಿ ಲಸಿಕೆ ಪೂರೈಕೆಯನ್ನು ಹೆಚ್ಚಿಸಲಾಗುತ್ತದೆ ಎಂದು ತಿಳಿಸಲಾಗಿದೆ.
ಲಸಿಕೆಗಳ 3ನೇ ಹಂತದ ಪರೀಕ್ಷೆಗಳು ಮುಗಿಯುತ್ತಿದ್ದಂತೆ ತ್ವರಿತವಾಗಿ ಅವುಗಳಿಗೆ ಅನುಮತಿ ತೆಗೆದುಕೊಳ್ಳುವ ಕೆಲಸ ಮಾಡಲಾಗುತ್ತದೆ ಎಂದು ಆಹಾರ ಮತ್ತು ಔಷಧೀಯ ವಿಭಾಗ ಹೇಳಿದೆ. ಸೆಪ್ಟೆಂಬರ್ ಅಂತ್ಯದ ವೇಳೆಗೆ ಲಸಿಕೆಗಳ ಪ್ರಯೋಗ ವರದಿ ಕೈ ಸೇರಲಿದೆ.
ಕೋವಿಡ್‌ಗೆ ಔಷಧಿ ಕಂಡು ಹಿಡಿಯುವ ಸ್ಪರ್ಧೆಯಲ್ಲಿ ಅಮೆರಿಕ ಮತ್ತು ರಷ್ಯಾ ಮುಂಚೂಣಿಯಲ್ಲಿವೆ. ಅಮೆರಿಕದಲ್ಲಿ ಡಿಸೆಂಬರ್‌ನಲ್ಲಿ ಅಧ್ಯಕ್ಷೀಯ ಚುನಾವಣೆ ನಡೆಯಲಿದೆ. ಅದಕ್ಕೂ ಮೊದಲು ಔಷಧಿಯನ್ನು ಸರ್ಕಾರ ಮಾರುಕಟ್ಟೆಗೆ ತರಲು ಪ್ರಯತ್ನ ನಡೆಸುತ್ತಿದೆ.












Click it and Unblock the Notifications