ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಧ್ಯಕ್ಷರಾಗಿ ತಮ್ಮ ಜವಾಬ್ದಾರಿ ಏನೆಂದು ವಿವರಿಸಿದ ಜೋ ಬೈಡನ್

|
Google Oneindia Kannada News

ವಿಲ್ಮಿಂಗ್ಟನ್, ನವೆಂಬರ್ 7: ಶ್ವೇತಭವನ ಪ್ರವೇಶದ ಹಾದಿಯನ್ನು ಮತ್ತಷ್ಟು ಕ್ರಮಿಸುತ್ತಿದ್ದಂತೆಯೇ ಡೆಮಾಕ್ರಟಿಕ್ ಪಕ್ಷದ ಅಭ್ಯರ್ಥಿ ಜೋ ಬೈಡೆನ್, ಅಧ್ಯಕ್ಷಗಿರಿಯನ್ನೇರಲು ಸಕಲ ಸಿದ್ಧತೆ ಆರಂಭಿಸಿದ್ದಾರೆ. ಅತ್ತ ಡೊನಾಲ್ಡ್ ಟ್ರಂಪ್, ಈಗಲೇ ವಿಜಯ ಘೋಷಣೆ ಮಾಡದಂತೆ ಬೈಡೆನ್‌ಗೆ ಎಚ್ಚರಿಕೆ ನೀಡಿದ್ದಾರೆ.

ಟ್ರಂಪ್ ಅವರ ಪರವಾಗಿದ್ದ ಪೆನ್ಸಿಲ್ವೇನಿಯಾ ಮತ್ತು ಇತರೆ ಮೂರು ಪ್ರಮುಖ ರಾಜ್ಯಗಳಲ್ಲಿ ತಿರು ಪಡೆದುಕೊಂಡ ಮತ ಎಣಿಕೆಗೆ ಈಗ ಬೈಡೆನ್ ಪರ ವಾಲಿದೆ. ತಾವೇ ಗೆಲ್ಲುವುದು ಖಾತರಿ, ಆದರೆ ಪ್ರತಿ ಮತವನ್ನೂ ಎಣಿಕೆ ಮಾಡುವ ಪ್ರಕ್ರಿಯೆ ಮುಗಿಯುವವರೆಗೂ ಕಾಯುವುದಾಗಿ ಬೈಡೆನ್ ಪುನರುಚ್ಚರಿಸಿದ್ದಾರೆ.

300ಕ್ಕೂ ಹೆಚ್ಚು ಮತಗಳಿಂದ ಗೆಲ್ಲುತ್ತೇನೆ ಎಂದ ಜೋ ಬಿಡೆನ್! 300ಕ್ಕೂ ಹೆಚ್ಚು ಮತಗಳಿಂದ ಗೆಲ್ಲುತ್ತೇನೆ ಎಂದ ಜೋ ಬಿಡೆನ್!

ಚುನಾವಣಾ ಗೆಲುವಿನ ಘೋಷಣೆ ಮಾಡುಬ ಬದಲು ಬೈಡೆನ್, ಅಧ್ಯಕ್ಷ ಸ್ಥಾನದಲ್ಲಿರುವ ವ್ಯಕ್ತಿಯ ಮಾದರಿಯಲ್ಲಿ ಭಾಷಣ ಮಾಡಿದ್ದಾರೆ. ಶುಕ್ರವಾರ 1.27 ಲಕ್ಷಕ್ಕೂ ಅಧಿಕ ಹೊಸ ಕೊರೊನಾ ವೈರಸ್ ಪ್ರಕರಣಗಳು ಪತ್ತೆಯಾಗಿದ್ದು, ಕೋವಿಡ್ ನಿಯಂತ್ರಣಕ್ಕೆ ಬೈಡೆನ್ ಶಪಥ ಮಾಡಿದ್ದಾರೆ.

US Elections: Joe Biden Explains His Responsibility As President

'ನಮ್ಮ ಕೋಪ ಮತ್ತು ಆಕ್ರೋಶಗಳನ್ನು ನಮ್ಮ ಹಿಂದೆಯೇ ಬಿಡಬೇಕಿದೆ. ದೇಶವಾಗಿ ಮತ್ತು ಶಮನಕಾರಿಯಂತೆ ನಾವೆಲ್ಲರೂ ಜತೆಗೂಡುವ ಸಮಯ ಇದು' ಎಂದು ಬೈಡೆನ್ ಅವರು ತಮ್ಮ ತವರು ನಗರ ವಿಲ್ಮಿಂಗ್ಟನ್‌ನ ಡೆಲಾವೇರ್‌ನಲ್ಲಿ ಹೇಳಿದರು. ಈ ವೇಳೆ ಉಪಾಧ್ಯಕ್ಷ ಅಭ್ಯರ್ಥಿ ಕಮಲಾ ಹ್ಯಾರಿಸ್ ಅವರೊಂದಿಗೆ ಇದ್ದರು.

ಯುಎಸ್ಎ ಮುಂದಿನ ಅಧ್ಯಕ್ಷ ಜೋ ಬೈಡನ್ : ನ್ಯಾನ್ಸಿ ಪೆಲೋಸಿ ಯುಎಸ್ಎ ಮುಂದಿನ ಅಧ್ಯಕ್ಷ ಜೋ ಬೈಡನ್ : ನ್ಯಾನ್ಸಿ ಪೆಲೋಸಿ

'ಅಧ್ಯಕ್ಷನಾಗಿ ನನ್ನ ಜವಾಬ್ದಾರಿಯೆಂದರೆ ಇಡೀ ದೇಶವನ್ನು ಪ್ರತಿನಿಧಿಸುವುದಾಗಿದೆ. ಮೊದಲ ದಿನದಿಂದಲೇ ನಾವು ವೈರಸ್ ಅನ್ನು ನಿಯಂತ್ರಿಸುವ ನಮ್ಮ ಯೋಜನೆಯನ್ನು ಜಾರಿಗೆ ತರುವುದನ್ನು ಪ್ರತಿಯೊಬ್ಬರೂ ತಿಳಿಯಬೇಕು ಎಂದು ಬಯಸುತ್ತೇನೆ. ಇದು ನಾವು ಈಗಾಗಲೇ ಕಳೆದುಕೊಂಡ ಜೀವಗಳನ್ನು ರಕ್ಷಿಸಲಾಗದು, ಆದರೆ ಮುಂಬರುವ ತಿಂಗಳುಗಳಲ್ಲಿ ಅಪಾರ ಪ್ರಮಾಣದ ಜೀವಗಳನ್ನು ಉಳಿಸಬಲ್ಲದು' ಎಂದು ಬೈಡೆನ್ ಹೇಳಿದ್ದಾರೆ.

English summary
US Elections: Joe Biden said, my responsibility as president will be to represent the whole nation.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X