ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಮೆರಿಕ ಚುನಾವಣೆ: ಮತ ಚಲಾಯಿಸಿದ ಡೆಮಾಕ್ರಟಿಕ್ ಅಭ್ಯರ್ಥಿ ಜೋ ಬಿಡೆನ್

|
Google Oneindia Kannada News

ವಾಷಿಂಗ್ಟನ್, ಅಕ್ಟೋಬರ್ 29: ಡೆಮಾಕ್ರಟಿಕ್ ಪಕ್ಷದ ಅಭ್ಯರ್ಥಿ ಜೋ ಬಿಡೆನ್ ಮತ್ತು ಅವರ ಪತ್ನಿ ಜಿಲ್ ಬಿಡೆನ್ ಅವರು ತಮ್ಮ ತವರೂರು ಡಿಲೇವೆರ್‌ನಲ್ಲಿನ ವಿಲ್ಮಿಂಗ್ಟನ್‌ನಲ್ಲಿ ಬುಧವಾರ ಅಮೆರಿಕ ಅಧ್ಯಕ್ಷೀಯ ಚುನಾವಣೆಯ ಮತ ಚಲಾಯಿಸಿದರು.

ಇದಕ್ಕೂ ಮುನ್ನ ಮಾಡಿದ ಭಾಷಣದಲ್ಲಿ, ಕೊರೊನಾ ವೈರಸ್ ಸೋಂಕಿನ ಸನ್ನಿವೇಶವನ್ನು ನಿಭಾಯಿಸುವುದರಲ್ಲಿ ಡೊನಾಲ್ಡ್ ಟ್ರಂಪ್ ವಿಫಲರಾಗಿದ್ದಾರೆ ಎಂದು ಆರೋಪಿಸಿದ ಬಿಡೆನ್, ತಾವು ಅಧಿಕಾರಕ್ಕೆ ಬಂದರೆ ಸೋಂಕನ್ನು ಹತ್ತಿಕ್ಕುವುದಾಗಿ ಭರವಸೆ ನೀಡಿದರು.

ಅಮೆರಿಕ ಚುನಾವಣೆಯಲ್ಲಿ ಯಾರಿಗೆ ಗೆಲುವು..? ಯಾರಿಗೆ ಸೋಲು..? ಅಮೆರಿಕ ಚುನಾವಣೆಯಲ್ಲಿ ಯಾರಿಗೆ ಗೆಲುವು..? ಯಾರಿಗೆ ಸೋಲು..?

'ನಾನು ತಮಗೆ ಮಾತ್ರವೇ ಅಧ್ಯಕ್ಷರಾಗುವ ವ್ಯಕ್ತಿಯಾಗುವುದಿಲ್ಲ, ಬದಲಾಗಿ ಇತರರ ಅಧ್ಯಕ್ಷನಾಗುತ್ತೇನೆ. ನಮ್ಮನ್ನು ವಿಭಜಿಸದೆ ಇರುವ, ಆದರೆ ಒಂದುಗೂಡಿಸುವ ಅಧ್ಯಕ್ಷನಾಗುತ್ತೇನೆ. ನಮ್ಮಲ್ಲಿನ ಕೆಟ್ಟದನ್ನು ಕೇಳುವುದಲ್ಲ, ಒಳ್ಳೆಯದನ್ನು ಬಯಸುವ ಅಧ್ಯಕ್ಷನಾಗುತ್ತೇನೆ. ಕೆಟ್ಟ ಆಲೋಚನೆಗಳಿಂದ ಮಾರ್ಗದರ್ಶನಗೊಂಡ ಅಧ್ಯಕ್ಷನಲ್ಲ, ಆದರೆ ವಿಜ್ಞಾನ, ಕಾರಣ ಮತ್ತು ವಾಸ್ತವಗಳ ಮೂಲಕ ಮಾರ್ಗದರ್ಶನ ಪಡೆಯುವ ಅಧ್ಯಕ್ಷನಾಗುತ್ತೇನೆ' ಎಂದು ಅವರು ಹೇಳಿದರು.

ಟ್ರಂಪ್ ಎಡವಟ್ಟಿನಿಂದಲೇ ವೈಟ್‌ಹೌಸ್ ಕೊರೊನಾ ಹಾಟ್‌ಸ್ಪಾಟ್ ಆಗಿದೆ: ಒಬಾಮಾಟ್ರಂಪ್ ಎಡವಟ್ಟಿನಿಂದಲೇ ವೈಟ್‌ಹೌಸ್ ಕೊರೊನಾ ಹಾಟ್‌ಸ್ಪಾಟ್ ಆಗಿದೆ: ಒಬಾಮಾ

US Elections Democratic Candidate Joe Biden Cast Vote At Wilmington

ಡೊನಾಲ್ಡ್ ಟ್ರಂಪ್ ಅವರು ಶನಿವಾರ ಫ್ಲೋರಿಡಾದಲ್ಲಿ ತಮ್ಮ ಮತ ಚಲಾಯಿಸಿದ್ದರು. ಬುಧವಾರ ಅವರು ಅರಿಜೋನಾದಲ್ಲಿ ಬೆಂಬಲಿಗರ ಸಭೆ ನಡೆಸಿದರು. ಅರಿಜೋನಾದಲ್ಲಿ ಅವರು ಇನ್ನೂ ಎರಡು ಸಮಾವೇಶಗಳನ್ನು ನಡೆಸಲಿದ್ದಾರೆ.

English summary
US Elections: Democratic candidate Joe Biden and his wife Jill Biden cast their votes in Wilmington on Wednesday.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X