• search
  • Live TV
ವಾಷಿಂಗ್ಟನ್ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಅಮೆರಿಕ ಚುನಾವಣೆ: ನಾಯಕರ ನಡುವೆ ನಿಕಟ ಹಣಾಹಣಿ

|
Google Oneindia Kannada News

ವಾಷಿಂಗ್ಟನ್, ನವೆಂಬರ್ 4: ಶ್ವೇತಭವನಕ್ಕೆ ಪ್ರವೇಶ ಪಡೆಯಲಿರುವ ಅಮೆರಿಕದ ಮುಂದಿನ ನಾಯಕ ಯಾರು ಎಂಬ ಕುತೂಹಲ ತೀವ್ರಗೊಂಡಿದೆ. ರಿಪಬ್ಲಿಕನ್ ಪಕ್ಷದ ಅಭ್ಯರ್ಥಿ ಡೊನಾಲ್ಡ್ ಟ್ರಂಪ್ ಮತ್ತು ಡೆಮಾಕ್ರಟಿಕ್ ಪಕ್ಷದ ಅಭ್ಯರ್ಥಿ ಜೋ ಬೈಡೆನ್ ನಡುವೆ ತೀವ್ರ ಹಣಾಹಣಿ ನಡೆಯುತ್ತಿದೆ.

ಅಮೆರಿಕದ ಮಾಧ್ಯಮಗಳ ವರದಿ ಪ್ರಕಾರ ಡೊನಾಲ್ಟ್ ಟ್ರಂಪ್ 89 ಎಲೆಕ್ಟೊರೆಲ್ ಮತಗಳನ್ನು ಪಡೆದಿದ್ದರೆ, ಜೋ ಬೈಡೆನ್ 126 ಎಲೆಕ್ಟೊರೆಲ್ ಮತಗಳನ್ನು ಪಡೆದಿದ್ದಾರೆ. ಅಲಬಾಮ, ಅರ್ಕನ್ಸಾಸ್, ಇಂಡಿಯಾನಾ, ಸೌತ್ ಕರೋಲಿನಾ, ಓಕ್ಲಹಾಮ, ವೆಸ್ಟ್ ವರ್ಜೀನಿಯಾ ಸೇರಿದಂತೆ ಹಲವು ಕಡೆ ಟ್ರಂಪ್ ಜಯ ಗಳಿಸಿದ್ದಾರೆ. ಇದುವರೆಗೂ ಟ್ರಂಪ್ 13 ರಾಜ್ಯಗಳಲ್ಲಿ ಗೆದ್ದಿದ್ದರೆ, ಬೈಡೆನ್ ಅವರಿಗೆ 12 ಕಡೆ ಜಯ ಸಿಕ್ಕಿದೆ.

ಇಲ್ಲಿನೊಯಿಸ್, ನ್ಯೂಯಾರ್ಕ್, ನ್ಯೂಜೆರ್ಸಿ, ವರ್ಜೀನಿಯಾ, ಕೊಲಾರಡೊ, ಮೇರಿಲ್ಯಾಂಡ್, ಮಸ್ಸಾಚುಸೆಟ್ಸ್ ಸೇರಿದಂತೆ 12 ಕಡೆಗಳಲ್ಲಿ ಜೋ ಬೈಡೆನ್ ಮುನ್ನಡೆ ಸಾಧಿಸಿದ್ದಾರೆ. ಸೌತ್ ಕರೋಲಿನಾ ಡೊನಾಲ್ಡ್ ಟ್ರಂಪ್ ಅವರ ಪಾಲಾಗಿದೆ. ಓಹಿಯೋ ಮತ್ತು ಟೆಕ್ಸಾಸ್‌ಗಳಲ್ಲಿ ಜೋ ಬೈಡೆನ್ ಮುನ್ನಡೆ ಸಾಧಿಸಿದ್ದಾರೆ.

ವೆಸ್ಟ್ ವರ್ಜೀನಿಯಾವನ್ನು ತಮ್ಮ ಖಾತೆಗೆ ಹಾಕಿಕೊಂಡಿರುವ ಟ್ರಂಪ್, ಫ್ಲೋರಿಡಾದಲ್ಲಿ ಮುನ್ನಡೆ ಸಾಧಿಸಿದ್ದಾರೆ. ಬಹಳ ನಿರ್ಣಾಯಕ ರಾಜ್ಯಗಳಲ್ಲಿ ಒಂದಾಗಿರುವ ಫ್ಲೋರಿಡಾದಲ್ಲಿ ನಿಕಟ ಪೈಪೋಟಿ ಇದೆ ಎಂದು ಮಾಧ್ಯಮಗಳು ಹೇಳಿವೆ. ಆದರೆ ಇಲ್ಲಿ ತಾವು ಗೆದ್ದಾಗಿದೆ ಎಂದು ಟ್ರಂಪ್ ಹೇಳಿಕೊಂಡಿದ್ದಾರೆ.

ಲೋವಾ, ಮೊಂಟಾನಾ, ನೆವಾಡ ಮತ್ತು ಉಟಾಹ್‌ಗಳಲ್ಲಿ ಚುನಾವಣೆಗಳು ನಡೆಯುತ್ತಿದೆ. ಅಧ್ಯಕ್ಷ ಚುನಾವಣೆಯ ಬಳಿಕ ಅಧ್ಯಕ್ಷರನ್ನು ನಿರ್ಧರಿಸುವುದು ಕಾಲೇಜ್ ಎಲೆಕ್ಟೊರೆಲ್. ಅದರಲ್ಲಿ 9 ಮತಗಳಿರುವ ಸೌತ್ ಕರೋಲಿನಾ, ಮತ್ತು ಅಲಬಾಮ ಟ್ರಂಪ್ ಪಾಲಾಗಿದೆ.

English summary
US Elections: Donald Trump wins 13 states and Joe Biden at 12 states. A close fight in Florida makes the election result interesting.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
Desktop Bottom Promotion