• search
  • Live TV
ವಾಷಿಂಗ್ಟನ್ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಅಮೆರಿಕ ವಿದೇಶಾಂಗ ಇಲಾಖೆ ಡೆಪ್ಯುಟಿ ಸೆಕ್ರೆಟರಿ ಬೀಗನ್‌ರಿಂದ ಭಾರತ ಪ್ರವಾಸ

|

ವಾಷಿಂಗ್ಟನ್, ಅಕ್ಟೋಬರ್ 09: ಅಮೆರಿಕ ಅಧ್ಯಕ್ಷೀಯ ಚುನಾವಣೆ ಸನ್ನಿಹಿತವಾಗುತ್ತಿದೆ, ಪ್ರಚಾರದ ಭರಾಟೆ ಜೋರಾಗಿದೆ. ಇದೇ ಸಂದರ್ಭದಲ್ಲಿ ಅಮೆರಿಕದ ವಿದೇಶಾಂಗ ಇಲಾಖೆಯ ಡೆಪ್ಯೂಟಿ ಸೆಕ್ರೆಟರಿ ಸ್ಟೀಫನ್ ಇ.ಬೀಗನ್ ಭಾರತ ಪ್ರವಾಸ ಕೈಗೊಂಡಿರುವುದು ತೀವ್ರ ಕುತೂಹಲಕ್ಕೆ ಕಾರಣವಾಗಿದೆ.

ಬೀಗನ್ ಅವರು ಅಕ್ಟೋಬರ್‌ 12-16 ರವರೆಗೆ ಭಾರತ ಮತ್ತು ಬಾಂಗ್ಲಾದೇಶ ಪ್ರವಾಸ ಕೈಗೊಳ್ಳಲಿದ್ದಾರೆ. ಅಕ್ಟೋಬರ್ 12-14, ರವರೆಗೆ ನವದೆಹಲಿಗೆ ಭೇಟಿ ನೀಡಲಿದ್ದು, ಉನ್ನತಚ ಅಧಿಕಾರಿಗಳ ಭೇಟಿ ಮತ್ತು ಇಂಡಿಯಾ-ಯು.ಎಸ್‌. ಫೋರಂನಲ್ಲಿ ಭಾಷಣ ಮಾಡಲಿದ್ದಾರೆ.

ಅಮೆರಿಕ ಅಧ್ಯಕ್ಷರ ಆಯ್ಕೆಗೆ ದಿನಗಣನೆ, 244 ವರ್ಷಗಳ ಮಹಾನ್ ಇತಿಹಾಸ

ಸೆಕ್ರೆಟರಿ ಪ್ಯಾಂಪಿಯೊ ಮತ್ತು ಭಾರತದ ವಿದೇಶಾಂಗ ಸಚಿವ ಡಾ. ಎಸ್‌. ಜಯಶಂಕರ್‌ ಅವರ ಅಕ್ಟೋಬರ್‌. 6ರ ಭೇಟಿಯ ಮುಂದುವರಿದ ಭಾಗವಾಗಿರುವ ಈ ಭೇಟಿಯು ಹೆಚ್ಚಿನ ಮಹತ್ವ ಪಡೆದಿದೆ.

ಇದೇ ವರ್ಷದ ಕೊನೆಯಲ್ಲಿ ನಡೆಯಲಿರುವ ಅಮೆರಿಕ-ಭಾರತ 2+2 ಸಚಿವರ ಮಟ್ಟದ ಮಾತುಕತೆಯ ಹಿನ್ನೆಲೆಯಲ್ಲಿ ವಿಶ್ವದಾದ್ಯಂತ ಅಮೆರಿಕ-ಭಾರತದ ಸಮಗ್ರ ಜಾಗತಿಕ ವ್ಯೂಹಾತ್ಮಕ ಸಹಭಾಗಿತ್ವದ ಬಗ್ಗೆ ಬೀಗನ್‌ ಅವರ ಭೇಟಿಯ ಒತ್ತು ಕೊಡಲಿದೆ.

ಇಂಡೋ-ಫೆಸಿಫಿಕ್‌ ಪ್ರಾಂತ್ಯದಲ್ಲಿ ಶಾಂತಿ, ಸಮೃದ್ಧಿ, ಮತ್ತು ಸುಭದ್ರತೆಯನ್ನು ಕಾಪಾಡುವತ್ತ ಅಮೆರಿಕ ಮತ್ತು ಭಾರತಗಳು ಹೇಗೆ ಜತೆಯಾಗಿ ಕೆಲಸ ಮಾಡಬಹುದು ಎಂಬುದನ್ನೂ ಪರಿಶೀಲಿಸಲಿದ್ದಾರೆ.

ಡೆಪ್ಯುಟಿ ಸೆಕ್ರೆಟರಿ ಬೀಗನ್‌ ಅವರು ಅಕ್ಟೋಬರ್ 14-16 ರವರೆಗೆ ಬಾಂಗ್ಲಾದೇಶದ ಢಾಕಕ್ಕೆ ಭೇಟಿ ನೀಡಲಿದ್ದು, ಉನ್ನತ ಅಧಿಕಾರಿಗಳೊಂದಿಗೆ ಮಾತುಕತೆ ನಡೆಸಿ, ಅಮೆರಿಕ- ಬಾಂಗ್ಲಾದೇಶದ ಸಹಭಾಗಿತ್ವ ಮಹತ್ವವನ್ನು ಎತ್ತಿಹಿಡಿಯಲಿದ್ದಾರೆ. ಈ ಭೇಟಿಯ ಸಂದರ್ಭದಲ್ಲಿ ಮುಕ್ತ, ಎಲ್ಲರನ್ನೂ ಒಳಗೊಂಡ, ಶಾಂತಿಯುತ, ಸುಭದ್ರ ಮತ್ತು ಸಮೃದ್ಧಿಯ ಹಂಚಿಕೆಯನ್ನು ಖಚಿತ ಪಡಿಸಿಕೊಳ್ಳುವ ಇಂಡೊ-ಪೆಸಿಫಿಕ್‌ ಪ್ರಾಂತ್ಯವನ್ನು ಹೊಂದುವ ಸಮಾನ ಪರಿಕಲ್ಪನೆಯನ್ನು ಮುನ್ನಡೆಸುವುದು ಹಾಗೂ COVID-19 ಹೊತ್ತಿನಲ್ಲಿ ಅಮೆರಿಕ-ಬಾಂಗ್ಲಾದೇಶಗಳ ನಡುವಣ ಸಹಕಾರ ಮತ್ತು ಸುಸ್ಥಿರ ಆರ್ಥಿಕ ಬೆಳವಣಿಗೆ ವಿಷಯಗಳು ಡೆಪ್ಯುಟಿ ಸೆಕ್ರೆಟರಿ ಅವರ ಬಾಂಗ್ಲಾದೇಶ ಭೇಟಿಯ ಹೊತ್ತಿನಲ್ಲಿ ಚರ್ಚೆಗೆ ಬರಲಿವೆ.

English summary
US Deputy Secretary of State Stephen Biegun will visit New Delhi next week to meet senior officials and deliver the keynote remarks at the India-US Forum.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X