ಇರಾಕ್‌ನಲ್ಲಿನ ಸೇನಾ ಪಡೆ ಹಿಂದಕ್ಕೆ: ಅಮೆರಿಕ ಘೋಷಣೆ

ವಾಷಿಂಗ್ಟನ್, ಸೆಪ್ಟೆಂಬರ್ 9: ಇರಾಕ್‌ನಲ್ಲಿರುವ ತನ್ನ ಸೇನಾ ಪಡೆಗಳ ಸಂಖ್ಯೆಯನ್ನು ಕಡಿತಗೊಳಿಸುವುದಾಗಿ ಅಮೆರಿಕ ತಿಳಿಸಿದೆ. ಸುದೀರ್ಘ ಸಮಯದಿಂದಲೂ ಈ ನಡೆಯನ್ನು ನಿರೀಕ್ಷಿಸಲಾಗಿತ್ತು. ಇರಾಕ್‌ನಲ್ಲಿರುವ ತನ್ನ 5,200 ಪಡೆಗಳನ್ನು 3000ಕ್ಕೆ ಇದೇ ತಿಂಗಳಲ್ಲಿ ತಗ್ಗಿಸುವುದಾಗಿ ಅಮೆರಿಕ ಸೇನೆ ಬುಧವಾರ ಹೇಳಿದೆ.

'ಇರಾಕ್ ಪಡೆಗಳ ಸಾಮರ್ಥ್ಯವನ್ನು ವೃದ್ಧಿಸುವ ನಮ್ಮ ಸಹಭಾಗಿತ್ವದ ಕಾರ್ಯಕ್ರಮಗಳನ್ನು ವಿಸ್ತರಿಸುವುದನ್ನು ಮುಂದುವರಿಸಲಿದ್ದೇವೆ. ಈ ಮೂಲಕ ಇರಾಕ್‌ನಲ್ಲಿನ ನಮ್ಮ ಹೆಜ್ಜೆಗುರುತುಗಳನ್ನು ಕಡಿತಗೊಳಿಸಲಿದ್ದೇವೆ' ಎಂದು ಅಮೆರಿಕ ಸೆಂಟ್ರಲ್ ಕಮಾಂಡ್‌ನ ಮೆರಿನ್ ಜನರಲ್ ಫ್ರಾಂಕ್ ಮೆಕೆಂಜಿ ತಿಳಿಸಿದರು.

ಮುಂಬರುವ ತಿಂಗಳುಗಳಲ್ಲಿ ಅಮೆರಿಕದ ಸೇನೆಯ ಪ್ರಮಾಣವನ್ನು ತಗ್ಗಿಸುವುದಕ್ಕೆ ಬದ್ಧವಾಗಿರುವುದಾಗಿ ಅಮೆರಿಕ ಹಾಗೂ ಇರಾಕ್ ಜೂನ್‌ನಲ್ಲಿ ಖಚಿತಪಡಿಸಿದ್ದವು. ಇರಾಕ್‌ನಲ್ಲಿ ಅಮೆರಿಕವು ಕಾಯಂ ಸೇನಾ ಉಪಸ್ಥಿತಿ ಹೊಂದುವ ಯಾವುದೇ ಯೋಜನೆ ಇಲ್ಲ ಎಂದು ತಿಳಿಸಿದ್ದವು.

US Announces Troop Reduction From 5200 To 3000 In Iraq

2003ರಲ್ಲಿ ಇರಾಕ್‌ ಒಳಗೆ ನುಗ್ಗಿದ್ದ ಅಮೆರಿಕದ ಪಡೆಗಳು 2011ರಲ್ಲಿ ಹೊರಬಂದಿದ್ದವು. ಆದರೆ ಇರಾಕ್‌ನಲ್ಲಿ ಉಗ್ರರ ಹಾವಳಿ ಹೆಚ್ಚಾಗಿದ್ದರಿಂದ 2014ರಲ್ಲಿ ಪುನಃ ಮರಳಿದ್ದವು. ಅಮೆರಿಕದ ಅಂತ್ಯವಿಲ್ಲದ ಯುದ್ಧವನ್ನು ಕೊನೆಗೊಳಿಸುವುದಾಗಿ 2016ರ ಚುನಾವಣೆ ಪ್ರಚಾರದ ವೇಳೆ ಟ್ರಂಪ್ ಹೇಳಿಕೊಂಡಿದ್ದರು. ಆದರೆ ಅಫ್ಘಾನಿಸ್ತಾನ, ಇರಾಕ್ ಮತ್ತು ಸಿರಿಯಾಗಳಂತಹ ದೇಶಗಳಲ್ಲಿ ಸಣ್ಣ ಪ್ರಮಾಣದ ಸೇನೆಯನ್ನು ಉಳಿಸಿಕೊಂಡಿದ್ದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+