ಲಸಿಕೆ ಹಾಕಿಸಿಕೊಳ್ಳದವರಿಗೆ ಕೋವಿಡ್‌ನಿಂದ ಹೆಚ್ಚು ಅಪಾಯ: WHO
ವಾಷಿಂಗ್ಟನ್, ಜನವರಿ 24: ಲಸಿಕೆಯ ಹಾಕಿಸಿಕೊಳ್ಳದವರಿಗೆ ಕೊರೊನಾ ಸೋಂಕಿನಿಂದ ಹೆಚ್ಚು ಅಪಾಯವಾಗುತ್ತಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಹೇಳಿದೆ.
ಎಲ್ಲರಿಗೂ ಓಮಿಕ್ರಾನ್ ಹರಡಿದೆ ಎಂಬುದು ನಿಜವೇ ಎಂಬ ಪ್ರಶ್ನೆಗೆ ಉತ್ತರಿಸಿರುವ ಕೆರ್ಕೋವ್, ಓಮಿಕ್ರಾನ್ ಡೆಲ್ಟಾಗಿಂತ ವೇಗವಾಗಿ ಹರಡುತ್ತಿರುವುದು ನಿಜ. ಆದರೆ ಇದು ಪ್ರತಿಯೊಬ್ಬರಿಗೂ ಹರಡುತ್ತದೆ ಎಂದು ಅರ್ಥವಲ್ಲ ಎಂದೂ ಅವರು ಇದೇ ವೇಳೆ, ಸ್ಪಷ್ಟಪಡಿಸಿದ್ದಾರೆ. ಓಮಿಕ್ರಾನ್ ತೊಲಗಿಸಲು ಮತ್ತು ನಿಯಂತ್ರಿಸಲು ವಾಕ್ಸಿನೇಷನ್ ಪ್ರಮುಖ ಪಾತ್ರ ವಹಿಸುತ್ತಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ತೀವ್ರತರವಾದ ರೋಗ ಮತ್ತು ಸಾವಿನ ವಿರುದ್ಧ ವ್ಯಾಕ್ಸಿನೇಷನ್ ನಂಬಲಾಗದಷ್ಟು ರಕ್ಷಣಾತ್ಮಕವಾಗಿದೆ. ಆದರೆ, ಇದು ಸೋಂಕು ಹಾಗೂ ಸೋಂಕಿನ ವ್ಯಾಪಕ ಪ್ರಸರಣ ತಡೆಯುತ್ತದೆ. ಆದರೆ, ಸೋಂಕುಗಳು ಮತ್ತು ಪ್ರಸರಣ ತಡೆಗಟ್ಟುವಲ್ಲಿ ಇದು ಸಂಪೂರ್ಣ ಪರಿಪೂರ್ಣ ಎಂದು ಭಾವಿಸುವುದು ತಪ್ಪು. ಹೀಗಾಗಿಯೇ ಜನ ಮುನ್ನೆಚ್ಚರಿಕೆ ವಹಿಸಬೇಕು ಎಂದು ಕೆರ್ಕೋವ್ ಹೇಳಿದ್ದಾರೆ.

ಡಾ ಕೆರ್ಕೋವ್ ವಿಶ್ಲೇಷಣೆ ಪ್ರಕಾರ, ವಿಶ್ವದ ಕೊರೊನಾ ಪೀಡಿತರ ಸಂಖ್ಯೆ 34.8 ಕೋಟಿಗೆ ತಲುಪಿದೆ. ಸಾವುಗಳ ಸಂಖ್ಯೆ ಕೂಡಾ 55 ಲಕ್ಷದ ಗಡಿ ದಾಟಿದೆ. ಇನ್ನು 900 ಕೋಟಿ ಡೋಸ್ಗಳನ್ನು ಈಗಾಗಲೇ ಜನರಿಗೆ ನೀಡಲಾಗಿದೆ ಎಂದು ಜಾನ್ಸ್ ಹಾಪ್‌ಕಿನ್ಸ್ ವಿಶ್ವವಿದ್ಯಾಲಯ ಹೇಳಿದೆ ಎಂಬುದನ್ನು ಅವರು ಇದೇ ವೇಳೆ ಉಲ್ಲೇಖಿಸಿದ್ದಾರೆ.
ಇನ್ನೂ ಲಸಿಕೆ ಹಾಕಿಸಿಕೊಳ್ಳದ ಜನರು ಓಮಿಕ್ರಾನ್ ಸೋಂಕಿಗೆ ಒಳಗಾದ ಬಳಿಕ ಕೋವಿಡ್‌ನಿಂದ ಹೆಚ್ಚಿನ ಸಂಕಷ್ಟಕ್ಕೆ ಒಳಗಾಗಿದ್ದಾರೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಹೇಳಿದೆ.
ಈ ಬಗ್ಗೆ ಮಾತನಾಡಿರುವ ವಿಶ್ವ ಆರೋಗ್ಯ ಸಂಸ್ಥೆಯ ಕೋವಿಡ್ ತಾಂತ್ರಿಕ ಮುಖ್ಯಸ್ಥ ಡಾ ಮರಿಯಾ ವ್ಯಾನ್ ಕೆರ್ಕೋವ್, ಹೊಸ ರೂಪಾಂತರಿ ಒಮಿಕ್ರಾನ್ ಅದೊಂದು ಸೌಮ್ಯ ಸ್ವಭಾವದ್ದು ಎಂದು ಪರಿಗಣಿಸುವುದು ಭಾರಿ ಅಪಾಯಕಾರಿ ಎಂದು ಎಚ್ಚರಿಕೆ ನೀಡಿದ್ದಾರೆ.
ಒಮಿಕ್ರಾನ್ ಸೋಂಕಿಗೆ ಒಳಗಾದ ಜನರು ರೋಗದ ಸಂಪೂರ್ಣ ಲಕ್ಷಣಗಳನ್ನು ಹೊಂದಿರುತ್ತಾರೆ, ಲಕ್ಷಣ ರಹಿತ ಸೋಂಕಿನಿಂದ ಹಿಡಿದು ತೀವ್ರತರವಾದ ಕಾಯಿಲೆ ಮತ್ತು ಸಾವಿನ ತನಕವೂ ಇರುತ್ತದೆ. ನಾವು ಕಲಿಯುತ್ತಿರುವ ವಿಷಯವೆಂದರೆ ಲಸಿಕೆ ಹಾಕಿಸಿಕೊಳ್ಳದ ಜನರು ಓಮಿಕ್ರಾನ್ ತಗುಲಿದ ಬಳಿಕ ಕೋವಿಡ್ ಸಂಕಷ್ಟಕ್ಕೆ ಸಿಲುಕುತ್ತಾರೆ. ಮತ್ತು ಹೆಚ್ಚಿನವರು ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಬಹುದು.
ಹಾಗಾಗಿ ಓಮಿಕ್ರಾನ್ ಬಗ್ಗೆ ಎಚ್ಚರಿಕೆಯಿಂದರಬೇಕು. ಇದು ಡೆಲ್ಟಾಕ್ಕಿಂತ ಕಡಿಮೆ ತೀವ್ರತೆ ಹೊಂದಿರಬಹುದು ಆದರೆ ಬಹಳ ಅಪಾಯಕಾರಿ ಮತ್ತು ಇದು ಮೈಲ್ಡ್ ಅಲ್ಲ ಎಂಬುದನ್ನು ಗಮನದಲ್ಲಿಟ್ಟುಕೊಳ್ಳಬೇಕು ಎಂದು ಡಾ ಕೆರ್ಕೋವ್ ಎಚ್ಚರಿಕೆ ನೀಡಿದ್ದಾರೆ.
ಕೊರೊನಾ ರೂಪಾಂತರಿ ಓಮಿಕ್ರಾನ್ ಸಮುದಾಯಕ್ಕೆ ಹರಡುವ ಹಂತದಲ್ಲಿದೆ ಎಂದು ತಜ್ಞರು ಎಚ್ಚರಿಕೆ ಸಂದೇಶ ರವಾನಿಸಿದ್ದಾರೆ. ಹಲವು ನಗರಗಳಲ್ಲಿ ಈ ರೂಪಾಂತರಿ ಪ್ರಬಲವಾಗಿದೆ ಐಎನ್ಎಸ್ಎಸಿಒಜಿ (ಇನ್‌ಸಾಕೋಗ್) ಅದರ ಇತ್ತೀಚಿನ ಬುಲೆಟಿನ್‌ನಲ್ಲಿ ಹೇಳಿದೆ.
"ಇತ್ತೀಚಿನ ದಿನಗಳಲ್ಲಿ ವರದಿಯಾಗಿರುವ ಬಿ.1.640.2 ವಂಶಾವಳಿಯ ಮೇಲೆ ನಿಗಾ ವಹಿಸಲಾಗುತ್ತಿದೆ. ಇದು ವೇಗವಾಗಿ ಹರಡುತ್ತದೆ ಎಂಬುದಕ್ಕೆ ಸಾಕ್ಷ್ಯಗಳಿಲ್ಲ. ಹಾಗೂ ರೋಗನಿರೋಧಕತೆಯನ್ನೂ ಮೀರುವ ಅದರ ವೈಶಿಷ್ಟ್ಯಗಳು ಈ ವರೆಗೂ ಆತಂಕಕಾರಿ ರೂಪಾಂತರಿ" ಎಂದು ದೃಢಪಟ್ಟಿಲ್ಲವೆಂದು ಇನ್‌ಸಾಕೋಗ್ ಹೇಳಿದೆ.
ಭಾರತದಲ್ಲಿ ಇನ್ನು ಮುಂದೆ ಓಮಿಕ್ರಾನ್ ಸೋಂಕು ಹರಡುವಿಕೆ ಸ್ಥಳೀಯರಿಂದ ಉಂಟಾಗಲಿದೆ ಹೊರದೇಶದಿಂದ ಬಂದವರಿಂದ ಅಲ್ಲ ಎಂದು ಇನ್‌ಸಾಕೋಗ್ ಹೇಳಿದ್ದು ವೈರಾಣು ಸೋಂಕಿನ ಬದಲಾವಣೆಯಾಗುತ್ತಿರುವ ಪರಿಸ್ಥಿತಿಗಳ ಹಿನ್ನೆಲೆಯಲ್ಲಿ ಪರಿಣಾಮಕಾರಿಯಾದ ಸೀಕ್ವೆನ್ಸಿಂಗ್ ಕಾರ್ಯತಂತ್ರದೆಡೆಗೆ ಕಾರ್ಯನಿರ್ವಹಣೆ ಮಾಡಲಾಗುತ್ತಿದೆ ಎಂದು ತಿಳಿಸಿದೆ.
ಕೋವಿಡ್-19 ತಡೆಗೆ ಪೂರಕವಾದ ನಡೆ, ಲಸಿಕೆಗಳು ಕೋವಿಡ್-19 ವೈರಾಣುವಿನ ಎಲ್ಲಾ ರೂಪಾಂತರಿಗಳಿಂದಲೂ ರಕ್ಷಣೆ ಒದಗಿಸುತ್ತದೆ ಎಂದು ಇನ್‌ಸಾಕೋಗ್ ವರದಿಯಲ್ಲಿ ತಿಳಿಸಿದೆ.
ಓಮಿಕ್ರಾನ್ ಉಪರೂಪಾಂತರಿ, ಬಿಎ.2 ವಂಶಾವಳಿ ದೇಶದಲ್ಲಿ ಗಣನೀಯ ಪ್ರಮಾಣದಲ್ಲಿ ಪತ್ತೆಯಾಗಿದೆ. ಭಾನುವಾರ ಬಿಡುಗಡೆಯಾಗಿರುವ ಐಎನ್ಎಸ್ಎ ಸಿಒಜಿ ಬುಲೆಟಿನ್ ನಲ್ಲಿ, ಓಮಿಕ್ರಾನ್ ಪ್ರಕರಣಗಳಲ್ಲಿ ಬಹುತೇಕ ಪ್ರಕರಣಗಳು ರೋಗಲಕ್ಷಣ ರಹಿತ ಅಥವಾ ಸೌಮ್ಯ ಲಕ್ಷಣಗಳನ್ನು ಹೊಂದಿದ್ದು, ಆಸ್ಪತ್ರೆಗೆ ದಾಖಲಾಗುವ ಹಾಗೂ ಐಸಿಯು ಪ್ರಕರಣಗಳು ಈ ಅಲೆಯಲ್ಲಿಯೂ ಹೆಚ್ಚಾಗಿದ್ದು ಅಪಾಯದ ಮಟ್ಟ ಹಿಂದಿನಂತೆಯೇ ಇದೆ ಬದಲಾಗಿಲ್ಲ ಎಂದು ಹೇಳಿದೆ.
"ಓಮಿಕ್ರಾನ್ ಭಾರತದಲ್ಲಿ ಈಗ ಸಮುದಾಯಕ್ಕೆ ಹರಡುವ ಹಂತದಲ್ಲಿದ್ದು ಹಲವು ಮೆಟ್ರೋ ಸಿಟಿಗಳಲ್ಲಿ ಪ್ರಬಲವಾಗಿದೆ. ಎಸ್ ಜೀನ್ ಡ್ರಾಪೌಟ್ ಆಧಾರಿತ ಸ್ಕ್ರೀನಿಂಗ್ ನಲ್ಲಿ ಹೆಚ್ಚು ನಕಲಿ ನೆಗೆಟೀವ್ ಗಳು ವರದಿಯಾಗುತ್ತಿವೆ" ಎಂದು ಇನ್‌ಸಾಕೋಗ್ ವರದಿ ಹೇಳಿದೆ. ಎಸ್-ಜೀನ್ ಡ್ರಾಪ್-ಔಟ್ ಓಮಿಕ್ರಾನ್ ನಂತಹದ್ದೇ ಆದ ಜೆನೆಟಿಕ್ ರೂಪಾಂತರಿಯಾಗಿದೆ.












Click it and Unblock the Notifications