ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನೂರ್‌ ವಾಲಿ ಮೆಹ್ಸೂದ್‌ನನ್ನು ಜಾಗತಿಕ ಉಗ್ರನೆಂದು ಘೋಷಣೆ ಮಾಡಿದ ವಿಶ್ವಸಂಸ್ಥೆ

|
Google Oneindia Kannada News

ನ್ಯೂಯಾರ್ಕ್, ಜುಲೈ 17: ತೆಹ್ರಿಕ್-ಇ-ತಾಲಿಬಾನ್ ಉಗ್ರ ಸಂಘಟನೆಯ ಮುಖಂಡ ನೂರ್ ವಾಲಿ ಮೆಹ್ಸೂದ್‌ನನ್ನು ಜಾಗತಿಕ ಭಯೋತ್ಪಾದಕ ಎಂದು ವಿಶ್ವ ಸಂಸ್ಥೆ ಘೋಷಣೆ ಮಾಡಿದೆ.

Recommended Video

ಕೇಂದ್ರ ಸರ್ಕಾರಕ್ಕೆ ವರ್ನಿಂಗ್ ಕೊಟ್ಟ ರಾಹುಲ್ ಗಾಂಧಿ.! | Oneindia Kannada

ಅಲ್-ಖೈದಾ ಉಗ್ರ ಸಂಘಟನೆಗೆ ಹಣಕಾಸು ಪೂರೈಕೆ, ಪಿತೂರಿ ಮತ್ತಿತರ ಅಪರಾಧ ಚಟುವಟಿಕೆಗಳಲ್ಲಿ ಆತ ತೊಡಗಿಸಿಕೊಂಡಿದ್ದ.

ಐವರು ಲಷ್ಕರ್ ಉಗ್ರರ ಬಂಧನ, ಶಸ್ತ್ರಾಸ್ತ್ರಗಳು ವಶಕ್ಕೆಐವರು ಲಷ್ಕರ್ ಉಗ್ರರ ಬಂಧನ, ಶಸ್ತ್ರಾಸ್ತ್ರಗಳು ವಶಕ್ಕೆ

ಅಲ್ ಖೈದಾ ಉಗ್ರ ಸಂಘಟನೆಗೆ ಹಣಕಾಸು ಪೂರೈಕೆ, ಪಿತೂರಿ ಮತ್ತಿತರ ಅಪರಾಧ ಚಟುವಟಿಕೆಯಲ್ಲಿ ತೊಡಗಿಸಿಕೊಂಡಿದ್ದರಿಂದ ಮೆಹ್ಸೂದ್ ನನ್ನು ಜಾಗತಿಕ ಉಗ್ರ ಪಟ್ಟಿಗೆ ಸೇರಿಸಲಾಗಿದೆ ಎಂದು ನಿರ್ಬಂಧ ಸಮಿತಿ ತಿಳಿಸಿದೆ.

UN Designates Pakistan Taliban Leader Noor Mehsud As Global Terrorist

ಮಾಜಿ ಟಿಟಿಪಿ ನಾಯಕ ಮೌಲಾನಾ ಫಜಲುಲ್ಲಾ ಸಾವಿನ ಬಳಿಕ ಜೂನ್ 2018ರಲ್ಲಿ ಮೆಹ್ಸೂದ್ ತೆಹ್ರಿಕ್-ಇ- ತಾಲಿಬಾನ್ ಸಂಘಟನೆಯ ನಾಯಕತ್ವ ವಹಿಸಿದ್ದ. ಅಲೈ ಖೈದಾ ಸಂಘಟನೆಯೊಂದಿಗೆ ಸಹಭಾಗಿತ್ವದ ಹಿನ್ನೆಲೆಯಲ್ಲಿ 2011 ಜುಲೈ 29 ರಂದು ಟಿಟಿಪಿ ವಿಶ್ವಸಂಸ್ಥೆಯ ಕಪ್ಪು ಪಟ್ಟಿಗೆ ಸೇರಿತ್ತು.

ವಿಶ್ವಸಂಸ್ಥೆ ಭದ್ರತಾ ಮಂಡಳಿಯ 1267 ಐಸ್ ಐಎಲ್ ಮತ್ತು ಅಲ್ ಖೈದಾ ನಿರ್ಬಂಧ ಕಮಿಟಿ ಮೆಹ್ಸೂದ್ ನನ್ನು (42) ಗುರುವಾರ ಅಲ್ ಖೈದಾ ನಿರ್ಬಂಧ ಪಟ್ಟಿಗೆ ಸೇರಿಸಿದ್ದು, ಪಾಕಿಸ್ತಾನದ ಆತನ ಆಸ್ತಿ ವಶಪಡಿಸಿಕೊಂಡು, ಪ್ರಯಾಣ ಮತ್ತು ಶಸಾಸ್ತ್ರ ನಿರ್ಬಂಧವನ್ನು ಕೂಡ ಘೋಷಿಸಲಾಗಿದೆ.

ಅಫ್ಘಾನಿಸ್ತಾನದಲ್ಲಿ ಉಗ್ರ ಮುಲ್ಲಾ ಫಜಲುಲ್ಲಾ ಸಾವಿನ ಬಳಿಕ 2018ರ ಜೂನ್‌ನಲ್ಲಿ ಮೆಹ್ಸೂದ್ ಟಿಟಿಪಿಯ ನಾಯಕತ್ವ ವಹಿಸಿಕೊಂಡಿದ್ದ.

English summary
The Tehrik-e-Taliban Pakistan (TTP) terror group's Noor Wali Mehsud has been designated as a global terrorist by the United Nations for participating in the financing, planning and perpetrating acts on behalf of and in support of entities associated with al-Qaida.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X