ಟ್ರಂಪ್ ಟ್ವೀಟ್ ನಂತರ HCQ ಲಸಿಕೆ ಫುಲ್ ಟ್ರೆಂಡಿಂಗ್ ಯಾಕೆ?
ವಾಷಿಂಗ್ಟನ್, ಮಾರ್ಚ್ 22: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಎಚ್ ಸಿ ಕ್ಯೂ ಲಸಿಕೆ ಬಗ್ಗೆ ಟ್ವೀಟ್ ಮಾಡುತ್ತಿದ್ದಂತೆ ಟ್ವಿಟ್ಟರಲ್ಲಿ ಈ ಬಗ್ಗೆ ಚರ್ಚೆ ಜೋರಾಗಿ ನಡೆದು ಟ್ರೆಂಡ್ ಆಗಿದೆ.
ಮಲೇರಿಯಾ ರೋಗಿಗಳಿಗೆ ಪ್ಲೇಕ್ವೆನಿಲ್ ಹೆಸರಿನಲ್ಲಿ ನೀಡಲಾಗುವ ಹೈಡ್ರೋಕ್ಸಿಕ್ಲೋರೊಕ್ವೆನ್(HCQ) ಎಂಬ Anti-Malaria ಔಷಧದ ಬಗ್ಗೆ ಟ್ರಂಪ್ ಅವರು ತಮ್ಮ ಟ್ವೀಟ್ ನಲ್ಲಿ ಉಲ್ಲೇಖಿಸಿದ್ದರು. HCQ ಹಾಗೂ ಅಜಿಥ್ರೋಮೈಸಿನ್ ಬಳಕೆಯಿಂದ ವೈದ್ಯಕೀಯ ಲೋಕದಲ್ಲಿ ಭಾರಿ ಬದಲಾವಣೆ ಸಾಧ್ಯ ಎಂದಿದ್ದರು.
ವೈಟ್ ಹೌಸ್‌ನಲ್ಲಿ ಮೊದಲ ಕೊರೊನಾ ಕೇಸ್ ಪತ್ತೆ: ಟ್ರಂಪ್‌ಗೆ ಹೆಚ್ಚಿದ ಆತಂಕ
ಸಾಮಾನ್ಯವಾಗಿ ಹೈಡ್ರೋಕ್ಸಿಕ್ಲೋರೊಕ್ವೆನ್ ಜೊತೆಗೆ Anti biotic ಅಜಿಥ್ರೋಮೈಸಿನ್ ಸೇರಿಸಿ ಸರಿ ಪ್ರಮಾಣದಲ್ಲಿ ನೀಡುತ್ತಾ ಬಂದರೆ ಆರಂಭಿಕ ಹಂತದ ಕೊವಿಡ್ 19 ಸಾರ್ಸ್ CoV 2 ಇತ್ಯಾದಿ ಹೊಗಲಾಡಿಸಬಹುದು ಎಂದು ಸಂಶೋಧಕರು ಹೇಳಿದ್ದಾರೆ. ಆದರೆ, ಕೋವಿಡ್19ಗೆ ಈ ಎರಡು ಲಸಿಕೆಯ ಜೋಡಿಗೆ ರಾಮಬಾಣ ಎಂಬುದು ಇನ್ನೂ ದೃಢಪಟ್ಟಿಲ್ಲ.
HYDROXYCHLOROQUINE & AZITHROMYCIN, taken together, have a real chance to be one of the biggest game changers in the history of medicine. The FDA has moved mountains - Thank You! Hopefully they will BOTH (H works better with A, International Journal of Antimicrobial Agents).....
— Donald J. Trump (@realDonaldTrump) March 21, 2020
ವೈರಸ್ ಸೋಂಕಿತರನ್ನು ಭೇಟಿ ಮಾಡಿದರೂ ಟ್ರಂಪ್ ನೆಗಟಿವ್ !
ಕೊವಿಡ್19ಗೆ ಲಸಿಕೆ ಕಂಡು ಹಿಡಿಯಲು ಯುರೋಪಿಯನ್ ಯೂನಿಯನ್, ಚೀನಾ ಅಲ್ಲದೆ ಯುಎಸ್ ವಿಜ್ಞಾನಿಗಳು ಹಗಲಿರುಳು ಶ್ರಮಿಸುತ್ತಿದ್ದಾರೆ. ಮಲೇರಿಯಾಕ್ಕೆ ನೀಡಲಾಗುವ ಲಸಿಕೆಯನ್ನು ಕೋವಿಡ್19ಕ್ಕೆ ಬಳಸುವ ಬಗ್ಗೆ ಪ್ರತಿಕ್ರಿಯಿಸಿರುವ ಫ್ರೆಂಚ್ ವಿಜ್ಞಾನಿಗಳು, ಆರಂಭಿಕ ಹಂತದ ಚಿಕಿತ್ಸೆಗೆ ಉಪಯುಕ್ತವಾಗಲಿದೆ ಎಂದಿದ್ದಾರೆ.