• search
  • Live TV
ವಾಷಿಂಗ್ಟನ್ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಪ್ರಜಾಪ್ರಭುತ್ವದ ಪವಿತ್ರ ಸ್ಥಳದಲ್ಲಿ ಟ್ರಂಪ್ ಬೆಂಬಲಿಗರಿಂದ ಹೇಸಿಗೆ ಕೃತ್ಯ!

|

ಅಮೆರಿಕ ಒಂದು ಶ್ರೀಮಂತ ರಾಷ್ಟ್ರ ಎನ್ನುವುದಕ್ಕಿಂತಲೂ ಹೆಚ್ಚಾಗಿ ಅದೊಂದು ಆಧುನಿಕ ಪ್ರಜಾಪ್ರಭುತ್ವದ ಕುರುಹು ಎನ್ನುವುದೇ ಹೆಚ್ಚು ಸೂಕ್ತ. ಏಕೆಂದರೆ ಗ್ರೀಕ್ ನಾಗರಿಕತೆಯನ್ನ ಹೊರತುಪಡಿಸಿದರೆ ಪ್ರಜಾಪ್ರಭುತ್ವ ಅಧಿಕೃತವಾಗಿ ಅಸ್ತಿತ್ವಕ್ಕೆ ಬಂದಿದ್ದು ಹಾಗೂ ಅದನ್ನ ಸರ್ಕಾರಗಳು ಅಳವಡಿಸಿಕೊಂಡಿದ್ದು ಅಮೆರಿಕದಲ್ಲಿ ಮಾತ್ರ. ಇಂತಹ ರಾಷ್ಟ್ರದ ಸಂಸತ್ ಕಟ್ಟಡದಲ್ಲಿ ಟ್ರಂಪ್ ಬೆಂಬಲಿಗರು ಹೇಸಿಗೆ ಕೃತ್ಯ ನಡೆಸಿದ್ದಾರೆ.

ಪ್ರಜಾಪ್ರಭುತ್ವದ ಪವಿತ್ರ ಸ್ಥಳ 'ಕ್ಯಾಪಿಟಲ್ ಹಿಲ್'ಗೆ ನುಗ್ಗಿ ಹಿಂಸೆ ನಡೆಸಿದ್ದಾರೆ, ಮನಸ್ಸಿಗೆ ಬಂದಂತೆ ವರ್ತಿಸಿದ್ದಾರೆ. ತಾವೆಷ್ಟು ಸೈಕೋಗಳು ಎಂಬುದನ್ನು ಟ್ರಂಪ್ ಬೆಂಬಲಿಗ ಪಡೆ ತೋರಿಸಿಕೊಟ್ಟಿದೆ. ಅಮೆರಿಕ 1776ರ ಜುಲೈ 4ರಂದು ಬ್ರಿಟಿಷ್ ಸಾಮ್ರಾಜ್ಯದಿಂದ ಸ್ವಾತಂತ್ರ್ಯ ಪಡೆಯಿತು. ಆ ಬಳಿಕ 1789ರಲ್ಲಿ ಅಮೆರಿಕದಲ್ಲಿ ಮೊದಲ ಸರ್ಕಾರ ಅಸ್ತಿತ್ವಕ್ಕೆ ಬಂತು. ಅಂದಿನ ಸಂದರ್ಭದಲ್ಲಿ ಅಮೆರಿಕದ ನಾಯಕರ ಮುಂದೆ ಹತ್ತಾರು ಆಯ್ಕೆಗಳಿದ್ದವು.

ಕ್ಯಾಪಿಟಲ್ ಹಿಲ್ಸ್ ಬಳಿ ತ್ರಿವರ್ಣ ಧ್ವಜ ಹಿಡಿದವ ಟ್ರಂಪ್ ಭಕ್ತ!

ಒಂದು ಅಂದಿನ ಕಾಲಘಟ್ಟದಲ್ಲಿ ಅಸ್ತಿತ್ವದಲ್ಲಿದ್ದ ರಾಜರ ಆಡಳಿತದಂತೆ ಅಮೆರಿಕವನ್ನು ಆಳಬಹುದಿತ್ತು. ಇಲ್ಲವೇ ಮತ್ತೆ ಸರ್ವಾಧಿಕಾರಿ ಧೋರಣೆ ಮುಂದುವರಿಸಿ ಜನರನ್ನ ದಬ್ಬಾಳಿಕೆಯ ಬಲೆಯಲ್ಲಿ ಸಿಲುಕಿಸಬಹುದಿತ್ತು. ಆದರೆ ಆ ಕೃತ್ಯವನ್ನು ಅಮೆರಿಕದ ಅಂದಿನ ನಾಯಕರು ಮಾಡಲಿಲ್ಲ. ವಿಶೇಷವಾಗಿ ಅಮೆರಿಕದ ಸ್ವಾತಂತ್ರ್ಯಕ್ಕಾಗಿ ತನ್ನಿಡೀ ಜೀವನನ್ನೇ ಮುಡಿಪಾಗಿ ಇಟ್ಟಿದ್ದ ಜಾರ್ಜ್ ವಾಷಿಂಗ್ಟನ್ ಪ್ರಜಾಪ್ರಭುತ್ವದ ಪರವಾಗಿ ನಿಂತರು. ಹೀಗೆ ಒಂದು ದೇಶವನ್ನು ಕಟ್ಟಲು ಲಕ್ಷಾಂತರ ಜನರು ರಕ್ತ ಸುರಿಸಿದರೆ, ಆದರೆ ಟ್ರಂಪ್ ಎಂಬ ಮಹಾಶಯ ಮತ್ತವನ ಗ್ಯಾಂಗ್‌ಗೆ ಇದನ್ನೆಲ್ಲಾ ಹಾಳು ಮಾಡಲು ಒಂದು ದಿನ ಸಾಕಾಯ್ತು.

ಪಾರ್ಲಿಮೆಂಟ್ ಒಳಗೆ ಸಿಗರೇಟ್, ಸಿಗಾರ್..!

ಪಾರ್ಲಿಮೆಂಟ್ ಒಳಗೆ ಸಿಗರೇಟ್, ಸಿಗಾರ್..!

ಹೌದು, ಕ್ಯಾಪಿಟಲ್ ಹಿಲ್ ಕೇವಲ ಕಟ್ಟಡವಲ್ಲ. ಅದು ಅಮೆರಿಕ ಹಾಗೂ ಅಮೆರಿಕನ್ನರ ಪಾಲಿಗೆ ಗರ್ಭಗುಡಿ ಇದ್ದಂತೆ. ನಮ್ಮಲ್ಲಿ ಸಂಸತ್ ಇರುವಂತೆ ಅಮೆರಿಕದಲ್ಲಿ ಕ್ಯಾಪಿಟಲ್ ಹಿಲ್ ಇದೆ. ಆದರೆ ಇಂತಹ ಪವಿತ್ರ ಸ್ಥಳದ ಮೇಲೆ ಟ್ರಂಪ್ & ಗ್ಯಾಂಗ್ ಅಟ್ಯಾಕ್ ಮಾಡಿದೆ. ಕ್ಯಾಪಿಟಲ್ ಹಿಲ್ ಗಲಭೆಗೂ ಮುನ್ನ ಡೊನಾಲ್ಡ್ ಟ್ರಂಪ್ ನಡೆಸಿದ ಪ್ರಚೋದನಾಕಾರಿ ಭಾಷಣ, ಅವರ ಬೆಂಬಲಿಗರನ್ನು ಒಳಗೆ ನುಗ್ಗುವಂತೆ ಪ್ರೇರಿಪಿಸಿತ್ತು. ಆದರೆ ಹೀಗೆ ಸಂಸತ್ ಕಟ್ಟಡದ ಒಳಗೆ ನುಗ್ಗಿದ ಟ್ರಂಪ್ ಬೆಂಬಲಿಗರು ಕೈಯಲ್ಲಿ ದೊಣ್ಣೆ, ಗನ್ ಸೇರಿದಂತೆ ಹಲವು ಮಾರಕಾಸ್ತ್ರಗಳನ್ನ ಹಿಡಿದಿದ್ದರು. ಅಷ್ಟು ಮಾತ್ರವಲ್ಲ ಸಂಸತ್ ಸದಸ್ಯರು ಕೂರುವ ಜಾಗದಲ್ಲಿ ಕೂತು ಸಿಗರೇಟ್ ಸೇದಿದ್ದಾರೆ, ಸಿಗಾರ್ ಹೊಡೆದಿದ್ದಾರೆ. ಇಷ್ಟು ಮಾತ್ರವಲ್ಲದೆ ಅಸಹ್ಯಕರವಾಗಿ ವರ್ತಿಸಿ, ಅವರೆಷ್ಟು ಸೈಕೋಗಳು ಎಂಬುದನ್ನ ಸಾಬೀತು ಮಾಡಿದ್ದಾರೆ.

ಸ್ಪೀಕರ್ ಕಚೇರಿಯೇ ಟಾರ್ಗೆಟ್ ಆಗಿತ್ತಾ..?

ಸ್ಪೀಕರ್ ಕಚೇರಿಯೇ ಟಾರ್ಗೆಟ್ ಆಗಿತ್ತಾ..?

ಅಮೆರಿಕದಲ್ಲಿ ಟ್ರಂಪ್‌ಗೆ ಬೈಡನ್‌ಗಿಂತಲೂ ದೊಡ್ಡ ಶತ್ರು ಸ್ಪೀಕರ್ ನ್ಯಾನ್ಸಿ ಪೆಲೋಸಿ. ಇಬ್ಬರ ಜಗಳ ಒಂದು ಸಮಯದಲ್ಲಿ ತಾರಕಕ್ಕೆ ಏರಿತ್ತು. ಸ್ಪೀಕರ್ ನ್ಯಾನ್ಸಿ ಪೆಲೋಸಿ ಧೈರ್ಯವಂತ ಹೆಣ್ಣುಮಗಳು. ನ್ಯಾನ್ಸಿಗೆ ಟ್ರಂಪ್ ಕಂಡರೆ ಆಗೋದೆ ಇಲ್ಲ. ಟ್ರಂಪ್ ಮಾಡುತ್ತಿದ್ದ ಎಡವಟ್ಟು ಹಾಗೂ ಅದರಿಂದ ಅಮೆರಿಕ ಎದುರಿಸುತ್ತಿದ್ದ ಸಮಸ್ಯೆ ಕಂಡು ಕೆಂಡವಾಗಿದ್ದು ಸ್ಪೀಕರ್ ನ್ಯಾನ್ಸಿ ಪೆಲೋಸಿ. ಇದೇ ಕಾರಣಕ್ಕೆ ಟ್ರಂಪ್ ವಿರುದ್ಧ ಹಕ್ಕುಚ್ಯುತಿ ಮಂಡಿಸಿದ್ದರು. ಆದರೆ ಅದರಲ್ಲಿ ಸೋತರೂ ಗೆದ್ದಿದ್ದು ನ್ಯಾನ್ಸಿ ಪೆಲೋಸಿ. ಹೀಗಾಗಿ ಟ್ರಂಪ್ ಹಾಗೂ ಪೆಲೋಸಿ ನಡುವೆ ದೊಡ್ಡ ಜಗಳವೇ ನಡೆಯುತ್ತಿತ್ತು. ಇದು ಸಹಜವಾಗಿ ಟ್ರಂಪ್ ಬೆಂಬಲಿಗರನ್ನು ಕೆರಳಿಸಿತ್ತು. ಇದೀಗ ಕ್ಯಾಪಿಟಲ್ ಹಿಲ್ ಕಟ್ಟಡದ ಮೇಲೆ ನಡೆದ ದಾಳಿಯಲ್ಲಿ ಪೆಲೋಸಿ ಅವರ ಕಚೇರಿಯನ್ನೇ ಟ್ರಂಪ್ ಬೆಂಬಲಿಗ ಪಡೆ ಟಾರ್ಗೆಟ್ ಮಾಡಿತ್ತು. ಪೆಲೋಸಿ ಕಚೇರಿ ಕೊಠಡಿಗೆ ನುಗ್ಗಿದ ಕಿರಾತಕನೊಬ್ಬ ಸಿಗರೇಟ್ ಸೇದಿದ್ದೂ ಅಲ್ಲದೆ, ದಾಖಲೆಗಳನ್ನೆಲ್ಲಾ ಚೆಲ್ಲಾಡಿ ಬಂದಿದ್ದಾನೆ. ಬಳಿಕ ನ್ಯಾನ್ಸಿ ಕಚೇರಿಗೆ ಇನ್ನಷ್ಟು ಜನ ನುಗ್ಗಿ, ಕಚೇರಿಯನ್ನೇ ಅಲ್ಲೋಲ ಕಲ್ಲೋಲ ಮಾಡಿದ್ದಾರೆ.

‘ಅಧಿಕಾರದಿಂದ ಟ್ರಂಪ್‌ನ ಒದ್ದೋಡಿಸಿ': ಡೊನಾಲ್ಡ್ ಟ್ರಂಪ್ ಬಂಟನ ಆಗ್ರಹ..!

 ಏನಂದ್ರು ಟ್ರಂಪ್ ಮಹಾಶಯ..?

ಏನಂದ್ರು ಟ್ರಂಪ್ ಮಹಾಶಯ..?

ಮಾಡೋದೆಲ್ಲಾ ಮಾಡಿ ನನಗೇನು ಗೊತ್ತಿಲ್ಲ ಎಂಬಂತೆ ಟ್ರಂಪ್ ವರ್ತಿಸುತ್ತಿದ್ದಾರೆ. ನೆಮ್ಮದಿಯಾಗಿದ್ದ ಅಮೆರಿಕ ನಲುಗಲು ಟ್ರಂಪ್ ಇಟ್ಟ ಕೊಳ್ಳಿ ಕಾರಣ ಎಂದು ವಿಪಕ್ಷಗಳು ಆರೋಪಿಸುತ್ತಿವೆ. ಇಷ್ಟೆಲ್ಲದರ ಮಧ್ಯೆ ಗಲಭೆ ಕಂಡು ಸ್ವತಃ ಟ್ರಂಪ್ ಬೆಚ್ಚಿಬಿದ್ದಿದ್ದಾರೆ. ಈಗಾಗಲೇ ಹಲವಾರು ಕ್ರಿಮಿನಲ್ ಕೇಸ್‌ಗಳನ್ನ ಎದುರಿಸುತ್ತಿರುವ ಟ್ರಂಪ್‌ಗೆ ಈಗ ಮೆಲ್ಲಗೆ ಭಯ ಶುರುವಾದಂತೆ ಕಾಣುತ್ತಿದೆ. ಇದೇ ಕಾರಣಕ್ಕೆ ನಾನು ಅಧಿಕಾರ ಬಿಟ್ಟೋಗ್ತೀನಿ, ನನ್ನ ಬೆಂಬಲಿಗರು ಮಾಡಿದ್ದು ತಪ್ಪು ಅಂತಾ ಒಪ್ಪಿಕೊಂಡಿದ್ದಾರೆ.

ಟ್ರಂಪ್ ಕಿತ್ತೊಗೆಯಲು 25ನೇ ತಿದ್ದುಪಡಿ ತನ್ನಿ: ನ್ಯಾನ್ಸಿ ಒತ್ತಾಯ

‘ಕ್ಯಾಪಿಟಲ್ ಹಿಲ್’ ಒಳಗೆ ಏನೇನಿದೆ..?

‘ಕ್ಯಾಪಿಟಲ್ ಹಿಲ್’ ಒಳಗೆ ಏನೇನಿದೆ..?

ವಾಷಿಂಗ್ಟನ್ ಡಿಸಿ ಅಮೆರಿಕದ ರಾಜಧಾನಿ. ಡಿಸಿಯಲ್ಲಿ ನಿರ್ಮಾಣವಾಗಿರುವ ‘ಕ್ಯಾಪಿಟಲ್ ಹಿಲ್' ಸಂಸತ್‌ಗೆ ಮಾತ್ರ ಜಾಗ ನೀಡಿಲ್ಲ. ಸುಪ್ರೀಂಕೋರ್ಟ್ ಕಟ್ಟಡ, ಲೈಬ್ರರಿ ಆಫ್ ಕಾಂಗ್ರೆಸ್, ಮೆರೈನ್ ಬ್ಯಾರಕ್ಸ್ ಸೇರಿದಂತೆ ವಾಷಿಂಗ್ಟನ್ ನೇವಿ ಯಾರ್ಡ್ ಕೂಡ ಇದೆ. ಶಾಸಕಾಂಗ, ಕಾರ್ಯಾಂಗ ಹಾಗೂ ನ್ಯಾಯಾಂಗಕ್ಕೆ ಸೇರಿರುವ ಹಲವು ಕಟ್ಟಡಗಳು ‘ಕ್ಯಾಪಿಟಲ್ ಹಿಲ್'ನಲ್ಲಿ ಇವೆ. ಇನ್ನು ‘ಕ್ಯಾಪಿಟಲ್ ಹಿಲ್'ನಲ್ಲಿರುವ ವಸತಿ ಪ್ರದೇಶ ವಾಷಿಂಗ್ಟನ್‌ನ ಅತ್ಯಂತ ಹಳೆಯ ವಸತಿ ಪ್ರದೇಶಗಳಲ್ಲಿ ಒಂದಾಗಿದೆ. ಅಮೆರಿಕದ ಗಣ್ಯರು ಮೃತಪಟ್ಟರೆ ಇಲ್ಲೇ ಅಂತ್ಯಕ್ರಿಯೆ ನಡೆಸಲಾಗುತ್ತದೆ.

206ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ದೊಂಬಿಕೋರರ ವಶವಾದ ಅಮೆರಿಕ ಸಂಸತ್ ಭವನ

ಬ್ರಿಟನ್ ವಿರುದ್ಧ ಅಮೆರಿಕ ಯುದ್ಧ..!

ಬ್ರಿಟನ್ ವಿರುದ್ಧ ಅಮೆರಿಕ ಯುದ್ಧ..!

ಅಮೆರಿಕದ ಸಂಸತ್ ಮೇಲೆ ಈ ರೀತಿ ದಾಳಿ ನಡೆಯುತ್ತಿರುವುದು ಇದೇ ಮೊದಲೇನಲ್ಲ. ಅಮೆರಿಕ ಸಂಸತ್ ಮೇಲೆ ನಡೆದ ದಾಳಿಯ ಇತಿಹಾಸ ತಿಳಿಯಲು 200 ವರ್ಷಗಳಷ್ಟು ಹಿಂದೆ ಹೋಗಬೇಕು. ಕ್ಯಾಪಿಟಲ್ ಹಿಲ್ ಮೇಲೆ ಹಲವು ಬಾರಿ ಅಟ್ಯಾಕ್ ಆಗಿದೆ. ಆದರೆ 1814ರಲ್ಲಿ ನಡೆದಿದ್ದ ದಾಳಿ ಅತ್ಯಂತ ಭೀಕರ. ಬ್ರಿಟನ್‌ ಜತೆಗೆ ವಾಣಿಜ್ಯ ಸಮರ ಉಂಟಾದ ಸಂದರ್ಭದಲ್ಲಿ ಫ್ರಾನ್ಸ್ ಜತೆ ಅಮೆರಿಕ ವಾಣಿಜ್ಯ ಸಂಬಂಧ ಮುಂದುವರಿಸಲು ಬ್ರಿಟನ್ ಅಡ್ಡಿ ಮಾಡಿತು. ಆಗ ಅಮೆರಿಕ ಬ್ರಿಟನ್ ವಿರುದ್ಧ 1812ರಲ್ಲಿ ಯುದ್ಧ ಘೋಷಿಸಿತ್ತು. 2 ವರ್ಷ ಕಾಲ ನಡೆದ ಯುದ್ಧದಲ್ಲಿ, ಬ್ರಿಟನ್ ಸೇನೆ ವಾಷಿಗ್ಟಂನ್ ಡಿ.ಸಿ.ಯಲ್ಲಿದ್ದ ಕ್ಯಾಪಿಟಲ್ ಹಿಲ್‌ ಮೇಲೆ ದಾಳಿ ನಡೆಸಿತ್ತು. 1814ರ ಆಗಸ್ಟ್‌ 7ರಂದು ಕ್ಯಾಪಿಟಲ್ ಕಟ್ಟಡಕ್ಕೆ ಬೆಂಕಿಯನ್ನೂ ಹಚ್ಚಲಾಗಿತ್ತು.

ಈ ಪುಟಾಣಿಯ ತೊದಲು ನುಡಿ ಕೇಳಿ ಮೂರು ವರ್ಷವಾಯಿತು

English summary
Trump supporters vandalized rooms and furniture in Capitol Hill building. Some people smoke inside the parliament of America.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X