• search
  • Live TV
ವಾಷಿಂಗ್ಟನ್ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಕಮಲಾ ಹ್ಯಾರಿಸ್‌ರನ್ನು 'ರಾಕ್ಷಸಿ' ಎಂದು ಉದ್ಘರಿಸಿದ ಡೊನಾಲ್ಡ್ ಟ್ರಂಪ್

|

ವಾಷಿಂಗ್ಟನ್, ಅಕ್ಟೋಬರ್ 08: ಕಮಲಾ ಹ್ಯಾರಿಸ್ ಅವರನ್ನು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ರಾಕ್ಷಸಿ ಎಂದು ಕರೆದಿದ್ದಾರೆ.

ಅಮೆರಿಕಾದ ಮೊದಲ ಕಪ್ಪು ಮಹಿಳಾ ಉಪಾಧ್ಯಕ್ಷ ಅಭ್ಯರ್ಥಿಯಾಗಿ ಕಮಲಾ ಅಮೆರಿಕದಲ್ಲಿ ಇತಿಹಾಸ ನಿರ್ಮಿಸಲು ಹೊರಟಿದ್ದಾರೆ.

ಟ್ರಂಪ್ ಹೇಳಿದರೆ ನಾನು ಕೊರೊನಾ ವೈರಸ್ ಲಸಿಕೆ ತೆಗೆದುಕೊಳ್ಳೊಲ್ಲ: ಕಮಲಾ ಹ್ಯಾರಿಸ್

ಉಪಾಧ್ಯಕ್ಷೆ ಮೈಕ್ ಪೆನ್ಸ್ ಅವರು ತಮ್ಮ ಚರ್ಚೆಯಲ್ಲಿ ಹ್ಯಾರಿಸ್ ಅವರನ್ನು 'ಸೋಲಿಸಿದ್ದಾರೆ' ಎಂದು ಹೇಳಿದರು. ಇನ್ನು ಕಮಲಾ ಹ್ಯಾರಿಸ್ ಹೇಳುವುದೆಲ್ಲಾವೂ ಸುಳ್ಳು ಎಂದು ಟ್ರಂಪ್ ಹೇಳಿದ್ದಾರೆ.

ನವೆಂಬರ್ 3ರಂದು ಅಮೆರಿಕಾದ ಅಧ್ಯಕ್ಷಿಯ ಚುನಾವಣೆಯ ನಡೆಯಲಿದ್ದು ಈ ಸಂಬಂಧ ನಡೆದ ಉಪಾಧ್ಯಕ್ಷರ ಚರ್ಚೆಯನ್ನುದ್ದೇಶಿಸಿ ಟ್ರಂಪ್ ಈ ಕೆಟ್ಟದ್ದನ್ನು ಬಳಸಿದ್ದಾರೆ. ಅವರು ಈ ಪದವನ್ನು ಎರಡು ಬಾರಿ ಬಳಸಿದ್ದಾರೆ.

ಶ್ವೇತಭವನದ ಟಿಕೆಟ್‌ ಪಡೆದಿರುವ ಭಾರತೀಯ ಮೂಲದ ಮೊದಲ ವ್ಯಕ್ತಿ ಕೂಡ ಆಗಿರುವ ಹ್ಯಾರಿಸ್, ಕೊವಿಡ್ 19 ಕುರಿತು "ನಮ್ಮ ದೇಶದ ಇತಿಹಾಸದಲ್ಲಿ ಯಾವುದೇ ಅಧ್ಯಕ್ಷರ ಆಡಳಿತದ ಅತ್ಯಂತ ದೊಡ್ಡ ವೈಫಲ್ಯ" ಅದು ಟ್ರಂಪ್‌ ಸರ್ಕಾರದ್ದು ಎಂದು ಹಾರಿಹಾಯ್ದಿದ್ದರು.

ಹಾಗೆಯೇ ಕೊರೊನಾ ಲಸಿಕೆ ಕುರಿತು ಕಮಲಾ ಹ್ಯಾರಿಸ್ ಮಾತನಾಡಿ, ಕೊರೊನಾ ವಿರುದ್ಧದ ಹೋರಾಟಕ್ಕೆ ಸಾಕಷ್ಟು ಪ್ರಮಾಣದ ಲಸಿಕೆ ಲಭ್ಯವಾಗುವ ವಿಚಾರದಲ್ಲಿ ಟ್ರಂಪ್ ಹೇಳಿಕೆಗಳಿಗಿಂತ ತಾವು ವಿಜ್ಞಾನಿಗಳು ಹೇಳುವ ಮಾತುಗಳನ್ನು ಮಾತ್ರ ನಂಬುವುದಾಗಿ ಕಮಲಾ ಹೇಳಿದರು. ಟ್ರಂಪ್ ಈ ಹಿಂದೆ ಸಾಬೀತಾಗದ ಚಿಕಿತ್ಸೆಗಳ ಬಗ್ಗೆಯೇ ಮಾತನಾಡಿದ್ದರು ಎಂದು ಕಮಲಾ ಟೀಕಿಸಿದರು. 'ವೈದ್ಯರು ನಮಗೆ ಹೇಳಿದರೆ ಮಾತ್ರ ನಾವು ಅದನ್ನು ತೆಗೆದುಕೊಳ್ಳಬೇಕು.

ಅವರು ಹೇಳಿದರೆ ಲಸಿಕೆ ತೆಗೆದುಕೊಳ್ಳಲು ನಾನು ಮುಂಚೂಣಿಯಲ್ಲಿರುತ್ತೇನೆ, ಖಂಡಿತವಾಗಿಯೂ. ಆದರೆ ಒಂದು ವೇಳೆ ನಮಗೆ ಅದನ್ನು ತೆಗೆದುಕೊಳ್ಳಲು ಡೊನಾಲ್ಡ್ ಟ್ರಂಪ್ ಹೇಳಿದರೆ ನಾನು ಖಂಡಿತಾ ತೆಗೆದುಕೊಳ್ಳುವುದಿಲ್ಲ' ಎಂದರು.

ಇದಕ್ಕೆ ಪ್ರತಿ ವಾಗ್ದಾಳಿ ನಡೆಸಿದ ಪೆನ್ಸ್, ಲಸಿಕೆ ಕುರಿತಾದ ಸಾರ್ವಜನಿಕರ ವಿಶ್ವಾಸವನ್ನು ಕುಂದಿಸುವಂತೆ ಮಾಡುತ್ತಿದ್ದಾರೆ ಎಂದು ಆರೋಪಿಸಿದರು. ಇದು ಒಪ್ಪುವಂತಹದ್ದಲ್ಲ. ಜನರ ಜೀವನದಲ್ಲಿ ರಾಜಕೀಯ ಮಾಡುವುದನ್ನು ನಿಲ್ಲಿಸಿ ಎಂದು ಆಗ್ರಹಿಸಿದ್ದರು.

English summary
President Donald Trump on Thursday attacked Sen. Kamala Harris as "a monster" the day after the vice presidential debate.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X