• search
 • Live TV
ವಾಷಿಂಗ್ಟನ್ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಅಭಿಮಾನಿಗಳಿಗೆ ಧನ್ಯವಾದ ಹೇಳದೆ ಒರಟ ಎನಿಸಿಕೊಳ್ಳಬೇಕಿತ್ತೆ?: ಟ್ರಂಪ್

|

ವಾಷಿಂಗ್ಟನ್, ಅಕ್ಟೋಬರ್ 06: ಕೊವಿಡ್ 19 ಗೆ ಚಿಕಿತ್ಸೆ ನಡುವೆಯೂ ಆಸ್ಪತ್ರೆಯಿಂದ ಹೊರಬಂದು ಅಭಿಮಾನಿಗಳಿಗೆ ಧನ್ಯವಾದ ಅರ್ಪಿಸಿದ್ದನ್ನು ಟೀಕೆ ಮಾಡಿರುವ ಮಾಧ್ಯಮದ ವಿರುದ್ಧ ಡೊನಾಲ್ಡ್ ಟ್ರಂಪ್ ಹರಿಹಾಯ್ದಿದ್ದಾರೆ.

ಈ ಬಗ್ಗೆ ಟ್ವೀಟ್ ಮಾಡಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಆಸ್ಪತ್ರೆಯ ಹೊರಗೆ ನನಗಾಗಿ ದಿನಗಟ್ಟಲೆ ಕಾಯುತ್ತಿದ್ದ ಹಾಗೂ ನನ್ನ ಆರೋಗ್ಯ ಚೇತರಿಕೆಗೆ ಪ್ರಾರ್ಥಿಸುತ್ತಿದ್ದ, ಅಭಿಮಾನಿಗಳಿಗೆ ಧನ್ಯವಾದವನ್ನು ಹೇಳಲು ಸುರಕ್ಷಿತ ವಾಹನದ ಮೂಲಕ ಹೋಗಿದ್ದೆ, ಆದರೆ ಇದು ಮಾಧ್ಯಮಗಳಿಗೆ ಬೇಸರ ತರಿಸಿದೆ ಎನಿಸುತ್ತದೆ.

ತನ್ನ ಅಧ್ಯಕ್ಷರಿಗೆ ಪ್ರೀತಿ ತೋರಲು ಬಂದವರನ್ನು ನಾನು ಧನ್ಯವಾದ ಹೇಳುವುದು ಅನಿವಾರ್ಯ ಒಂದೊಮ್ಮೆ ನಾನು ಹಾಗೆ ಮಾಡಿರದಿದ್ದರೆ ನಾನು ಒರಟು ಮನುಷ್ಯ ಎಂದು ಟೀಕಿಸುತ್ತಿದ್ದರು ಎಂದು ಮಾಧ್ಯಮಗಳಿಗೆ ಟಾಂಗ್ ನೀಡಿದ್ದಾರೆ.

ಕೊರೊನಾ ಸೋಂಕಿಗೆ ಒಳಗಾಗಿರುವ ಅಮೆರಿಕ ಅಧ್ಯಕ್ಷ ಟ್ರಂಪ್ ತಾವು ಚಿಕಿತ್ಸೆ ಪಡೆಯುತ್ತಿರುವ ಮಿಲಿಟರಿ ಆಸ್ಪತ್ರೆಯ ಹೊರಗೆ ಸೇರಿದ್ದ ಅಭಿಮಾನಿಗಳಿಗೆ ಕಾಣಿಸಿಕೊಂಡು ಕೈಬೀಸಿದ್ದರು.

ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಹೆಲ್ತ್ ಮತ್ತು ವಾಲ್ಟರ್ ರೀಡ್ ನ್ಯಾಷನಲ್ ಮಿಲಿಟರಿ ಮೆಡಿಕಲ್ ಸೆಂಟರ್‌ನ್ನು ಪ್ರತ್ಯೇಕಿಸುವ ವಾಷಿಂಗ್ಟನ್ ಡಿಸಿಯ ಮೆರಿಲ್ಯಾಂಡ್ ಉಪನಗರವಾದ ಬೆಥೆಸ್ಡಾಕ್ಕೆ ಕಾರಿನಲ್ಲಿ ಆಗಮಿಸಿದ ಟ್ರಂಪ್ ಅಭಿಮಾನಿಗಳಿಗೆ ಧನ್ಯವಾದ ಅರ್ಪಿಸಿದ್ದರು.

ಅಮೆರಿಕ ಅಧ್ಯಕ್ಷ ಟ್ರಂಪ್ ವಿರುದ್ಧ ಮೊಳಗಿದ ಆಕ್ರೋಶ, ನಿಯಮ ಪಾಲಿಸಲಿಲ್ವಾ ಅಮೆರಿಕ ಅಧ್ಯಕ್ಷ..?

ಅದಕ್ಕೆ ಟ್ರಂಪ್ ಟ್ವೀಟ್ ಮಾಡಿ, ಆಸ್ಪತ್ರೆಯ ಹೊರಗಿನ ಎಲ್ಲಾ ಅಭಿಮಾನಿಗಳುಮತ್ತು ಬೆಂಬಲಿಗರನ್ನು ನಾನು ನಿಜವಾಗಿಯೂ ಪ್ರಶಂಶಿಸುತ್ತೇನೆ. ನಿಜವೆಂದರೆ ಅವರು ನಮ್ಮ ದೇಶವನ್ನು ಪ್ರೀತಿಸುತ್ತಾರೆ, ದೇಶವನ್ನು ಹಿಂದೆಂದಿಗಿಂತಲೂ ಎತ್ತರಕ್ಕೆ ನಾವು ಕರೆದೊಯ್ಯುತ್ತಿದ್ದೇವೆ ಎಂದುಬುದನ್ನು ಅವರು ಗಮನಿಸುತ್ತಿದ್ದಾರೆ ಎಂದು ಹೇಳಿದ್ದರು.

   RR Nagar ಉಪಚುನಾವಣೆಯಲ್ಲಿ ಯಾವ ಪಕ್ಷದಿಂದ ಕಣಕ್ಕಿಳಿಯಲಿದ್ದಾರೆ Muniratna | Oneindia Kannada

   English summary
   US President Donald Trump Tweeted that, It is reported that the Media is upset because I got into a secure vehicle to say thank you to the many fans and supporters who were standing outside of the hospital for many hours, and even days, to pay their respect to their President. If I didn’t do it, Media would say RUDE!.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X