• search
  • Live TV
ವಾಷಿಂಗ್ಟನ್ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಟ್ರಂಪ್ ಓಡಿಸಲು ಅವರದ್ದೇ ಪಕ್ಷದ ಹಿರಿಯ ನಾಯಕಿಯ ಬೆಂಬಲ!

|

ಕ್ಯಾಪಿಟಲ್ ಹಿಲ್ ಮೇಲಿನ ದಾಳಿ ಅಮೆರಿಕದ ರಾಜಕೀಯದಲ್ಲಿ ಬಿರುಗಾಳಿಯನ್ನೇ ಎಬ್ಬಿಸಿದೆ. ಟ್ರಂಪ್ ಪರ ಅವರ ಬೆಂಬಲಿಗರು ನಡೆಸಿದ ಹಿಂಸಾಚಾರ, ಪಕ್ಷಾತೀತವಾಗಿ ಅಮೆರಿಕದ ರಾಜಕಾರಣಿಗಳು ರೊಚ್ಚಿಗೆಬ್ಬಿಸಿದೆ. ಈ ಸಾಲಿಗೆ ರಿಪಬ್ಲಿಕನ್ ಪಕ್ಷದ 3ನೇ ಅತಿ ಹಿರಿಯ ನಾಯಕಿ ಲಿಝ್ ಚೇನಿ ಕೂಡ ಸೇರಿದ್ದಾರೆ. ಸ್ವತಃ ಟ್ರಂಪ್ ಪಕ್ಷಕ್ಕೆ ಸೇರಿದವರಾಗಿದ್ದರೂ, ಡೊನಾಲ್ಡ್ ಟ್ರಂಪ್‌ಗೆ ಮನೆ ದಾರಿ ತೋರಿಸಲು ನಾನು ಕೂಡ ಸಾಥ್ ಕೊಡ್ತೀನಿ ಅಂತಾ ಲಿಝ್ ಚೇನಿ ಆಶ್ವಾಸನೆ ನೀಡಿದ್ದಾರೆ.

ಅಮೆರಿಕ ಉಪಾಧ್ಯಕ್ಷ ಮೈಕ್ ಪೆನ್ಸ್ ಸಹಕಾರದೊಂದಿಗೆ 25ನೇ ತಿದ್ದುಪಡಿ ಅನ್ವಯಿಸಿ ಟ್ರಂಪ್ ಕಿತ್ತೊಗೆಯಲು ಸಂಸದರು ಪ್ಲಾನ್ ಮಾಡಿದ್ದರು. ಆದರೆ ಮೈಕ್ ಪೆನ್ಸ್ ಇದಕ್ಕೆ ಒಪ್ಪಿಗೆ ಸೂಚಿಸಿಲ್ಲ. ಈ ಮೂಲಕ ಮತ್ತೊಮ್ಮೆ ತಾವು ಟ್ರಂಪ್‌ಗೆ ನಿಷ್ಠನಾಗಿದ್ದೀನಿ ಎಂಬುದನ್ನ ಪೆನ್ಸ್ ಹೇಳಿದ್ದಾರೆ.

ಡೊನಾಲ್ಡ್ ಟ್ರಂಪ್ ವಿರುದ್ಧ ಐತಿಹಾಸಿಕ ವಾಗ್ದಂಡನೆ ಪ್ರಕ್ರಿಯೆ

ಆದರೆ ಸದ್ಯಕ್ಕೆ ಟ್ರಂಪ್‌ರನ್ನ ಅಧಿಕಾರದಿಂದ ಕಿತ್ತೊಗೆಯುವುದು ಅನಿವಾರ್ಯವಾಗಿದ್ದು, ವಾಗ್ದಂಡನೆ ಅಥವಾ ಇಂಪೀಚ್‌ಮೆಂಟ್ (Impeachment) ಮೂಲಕ ಕಾರ್ಯ ಸಾಧಿಸಲು ಅಮೆರಿಕ ಸಂಸದರು ನಿರ್ಧರಿಸಿದ್ದಾರೆ. ಇದೀಗ ಟ್ರಂಪ್ ವಿರುದ್ಧದ ವಾಗ್ದಂಡನೆಗೆ ಖುದ್ದು ಟ್ರಂಪ್ ಪಕ್ಷವಾದ ರಿಪಬ್ಲಿಕನ್ಸ್ ಸಂಸದರು ಕೂಡ ಬೆಂಬಲ ಘೋಷಿಸುತ್ತಿದ್ದು, ಈ ಸಾಲಿಗೆ ಹಿರಿಯ ಸಂಸದೆ ಲಿಝ್ ಚೇನಿ ಕೂಡ ಸೇರ್ಪಡೆಗೊಂಡಿದ್ದಾರೆ.

ಪೆನ್ಸ್ ಮೇಲೂ ಒತ್ತಡ ತಂತ್ರ..?

ಪೆನ್ಸ್ ಮೇಲೂ ಒತ್ತಡ ತಂತ್ರ..?

ಟ್ರಂಪ್ ವಿರುದ್ಧ ಕೇವಲ ವಾಗ್ದಂಡನೆ ಅಸ್ತ್ರ ಮಾತ್ರವಲ್ಲ, ಮತ್ತೊಂದು ಪ್ರಬಲ ವೆಪನ್ ಕೂಡ ಸಿದ್ಧವಿದೆ. ಅದೇ ಅಮೆರಿಕ ಸಂವಿಧಾನದ 25ನೇ ತಿದ್ದುಪಡಿ. ಆದರೆ ಇದನ್ನ ಜಾರಿಗೆ ತರಲು ಉಪಾಧ್ಯಕ್ಷರ ಬೆಂಬಲ ಬೇಕಾಗಿದೆ. ಈ ಸಂದರ್ಭದಲ್ಲಿ ಮೈಕ್ ಪೆನ್ಸ್ ಡಬಲ್ ಗೇಮ್ ಆಡ್ತಿದ್ದಾರೆ ಎಂದು ಖುದ್ದು ಅಮೆರಿಕ ಸಂಸದರು ಗಂಭೀರ ಆರೋಪ ಮಾಡುತ್ತಿದ್ದಾರೆ. ಇದಕ್ಕೆ ತಕ್ಕಂತೆ ಉಪಾಧ್ಯಕ್ಷ ಮೈಕ್ ಪೆನ್ಸ್ ವರ್ತಿಸುತ್ತಿದ್ದಾರೆ. ಹೀಗಾಗಿ ಅಮೆರಿಕದ ಸಂಸತ್ ಸದಸ್ಯರು ಬಹುಮತದಿಂದ ಸಂವಿಧಾನದ 25ನೇ ತಿದ್ದುಪಡಿ ಅನ್ವಯಿಸುವ ತೀರ್ಮಾನ ಕೈಗೊಂಡು, ಪೆನ್ಸ್‌ಗೆ ಆದೇಶ ನೀಡಿದರೆ ಅದನ್ನು ಉಪಾಧ್ಯಕ್ಷ ಪೆನ್ಸ್ ತಿರಸ್ಕಾರ ಮಾಡಲು ಸಾಧ್ಯವೇ ಇಲ್ಲ. ಹೀಗಾಗಿ ಸದ್ಯ ಎರಡೆರಡು ಪ್ಲಾನ್ ಸಿದ್ಧ ಮಾಡಿಕೊಂಡು ಟ್ರಂಪ್ ವಿರುದ್ಧ ಅಖಾಡಕ್ಕೆ ಧುಮುಕಿದ್ದಾರೆ ಅಮೆರಿಕದ ಸಂಸದರು.

 220 ಸಂಸದರ ಬೆಂಬಲ..?

220 ಸಂಸದರ ಬೆಂಬಲ..?

ಅಂದಹಾಗೆ ಡೆಮಾಕ್ರಟಿಕ್‌ ಹಾಗೂ ರಿಪಬ್ಲಿಕನ್ಸ್ ಪಕ್ಷದ ಹಿರಿಯ ಸಂಸದರು ತಿಳಿಸುವಂತೆ ಟ್ರಂಪ್ ವಿರುದ್ಧ ಕನಿಷ್ಠ 220ಕ್ಕೂ ಹೆಚ್ಚು ಸಂದರು ತಿರುಗಿಬಿದ್ದಿದ್ದಾರೆ. ಟ್ರಂಪ್ ವಿರುದ್ಧ ಆರೋಪ ಹೊರಿಸಿ ಈಗಾಗಲೇ ಅಮೆರಿಕ ಕಾಂಗ್ರೆಸ್‌ನ 200ಕ್ಕೂ ಹೆಚ್ಚು ಸದಸ್ಯರು ವಾಗ್ದಂಡನೆಗೆ ಸಹಿಹಾಕಿದ್ದಾರೆ. ಇದು ಡೆಮಾಕ್ರಟಿಕ್ ಹುರಿಯಾಳುಗಳ ಬಲ ಹೆಚ್ಚಿಸಿದೆ. ಟ್ರಂಪ್ ವಿರುದ್ಧ ತೊಡೆತಟ್ಟಿರುವ ಸಂಸದರು, ಅಮೆರಿಕದ ಅತ್ಯಂತ ವಿವಾದಾತ್ಮಕ ಅಧ್ಯಕ್ಷನನ್ನ ಮನೆಗೆ ಕಳುಹಿಸುವ ತಯಾರಿಯಲ್ಲಿದ್ದಾರೆ. ಇನ್ನೇನು ಕೆಲವೇ ದಿನದಲ್ಲಿ ಅದು ಸುಲಭವಾಗಿ ನಡೆದರು ಕೂಡ ಆಶ್ಚರ್ಯ ಪಡಬೇಕಿಲ್ಲ.

ಡೊನಾಲ್ಡ್ ಟ್ರಂಪ್‌ಗೆ ಮನೆ ದಾರಿ ತೋರಿಸಲು ಸಿದ್ಧರಾದ ಸಂಸದರು..!

ಟ್ರಂಪ್‌ನ ಓಡಿಸೋದೆ ಸರಿಯಂತೆ..!

ಟ್ರಂಪ್‌ನ ಓಡಿಸೋದೆ ಸರಿಯಂತೆ..!

ಎಲೆಕ್ಟೊರಲ್ ಕಾಲೇಜ್ ಮತಗಳ ವಿರುದ್ಧ ಪ್ರತಿಭಟನೆ ನಡೆಸಿದ್ದ ಡೊನಾಲ್ಡ್ ಟ್ರಂಪ್ ಬೆಂಬಲಿಗರ ಗುಂಪು, ಅಮೆರಿಕದ ಸಂಸತ್ ಇರುವ ‘ಕ್ಯಾಪಿಟಲ್ ಹಿಲ್' ಕಟ್ಟಡಕ್ಕೆ ನುಗ್ಗಿ ಹಿಂಸಾಚಾರವನ್ನ ನಡೆಸಿತ್ತು. ಟ್ರಂಪ್ ಕುಮ್ಮಕ್ಕಿನಂತೆ ದಾಳಿ ನಡೆದಿದೆ ಎಂದು ಆರೋಪಿಸಲಾಗಿತ್ತು. ಬಳಿಕ ಡೊನಾಲ್ಡ್ ಟ್ರಂಪ್ ಸುಗಮ ಅಧಿಕಾರ ಹಸ್ತಾಂತರ ನಡೆಸಲು ಒಪ್ಪಿಕೊಂಡಿದ್ದರೂ, ಗಲಭೆ ಘಟನೆಯಿಂದ ಅಸಮಾಧಾನಗೊಂಡಿರುವ ಸಂಸದರು ಟ್ರಂಪ್ ನಡೆ ಬಗ್ಗೆ ಅನುಮಾನ ಇರುವುದರಿಂದ ಟ್ರಂಪ್ ಪದಚ್ಯುತಿ ಮಾರ್ಗ ಸೂಕ್ತವಾಗಿದೆ ಎನ್ನುತ್ತಿದ್ದಾರೆ. ಹೀಗಾಗಿಯೇ ನಿನ್ನೆ ಟ್ರಂಪ್ ವಿರುದ್ಧ ವಾಗ್ದಂಡನೆಗೆ ಚಾಲನೆ ಕೂಡ ದೊರೆತಿದೆ.

ಟ್ವಿಟ್ಟರ್‌ಗೆ 5 ಸಾವಿರ ಕೋಟಿ ನಷ್ಟ, ಟ್ರಂಪ್ ಬ್ಯಾನ್ ಮಾಡಿದ್ದಕ್ಕೆ ಸೇಡು?

ಎಡವಟ್ಟುಗಳ ಸರದಾರ ಟ್ರಂಪ್..!

ಎಡವಟ್ಟುಗಳ ಸರದಾರ ಟ್ರಂಪ್..!

ಟ್ರಂಪ್‌ಗೆ ಜಗತ್ತಿನಾದ್ಯಂತ ಬೆಂಬಲಿಗರು ಹಾಗೂ ವಿರೋಧಿಗಳು ಇದ್ದಾರೆ. ಆದರೆ ಅಮೆರಿಕದ ಸಂಸತ್ ಸಭೆ ನಡೆಯುವ ಕ್ಯಾಪಿಟಲ್ ಹಿಲ್ ಮೇಲಿನ ದಾಳಿ ಬಳಿಕ ಎಲ್ಲರೂ ಟ್ರಂಪ್ ವಿರುದ್ಧ ತಿರುಗಿಬಿದ್ದಿದ್ದಾರೆ. ಅದರಲ್ಲೂ ಸ್ವತಃ ಅವರ ಸಹೋದ್ಯೋಗಿ ಹಾಗೂ ಅತ್ಯಾಪ್ತ ಉಪಾಧ್ಯಕ್ಷ ಮೈಕ್ ಪೆನ್ಸ್ ಕೂಡ ಟ್ರಂಪ್ ನೀವು ಸರಿಯಿಲ್ಲ ಎಂದಿದ್ದಾರೆ. ಇದನ್ನು ಅರಗಿಸಿಕೊಳ್ಳುವ ಮೊದಲೇ ಟ್ರಂಪ್‌ಗೆ ಟ್ವಿಟ್ಟರ್ ಕೂಡ ಶಾಕ್ ಕೊಟ್ಟಿತ್ತು. ಆದರೆ ಇಷ್ಟು ಆದ ಬಳಿಕ ಸುಮ್ಮನಾಗದೆ ಮತ್ತೆ ಮೊಂಡಾಟ ಮುಂದುವರಿಸಿದ್ದ ಟ್ರಂಪ್ ಎಡವಟ್ಟುಗಳ ಮೇಲೆ ಎಡವಟ್ಟು ಮಾಡಿಕೊಳ್ಳುತ್ತಿದ್ದಾರೆ. ಇದು ಸಹಜವಾಗಿಯೇ ಅಮೆರಿಕನ್ನರನ್ನ ರೊಚ್ಚಿಗೆಬ್ಬಿಸಿದೆ.

ಟ್ರಂಪ್ ಟ್ವಿಟ್ಟರ್ ಖಾತೆ ಬಂದ್ ಮಾಡಿಸಿದ್ದು ವಕೀಲೆ ವಿಜಯ ಗದ್ದೆ

English summary
Another senior leader of Republican party has rise their hand against Trump. Third most senior Republican Liz Cheney said she would vote to impeach Donald Trump.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X