ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

'ನಿಮ್ಮ ಸುಳ್ಳುಗಳ ಬಗ್ಗೆ ನಿಮಗೆ ವಿಷಾದವಿಲ್ಲವೇ?': ಪತ್ರಕರ್ತನ ಪ್ರಶ್ನೆಗೆ ಟ್ರಂಪ್ ಕಕ್ಕಾಬಿಕ್ಕಿ

|
Google Oneindia Kannada News

ನಿಮ್ಮ ಸುಳ್ಳುಗಳ ಬಗ್ಗೆ ವಿಷಾದವಿಲ್ಲವೇ?: ಪತ್ರಕರ್ತನ ಪ್ರಶ್ನೆಗೆ ಟ್ರಂಪ್ ಕಕ್ಕಾಬಿಕ್ಕಿ

ವಾಷಿಂಗ್ಟನ್, ಆಗಸ್ಟ್ 15: ಶ್ವೇತ ಭವನದ ವರದಿಗಾರರೊಬ್ಬರು ಕೇಳಿದ ಪ್ರಶ್ನೆಗೆ ಮುಜುಗರಕ್ಕೆ ಒಳಗಾದ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಉತ್ತರಿಸದೆ ಹೋದ ಘಟನೆ ನಡೆದಿದೆ.

ಹಫಿಂಗ್ಟನ್ ಪೋಸ್ಟ್‌ನ ಪತ್ರಕರ್ತ ಎಸ್‌ವಿ ಡಾಟೆ, ಡೊನಾಲ್ಡ್ ಟ್ರಂಪ್ ಅವರಿಗೆ ಒಂದು ಪ್ರಶ್ನೆ ಕೇಳಲು ಐದು ವರ್ಷದಿಂದ ಕಾದಿದ್ದರಂತೆ. ಅದಕ್ಕೆ ಮಂಗಳವಾರ ಅವಕಾಶ ಸಿಕ್ಕಿತ್ತು. ಆದರೆ ಅವರ ಕಠಿಣವಾದ ಪ್ರಶ್ನೆಗೆ ಟ್ರಂಪ್ ಉತ್ತರಿಸದೆ ತಡಬಡಾಯಿಸಿದರಂತೆ.

ಕಮಲಾ ಹ್ಯಾರಿಸ್‌ಗಿಂತಲೂ ಹೆಚ್ಚು ಭಾರತೀಯರು ನನ್ನ ಬೆಂಬಲಕ್ಕಿದ್ದಾರೆ: ಡೊನಾಲ್ಡ್ ಟ್ರಂಪ್ಕಮಲಾ ಹ್ಯಾರಿಸ್‌ಗಿಂತಲೂ ಹೆಚ್ಚು ಭಾರತೀಯರು ನನ್ನ ಬೆಂಬಲಕ್ಕಿದ್ದಾರೆ: ಡೊನಾಲ್ಡ್ ಟ್ರಂಪ್

ಕೊರೊನಾ ವೈರಸ್ ಮತ್ತು ಅಧ್ಯಕ್ಷೀಯ ಚುನಾವಣೆಯ ಡೆಮಾಕ್ರಟಿಕ್ ಪಕ್ಷದ ಅಭ್ಯರ್ಥಿ ಜೋ ಬಿಡೆನ್ ಕುರಿತು ಮಾತನಾಡಲು ಪತ್ರಿಕಾಗೋಷ್ಠಿ ಕರೆದಿದ್ದ ಟ್ರಂಪ್, ಬಳಿಕ ಕೆಲವು ವರದಿಗಾರರಿಗೆ ಪ್ರತ್ಯೇಕ ಸಂದರ್ಶನ ನೀಡಿದ್ದರು. ಅವರಲ್ಲಿ ಹಫಿಂಗ್ಟನ್ ಪೋಸ್ಟ್ ವರದಿಗಾರ ಡಾಟೆ ಒಬ್ಬರು.

 Reporter Asks Donald Trump, Do You Regret All Your Lying

'ನಿಮ್ಮ ಮೂರೂವರೆ ವರ್ಷದ ಅಧಿಕಾರಾವಧಿಯಲ್ಲಿ ಅಮೆರಿಕದ ಜನರಿಗೆ ಎಲ್ಲ ಸುಳ್ಳುಗಳನ್ನು ಹೇಳಿದ್ದೀರಿ. ಅದರ ಬಗ್ಗೆ ನಿಮಗೆ ಪಶ್ಚಾತ್ತಾಪವಾಗಿಲ್ಲವೇ?' ಎಂದು ಡಾಟೆ ಪ್ರಶ್ನಿಸಿದ್ದರು. ಅದಕ್ಕೆ ಟ್ರಂಪ್, 'ಎಲ್ಲ ಎಂದರೆ ಯಾವುದು?' ಎಂದು ಕೇಳಿದ್ದರು. 'ಎಲ್ಲ ಸುಳ್ಳುಗಳು, ಎಲ್ಲ ಮೋಸಗಳು' ಎಂದು ಡಾಟೆ ಹೇಳಿದ್ದರು.

ಎಚ್‌-1ಬಿ ವೀಸಾ ಬಳಕೆದಾರರಿಗೆ ನಿಯಮ ಸಡಿಲಿಸಿದ ಟ್ರಂಪ್ ಸರ್ಕಾರಎಚ್‌-1ಬಿ ವೀಸಾ ಬಳಕೆದಾರರಿಗೆ ನಿಯಮ ಸಡಿಲಿಸಿದ ಟ್ರಂಪ್ ಸರ್ಕಾರ

'ಅದನ್ನು ಮಾಡಿದವರು ಯಾರು?' ಎನ್ನುವುದು ಟ್ರಂಪ್ ಮರುಪ್ರಶ್ನೆ.

'ನೀವೇ ಮಾಡಿರುವುದು. ಅವುಗಳಲ್ಲಿ ಹತ್ತಾರು ಸಾವಿರ ಇವೆ' ಎಂದು ಡಾಟೆ ಮತ್ತೆ ಹೇಳಿದ್ದರು. ಇದರಿಂದ ಕಕ್ಕಾಬಿಕ್ಕಿಯಾದ ಟ್ರಂಪ್, ಕೆಲವು ಸಮಯ ಮೌನವಾಗಿದ್ದರು. ನಂತರ ಪ್ರಶ್ನೆಯನ್ನು ನಿರ್ಲಕ್ಷಿಸಿ ಬೇರೆ ವರದಿಗಾರರನ್ನು ಕರೆಯಿಸಿದರು ಎಂದು ಡಾಟೆ ತಿಳಿಸಿದ್ದಾರೆ.

ಜುಲೈನಲ್ಲಿ ವರದಿಯೊಂದನ್ನು ಪ್ರಕಟಿಸಿದ್ದ ವಾಷಿಂಗ್ಟನ್ ಪೋಸ್ಟ್, ತಮ್ಮ ಅಧ್ಯಕ್ಷ ಅವಧಿಯಲ್ಲಿ ಡೊನಾಲ್ಡ್ ಟ್ರಂಪ್ 20,000ಕ್ಕೂ ಹೆಚ್ಚು ಸುಳ್ಳುಗಳನ್ನು ಹೇಳಿದ್ದಾರೆ ಎಂದು ಹೇಳಿತ್ತು.

English summary
White House correspondent SV Date has questioned America president Donald Trump that, do you regret all your lying, but trump ignored the question.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X