ಅಮೆರಿಕದಲ್ಲೂ ಮೊಳಗಿದ ಪಾಕಿಸ್ತಾನ್ ಮುರ್ದಾಬಾದ್ ಘೋಷಣೆ

ನ್ಯೂಯಾರ್ಕ್, ಫೆಬ್ರವರಿ 23: ಅಮೆರಿಕದಲ್ಲಿರುವ ಪಾಕಿಸ್ತಾನ ರಾಯಭಾರಿ ಕಚೇರಿ ಎದುರು 'ಪಾಕಿಸ್ತಾನ್ ಮುರ್ದಾಬಾದ್' ಘೋಷಣೆ ಮೊಳಗಿದೆ! ಅಮೆರಿಕದಲ್ಲಿ ವಾಸವಿರುವ ಭಾರತೀಯರುವ ಫೆಬ್ರವರಿ 14 ರಂದು ಪಾಕ್ಮುಲದ ಜೈಷ್ ಇ ಮೊಹಮ್ಮದ್ ಉಗ್ರ ಸಂಘಟನೆ ನಡೆಸಿದ ಪುಲ್ವಾಮಾ ಉಗ್ರ ದಾಳಿಯನ್ನು ಖಂಡಿಸಿ, ಪ್ರತಿಭಟನೆ ನಡೆಸಿದರು.

ತ್ರಿವರ್ಣಧ್ವಜವನ್ನು ಹಿಡಿದು, 'ಪಾಕಿಸ್ತಾನ್ ಮುರ್ದಾಬಾದ್', 'ಗ್ಲೋಬಲ್ ಟೆರರ್ ಪಾಕಿಸ್ತಾನ', 'ಎಲ್ ಇ ಟಿ ಪಾಕಿಸ್ತಾನ', '9/11 ಪಾಕಿಸ್ತಾನ', '26/11 ಪಾಕಿಸ್ತಾನ', 'ಒಸಾಮಾ ಬಿನ್ ಲಾಡೆಲ್ ಪಾಕಿಸ್ತಾನ'' ಎಂಬ ಘೋಷಣೆಯೊಂದಿಗೆ ಪ್ರತಿಭಟನೆ ನಡೆಸಲಾಗುತ್ತಿದೆ.

 Pulwama terror attack: US-based Indians protest outside Pakistan consulate in New York

"ಪಾಕಿಸ್ತಾನ-ಒಂದುದ ಭಯೋತ್ಪಾದಕ ರಾಷ್ಟ್ರ, ಪಾಕಿಸ್ತಾನ ದೇಶವನ್ನು ಅಭಿವೃದ್ಧಿಪಡಿಸಲಿ, ಭಯೋತ್ಪಾದನೆಯನ್ನಲ್ಲ" ಎಂಬಿತ್ಯಾದಿ ಪೆಕಾರ್ಡ್ ಗಳೂ ಕಂಡುಬರುತ್ತಿವೆ.

ಫೆಬ್ರವರಿ 14 ರಂದು ಜಮ್ಮು-ಕಾಶ್ಮೀರದ ಪುಲ್ವಾಮಾದಲ್ಲಿ ಪಾಕಿಸ್ತಾನ ಮೂಲದ ಜೈಷ್ ಇ ಮೊಹಮ್ಮದ್ ಉಗ್ರ ಸಂಘಟನೆಯ ಆದಿಲ್ ದಾರ್ ಎಂಬ ಭಯೋತ್ಪಾದಕ ನಡೆಸಿದ ಆತ್ಮಾಹುತಿ ಕಾರ್ ಬಾಂಬ್ ದಾಳಿಯಲ್ಲಿ ಭಾರತೀಯ ಸೇನೆಯ 40 ಕ್ಕೂ ಹೆಚ್ಚು ಯೋಧರು ಹುತಾತ್ಮರಾಗಿದ್ದರು.

ಈ ಘಟನೆಯ ಕುರಿತು ಕಳವಳ ವ್ಯಕ್ತಪಡಿಸಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, 'ಉಭಯ ದೇಶಗಳ ನಡುವೆ ಅಪಾಯಕಾರಿ ಸನ್ನಿವೇಶ ಏರ್ಪಟ್ಟಿದೆ, ಕಾಶ್ಮೀರದಲ್ಲಿ ಯುದ್ಧವಾಗದಂತೆ ತಡೆಯಲು ನಾವೂ ಉಭಯ ದೇಶಗಳೊಂದಿಗೆ ಮಾತುಕತೆ ನಡೆಸುತ್ತೇವೆ' ಎಂದಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+