'ಪಾಕಿಸ್ತಾನವು ಜಾಗತಿಕವಾಗಿ ಭಯೋತ್ಪಾದಕರನ್ನು ಉತ್ಪಾದಿಸುತ್ತಿದೆ'

ನವದೆಹಲಿ, ಆಗಸ್ಟ್ 04: ಪಾಕಿಸ್ತಾನವು ಭಯೋತ್ಪಾದಕರನ್ನು ಉತ್ಪಾದಿಸುತ್ತಿದೆ ಎಂದು ವಿಶ್ವಸಂಸ್ಥೆಯಲ್ಲಿ ಭಾರತದ ಖಾಯಂ ಪ್ರತಿನಿಧಿ ಟಿಎಸ್ ತಿರುಮೂರ್ತಿ ಆರೋಪ ಮಾಡಿದ್ದಾರೆ.

ಪಾಕಿಸ್ತಾನವು ಭಯೋತ್ಪಾಕರ ಜಾಗತಿಕ ರಾಜಧಾನಿಯಾಗಿದೆ. ಜಾಗತಿಕವಾಗಿ ಭಯೋತ್ಪಾದನಾ ಸಂಸ್ಥೆಗಳು ಎಂದು ಘೋಷಿಸಲಾಗಿರುವ ಜಮಾತ್​ ಉದ್​ ದವಾ, ಲಷ್ಕರ್​ ಎ ತೊಯ್ಬಾ, ಜೈಷ್​ ಎ ಮೊಹಮ್ಮದ್​ ಮತ್ತು ಹಿಜ್ಬುಲ್​ ಮುಜಾಹಿದ್ದೀನ್​ ಸೇರಿ ಅನೇಕ ಭಯೋತ್ಪಾದನಾ ಸಂಸ್ಥೆಗಳ ಪಾಕಿಸ್ತಾನವನ್ನು ಸುರಕ್ಷಿತ ಅಡಗುತಾಣವನ್ನಾಗಿ ಮಾಡಿಕೊಂಡಿವೆ ಎಂದು ಆರೋಪಿಸಿದ್ದಾರೆ.

ಕಳೆದ ಏಪ್ರಿಲ್​ನಲ್ಲಿ ವಿಶ್ವಸಂಸ್ಥೆಯಲ್ಲಿನ ಭಾರತದ ಖಾಯಂ ಪ್ರತಿನಿಧಿಯಾಗಿ ನೇಮಕಗೊಂಡಿರುವ ತಿರುಮೂರ್ತಿ ಅವರು ಸೈಯದ್​ ಅಕ್ಬರುದ್ದೀನ್​ ಅವರಿಂದ ತೆರವಾಗಲಿರುವ ಸ್ಥಾನವನ್ನು ತುಂಬಲಿದ್ದಾರೆ.

Pakistan Nerve Centre Of Terrorism : Indian Envoy To UN

ಪಾಕಿಸ್ತಾನದ ಪ್ರಧಾನಿ ಇಮ್ರಾನ್​ ಖಾನ್​ ಅವರೇ ಖುದ್ದಾಗಿ ತಮ್ಮ ರಾಷ್ಟ್ರದಲ್ಲಿ 40 ಸಾವಿರ ಉಗ್ರರು ಇರುವುದಾಗಿ ಅಧಿಕೃತ ಹೇಳಿಕೆ ನೀಡಿದ್ದಾರೆ. ಅಲ್​ಖೈದಾ ಮತ್ತು ಐಸಿಸ್​ ಸೇರಿ ಜಾಗತಿಕ ಭಯೋತ್ಪಾದನಾ ಸಂಸ್ಥೆಗಳಿಗೆ ಪಾಕಿಸ್ತಾನದಿಂದ ಧನಸಹಾಯ ಹೋಗುತ್ತದೆ ಎಂಬ ಸಂಗತಿಯನ್ನು ವಿಶ್ವಸಂಸ್ಥೆಯ ಅನಲಿಟಿಕಲ್​ ಸಪೋರ್ಟ್​ ಆ್ಯಂಡ್​ ಸ್ಯಾಂಕ್ಷನ್ಸ್​ ಮಾನಿಟರಿಂಗ್​ ಟೀಮ್​ನ 26ನೇ ವರದಿಯಲ್ಲಿ ತಿಳಿಸಲಾಗಿದೆ ಎಂದು ಪ್ರಸ್ತಾಪಿಸಿದ್ದಾರೆ.

ಭಾರತ ಮತ್ತು ಪಾಕಿಸ್ತಾನದ ನಡುವಿನ ದ್ವಿಪಕ್ಷೀಯ ವಿವಾದವನ್ನು ಅಂತಾರಾಷ್ಟ್ರೀಯ ವೇದಿಕೆಗಳಲ್ಲಿ ಪ್ರಸ್ತಾಪಿಸುವ ಪಾಕ್​ನ ಪ್ರಯತ್ನಗಳು ಹೊಸದೇನಲ್ಲ. ಆದರೆ, ಪಾಕ್​ನ ವಿದೇಶಾಗ ಸಚಿವರು ಇತ್ತೀಚೆಗೆ ಈ ವಿಷಯವಾಗಿ ತೆಳೆದಿರುವ ವಿಷಯಕ್ಕೆ ವಿರುದ್ಧವಾಗಿ, 1965ರ ನಂತರದಲ್ಲಿ ಭಾರತ ಮತ್ತು ಪಾಕ್ ವಿವಾದಗಳ ಕುರಿತ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ಸಭೆ ನಡೆದಿಲ್ಲ ಎಂದು ತಿಳಿಸಿದ್ದಾರೆ.

ಐಸಿಸ್​ ಮತ್ತು ಅಲ್​ಖೈದಾ ಸಂಘಟನೆಗಳ ಬಗ್ಗೆ ವರದಿಗಳನ್ನು ಸಲ್ಲಿಸಲಾಗುತ್ತದೆ. 1267 ಸಮಿತಿಯ ವ್ಯಾಪ್ತಿಯಲ್ಲಿ ಮಾಹಿತಿ ಸಲ್ಲಿಸಲಾಗುತ್ತಿದೆ. ಇಂತಹ ಸಂಘಟನೆಗಳಿಗೆ ಆಶ್ರಯ ನೀಡಿ, ಪೋಷಿಸುವ ವಿಷಯದಲ್ಲಿ ಪಾಕಿಸ್ತಾನದ ನೇರ ಪಾಲ್ಗೊಳ್ಳುವಿಕೆ ಕುರಿತು ಈ ವರದಿಗಳಲ್ಲಿ ಪ್ರಸ್ತಾಪವಾಗುತ್ತಲೇ ಇವೆ ಎಂದು ತಿಳಿಸಿದ್ದಾರೆ.

ಭಾರತ ಮತ್ತು ಪಾಕಿಸ್ತಾನ ನಡುವಿನ ದ್ವಿಪಕ್ಷೀಯ ವಿವಾದಗಳನ್ನು ಜಾಗತಿಕರಣಗೊಳಿಸುವ ಪಾಕಿಸ್ತಾನದ ಪ್ರಯತ್ನಗಳನ್ನು ತಿರುಮೂರ್ತಿ ಟೀಕಿಸಿದ್ದಾರೆ. ಪಾಕಿಸ್ತಾನದ ಈ ರೀತಿಯ ಎಲ್ಲ ಪ್ರಯತ್ನಗಳು ವಿಫಲವಾಗಿವೆ ಎಂದು ಹೇಳಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+