ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಮೆರಿಕ ಅಧ್ಯಕ್ಷ ಟ್ರಂಪ್ ವಿರುದ್ಧ ಮೊಳಗಿದ ಆಕ್ರೋಶ, ನಿಯಮ ಪಾಲಿಸಲಿಲ್ವಾ ಅಮೆರಿಕ ಅಧ್ಯಕ್ಷ..?

|
Google Oneindia Kannada News

ಕೊರೊನಾ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡುತ್ತಾ, ಸೋಂಕಿನ ಬಗ್ಗೆ ತಲೆಕೆಡಿಸಿಕೊಳ್ಳದ ಟ್ರಂಪ್‌ಗೆ ಡೆಡ್ಲಿ ವೈರಸ್ ವಕ್ಕರಿಸಿ 4 ದಿನಗಳೇ ಕಳೆದಿವೆ. ಆದರೆ ನಿನ್ನೆ ಟ್ರಂಪ್ ಮಾಡಿದ ಒಂದು ಎಡವಟ್ಟು ಅಮೆರಿಕದಲ್ಲಿ ಕಿಚ್ಚು ಹಚ್ಚಿದೆ. ನವೆಂಬರ್ 3ರಂದು ಅಮೆರಿಕ ಅಧ್ಯಕ್ಷೀಯ ಚುನಾವಣೆ ನಡೆಯಲಿದೆ. ಹೀಗಾಗಿ ಪ್ರಚಾರ ಭರಾಟೆ ಜೋರಾಗಿದೆ.

ಆದರೆ ಕೊರೊನಾ ಕಾರಣಕ್ಕೆ ವಾಲ್ಟರ್ ರೀಡ್ ಮಿಲಿಟರಿ ಆಸ್ಪತ್ರೆ ಸೇರಿರುವ ಮಿಸ್ಟರ್ ಟ್ರಂಪ್ ಕ್ಯಾಂಪೇನ್ ನಡೆಸಲು ಆಗುತ್ತಿಲ್ಲ. ಇಷ್ಟೆಲ್ಲದರ ಮಧ್ಯೆ ತಮ್ಮನ್ನು ನೋಡಲು ಮಿಲಿಟರಿ ಆಸ್ಪತ್ರೆ ಹೊರಗೆ ಸೇರಿದ್ದ ಬೆಂಬಲಿಗರನ್ನ ನೋಡಲು ಕೊರೊನಾ ನಿಯಮ ಗಾಳಿಗೆ ತೂರಿ ಟ್ರಂಪ್ ಹೊರಬಂದಿದ್ದರು.

ಸೋಂಕು ಬಂದ ವ್ಯಕ್ತಿಯನ್ನ ಐಸೋಲೇಷನ್‌ನಲ್ಲಿಟ್ಟು ಚಿಕಿತ್ಸೆ ನೀಡಲಾಗುತ್ತಿದೆ. ಆದರೆ ಟ್ರಂಪ್ ಹೇಗೆ ರಾಜಾರೋಷವಾಗಿ ಹೊರಗೆ ಬಂದರು ಎಂದು ತಜ್ಞರು ಆಕ್ರೋಶ ಹೊರಹಾಕುತ್ತಿದ್ದಾರೆ. ಅಮೆರಿಕ ಅಧ್ಯಕ್ಷರಿಗಾಗಿಯೇ ವಿಶೇಷವಾಗಿ ತಯಾರಿಸಿರುವ 'ದಿ ಬೀಸ್ಟ್' ಕಾರಿನ ಹಿಂದಿನ ಸೀಟ್‌ನಲ್ಲಿ ಕೂತು ಟ್ರಂಪ್ ಆಸ್ಪತ್ರೆ ಹೊರ ಬಂದಿದ್ದರು.

ಅಮೆರಿಕ ಅಧ್ಯಕ್ಷ ಟ್ರಂಪ್ ಪಾಲಿಗೆ ಇನ್ನೆರಡು ದಿನ 'Do or Die’ಅಮೆರಿಕ ಅಧ್ಯಕ್ಷ ಟ್ರಂಪ್ ಪಾಲಿಗೆ ಇನ್ನೆರಡು ದಿನ 'Do or Die’

ಕಾರಿನ ಒಳಗಡೆಯೇ ಕುಳಿತು, ತಮ್ಮ ಬೆಂಬಲಿಗರತ್ತ ಕೈಬೀಸಿ ಮತ್ತೆ ಆಸ್ಪತ್ರೆಯ ಒಳಗೆ ಹೋಗಿದ್ದರು. ತಕ್ಷಣಕ್ಕೆ ಇದು ಅಮೆರಿಕನ್ನರಿಗೆ ಅಚ್ಚರಿ ಉಂಟು ಮಾಡಿದ್ದರೂ, ನಂತರ ಟ್ರಂಪ್ ನಡೆ ತೀವ್ರ ಟೀಕೆಗೆ ಗುರಿಯಾಗಿತ್ತು.

ಕೊರೊನಾ v/s ‘ದಿ ಬೀಸ್ಟ್’..!

ಕೊರೊನಾ v/s ‘ದಿ ಬೀಸ್ಟ್’..!

ಟ್ರಂಪ್ ರೌಂಡ್ ಹಾಕಿದ್ದ 'ದಿ ಬೀಸ್ಟ್' ಕಾರು ಹಲವು ಸವಲತ್ತು ಹೊಂದಿದೆ. ಈ ಕಾರು ಎಂತಹ ದಾಳಿಗೂ ಜಗ್ಗುವುದಿಲ್ಲ. ಬಾಂಬ್ ದಾಳಿ, ಮಿಸೈಲ್ ಅಟ್ಯಾಕ್, ಅಷ್ಟೇ ಏಕೆ ಕೆಮಿಕಲ್ ಅಟ್ಯಾಕ್‌ಗೂ ಕಾರು ಬಗ್ಗುವುದಿಲ್ಲ. ಇಂತಹ ಕಾರಿನಲ್ಲಿ ಕೊರೊನಾ ಮಹಾಮಾರಿ ಬಹುಬೇಗ ಹರಡಬಹುದು ಎಂಬ ವಾರ್ನಿಂಗ್ ತಜ್ಞರದ್ದಾಗಿದೆ. ಟ್ರಂಪ್ ಜೊತೆಯಲ್ಲಿ ಮುಂದಿನ ಸೀಟ್‌ನಲ್ಲಿ ಕೂತಿದ್ದ ಅಮೆರಿಕ ಗುಪ್ತದಳದ ಇಬ್ಬರು ಅಧಿಕಾರಿಗಳಿಗೂ ಡೆಡ್ಲಿ ಕೊರೊನಾ ತಗಲುವ ಸಾಧ್ಯತೆ ದಟ್ಟವಾಗಿದೆ. 'ದಿ ಬೀಸ್ಟ್' ಕಾರಿನ ಒಳಗಿರುವ ವಾತಾವರಣ ಇಂತಹ ಹಲವು ಸಮಸ್ಯೆಗಳನ್ನ ತಂದೊಡ್ಡುತ್ತದೆ ಎಂದು ತಜ್ಞ ವೈದ್ಯರು ವಾರ್ನಿಂಗ್ ಕೊಟ್ಟಿದ್ದಾರೆ.

ವಿಡಿಯೋ; ಅಭಿಮಾನಿಗಳ ಭೇಟಿಗೆ ಆಸ್ಪತ್ರೆಯಿಂದ ಹೊರ ಬಂದ ಟ್ರಂಪ್ವಿಡಿಯೋ; ಅಭಿಮಾನಿಗಳ ಭೇಟಿಗೆ ಆಸ್ಪತ್ರೆಯಿಂದ ಹೊರ ಬಂದ ಟ್ರಂಪ್

14 ದಿನ ಕ್ವಾರಂಟೈನ್ ಮಾಡಲು ಆಗ್ರಹ

14 ದಿನ ಕ್ವಾರಂಟೈನ್ ಮಾಡಲು ಆಗ್ರಹ

ಅಮೆರಿಕದಲ್ಲಿ ತಜ್ಞ ವೈದ್ಯರು ಟ್ರಂಪ್ ವರ್ತನೆ ಕಂಡು ರೊಚ್ಚಿಗೆದ್ದಿದ್ದಾರೆ. ಟ್ರಂಪ್ ತಾವು ಮಾಡುವ ತಪ್ಪಿನಿಂದ ಇತರರನ್ನು ಅಪಾಯದ ಕೂಪಕ್ಕೆ ತಳ್ಳುತ್ತಿದ್ದಾರೆ ಎಂದು ಆಕ್ರೋಶ ಹೊರ ಹಾಕುತ್ತಿದ್ದಾರೆ. ಟ್ರಂಪ್ ಜೊತೆಗೆ ಹೊರ ಬಂದಿದ್ದ ಗುಪ್ತಚರ ದಳದ ಅಧಿಕಾರಿಗಳನ್ನು ಕ್ವಾರಂಟೈನ್ ಮಾಡಿ, 14 ದಿನಗಳ ಕಾಲ ನಿಗಾದಲ್ಲಿ ಇಡಿ ಎಂಬ ಆಗ್ರಹ ಕೇಳಿಬಂದಿದೆ. ಅಧ್ಯಕ್ಷರು ಮಾಡಿದ ರೀತಿ ಕೊರೊನಾ ಸೋಂಕಿನ ಬಗ್ಗೆ ಅಮೆರಿಕದಲ್ಲಿ ಉಡಾಫೆ ಮುಂದುವರಿದರೆ ಮುಂಬರುವ ದಿನಗಳಲ್ಲಿ ಕೊರೊನಾ ನಿಯಂತ್ರಣಕ್ಕೆ ಸಿಗುವುದಿಲ್ಲ ಎಂಬ ಆತಂಕ ತಜ್ಞರದ್ದು.

ಟ್ರಂಪ್ ವಿವಾದಗಳ ಸರಮಾಲೆ..!

ಟ್ರಂಪ್ ವಿವಾದಗಳ ಸರಮಾಲೆ..!

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ 'ಕೊರೊನಾ' ವಿಚಾರದಲ್ಲಿ ಈ ರೀತಿ ಟೀಕೆಗೆ ಗುರಿಯಾಗುತ್ತಿರುವುದು ಇದೇ ಮೊದಲಲ್ಲ. ಈ ಹಿಂದೆ ಮಾಸ್ಕ್ ತೊಡುವ ವಿಚಾರದಿಂದ ಹಿಡಿದು, ಮನುಷ್ಯನ ದೇಹಕ್ಕೆ ಸೋಂಕು ನಿವಾರಕ ವಿಷ ಚುಚ್ಚಿ ಎಂದು ಹೇಳಿಕೆ ನೀಡುವ ತನಕ ಟ್ರಂಪ್ ತಮ್ಮ ತಲೆ ಮೇಲೆ ವಿವಾದಗಳ ಸರಮಾಲೆ ಎಳೆದುಕೊಂಡಿದ್ದಾರೆ. ಈಗ ಕೊರೊನಾ ಕನ್ಫರ್ಮ್ ಆಗಿದ್ದರೂ ಆಸ್ಪತ್ರೆಯಿಂದ ಹೊರಗೆ ಹೋಗಿ ಆಕ್ರೋಶಕ್ಕೆ ಗುರಿಯಾಗಿದ್ದಾರೆ. ಇದು ಮುಂಬರುವ ಚುನಾವಣೆ ಮೇಲೆ ವ್ಯತಿರಿಕ್ತ ಪರಿಣಾಮ ಬೀರುವ ಸಾಧ್ಯತೆ ಹೆಚ್ಚಾಗಿದೆ.

ಕೊರೊನಾ ನಿರ್ಲಕ್ಷಿಸಿದ್ದಕ್ಕೆ ಈಗೇನಾಯ್ತು ನೋಡಿ ಟ್ರಂಪ್: ಚೀನಾ ಅಪಹಾಸ್ಯಕೊರೊನಾ ನಿರ್ಲಕ್ಷಿಸಿದ್ದಕ್ಕೆ ಈಗೇನಾಯ್ತು ನೋಡಿ ಟ್ರಂಪ್: ಚೀನಾ ಅಪಹಾಸ್ಯ

Recommended Video

RR Nagar ಉಪಚುನಾವಣೆಯಲ್ಲಿ ಯಾವ ಪಕ್ಷದಿಂದ ಕಣಕ್ಕಿಳಿಯಲಿದ್ದಾರೆ Muniratna | Oneindia Kannada
ಚೀನಾ ಅಪಹಾಸ್ಯ ಮಾಡಿದೆ

ಚೀನಾ ಅಪಹಾಸ್ಯ ಮಾಡಿದೆ

ಕೊರೊನಾ ಸೋಂಕನ್ನು ಗಂಭೀರವಾಗಿ ಪರಿಗಣಿಸದೆ ಇದ್ದಿದ್ದಕ್ಕೆ ಈಗ ನಿಮ್ಮ ಪರಿಸ್ಥಿತಿ ಏನಾಗಿದೆ ನೋಡಿ ಎಂದು ಚೀನಾ ಅಪಹಾಸ್ಯ ಮಾಡಿದೆ.

ಚೀನಾದ ಲ್ಯಾಬ್‌ನಿಂದಲೇ ಕೊರೊನಾ ಸೋಂಕು ಹರಡಿದ್ದು ಎಂದು ಆರೋಪಿಸುತ್ತಾ ಸೋಂಕನ್ನು ನಿರ್ಲಕ್ಷಿಸಿದ್ದಕ್ಕೆ ಈಗ ಅವರೇ ಚಿಕಿತ್ಸೆ ಪಡೆಯುವಂತಾಗಿದೆ.

ಕೊರೊನಾ ಸೋಂಕು ಚೀನಾದ ಲ್ಯಾಬ್‌ನಿಂದಲೇ ಹುಟ್ಟಿಕೊಂಡಿದ್ದು ಎಂದು ಹೇಳಿ ಆರೋಪ ಮಾಡುವುದರ ಜತೆಗೆ ಇದೇ ಕಾರಣಕ್ಕೆ ವಿಶ್ವ ಆರೋಗ್ಯ ಸಂಸ್ಥೆಗೆ ನೀಡುತ್ತಿದ್ದ ಅನುದಾನವನ್ನು ಕೂಡ ನಿಲ್ಲಿಸಿದ್ದರು. ಹಾಗೆಯೇ ಮಾಸ್ಕ್ ಧರಿಸುವುದರ ಕುರಿತು ಕೂಡ ವಿವಾದ ಸೃಷ್ಟಿಸಿಕೊಂಡಿದ್ದರು.

English summary
Trump, who is being treated for coronavirus, is outraged that he has come out of the hospital and met fans. Experts have suggested quarantining the officers who were in the Beast's car with Trump.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X