• search
  • Live TV
ವಾಷಿಂಗ್ಟನ್ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಎರಡು ತಿಂಗಳ ಬಳಿಕ ರೀ-ಓಪನ್ ಆಗಲಿದೆ ಅಮೇರಿಕಾದ ನ್ಯೂಯಾರ್ಕ್ ಸಿಟಿ

|

ವಾಷಿಂಗ್ಟನ್, ಮೇ 30: ಯುನೈಟೆಡ್ ಸ್ಟೇಟ್ಸ್ ಆಫ್ ಅಮೇರಿಕಾದಲ್ಲಿ ಮಹಾಮಾರಿ ಕೊರೊನಾ ವೈರಸ್ ನ ಕೇಂದ್ರ ಬಿಂದುವಾಗಿದ್ದ ನ್ಯೂಯಾರ್ಕ್ ಸಿಟಿ ಇದೀಗ ಕೊಂಚ ಚೇತರಿಸಿಕೊಂಡಿದೆ.

ಸತತ ಎರಡು ತಿಂಗಳ ಕಾಲ ಸಾವು, ನೋವು, ದುಃಖ, ಸಂಕಷ್ಟಕ್ಕೆ ಸಾಕ್ಷಿಯಾಗಿದ್ದ ನ್ಯೂಯಾರ್ಕ್ ಸಿಟಿ ಈಗ ಮತ್ತೆ ಮೊದಲಿನಂತಾಗುವತ್ತ ಹೆಜ್ಜೆ ಇಡುತ್ತಿದೆ. 60ಕ್ಕೂ ಹೆಚ್ಚು ದಿನಗಳ ಕಾಲ ಆರ್ಥಿಕ ಮುಗ್ಗಟ್ಟು ಎದುರಿಸಿದ ನ್ಯೂಯಾರ್ಕ್ ಸಿಟಿನಲ್ಲಿ ಜೂನ್ 8 ರಿಂದ ವ್ಯಾಪಾರ, ವಹಿವಾಟು ಪುನರಾರಂಭಗೊಳ್ಳಲಿದೆ. ಆ ಮೂಲಕ ಸುಮಾರು 4 ಲಕ್ಷ ಜನರು ಕೆಲಸಕ್ಕೆ ಮರಳಲಿದ್ದಾರೆ.

'ಕೋವಿಡ್-19'ಗೆ ಲಕ್ಷ ಜನ ಬಲಿ: ಅಮೇರಿಕನ್ನರ ಸಾವಿಗೆ ಕಾರಣವಾದ ಇತರೆ ಮಹಾ ದುರ್ಘಟನೆಗಳ ವಿವರ

ಜೂನ್ 8 ರ ಬಳಿಕ ಅಂಗಡಿ ಮುಂಗಟ್ಟುಗಳು ತೆರೆಯಲಿದ್ದು, ಕಟ್ಟಡ ನಿರ್ಮಾಣ ಕಾಮಗಾರಿ ಮತ್ತು ಉತ್ಪಾದನಾ ಕ್ಷೇತ್ರ ಕೂಡ ಕಾರ್ಯಾರಂಭಿಸಲಿದೆ.

ನ್ಯೂಯಾರ್ಕ್ ನಲ್ಲಿ 20 ಸಾವಿರಕ್ಕೂ ಅಧಿಕ ಮಂದಿ ಸಾವು

ನ್ಯೂಯಾರ್ಕ್ ನಲ್ಲಿ 20 ಸಾವಿರಕ್ಕೂ ಅಧಿಕ ಮಂದಿ ಸಾವು

ವಿಶ್ವದಲ್ಲೇ ಅತಿ ಹೆಚ್ಚು ಕೊರೊನಾ ವೈರಸ್ ಸೋಂಕಿತರಿರುವ ರಾಷ್ಟ್ರ ಯುನೈಟೆಡ್ ಸ್ಟೇಟ್ಸ್ ಆಫ್ ಅಮೇರಿಕಾ. 17 ಲಕ್ಷಕ್ಕೂ ಹೆಚ್ಚು ಕೋವಿಡ್-19 ಪಾಸಿಟಿವ್ ಪ್ರಕರಣಗಳು ಇರುವ ಯು.ಎಸ್.ಎ ನಲ್ಲಿ ಇಲ್ಲಿಯವರೆಗೂ 1 ಲಕ್ಷಕ್ಕೂ ಅಧಿಕ ಮಂದಿ ಸಾವನ್ನಪ್ಪಿದ್ದಾರೆ.

ಹಾಗ್ನೋಡಿದ್ರೆ, ಯು.ಎಸ್.ಎನಲ್ಲಿ ಕೊರೊನಾ ವೈರಸ್ ಸೋಂಕಿತರ ಸಂಖ್ಯೆ ಮತ್ತು ಸಾವಿನ ಪ್ರಮಾಣ ಅತ್ಯಧಿಕವಾಗಿ ಕಂಡುಬಂದಿದ್ದು ನ್ಯೂಯಾರ್ಕ್ ಸಿಟಿಯಲ್ಲಿ.

ನ್ಯೂಯಾರ್ಕ್ ಸಿಟಿಯೊಂದರಲ್ಲೇ 20 ಸಾವಿರಕ್ಕೂ ಅಧಿಕ ಮಂದಿ ಕೋವಿಡ್-19 ಗೆ ಬಲಿಯಾಗಿದ್ದಾರೆ.

ಸಾವಿನ ಪ್ರಮಾಣದಲ್ಲಿ ಗಣನೀಯ ಇಳಿಕೆ

ಸಾವಿನ ಪ್ರಮಾಣದಲ್ಲಿ ಗಣನೀಯ ಇಳಿಕೆ

ಏಪ್ರಿಲ್ ತಿಂಗಳಲ್ಲಿ ನ್ಯೂಯಾರ್ಕ್ ಸಿಟಿಯಲ್ಲಿ ದಿನವೊಂದಕ್ಕೆ ಕಮ್ಮಿ ಅಂದರೂ 700-800 ಮಂದಿ ಕೊರೊನಾ ವೈರಸ್ ಸೋಂಕಿನಿಂದ ಪ್ರಾಣ ಕಳೆದುಕೊಳ್ಳುತ್ತಿದ್ದರು. ಆದ್ರೀಗ, ಸಾವಿನ ಪ್ರಮಾಣದಲ್ಲಿ ಗಣನೀಯ ಇಳಿಕೆ ಕಂಡಿದೆ.

ಇನ್ನೆರಡು ವರ್ಷ ಅಮೇರಿಕಾದಲ್ಲಿ ಕೊರೊನಾ ಕಂಟಕ ತಪ್ಪಿದ್ದಲ್ಲ!

ನ್ಯೂಯಾರ್ಕ್ ಆಸ್ಪತ್ರೆಗಳಲ್ಲಿನ ಐಸಿಯುನಲ್ಲಿ ಇರುವ ರೋಗಿಗಳ ಸಂಖ್ಯೆ ಕೂಡ ಇಳಿಮುಖವಾಗಿದೆ.

ಕೋವಿಡ್-19 ತಡೆಗಟ್ಟಲು ಸಾಮಾಜಿಕ ಅಂತರ ಸೇರಿದಂತೆ ಹಲವು ಕ್ರಮಗಳನ್ನು ನ್ಯೂಯಾರ್ಕ್ ಜನತೆ ಕಟ್ಟುನಿಟ್ಟಾಗಿ ಪಾಲಿಸಿದ ಪರಿಣಾಮ, ಸೋಂಕು ನಿಯಂತ್ರಣಕ್ಕೆ ಬಂದಿದೆ.

ಮೊದಲ ಹಂತದ ರೀ-ಓಪನ್

ಮೊದಲ ಹಂತದ ರೀ-ಓಪನ್

ಎರಡು ತಿಂಗಳ ಕಾಲ ಲಾಕ್ ಡೌನ್ ಆಗಿದ್ದ ನ್ಯೂಯಾರ್ಕ್ ಸಿಟಿಯನ್ನ ಈಗ ಮೊದಲ ಹಂತದಲ್ಲಿ ರೀ-ಓಪನ್ ಮಾಡಲಾಗುತ್ತಿದೆ. ಮೊದಲ ಹಂತದ ನಿಯಮಗಳ ಅನ್ವಯ ರೆಸ್ಟೋರೆಂಟ್ ಮತ್ತು ಬಾರ್ ಗಳಲ್ಲಿ 'ಟೇಕ್ ಅವೇ'ಗೆ ಮಾತ್ರ ಅವಕಾಶ ಕಲ್ಪಿಸಲಾಗಿದೆ. ಕೆಲವು ಆಫೀಸ್ ಗಳು, ಜಿಮ್, ಥಿಯೇಟರ್, ಸಲೂನ್ ಗಳು ಬಂದ್ ಆಗಿರಲಿವೆ.

ಸಾಮಾಜಿಕ ಅಂತರ ಮರೆಯುವ ಹಾಗಿಲ್ಲ

ಸಾಮಾಜಿಕ ಅಂತರ ಮರೆಯುವ ಹಾಗಿಲ್ಲ

ಮೊದಲ ಹಂತದಲ್ಲಿ ರೀ-ಓಪನ್ ಆಗುವ ಬಿಸಿನೆಸ್ ಗಳಲ್ಲಿ ಕಾರ್ಯನಿರ್ವಹಿಸುವವರಿಗೆ ಮಾಸ್ಕ್ ಗಳನ್ನು ವಿತರಿಸಲು ಸರ್ಕಾರ ಪ್ಲಾನ್ ಮಾಡಿದೆ. ಜೊತೆಗೆ ವ್ಯಾಪಾರ-ವಹಿವಾಟು ನಡೆಸುವ ಕುರಿತು ಪ್ರತ್ಯೇಕ ಮಾರ್ಗಸೂಚಿ ನೀಡಿದೆ.

ಕೊರೊನಾ ಕೊಲ್ಲಲು ಐಡಿಯಾ ಕೊಟ್ಟು ಯದ್ವಾತದ್ವಾ ಟ್ರೋಲ್ ಆದ ಟ್ರಂಪ್!

ಮನೆಯಿಂದ ಹೊರಗೆ ಬರುವವರು ಮಾಸ್ಕ್ ಧರಿಸುವಂತೆ ಮತ್ತು ಸಾಮಾಜಿಕ ಅಂತರ ಕಾಪಾಡುವಂತೆ ಸರ್ಕಾರ ಸೂಚಿಸಿದೆ.

English summary
New York City on track to begin Phase 1 of reopening on June 8th.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X