ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಚೀನಾದ 2022 ರ ಒಲಿಂಪಿಕ್ಸ್ ಬಹಿಷ್ಕರಿಸಿ - ವಿಶ್ವ ನಾಯಕರಿಗೆ ಯುಎಸ್‌ ಸ್ಪೀಕರ್‌ ಆಗ್ರಹ

|
Google Oneindia Kannada News

ವಾಷಿಂಗ್ಟನ್, ಮೇ 19: ಬೀಜಿಂಗ್‌ನಲ್ಲಿ ನಡೆಯಲಿರುವ 2022 ರ ಚಳಿಗಾಲದ ಒಲಿಂಪಿಕ್ಸ್‌ ಅನ್ನು ಯು.ಎಸ್‌. ಬಹಿಷ್ಕರಿಸಲು ಯು.ಎಸ್. ಹೌಸ್ ಆಫ್ ರೆಪ್ರೆಸೆಂಟೇಟಿವ್ಸ್ ಸ್ಪೀಕರ್ ನ್ಯಾನ್ಸಿ ಪೆಲೋಸಿ ಮಂಗಳವಾರ ಕರೆ ನೀಡಿದ್ದಾರೆ. ಚೀನಾವು ಮಾನವ ಹಕ್ಕುಗಳ ಉಲ್ಲಂಘನೆ ಮಾಡುತ್ತಿದೆ ಎಂದು ಟೀಕಿಸಿರುವ ಅವರು, ಈ ಒಲಿಂಪಿಕ್ಸ್‌ನಲ್ಲಿ ಹಾಜರಾದರೆ ಜಾಗತಿಕ ನಾಯಕರು ತಮ್ಮ ನೈತಿಕ ಅಧಿಕಾರವನ್ನು ಕಳೆದುಕೊಳ್ಳುತ್ತಾರೆ ಎಂದು ಹೇಳಿದ್ದಾರೆ.

ಯುಎಸ್‌ನಲ್ಲಿ ಶಾಸಕರು ಒಲಿಂಪಿಕ್ ಬಹಿಷ್ಕಾರ ಮತ್ತು ಸ್ಥಳ ಬದಲಾವಣೆಯ ಬಗ್ಗೆ ಧ್ವನಿ ಎದ್ದಿದ್ದು, ಅಮೆರಿಕದ ಪಾಲಿಕೆಯ ವಿರುದ್ದ ಶಾಸಕರು ವಾಗ್ದಾಳಿ ನಡೆಸಿದ್ದಾರೆ. ಚೀನಾದಲ್ಲಿ ಅಲ್ಲಿನ ಸರ್ಕಾರವು ಉಯಿಘರ್ ಮತ್ತು ಇತರ ಜನಾಂಗೀಯ ಅಲ್ಪಸಂಖ್ಯಾತರ ಹತ್ಯಾಕಾಂಡದ ವಿಚಾರದಲ್ಲಿ ವಿದೇಶಾಂಗ ಇಲಾಖೆಯ ಮೌನವನ್ನು ಪ್ರಶ್ನಿಸಿದ್ದಾರೆ.

ವಿಶ್ವದ ಎಲ್ಲಾ ದೇಶದ ನಾಯಕರುಗಳು ಈ ಒಲಿಂಪಿಕ್ಸ್‌ ಅನ್ನು ತ್ಯಜಿಸಬೇಕು ಎಂದು ಆಗ್ರಹಿಸಿರುವ ಡೆಮಾಕ್ರಿಟಿಕ್‌ ಪಕ್ಷದ ಪೆಲೋಸಿ, "ರಾಷ್ಟ್ರ ಮುಖ್ಯಸ್ಥರು ಚೀನಾಕ್ಕೆ ಹೋಗುವ ಮೂಲಕ ಚೀನಾ ಸರ್ಕಾರಕ್ಕೆ ಗೌರವ ನೀಡಬಾರದು ಎಂದು ಕೂಡಾ ಒತ್ತಾಯಿಸಿದ್ದಾರೆ.

Nancy Pelosi Calls US, World Leaders To Boycott Chinas 2022 Olympics

ಚೀನಾದಲ್ಲಿ ನಡೆಯುತ್ತಿರುವ ನರಮೇಧ ಬೆಳಕಿಗೆ ಬಂದ ಬಳಿಕವೂ ಚೀನಾಕ್ಕೆ ತೆರಳಿ ಅಲ್ಲಿನ ಒಲಿಂಪಿಕ್ಸ್‌ ಮೊದಲಾದ ಕಾರ್ಯಕ್ರಮಕ್ಕೆ ಸಾಕ್ಷಿಯಾದರೆ, ವಿಶ್ವದ ಬೇರೆ ಸ್ಥಳದಲ್ಲಿ ನಡೆಯುವ ಮಾನವ ಹಕ್ಕುಗಳ ಉಲ್ಲಂಘನೆಯನ್ನು ಪ್ರಶ್ನಿಸಲು ನಿಮಗೆ ಯಾವ ನೈತಿಕ ಅಧಿಕಾರವಿದೆ? ಎಂದು ಪ್ರಶ್ನಿಸಿದ್ದಾರೆ.

ಚೀನಾದ ಕ್ಸಿನ್‌ಜಿಯಾಂಗ್ ಪ್ರದೇಶದಲ್ಲಿ ಕನಿಷ್ಠ 1 ಮಿಲಿಯನ್ ಉಯಿಘರ್‌ಗಳು ಮತ್ತು ಇತರ ಮುಸ್ಲಿಮರನ್ನು ಬಂಧಿಸಲಾಗಿದೆ ಎಂದು ವಿಶ್ವಸಂಸ್ಥೆಯ ಸ್ವತಂತ್ರ ಸಮಿತಿ 2018 ರಲ್ಲಿ ತಿಳಿಸಿದೆ. ಆದರೆ ಈ ನಿಂದನೆ ಮತ್ತು ನರಮೇಧ ಆರೋಪವನ್ನು ಚೀನಾ ಸರ್ಕಾರ ತಿರಸ್ಕರಿಸಿದೆ.

ಒಲಿಂಪಿಕ್ಸ್‌ ವಿಚಾರದಲ್ಲಿ ಚೀನಾದ ದೇಶೀಯ ವ್ಯವಹಾರಗಳಲ್ಲಿ ಹಸ್ತಕ್ಷೇಪ ಮಾಡುವ ಯುಎಸ್‌ನ ಪ್ರಯತ್ನವು ವಿಫಲವಾಗಲಿದೆ ಎಂದು ಚೀನಾದ ರಾಯಭಾರ ಕಚೇರಿಯ ವಕ್ತಾರ ಲಿಯು ಪೆಂಗ್ಯು ಹೇಳಿದ್ದಾರೆ. "ಕೆಲವು ಯು.ಎಸ್. ರಾಜಕಾರಣಿಗಳಿಗೆ 'ನೈತಿಕ ಅಧಿಕಾರ' ಇದೆ ಎಂದು ಹೇಗೆ ಭಾವಿಸಿದ್ದಾರೆ ಎಂದು ನನಗೆ ಆಶ್ಚರ್ಯವಾಗುತ್ತದೆ. ಚೀನಾದ ವಿರುದ್ದ ಯಾವುದೇ ಆಧಾರರಹಿತ ಟೀಕೆಗಳನ್ನು ಮಾಡಲು ಯಾವುದೇ ಸಾಧ್ಯವಿಲ್ಲ ಎಂದು ಹೇಳಿದ್ದಾರೆ.

ಇನ್ನು ವಿಚಾರಣೆಯ ನೇತೃತ್ವ ವಹಿಸಿದ್ದ ರಿಪಬ್ಲಿಕನ್ ಕಾಂಗ್ರೆಸಿಗ ಕ್ರಿಸ್ ಸ್ಮಿತ್, ಸಂಸತ್ತಿನಲ್ಲಿ ಸಾಕ್ಷ್ಯ ಹೇಳಲು ನ್ಯಾನ್ಸಿ ಅವರನ್ನು ಕರೆಸಿಕೊಳ್ಳಬೇಕು ಮತ್ತು ಅವರ ಸಾಕ್ಷಿಯನ್ನು ಲೆಕ್ಕಕ್ಕೆ ತೆಗೆದುಕೊಳ್ಳಬೇಕು ಎಂದು ಹೇಳಿದ್ದಾರೆ. ದೊಡ್ಡ ವ್ಯಾಪಾರಸ್ಥರು ಸಾಕಷ್ಟು ಹಣವನ್ನು ಸಂಪಾದಿಸಲು ಬಯಸುತ್ತಾರೆ. ಅವರಿಗೆ ಈ ಒಲಿಂಪಿಕ್ಸ್‌ ಆಯೋಜಿಸಿರುವ ರಾಷ್ಟ್ರವು ಯಾವ ಕ್ರೂರ ಹತ್ಯಾಕಾಂಡವನ್ನು ಮಾಡುತ್ತಿದೆ ಎಂಬುದು ಮುಖ್ಯವಲ್ಲ ಎಂದು ಹೇಳಿದ್ದಾರೆ.

ಇನ್ನು ಯು.ಎಸ್. ಒಲಿಂಪಿಕ್ ಮತ್ತು ಪ್ಯಾರಾಲಿಂಪಿಕ್ ಸಮಿತಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಸಾರಾ ಹಿರ್ಷ್ಲ್ಯಾಂಡ್, ಉಯಿಘರ್ ಜನಾಂಗದ ಮೇಲಿನ ದಬ್ಬಾಳಿಕೆಗೆ ಕಳವಳ ವ್ಯಕ್ತಪಡಿಸಿದ್ದಾರೆ. ಆದರೆ ಈ ಕಾರಣದಿಂದಾಗಿ ಕ್ರೀಡಾಕೂಟವನ್ನು ಬಹಿಷ್ಕರಿಸುವುದು ಸರಿಯಲ್ಲ, ಅದು ಖಂಡಿತವಾಗಿಯೂ ಉತ್ತರವಲ್ಲ ಎಂದು ಹೇಳಿದ್ದಾರೆ.

English summary
U.S. House of Representatives Speaker Nancy Pelosi Calls US, World Leaders To Boycott China's 2022 Olympics.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X