Get Updates
Get notified of breaking news, exclusive insights, and must-see stories!

''ಹಿಂಸಾಚಾರವನ್ನು ಎಂದಿಗೂ ಸಹಿಸುವುದಿಲ್ಲ'': ಮೆಲಾನಿಯಾ ಟ್ರಂಪ್ ವಿದಾಯದ ಭಾಷಣ

ವಾಷಿಂಗ್ಟನ್‌, ಜನವರಿ 19: ಅಮೆರಿಕಾ ಪಾರ್ಲಿಮೆಂಟ್ ಆವರಣದಲ್ಲಿ ನಡೆದ ಹಿಂಸಾಚಾರವನ್ನು ಅಮೆರಿಕಾದ ಪ್ರಥಮ ಮಹಿಳೆ ಮೆಲಾನಿಯಾ ಟ್ರಂಪ್ ತಮ್ಮ ವಿದಾಯದ ಭಾಷಣದಲ್ಲಿ ಖಂಡಿಸಿದ್ದಾರೆ.

ಅಮೆರಿಕಾದ ಪ್ರಥಮ ಮಹಿಳೆಯಾಗಿ ಕೊನೆಯ ಬಾರಿಗೆ ಮಾತನಾಡಿದ ಮೆಲಾನಿಯಾ ಟ್ರಂಪ್, ಹಿಂಸಾಚಾರವನ್ನು ನಾವು ಎಂದಿಗೂ ಸಮರ್ಥಿಸಲಾಗುವುದಿಲ್ಲ ಎಂದು ತಮ್ಮ ವೀಡಿಯೋ ಸಂದೇಶದಲ್ಲಿ ತಿಳಿಸಿದ್ದಾರೆ.

''ನೀವು ಮಾಡುವ ಎಲ್ಲದರ ಬಗ್ಗೆ ಆಸಕ್ತಿ ಹೊಂದಿರಿ, ಆದರೆ ಹಿಂಸೆ ಯಾವುದಕ್ಕೂ ಉತ್ತರವಲ್ಲ ಮತ್ತು ಅದನ್ನು ಎಂದಿಗೂ ಸಮರ್ಥಿಸಲಾಗುವುದಿಲ್ಲ ಎಂದು ಯಾವಾಗಲೂ ನೆನಪಿಡಿ'' ಎಂದು ಮೆಲಾನಿಯಾ ಹೇಳಿದ್ದಾರೆ.

ಆದಾಗ್ಯೂ, ಮೆಲಾನಿಯಾ ಟ್ರಂಪ್ ಸಂಸತ್ ಭವನದಲ್ಲಿ ನಡೆದ ಹಿಂಸಾಚಾರದ ಒಂದು ವಾರಕ್ಕೂ ಹೆಚ್ಚು ದಿನದ ನಂತರ ಪ್ರತಿಕ್ರಿಯಿಸಿದರು. ಪತಿ ಡೊನಾಲ್ಡ್ ಟ್ರಂಪ್ ಅವರ ಬೆಂಬಲಿಗರು ನಡೆಸಿದ ಕೊಲೆ ಹಿಂಸಾಚಾರದಿಂದ ತಾನು ನಿರಾಶೆಗೊಂಡಿದ್ದೇನೆ ಮತ್ತು ಮಾನಸಿಕ ಗಾಯಗೊಂಡಿದ್ದೇನೆ ಎಂದು ಮೆಲಾನಿಯಾ ಹೇಳಿದ್ದಾರೆ. ಇಷ್ಟಾದರೂ ಡೊನಾಲ್ಡ್‌ ಟ್ರಂಪ್ ಪ್ರಚೋದನಾಕಾರಿ ಭಾಷಣದ ಬಗ್ಗೆ ಎಲ್ಲೂ ಉಲ್ಲೇಖಿಸಿಲ್ಲ.

Melania Trump Farewell Video: Melania Says be Passionate But Not Violent

ಕೋವಿಡ್-19 ಸಾಂಕ್ರಾಮಿಕದ ಮಧ್ಯೆ ಅಮೆರಿಕಾದಲ್ಲಿ ಲಕ್ಷಾಂತರ ಜನರು ಸಾವನ್ನಪ್ಪಿರುವ ಬಗ್ಗೆ ಕಳವಳ ವ್ಯಕ್ತಪಡಿಸಿದ ಮೆಲಾನಿಯಾ ಟ್ರಂಪ್, ಜನರು ಸುರಕ್ಷಿತವಾಗಿರಲು ಮತ್ತು ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳುವಂತೆ ಮನವಿ ಮಾಡಿದ್ದಾರೆ. ಕೊರೊನಾ ಲಸಿಕೆ ನೀಡುತ್ತಿರುವುದರಿಂದ ಈಗ ಹೆಚ್ಚಿನ ತೊಂದರೆ ಇಲ್ಲ ಎಂದು ಅವರು ಹೇಳಿದರು.

ಕೋವಿಡ್-19 ಸಂತ್ರಸ್ತರ ಕುಟುಂಬಗಳಿಗೆ ಮೆಲಾನಿಯಾ ಟ್ರಂಪ್ ಸಂತಾಪ ವ್ಯಕ್ತಪಡಿಸಿದರು ಮತ್ತು ದಾದಿಯರು, ವೈದ್ಯರು, ಆರೋಗ್ಯ ವೃತ್ತಿಪರರು, ಉತ್ಪಾದನಾ ಕಾರ್ಮಿಕರು, ಟ್ರಕ್ ಚಾಲಕರು ಮತ್ತು ಸಾಂಕ್ರಾಮಿಕ ಸಮಯದಲ್ಲಿ ಜೀವ ಉಳಿಸಲು ಕೆಲಸ ಮಾಡುತ್ತಿರುವ ಅನೇಕರಿಗೆ ಧನ್ಯವಾದಗಳನ್ನು ಅರ್ಪಿಸಿದರು.

ತನ್ನ ವಿದಾಯ ಭಾಷಣವನ್ನು ಕೊನೆಗೊಳಿಸಿದ ಮೆಲಾನಿಯಾ ಟ್ರಂಪ್, ''ನನ್ನ ವಿದಾಯದಲ್ಲಿ ಪ್ರಥಮ ಮಹಿಳೆ ಪಾತ್ರದ ಬಗ್ಗೆ ನಾನು ಹೇಳಲು ಬಯಸುತ್ತೇನೆ, ಪ್ರತಿಯೊಬ್ಬ ಅಮೆರಿಕನ್ನರು ತಮ್ಮ ಮಕ್ಕಳಿಗೆ ಕಲಿಸಲು ತಮ್ಮನ್ನು ಬೆಂಬಲಿಸಲಿ ಎಂಬುದು ನನ್ನ ನಿಜವಾದ ಆಶಯ. ಮಕ್ಕಳಿಗೆ ಶಿಕ್ಷಣ ನೀಡುವಂತೆ ಪೋಷಕರಿಗೆ ನಾನು ಕೇಳಲು ಬಯಸುತ್ತೇನೆ. ಈ ದೇಶವನ್ನು ಸ್ವತಂತ್ರವಾಗಿಸಲು ಶ್ರಮಿಸಿದ ಮತ್ತು ತ್ಯಾಗ ಮಾಡಿದ ಈ ದೇಶದ ನಿಸ್ವಾರ್ಥ ವೀರರ ಬಗ್ಗೆ ಪೋಷಕರು ತಮ್ಮ ಮಕ್ಕಳಿಗೆ ಹೇಳಬೇಕೆಂದು ನಾನು ಬಯಸುತ್ತೇನೆ. '' ಎಂದು ಮೆಲಾನಿಯಾ ತಮ್ಮ ವಿದಾಯದ ಮಾತುಗಳನ್ನು ಕೊನೆಗೊಳಿಸಿದರು.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+