ಕನ್ನಡಿಗ ವಿವೇಕ್ ಮೂರ್ತಿಗೆ ಅಮೆರಿಕ ಸರ್ಜನ್ ಜನರಲ್ ಹುದ್ದೆ

ವಾಷಿಂಗ್ಟನ್, ಡಿಸೆಂಬರ್ 7: ರಾಜ್ಯದ ಮಂಡ್ಯ ಜಿಲ್ಲೆಯ ಮೂಲದವರಾದ ಡಾ. ವಿವೇಕ್ ಮೂರ್ತಿ ಅವರನ್ನು ಅಮೆರಿಕದ ಸರ್ಜನ್ ಜನರಲ್ ಹುದ್ದೆಗೆ ಮರಳಿ ನಾಮನಿರ್ದೇಶನ ಮಾಡಲಾಗಿದೆ. ಅಧ್ಯಕ್ಷರಾಗಿ ಚುನಾಯಿತರಾಗಿರುವ ಜೋ ಬೈಡನ್ ಅವರು ತಮ್ಮ ಆಡಳಿತದಲ್ಲಿ ಆರೋಗ್ಯ ವಿಭಾಗವನ್ನು ನಿರ್ವಹಿಸುವ ತಂಡವನ್ನು ಕಟ್ಟಿದ್ದಾರೆ. ಬರಾಕ್ ಒಬಾಮ ಅವರ ಆಡಳಿತದಲ್ಲಿ ಅಮೆರಿಕದ ಸರ್ಜನ್ ಜನರಲ್ ಆಗಿ ಕಾರ್ಯನಿರ್ವಹಿಸಿದ್ದ ಡಾ. ವಿವೇಕ್ ಮೂರ್ತಿ ಅವರಿಗೆ ನಿರೀಕ್ಷೆಯಂತೆ ಅದೇ ಹುದ್ದೆಯನ್ನು ನೀಡಿದ್ದಾರೆ.

2014 ರಿಂದ 2017ರ ಅವಧಿಯಲ್ಲಿ ತಾವು ನಿಭಾಯಿಸಿದ್ದ ಹುದ್ದೆಗೆ ವಿವೇಕ್ ಮೂರ್ತಿ ಮರಳುತ್ತಿದ್ದು, ಅವರಿಗೆ ಹೆಚ್ಚು ವಿಸ್ತೃತ ತಂಡ ಸಿಗುವ ಸಾಧ್ಯತೆ ಇದೆ. ಕೊರೊನಾ ವೈರಸ್ ಪಿಡುಗನ್ನು ನಿಯಂತ್ರಿಸುವ ಮಹತ್ವದ ಜವಾಬ್ದಾರಿ ಅವರ ಮೇಲಿದೆ. ಹೀಗಾಗಿ ಒಬಾಮ ಆಡಳಿತದಲ್ಲಿದ್ದ ಆರೋಗ್ಯ ತಂಡಕ್ಕಿಂತ ಹೆಚ್ಚಿನ ಸಹಾಯಕರು ವಿವೇಕ್ ಅವರ ತಂಡದಲ್ಲಿ ಇರಲಿದ್ದಾರೆ.

ಅಮೆರಿಕದಲ್ಲಿ ಸುಮಾರು 2.82 ಲಕ್ಷ ಜನರ ಸಾವಿಗೆ ಕಾರಣವಾಗಿರುವ ಕೊರೊನಾ ವೈರಸ್ ಪಿಡುಗನ್ನು ನಿಯಂತ್ರಿಸುವ ಸಂಬಂಧ ಬೈಡನ್ ಅವರ ಆಡಳಿತದಲ್ಲಿ ವಿವೇಕ್ ಮೂರ್ತಿ ಅವರು ಬಹಳ ಪ್ರಮುಖದ ಪಾತ್ರ ವಹಿಸಲಿದ್ದಾರೆ ಎಂಬುದನ್ನು ಸೆನೆಟ್ ಖಚಿಪಡಿಸಿದೆ.

 Kannadiga Dr Vivek Murthy Nominated As US Surgeon General BY Joe Biden

2014ರಲ್ಲಿ ಸರ್ಜನ್ ಜನರಲ್ ಆಗಿ ನೇಮಕಗೊಂಡ ಸಂದರ್ಭದಲ್ಲಿ ವಿವೇಕ್ ಮೂರ್ತಿ ಅವರಿಗೆ ಸೆನೆಟ್‌ನಲ್ಲಿ ರಿಪಬ್ಲಿಕನ್ನರಿಂದ ತೀವ್ರ ವಿರೋಧ ವ್ಯಕ್ತವಾಗಿತ್ತು. ಆದರೆ ಬರಾಕ್ ಒಬಾಮ ತಮ್ಮ ಪಟ್ಟು ಸಡಿಲಿಸಿರಲಿಲ್ಲ. ಈ ಬಾರಿ ಕೂಡ ಸೆನೆಟ್‌ನಲ್ಲಿ ರಿಪಬ್ಲಿಕನ್ನರು ಪ್ರಾಬಲ್ಯ ಉಳಿಸಿಕೊಂಡರೆ ವಿವೇಕ್ ಅವರು ಪ್ರತಿರೋಧ ಎದುರಿಸುವ ಸಾಧ್ಯತೆ ಇದೆ.

ಒಬಾಮ ಆಡಳಿತದಲ್ಲಿ ಸರ್ಜನ್ ಜನರಲ್ ಆಗಿ ವಿವೇಕ್ ಅವರು ಎಬೋಲಾ ಮತ್ತು ಝೈಕಾ ವೈರಸ್‌ಗಳ ರಾಷ್ಟ್ರೀಯ ಬಿಕ್ಕಟ್ಟು ಹಾಗೂ ಇತರೆ ಆರೋಗ್ಯ ಸಮಸ್ಯೆಗಳನ್ನು ಸಮರ್ಥವಾಗಿ ಎದುರಿಸುವಲ್ಲಿ ಅಮೆರಿಕಕ್ಕೆ ನೆರವಾಗಿದ್ದರು.

ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ಜೋ ಬೈಡನ್ ಅವರ ಡೆಮಾಕ್ರಟಿಕ್ ತಂಡದ ಪ್ರಚಾರ ಕಾರ್ಯದಲ್ಲಿ ಹಿರಿಯ ಆರೋಗ್ಯ ಸಲಹೆಗಾರರಾಗಿ ವಿವೇಕ್ ಮೂರ್ತಿ ಪ್ರಮುಖ ಪಾತ್ರ ವಹಿಸಿದ್ದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+