ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಜೋ ಬೈಡೆನ್ ಗೆದ್ರೂ ''ಕಮ್ಯೂನಿಸ್ಟ್'' ಕಮಲಾ ಅಧ್ಯಕ್ಷೆಯಾಗ್ತಾರೆ: ಟ್ರಂಪ್

|
Google Oneindia Kannada News

ವಾಷಿಂಗ್ಟನ್, ಅ. 9: ಅಮೆರಿಕದ ಮೊದಲ ಕಪ್ಪು ಮಹಿಳಾ ಉಪಾಧ್ಯಕ್ಷ ಅಭ್ಯರ್ಥಿಯಾಗಿ ಇತಿಹಾಸ ನಿರ್ಮಿಸಿರುವ ಕಮಲಾ ಹ್ಯಾರೀಸ್ ವಿರುದ್ಧ ಅಧ್ಯಕ್ಷ, ರಿಪಬ್ಲಿಕನ್ ಅಭ್ಯರ್ಥಿ ಡೊನಾಲ್ಡ್ ಟ್ರಂಪ್ ವಾಗ್ದಾಳಿ ಮುಂದುವರೆಸಿದ್ದಾರೆ.

ಯುಎಸ್ ಅಧ್ಯಕ್ಷೀಯ ಚುನಾವಣೆಯಲ್ಲಿ ಒಂದು ವೇಳೆ ಡೆಮಾಕ್ರಟಿಕ್‌ ಪಕ್ಷದ ಜೋ ಬೈಡನ್‌ ಗೆದ್ದರೂ ಒಂದು ತಿಂಗಳಲ್ಲಿ ಉಪಾಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿರುವ ಕಮಲಾ ಹ್ಯಾರಿಸ್ ಅವರು ತಮ್ಮ ಕಮ್ಯೂನಿಸ್ಟ್ ಬುದ್ಧಿಯಿಂದ ಅಧ್ಯಕ್ಷ ಸ್ಥಾನಕ್ಕೇರಲಿದ್ದಾರೆ ಎಂದು ಡೊನಾಲ್ಡ್ ಟ್ರಂಪ್ ಅಭಿಪ್ರಾಯಪಟ್ಟಿದ್ದಾರೆ.

ಕಮಲಾ ಹ್ಯಾರಿಸ್‌ರನ್ನು 'ರಾಕ್ಷಸಿ' ಎಂದು ಉದ್ಘರಿಸಿದ ಡೊನಾಲ್ಡ್ ಟ್ರಂಪ್ಕಮಲಾ ಹ್ಯಾರಿಸ್‌ರನ್ನು 'ರಾಕ್ಷಸಿ' ಎಂದು ಉದ್ಘರಿಸಿದ ಡೊನಾಲ್ಡ್ ಟ್ರಂಪ್

ಅಮೆರಿಕ ಉಪಾಧ್ಯಕ್ಷರ ಸ್ಥಾನದ ಅಭ್ಯರ್ಥಿ ಡೆಮಾಕ್ರಟಿಕ್‌ ಪಕ್ಷದ ಕಮಲಾ ಹ್ಯಾರಿಸ್‌ ಮತ್ತು ರಿಪಬ್ಲಿಕನ್‌ ಪಕ್ಷದ ಮೈಕ್‌ ಪೆನ್ಸ್‌ ನಡುವೆ ಚರ್ಚೆಯಾದ ಬಳಿಕ ಟ್ರಂಪ್ ಅವರು ಈ ಬಗ್ಗೆ ಪ್ರತಿಕ್ರಿಯಿಸಿದ್ದಾರೆ.

Kamala Harris will be president in one month if Joe Biden wins: Donald Trump

ಕೊರೊನಾ ವಿರುದ್ಧದ ಹೋರಾಟಕ್ಕೆ ಸಾಕಷ್ಟು ಪ್ರಮಾಣದ ಲಸಿಕೆ ಲಭ್ಯವಾಗುವ ವಿಚಾರದಲ್ಲಿ ಟ್ರಂಪ್ ಹೇಳಿಕೆಗಳಿಗಿಂತ ತಾವು ವಿಜ್ಞಾನಿಗಳು ಹೇಳುವ ಮಾತುಗಳನ್ನು ಮಾತ್ರ ನಂಬುವುದಾಗಿ ಕಮಲಾ ಹೇಳಿದರು. ಟ್ರಂಪ್ ಈ ಹಿಂದೆ ಸಾಬೀತಾಗದ ಚಿಕಿತ್ಸೆಗಳ ಬಗ್ಗೆಯೇ ಮಾತನಾಡಿದ್ದರು ಎಂದು ಕಮಲಾ ಟೀಕಿಸಿದರು. 'ವೈದ್ಯರು ನಮಗೆ ಹೇಳಿದರೆ ಮಾತ್ರ ನಾವು ಅದನ್ನು ತೆಗೆದುಕೊಳ್ಳಬೇಕು ಎಂದು ಕಮಲಾ ಹೇಳಿದ್ದರು.

ಟ್ರಂಪ್‌ಗೆ ವ್ಯಾಕ್ಸಿನ್ ಶಾಕ್, 'ದೊಡ್ಡಣ್ಣ'ನಿಗೆ ಭಾರಿ ಮುಖಭಂಗ..?ಟ್ರಂಪ್‌ಗೆ ವ್ಯಾಕ್ಸಿನ್ ಶಾಕ್, 'ದೊಡ್ಡಣ್ಣ'ನಿಗೆ ಭಾರಿ ಮುಖಭಂಗ..?

ಇದಲ್ಲದೆ, ಎಚ್ 1 ಬಿವೀಸಾ, ನಿರುದ್ಯೋಗ ಸಮಸ್ಯೆ, ವಲಸೆ, ಗಡಿ ಭದ್ರತೆ, ಜನಾಂಗೀಯ ಆಕ್ರೋಶ ಮತ್ತು ಹವಾಮಾನ ಬದಲಾವಣೆಗಳ ಬಗ್ಗೆ ಕ್ರಮ ಜರುಗಿಸುವಲ್ಲಿ ಟ್ರಂಪ್ ಸರ್ಕಾರ ವಿಫಲವಾಗಿದೆ ಎಂದು ಕಮಲಾ ಹ್ಯಾರಿಸ್ ವಾಗ್ದಾಳಿ ಮಾಡಿದ್ದರು.

Kamala Harris will be president in one month if Joe Biden wins: Donald Trump

ಇದಕ್ಕೆ ಪ್ರತಿಯಾಗಿ ಟ್ರಂಪ್ ಮಾತನಾಡಿ, '' ಕಮಲಾ ಭಯಾನಕವಾಗಿ ವರ್ತಿಸುತ್ತಿದ್ದರು. ಆಕೆ ಕಮ್ಯುನಿಸ್ಟ್‌.ಸೆನೆಟರ್‌ ಬರ್ನಿ ಸ್ಯಾಂಡರ್ಸ್‌ರಂತೆ ಆಕೆ ಕೂಡ ಎಡಪಂಥದವರು. ನನ್ನ ಅಭಿಪ್ರಾಯದ ಪ್ರಕಾರ ಕಮ್ಯೂನಿಸ್ಟ್ ಅಧ್ಯಕ್ಷರನ್ನು ನೀವು ಆಯ್ಕೆ ಮಾಡಬೇಕಾಗುತ್ತದೆ. ಜೋ ಪಕ್ಕದಲ್ಲಿ ಕುಳಿತು ಆತನ ಕಡೆ ನೋಡಿದರೆ, ಅಧ್ಯಕ್ಷನಾದರೆ 2 ತಿಂಗಳು ಅಧಿಕಾರದಲ್ಲಿ ಆತ ಉಳಿಯಲ್ಲ ಎಂದೆನಿಸಿತು ಎಂದು ಟ್ರಂಪ್‌ ಫಾಕ್ಸ್‌ ಬಿಸಿನೆಸ್ ನ್ಯೂಸ್‌ ವಾಹಿನಿಗೆ ನೀಡಿದ ಸಂದರ್ಶನದಲ್ಲಿ ಹೇಳಿದರು.

ಅಮೆರಿಕ ಅಧ್ಯಕ್ಷರ ಆಯ್ಕೆಗೆ ದಿನಗಣನೆ, 244 ವರ್ಷಗಳ ಮಹಾನ್ ಇತಿಹಾಸಅಮೆರಿಕ ಅಧ್ಯಕ್ಷರ ಆಯ್ಕೆಗೆ ದಿನಗಣನೆ, 244 ವರ್ಷಗಳ ಮಹಾನ್ ಇತಿಹಾಸ

Recommended Video

RR Nagar ByElection : ಕುಮಾರಣ್ಣ ಸ್ಪಷ್ಟವಾಗಿ ಹೇಳಿದರು | Oneindia Kannada

''ಸಮಾಜವಾದವನ್ನು ಮೀರಿದವರು ಅವರು(ಕಮಲಾ), ಕೊಲೆಗಾರರು, ಅತ್ಯಾಚಾರಿಗಳು ನಮ್ಮ ದೇಶಕ್ಕೆ ಬಂದು ಸೇರಿಕೊಳ್ಳಲು ಅವರು ಗಡಿಗಳನ್ನು ತೆರೆಯಲಿದ್ದಾರೆ, ಆಕೆ ಕಮ್ಯುನಿಸ್ಟ್. ಆಕೆ ಸಮಾಜವಾದಿಯಲ್ಲ'' ಮತ್ತೊಮ್ಮೆ ಕಮಲಾ ವಿರುದ್ಧ ಟ್ರಂಪ್ ವಾಗ್ದಾಳಿ ನಡೆಸಿದರು.

English summary
US President Donald Trump on Thursday said that Democratic Party's vice-presidential candidate Kamala Harris would replace Joe Biden as president within a month if he were elected.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X