ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬೈಡನ್‌ಗೆ ಅನಾರೋಗ್ಯ; ಹಂಗಾಮಿ ಅಧ್ಯಕ್ಷ ಸ್ಥಾನಕ್ಕೇರಿದ ಕಮಲಾ ಹ್ಯಾರೀಸ್

|
Google Oneindia Kannada News

ವಾಷಿಂಗ್ಟನ್, ನವೆಂಬರ್ 20: ಯುಎಸ್ ಅಧ್ಯಕ್ಷ ಜೋ ಬೈಡನ್ ಅವರು ಕೊಲೊನೋಸ್ಕೋಪಿಗಾಗಿ ಅರಿವಳಿಕೆಗೆ ಒಳಗಾಗುತ್ತಿದ್ದಾರೆ. ಹೀಗಾಗಿ, ಈ ಸಂದರ್ಭದಲ್ಲಿ ಅಧ್ಯಕ್ಷೀಯ ಅಧಿಕಾರವನ್ನು ಉಪಾಧ್ಯಕ್ಷೆ ಕಮಲಾ ಹ್ಯಾರಿಸ್‌ಗೆ ವರ್ಗಾಯಿಸಲಾಗುವುದು ಎಂದು ಶ್ವೇತಭವನವು ಶುಕ್ರವಾರ ಘೋಷಿಸಿದೆ. ಹಂಗಾಮಿ ಅಧ್ಯಕ್ಷೆಯಾಗಿ ಕಮಲಾ ಕಾರ್ಯ ನಿರ್ವಹಿಸಲಿದ್ದಾರೆ.

"ಅಧ್ಯಕ್ಷ ಜಾರ್ಜ್ W. ಬುಷ್ ಅವರು 2002 ಮತ್ತು 2007 ರಲ್ಲಿ ಇದೇ ವಿಧಾನವನ್ನು ಅನುಸರಿದ್ದರು ಮತ್ತು ಸಂವಿಧಾನದಲ್ಲಿ ನಿಗದಿಪಡಿಸಿದ ಪ್ರಕ್ರಿಯೆಯನ್ನು ಪಾಲಿಸಿದ್ದರು. ಅಧ್ಯಕ್ಷ ಬೈಡೆನ್ ಅವರು ಅರಿವಳಿಕೆಗೆ ಒಳಗಾದಾಗ ಅಲ್ಪಾವಧಿಗೆ ಉಪಾಧ್ಯಕ್ಷರಿಗೆ ಅಧಿಕಾರವನ್ನು ವರ್ಗಾಯಿಸಲಾಗುತ್ತದೆ ," ಎಂದು ಶ್ವೇತಭವನದ ಪತ್ರಿಕಾ ಕಾರ್ಯದರ್ಶಿ ಜೆನ್ ಪ್ಸಾಕಿ ಹೇಳಿಕೆಯಲ್ಲಿ ತಿಳಿಸಿದ್ದಾರೆ.

"ಉಪಾಧ್ಯಕ್ಷರು ಈ ಸಮಯದಲ್ಲಿ ವೆಸ್ಟ್ ವಿಂಗ್‌ನಲ್ಲಿರುವ ಅವರ ಕಚೇರಿಯಿಂದ ಕೆಲಸ ಮಾಡುತ್ತಾರೆ" ಎಂದು ಅವರು ಹೇಳಿದರು.

ಮೊಟ್ಟ ಮೊದಲ ಮಹಿಳಾ ಹಂಗಾಮಿ ಅಧ್ಯಕ್ಷೆ

ಯುಎಸ್ ಸಂವಿಧಾನದ ಪ್ರಕಾರ, ಸೆನೆಟ್‌ನ ಅಧ್ಯಕ್ಷ ಪ್ರೊ ಟೆಂಪೋರ್ ಮತ್ತು ಹೌಸ್ ಆಫ್ ರೆಪ್ರೆಸೆಂಟೇಟಿವ್ಸ್ ಸ್ಪೀಕರ್ ಅವರಿಗೆ ಅಧ್ಯಕ್ಷ ಬೈಡನ್ ಅವರು ಈ ಬಗ್ಗೆ ತಿಳಿಸಬೇಕಾಗುತ್ತದೆ. ಚಿಕಿತ್ಸೆಗೆ ಒಳಪಡುತ್ತಿದ್ದು, ಅರಿವಳಿಕೆ ಅಡಿಯಲ್ಲಿರುವ ತಮ್ಮ ಕರ್ತವ್ಯಗಳನ್ನು ನಿರ್ವಹಿಸಲು ಸಾಧ್ಯವಿಲ್ಲ ಎಂದು ಪತ್ರದಲ್ಲಿ ಬರೆದು ಅಧಿಕೃತ ಮುದ್ರೆಯೊಂದಿಗೆ ಸಹಿ ಹಾಕಬೇಕಾಗುತ್ತದೆ.

ಕಾರ್ಯವಿಧಾನವು ಮುಗಿದ ನಂತರ ಬಿಡೆನ್ ಅವರಿಗೆ ಮತ್ತೊಂದು ಪತ್ರವನ್ನು ಕಳುಹಿಸುವವರೆಗೆ ಮತ್ತು ಅವರು ತಮ್ಮ ಕರ್ತವ್ಯಗಳನ್ನು ಪುನರಾರಂಭಿಸುವವರೆಗೂ ಕಮಲಾ ಹ್ಯಾರಿಸ್ ಅವರನ್ನು ಕಾರ್ಯಾಧ್ಯಕ್ಷರನ್ನಾಗಿ ಕಾರ್ಯ ನಿರ್ವಹಿಸಲು ಅಧಿಕಾರ ನೀಡುತ್ತದೆ.

US Vice President Kamala Harris will be the first woman to hold the reins of presidential power

ಹ್ಯಾರಿಸ್ ಹಂಗಾಮಿ ಅಧ್ಯಕ್ಷರಾಗಿ ಕಾರ್ಯನಿರ್ವಹಿಸುವ ಅಲ್ಪಾವಧಿಯಲ್ಲಿ, ಅವರು ಯುನೈಟೆಡ್ ಸ್ಟೇಟ್ಸ್‌ನ ಇತಿಹಾಸದಲ್ಲಿ ಅಧ್ಯಕ್ಷೀಯ ಅಧಿಕಾರವನ್ನು ಹೊಂದಲಿರುವಾ ಮೊದಲ ಮಹಿಳೆಯಾಗಿದ್ದಾರೆ.

ಅಮೆರಿಕದ ಅಧ್ಯಕ್ಷರಲ್ಲೇ ಬೈಡನ್ ಹಿರಿಯರು

ವಾಷಿಂಗ್ಟನ್ ಡಿಸಿಯ ಹೊರವಲಯದಲ್ಲಿರುವ ವಾಲ್ಟರ್ ರೀಡ್ ರಾಷ್ಟ್ರೀಯ ಮಿಲಿಟರಿ ವೈದ್ಯಕೀಯ ಕೇಂದ್ರದಲ್ಲಿ ಚಿಕಿತ್ಸೆಗಾಗಿ ಯುಎಸ್ ಅಧ್ಯಕ್ಷರು ಶುಕ್ರವಾರ ತೆರಳಿದರು.

ಶನಿವಾರದಂದು 79 ವರ್ಷ ವಯಸ್ಸಿನ ಬೈಡನ್ ಅವರು ಯುಎಸ್ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡ ಅತ್ಯಂತ ಹಿರಿಯ ವ್ಯಕ್ತಿ ಎನಿಸಿಕೊಳ್ಳಲಿದ್ದಾರೆ.

ಅವರ ವಯಸ್ಸು ಅವರ ಆರೋಗ್ಯದ ಬಗ್ಗೆ ಕಳವಳವನ್ನು ಹುಟ್ಟುಹಾಕಿದ್ದರೂ, ಡಿಸೆಂಬರ್ 2019 ರಲ್ಲಿ ಬೀಡನ್ ಅವರ ಕೊನೆಯ ಸಂಪೂರ್ಣ ಆರೋಗ್ಯ ಪರೀಕ್ಷೆಯ ನಂತರ "ಆರೋಗ್ಯವಂತ, ಹುರುಪಿನ" ಮತ್ತು "ಅಧ್ಯಕ್ಷತೆಯ ಕರ್ತವ್ಯಗಳನ್ನು ಯಶಸ್ವಿಯಾಗಿ ಕಾರ್ಯಗತಗೊಳಿಸಲು ಯೋಗ್ಯರಾಗಿದ್ದಾರೆ" ಎಂದು ಆ ಸಮಯದಲ್ಲಿ ವೈದ್ಯರು ವರದಿ ನೀಡಿದ್ದರು.

ಶುಕ್ರವಾರ ಮಧ್ಯಾಹ್ನದ ಕಚೇರಿ ಕೆಲಸ ಪೂರೈಸಿದ ನಂತರ, ಅಧ್ಯಕ್ಷ ಬೈಡೆನ್ ರಾಷ್ಟ್ರೀಯ ಥ್ಯಾಂಕ್ಸ್ ಕೀವಿಂಗ್ ಟರ್ಕಿಯ ವಾರ್ಷಿಕ "ಕ್ಷಮಾದಾನ" ದಲ್ಲಿ ಭಾಗಿಯಾಗುವ ಕಾರ್ಯಕ್ರಮ ನಿಗದಿಯಾಗಿದೆ. (AP, Reuters)

English summary
US President Joe Biden is undergoing a routine colonoscopy and will briefly transfer power to Vice President Kamala Harris during the procedure — making her the first woman to hold presidential power in US history.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X