ಅಮೆರಿಕದ ಉನ್ನತ ಹುದ್ದೆಗೆ ಗೌತಮ್ ರಾಘವನ್‌ರನ್ನು ನೇಮಕ ಮಾಡಿದ ಜೋ ಬೈಡನ್
ವಾಷಿಂಗ್ಟನ್, ಡಿಸೆಂಬರ್ 11: ಅಮೆರಿಕ ಸಂಯುಕ್ತ ಸಂಸ್ಥಾನದ ಅಧ್ಯಕ್ಷ ಜೋ ಬೈಡನ್ ಸರ್ಕಾರದ ಹಲವು ಉನ್ನತ ಹುದ್ದೆಗಳಲ್ಲಿ ಭಾರತೀಯ ಮೂಲದ ಅಮೆರಿಕನ್ನರಿಗೆ ಸ್ಥಾನ ಸಿಗುತ್ತಿದೆ. ಅಮೆರಿಕ ಆಡಳಿತದ ಪ್ರಮುಖ ಹುದ್ದೆಗಳಲ್ಲಿ ಭಾರತೀಯ ಮೂಲದ ವ್ಯಕ್ತಿಗಳು ಸ್ಥಾನ ಅಲಂಕರಿಸುತ್ತಿದ್ದಾರೆ.
ಬಹುಮುಖ್ಯವಾಗಿ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್ ಕೂಡ ಭಾರತೀಯ ಮೂಲದವರೇ ಆಗಿದ್ದಾರೆ. ಹೀಗೆ ಉನ್ನತ ಹುದ್ದೆ ಅಲಂಕರಿಸಿದವರಲ್ಲಿ ಒಬ್ಬರಾಗಿದ್ದ ಭಾರತ ಮೂಲದ ಗೌತಮ್ ರಾಘವನ್‌ರನ್ನು ಇದೀಗ ಒಂದು ಹೊಸ ಮತ್ತು ಬಹುಮುಖ್ಯ ಹುದ್ದೆಗೆ ನೇಮಕ ಮಾಡುವ ಮೂಲಕ ಅವರಿಗೆ ಬಡ್ತಿ ನೀಡಲಾಗಿದೆ.
ವೈಟ್‌ಹೌಸ್‌ನ ಅಧ್ಯಕ್ಷೀಯ ಸಿಬ್ಬಂದಿಯ ಮುಖ್ಯಸ್ಥರನ್ನಾಗಿ ಗೌತಮ್ ರಾಘವನ್ ಅವರ ನೇಮಕಾತಿಯನ್ನು ಅಧ್ಯಕ್ಷ ಜೋ ಬೈಡನ್ ಘೋಷಿಸಿದ್ದಾರೆ. ಈ ಮೊದಲು ವೈಟ್‌ಹೌಸ್‌ನ ಅಧ್ಯಕ್ಷೀಯ ಸಿಬ್ಬಂದಿ ಮುಖ್ಯಸ್ಥರಾಗಿದ್ದ ಕ್ಯಾಥಿ ರಸೆಲ್‌ರನ್ನು ಯುನಿಸೆಫ್ನ ಮುಂದಿನ ಮುಖ್ಯ ಕಾರ್ಯನಿರ್ವಾಹಕರನ್ನಾಗಿ ನೇಮಕ ಮಾಡಿ ವಿಶ್ವಸಂಸ್ಥೆ ಕಾರ್ಯದರ್ಶಿ ಅಂಟೋನಿಯೋ ಗುಟೆರೆಸ್ ಅವರು ಆದೇಶ ಹೊರಡಿಸಿದ ಬೆನ್ನಲ್ಲೇ, ತೆರವಾದ ಸ್ಥಾನಕ್ಕೆ ಭಾರತೀಯ ಮೂಲದ ಗೌತಮ್ ರಾಘವನ್ ಆಯ್ಕೆ ಆಗಿದ್ದಾರೆ.

ಈ ಬಗ್ಗೆ ಅಧಿಕೃತ ಪ್ರಕಟಣೆ ಹೊರಡಿಸಿರುವ ಅಮೆರಿಕ ಅಧ್ಯಕ್ಷ ಜೋ ಬೈಡನ್, ಗೌತಮ್ ರಾಘವನ್ ಅವರು ಕ್ಯಾಥಿಯವರೊಂದಿಗೆ ಒಂದನೇ ದಿನದಿಂದಲೇ ಕೆಲಸ ಮಾಡುತ್ತಿದ್ದಾರೆ. ಅವರು ಇನ್ನು ಮುಂದೆ ಪಿಪಿಒ(Office of Presidential Personnel)ದ ಮುಂದಿನ ನಿರ್ದೇಶಕರಾಗಿ ಕೆಲಸ ಮಾಡಲಿದ್ದಾರೆ ಎಂದು ತಿಳಿಸಿದ್ದಾರೆ.
ಸಮರ್ಥ, ದಕ್ಷವಾಗಿ, ಪರಿಣಾಮಕಾರಿ ಮತ್ತು ವಿಶ್ವಾಸಾರ್ಹ ಕಾರ್ಯಪಡೆ ನಿರ್ಮಾಣದ ಕೆಲಸ ಮುಂದುವರಿಸಲು ಅವರಿಗೆ ಅನುವು ಮಾಡಿಕೊಡಲಾಗುವುದು ಎಂದಿದ್ದಾರೆ. ಅಂದಹಾಗೆ, ರಾಘವನ್ ಇಷ್ಟು ದಿನ ಅಧ್ಯಕ್ಷೀಯ ಸಿಬ್ಬಂದಿ ಕಚೇರಿಯ ಉಪ ನಿರ್ದೇಶಕ ಮತ್ತು ಅಮೆರಿಕ ಅಧ್ಯಕ್ಷರ ಉಪ ಸಹಾಯಕರಾಗಿ ಕೆಲಸ ಮಾಡುತ್ತಿದ್ದರು.
ಗೌತಮ್ ರಾಘವನ್ ಎಲ್ಜಿಬಿಟಿಕ್ಯೂ ಸಮುದಾಯಕ್ಕೆ ಸೇರಿದವರು
ಗೌತಮ್ ರಾಘವನ್ ಮೊದಲ ಪೀಳಿಗೆಯ ವಲಸಿಗರ ಸಾಲಿಗೆ ಸೇರಿದವರು. ಇವರು ಭಾರತದಲ್ಲಿಯೇ ಹುಟ್ಟಿದ್ದರೂ, ಬೆಳೆದಿದ್ದು ಯುಎಸ್ನ ಸಿಯಾಟಲ್‌ನಲ್ಲಿ. ಸ್ಟ್ಯಾಂಡ್ಫೋರ್ಡ್ ವಿಶ್ವವಿದ್ಯಾಲಯದಲ್ಲಿ ಪದವಿ ಪಡೆದಿದ್ದಾರೆ.
ಅಮೆರಿಕ ಅಧ್ಯಕ್ಷರ ಸ್ಥಾನ ಮತ್ತು ಅಧ್ಯಕ್ಷೀಯ ಸಿಬ್ಬಂದಿಯ ವೈಯಕ್ತಿಕ ನೋಟವನ್ನು ನೀಡುವ ವೆಸ್ಟ್ ವಿಂಗರ್ಸ್: ಸ್ಟೋರೀಸ್ ಫ್ರಾಂ ಡ್ರೀಂ ಚೀಸರ್ಸ್, ಚೇಂಜ್ ಮೇಕರ್ಸ್ ಆ್ಯಂಡ್ ಹೋಪ್ ಕ್ರಿಯೇಟರ್ಸ್ ಇನ್ಸೈಡ್ ದಿ ಒಬಾಮಾ ವೈಟ್‌ಹೌಸ್ ಎಂಬ ಪುಸ್ತಕದ ಸಂಪಾದಕರೂ ಆಗಿದ್ದಾರೆ.
ಇನ್ನೂ ಮುಖ್ಯವಾಗಿ ರಾಘವನ್ ಒಬ್ಬರು ಎಲ್ಜಿಬಿಟಿಕ್ಯೂ ಸಮುದಾಯದಕ್ಕೆ ಸೇರಿದವರಾಗಿದ್ದು, ಯುಎಸ್ನಲ್ಲಿ ಬರಾಕ್ ಒಬಾಮಾ ಅಧ್ಯಕ್ಷರಾಗಿದ್ದಾಗ, ಇವರು ಎಲ್ಜಿಬಿಟಿಕ್ಯೂ ಮತ್ತು ಏಷ್ಯನ್ ಅಮೆರಿಕನ್, ಫೆಸಿಪಿಕ್ ಐಲ್ಯಾಂಡರ್ ಸಮುದಾಯಕ್ಕೆ ಸಂಪರ್ಕಾಧಿಕಾರಿಯಾಗಿ ಸೇವೆ ಸಲ್ಲಿಸಿದ್ದಾರೆ.
Recommended Video
-
April 9 Horoscope: 12 ರಾಶಿಗಳಿಗೆ ಇಂದು ಸಂತೋಷ, ಸವಾಲು ಮತ್ತು ಅವಕಾಶಗಳ ಮಿಶ್ರ ಫಲ -
Viral: ಬೆಂಗಳೂರಿಗೆ ಕಾಲಿಟ್ಟಿತೇ ಡೇಂಜರಸ್ 'ಜಾಂಬಿ ಡ್ರಗ್'?: ಯುವಕನ ವಿಡಿಯೋ ನೋಡಿ ಬೆಚ್ಚಿಬಿದ್ದ ಸಿಲಿಕಾನ್ ಸಿಟಿ ಜನ -
PUC Results: 2026ರ ದ್ವಿತೀಯ PUC ಪರೀಕ್ಷೆ ಫಲಿತಾಂಶ ಪ್ರಕಟ, ಇವರೇ ನೋಡಿ ಟಾಪರ್ -
Dhurandhar-2 OTT: ನೆಟ್ಫ್ಲಿಕ್ಸ್ ಅಲ್ಲ, ಈ ಒಟಿಟಿಯಲ್ಲಿ 'ಧರಂಧರ-2' ಅಬ್ಬರ, ಯಾವಾಗ? -
Ragi Price Today: ಕರ್ನಾಟಕದ ಮಾರುಕಟ್ಟೆಗಳಲ್ಲಿ ಇಂದಿನ "ರಾಗಿ' ಬೆಲೆ ಎಷ್ಟಿದೆ? ಲೇಟೆಸ್ಟ್ ಅಪ್ಡೇಟ್ -
Rain in Karnataka: ಕರ್ನಾಟಕದ ಕರಾವಳಿಯಲ್ಲಿ ಭಾರೀ ಬಿಸಿಲು; ಬೆಂಗಳೂರು ಸೇರಿ ಈ ಭಾಗಗಳಲ್ಲಿ ಮಳೆ: ಐಎಂಡಿ -
Election Commission: ಚುನಾವಣೆ ಸಮಯದಲ್ಲೇ ಭಾರತೀಯ ಚುನಾವಣಾ ಆಯೋಗದ ಟ್ವೀಟ್ ಎಡವಟ್ಟು, ಬಿಜೆಪಿ ಪರ ಎಂದ ವಿರೋಧ ಪಕ್ಷಗಳು -
Dhurandhar 2: ದುರಂಧರ್ 2 ಸಿನಿಮಾ: ಬಾಕ್ಸ್ ಆಫೀಸ್ನಲ್ಲಿ 1,000 ಕೋಟಿ ದಾಖಲೆಯ ನಡುವೆ ಹೊಸ ಸಂಕಷ್ಟ -
Zombis Drug: ಬೆಂಗಳೂರಲ್ಲಿ ಜಾಂಬಿ ಡ್ರಗ್ಸ್ ಸೇವಿಸಿ ಯುವಕನ ವಿಚಿತ್ರ ವರ್ತನೆ: ನಟ ದುನಿಯಾ ವಿಜಯ್ ವಿಡಿಯೋ ವೈರಲ್ -
Assembly Elections 2026: ಕೇರಳಂ, ಅಸ್ಸಾಂ, ಪುದುಚೇರಿ ವಿಧಾನಸಭೆ ಚುನಾವಣೆ ಮತದಾನ ಪ್ರಾರಂಭ -
Karnataka 2nd Puc Results 2026: ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟ; ರಾಜ್ಯದಲ್ಲಿ ಯಾವ ಜಿಲ್ಲೆ ಎಷ್ಟನೇ ಸ್ಥಾನ? -
Chandrika Dixit: ಒಂದು ರಾತ್ರಿ ನನ್ನ ಜೊತೆ ಮಲಗಿದ್ರೆ 50 ಲಕ್ಷ ಕೊಡ್ತೇನೆ; ಚಂದ್ರಿಕಾಗೆ ಖ್ಯಾತ ಉದ್ಯಮಿ ಆಫರ್












Click it and Unblock the Notifications