• search
  • Live TV
ವಾಷಿಂಗ್ಟನ್ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಪಾಕಿಸ್ತಾನದಲ್ಲಿ ಇನ್ನೂ 40,000 ಉಗ್ರರಿದ್ದಾರೆ ಎಂದ ಇಮ್ರಾನ್ ಖಾನ್!

|

ವಾಷಿಂಗ್ಟನ್, ಜುಲೈ 24: ಪಾಕಿಸ್ತಾನದಲ್ಲಿ ಇನ್ನೂ 30 ರಿಂದ 40 ಸಾವಿರ ಉಗ್ರರಿದ್ದಾರೆ ಎಂಬ ಸತ್ಯವನ್ನು ಸ್ವತಃ ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್ ಒಪ್ಪಿಕೊಂಡಿದ್ದಾರೆ!

ಅಮೆರಿಕ ಪ್ರವಾಸದಲ್ಲಿರುವ ಅವರು ಕಾರ್ಯಕ್ರಮವೊಂದರಲ್ಲಿ ಮಾತನಾಡುತ್ತ, 'ಅಫಘಾನಿಸ್ತಾನ ಮತ್ತು ಕಾಶ್ಮೀರದ ಕೆಲವು ಜಾಗಗಳಲ್ಲಿ ತರಬೇತಿ ಪಡೆದ 30-40 ಸಾವಿರ ಉಗ್ರರು ಪಾಕಿಸ್ತಾನದಲ್ಲಿದ್ದಾರೆ. ಹಿಂದಿನ ಸರ್ಕಾರಗಳು ಇಚ್ಛಾಶಕ್ತಿ ತೋರದ ಕಾರಣ ಪಾಕಿಸ್ತಾನ ಈಗಲೂ ಭಯೋತ್ಪಾದಕರನ್ನು ಹೊಂದಿದೆ' ಎಂದು ಇಮ್ರಾನ್ ಖಾನ್ ಹಿಂದಿನ ಸರ್ಕಾರವನ್ನು ದೂರಿದರು.

ಅಮೆರಿಕದಲ್ಲಿ ಇಮ್ರಾನ್ ಖಾನ್ ಗೆ ಅವಮಾನ! ಸ್ವಾಗತಿಸಲು ಯಾರೂ ಇಲ್ಲ!ಅಮೆರಿಕದಲ್ಲಿ ಇಮ್ರಾನ್ ಖಾನ್ ಗೆ ಅವಮಾನ! ಸ್ವಾಗತಿಸಲು ಯಾರೂ ಇಲ್ಲ!

"2014 ರಲ್ಲಿ 150 ಮಕ್ಕಳನ್ನು ಶಾಲೆಯಲ್ಲಿ ಹತ್ಯೆ ಮಾಡಿದ ಉಗ್ರದಾಳಿಯ ನಂತರ ನಾವು ಎಲ್ಲಾ ಪಕ್ಷದವರು ರಾಷ್ಟ್ರೀಯ ಕ್ರಿಯಾ ಯೋಜನೆಗೆ ಸಹಿ ಮಾಡಿ, ಪಾಕಿಸ್ತಾನದಲ್ಲಿ ಯಾವುದೇ ಉಗ್ರ ಸಂಘಟನೆ ಕಾರ್ಯಚಟುವಟಿಕೆಯಲ್ಲಿ ತೊಡಗದಂತೆ ನೋಡಿಕೊಳ್ಳುತ್ತೇವೆ ಎಂದಿದ್ದೆವು. ಆದರೆ ಸರ್ಕಾರ ಮೊಸಳೆ ಕಣ್ಣೀರು ಹಾಕಿತೇ ವಿನಃ ಅದನ್ನು ಗಂಭಿರವಾಗಿ ಪಾಲಿಸಲಿಲ್ಲ" ಎಂದು ಅವರು ದೂರಿದರು.

ಉಗ್ರ ಚಟುವಟಿಕೆಯನ್ನು ನಿರ್ಮೂಲನೆ ಮಾಡಲು ಕಂಕಟಬದ್ಧವಾದ ಏಕೈಕ ಸರ್ಕಾರ ನಮ್ಮದು ಎಂದು ಅವರು ಶ್ಲಾಘಿಸಿಕೊಂಡರು. ಪಾಕಿಸ್ತಾನದಲ್ಲಿ ಒಟ್ಟು 40 ಉಗ್ರ ಸಂಘಟನೆಗಳು ಉಗ್ರ ಚಟುವಟಿಕೆ ನಡೆಸುತ್ತಿವೆ. ಆದರೆ ಹಿಂದಿನ ಸರ್ಕಾರಗಳು ಭಯೋತ್ಪಾದನೆಯನ್ನು ನಿಯಂತ್ರಿಸುವಲ್ಲಿ ಯಾವ ಪ್ರಯತ್ನವನ್ನೂ ಮಾಡಲಿಲ್ಲ ಎಂದು ಇಮ್ರಾನ್ ಹೇಳಿದರು.

ಮುಂಬೈ ದಾಳಿಯ ಸಂಚುಕೋರ ಹಫೀಜ್ ಸಯ್ಯದ್ ನನ್ನು ಇತ್ತೀಚೆಗಷ್ಟೇ ಬಂಧಿಸಿರುವುದಾಗಿ ಪಾಕಿಸ್ತಾನ ಹೇಳಿಕೊಂದಿದ್ದನ್ನು ಇಲ್ಲಿ ಸ್ಮರಿಸಬಹುದು. ಆದರೆ ಅದನ್ನು ಭಾರತ ಪಾಕಿಸ್ತಾನದ ನಾಟಕ ಎಂದು ಕರೆದಿತ್ತು.

English summary
Pakistan Prime minister Imran Khan who is in America tour said, There are still 30,000 to 40,000 terrorists in Pakistan.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X