• search
  • Live TV
ವಾಷಿಂಗ್ಟನ್ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

'ಐಸ್ ಬಕೆಟ್ ಚಾಲೆಂಜ್‌'ನ ಸ್ಫೂರ್ತಿ ಫ್ರಾಟಸ್ ಇನ್ನಿಲ್ಲ

|

ನ್ಯೂಯಾರ್ಕ್, ಡಿಸೆಂಬರ್ 10: ಮಾರಣಾಂತಿಕ ನರ ಅವನತಿ ಕಾಯಿಲೆಯ ವಿರುದ್ಧದ ಹೋರಾಟಕ್ಕಾಗಿ ರೂಪಿಸಲಾಗಿದ್ದ 'ಐಸ್ ಬಕೆಟ್ ಚಾಲೆಂಜ್'ಗೆ ಸ್ಫೂರ್ತಿಯಾಗಿದ್ದ ಅಮೆರಿಕ ಕಾಲೇಜಿನ ಮಾಜಿ ಬೇಸ್ ಬಾಲ್ ಆಟಗಾರ ಪೀಟ್ ಫ್ರಾಟಸ್ ತಮ್ಮ 34ನೇ ವಯಸ್ಸಿನಲ್ಲಿ ಮೃತಪಟ್ಟಿದ್ದಾರೆ.

ಅಮೆರಿಕದ ಬಾಸ್ಟನ್ ಪ್ರದೇಶದವರಾದ ಫ್ರಾಟಸ್, ಲಾವ್ ಗೆಹ್ರಿಕ್ ಕಾಯಿಲೆ ಎಂದು ಕರೆಯಲಾಗುವ ಎಎಲ್‌ಎಸ್ (ಆಮೋಟ್ರೋಫಿಕ್ ಲಾಟರಲ್ ಸ್ಲಿರಿಯೋಸಿಸ್) ಸಮಸ್ಯೆಯಿಂದ ಬಳಲುತ್ತಿದ್ದರು. ಎಎಲ್‌ಎಸ್ ಚಿಕಿತ್ಸೆಗೆ ನೆರವು ನೀಡುವ ಉದ್ದೇಶದಿಂದ 2014ರಲ್ಲಿ ಐಸ್ ಬಕೆಟ್ ಚಾಲೆಂಜ್ ಆರಂಭವಾಗಿತ್ತು. ಇದು ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಸದ್ದು ಮಾಡಿತ್ತು.

ಮೈಮೇಲೆ ನೀರು ಹೊಯ್ದುಕೊಳ್ಳಿ, ಇಲ್ಲಾ ದೇಣಿಗೆ ನೀಡಿ

ಕಾಯಿಲೆ ಕುರಿತಾದ ವೈದ್ಯಕೀಯ ಸಂಶೋಧನೆಗಳಿಗೆ ದೇಣಿಗೆ ನೀಡುವ ಮೊದಲು ಒಂದು ಬಕೆಟ್ ಐಸ್ ವಾಟರ್‌ಅನ್ನು ತಲೆಯ ಮೇಲೆ ಸುರಿದುಕೊಂಡು ಅದರ ವಿಡಿಯೋವನ್ನು ಆನ್‌ಲೈನ್‌ನಲ್ಲಿ ಹಂಚಿಕೊಳ್ಳಬೇಕಿತ್ತು. ಬಳಿಕ ಆ ಸವಾಲನ್ನು ಇನ್ನೊಬ್ಬರಿಗೆ ನೀಡಬೇಕಿತ್ತು. ಈ ಸವಾಲು ವೈರಲ್ ಆಗಿತ್ತು. ನೂರಾರು ಸೆಲೆಬ್ರಿಟಿಗಳು, ಗಣ್ಯ ವ್ಯಕ್ತಿಗಳು ಮತ್ತು ಕ್ರೀಡಾ ತಂಡಗಳು ಇದರಲ್ಲಿ ಭಾಗವಹಿಸಿದ್ದರು. ಟಾಮ್ ಕ್ರೂಸ್, ಬಿಲ್ ಗೇಟ್ಸ್, ಸ್ಟೀವನ್ ಸ್ಪೀಲ್‌ಬರ್ಗ್, ಅಮೆರಿಕದ ಮಾಜಿ ಅಧ್ಯಕ್ಷರಾದ ಜಾರ್ಜ್ ಡಬ್ಲ್ಯೂ ಬುಷ್, ಬರಾಕ್ ಒಬಾಮ, ಮಾರ್ಕ್ ಜುಕರ್‌ಬರ್ಗ್, ಲೇಡಿ ಗಾಗಾ, ಕ್ರಿಸ್ಟಿಯನ್ ರೊನಾಲ್ಡೋ, ಕ್ರಿಸ್ ಗೇಲ್ ಅಲ್ಲದೆ, ಭಾರತದ ಸಾನಿಯಾ ಮಿರ್ಜಾ, ಬಿಪಾಶಾ ಬಸು, ರೋಹನ್ ಬೋಪಣ್ಣ, ರಿತೇಶ್ ದೇಶ್‌ಮುಖ್ ಮುಂತಾದವರೂ ಈ ಸವಾಲು ಸ್ವೀಕರಿಸಿದ್ದರು.

ಈ ಆಂದೋಲನವು ಎಎಲ್‌ಎಸ್‌ಗಾಗಿ 200 ಮಿಲಿಯನ್ ಡಾಲರ್‌ಗೂ ಅಧಿಕ ಹಣವನ್ನು ಸಂಗ್ರಹಿಸಿದೆ. ಅಮೆರಿಕದಾದ್ಯಂತ ಹೆಚ್ಚು ಕಾಣಿಸಿಕೊಂಡಿರುವ ಈ ಸಮಸ್ಯೆಯಿಂದ ನರ ವ್ಯವಸ್ಥೆಯು ಹಂತ ಹಂತವಾಗಿ ಹದಗೆಟ್ಟು ದೇಹವು ನಿಧಾನವಾಗಿ ಸ್ಥಗಿತಗೊಳ್ಳುತ್ತದೆ. 1941ರಲ್ಲಿ ಬೇಸ್ ಬಾಲ್ ಆಟಗಾರ ಲಾವ್ ಗೆಹ್ರಿಕ್ ಈ ಕಾಯಿಲೆಯಿಂದ ಮೃತಪಟ್ಟ ಬಳಿಕ ಅದಕ್ಕೆ ಈ ಹೆಸರು ಬಂದಿತ್ತು.

ಹಲವು ವರ್ಷಗಳಿಂದ ಈ ಕಾಯಿಲೆಯಿಂದ ಬಳಲುತ್ತಿದ್ದ ಪೀಟ್ ಫ್ರಾಟಸ್ ಮೃತಪಟ್ಟಿರುವುದನ್ನು ಅವರ ಕುಟುಂಬ ಬಹಿರಂಗಪಡಿಸಿದೆ. ಫ್ರಾಟಸ್ ಎಂದಿಗೂ ತಮ್ಮ ಕಾಯಿಲೆಯ ಬಗ್ಗೆ ದೂರು ಹೇಳಿದವರಲ್ಲ. ಬದಲಾಗಿ ಇತರೆ ರೋಗಿಗಳು ಮತ್ತು ಅವರ ಕುಟುಂಬದವರಿಗೆ ಧೈರ್ಯ ತುಂಬುವ ಪ್ರಯತ್ನದಲ್ಲಿ ತೊಡಗಿಸಿಕೊಂಡಿದ್ದರು ಎಂದು ಕುಟುಂಬದ ಹೇಳಿಕೆ ತಿಳಿಸಿದೆ.

ಫ್ರಾಟಸ್ ಅವರ ಸ್ನೇಹಿತ ಕೋರಿ ಗ್ರಿಫಿನ್ (27) ಈ ಐಸ್ ಬಕೆಟ್ ಚಾಲೆಂಜ್ ಆರಂಭಿಸುವ ಮೂಲಕ ದೇಣಿಗೆ ಸಂಗ್ರಹ ಆಂದೋಲನ ಹುಟ್ಟುಹಾಕಿದ್ದರು. ಆದರೆ ಇದು ದೊಡ್ಡ ಮಟ್ಟದಲ್ಲಿ ಪ್ರಚಾರವಾಗುವ ಮೊದಲೇ 2014ರ ಆಗಸ್ಟ್‌ನಲ್ಲಿ ಅವರು ಅಪಘಾತದಲ್ಲಿ ಮೃತಪಟ್ಟಿದ್ದರು.

English summary
The US man and former baseball player who inspired the ice bucket challenge was died at the age of 34.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more
X