• search
 • Live TV
ವಾಷಿಂಗ್ಟನ್ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಮಿಲಿಟರಿ ಸುಪರ್ದಿಗೆ ಹೋಗಲಿದೆಯಾ ಮಿನೆಸೋಟಾದ ಮಿನ್ನಿಯಾಪೊಲಿಸ್ ನಗರ?

|

ವಾಷಿಂಗ್ಟನ್, ಮೇ 29: ಜನಾಂಗೀಯ ತಾರತಮ್ಯದ ಲೇಪ ಹಚ್ಚಿಕೊಂಡಿರುವ ಜಾರ್ಜ್ ಫ್ಲಾಯ್ಡ್ ಸಾವು ಅಮೇರಿಕಾದ ಬೀದಿಗಳಲ್ಲಿ ಮಿಲಿಟರಿ ಪರೇಡಿಗೆ ಮುನ್ನುಡಿ ಬರೆದಿದೆ.

   ಚೀನಾ ಭಾರತ ಗಡಿ ವಿವಾದ ಬಗೆಹರಿಸಲು ಮುಂದಾದ ಅಮೇರಿಕಾ | Oneindia Kannada

   ಕಪ್ಪು ವರ್ಣೀಯ ಜಾರ್ಜ್ ಫ್ಲಾಯ್ಡ್ ಮರಣದ ಬಳಿಕ 'ವೈಟ್' ಪೊಲೀಸರ ವಿರುದ್ಧ ಮಿನೆಸೋಟಾದ ಮಿನ್ನಿಯಾಪೊಲಿಸ್ ನಗರದಲ್ಲಿ ನಡೆದ ಪ್ರತಿಭೆ ಹಿಂಸಾಚಾರದ ರೂಪ ಪಡೆದುಕೊಂಡಿದೆ. ಕಳೆದ ಎರಡು ದಿನಗಳಿಂದ ಮಿನ್ನಿಯಾಪೊಲಿಸ್ ನಗರದಲ್ಲಿ ಕಾನೂನು ವ್ಯವಸ್ಥೆ ಹದಗೆಟ್ಟಿದೆ.

   ಅಮೇರಿಕಾದಲ್ಲಿ ಅಮಾನವೀಯ ಘಟನೆ: ಬಿಳಿ ಪೊಲೀಸರ ಅಟ್ಟಹಾಸಕ್ಕೆ ಬಲಿಯಾದ ಕಪ್ಪು ವರ್ಣೀಯಅಮೇರಿಕಾದಲ್ಲಿ ಅಮಾನವೀಯ ಘಟನೆ: ಬಿಳಿ ಪೊಲೀಸರ ಅಟ್ಟಹಾಸಕ್ಕೆ ಬಲಿಯಾದ ಕಪ್ಪು ವರ್ಣೀಯ

   ಈ ಹಿನ್ನಲೆಯಲ್ಲಿ ಮಿನೆಸೋಟಾದ ಗಲಭೆ ಪ್ರದೇಶದಲ್ಲಿ ಶಾಂತಿ ಸ್ಥಾಪಿಸಲು ಅಮೇರಿಕಾ ಅಧ್ಯಕ್ಷರ ಮಧ್ಯಪ್ರವೇಶ ಅನಿವಾರ್ಯವಾಗಿದ್ದು, ಇದೇ ವಿಚಾರದ ಕುರಿತು ಡೊನಾಲ್ಡ್ ಟ್ರಂಪ್ ಟ್ವೀಟ್ ಮಾಡಿದ್ದಾರೆ.

   ಮಿನ್ನಿಯಾಪೊಲಿಸ್ ನಗರದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಕಾಪಾಡಲು ಮಿಲಿಟರಿ ನಿಯೋಜಿಸುವುದಾಗಿ ಟ್ವೀಟ್ ಮಾಡಿ ಪ್ರತಿಭಟನಾಕಾರರಿಗೆ ಡೊನಾಲ್ಡ್ ಟ್ರಂಪ್ ಎಚ್ಚರಿಕೆ ನೀಡಿದ್ದಾರೆ.

   ಡೊನಾಲ್ಡ್ ಟ್ರಂಪ್ ಟ್ವೀಟ್

   ''ಮಿನ್ನಿಯಾಪೊಲಿಸ್ ನಗರದಲ್ಲಿ ಹಿಂಸಾಚಾರ ನಡೆಯುತ್ತಿರುವುದನ್ನು ನಾನು ನೋಡಲಾರೆ. ಅಲ್ಲಿ ನಾಯಕತ್ವದ ಕೊರತೆ ಎದುರಾಗಿದೆ. ಅಲ್ಲಿನ ಪರಿಸ್ಥಿತಿಯನ್ನು ಮೇಯರ್ ಜೇಕಬ್ ಫ್ರೇ ನಿಯಂತ್ರಣಕ್ಕೆ ತರಬೇಕು. ಇಲ್ಲಾಂದ್ರೆ ನಾನು ಮಿಲಿಟರಿ ನಿಯೋಜಿಸಿ ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುತ್ತೇನೆ'' ಎಂದು ಡೊನಾಲ್ಡ್ ಟ್ರಂಪ್ ಟ್ವೀಟ್ ಮಾಡಿದ್ದಾರೆ.

   ಪರಿಸ್ಥಿತಿ ಕೈ ಮೀರಿದರೆ...

   ಪರಿಸ್ಥಿತಿ ಕೈ ಮೀರಿದರೆ...

   ''ಜಾರ್ಜ್ ಫ್ಲಾಯ್ಡ್ ಸ್ಮರಣೆಗೆ ಅವಮಾನ ಆಗುತ್ತಿದೆ. ಇದಕ್ಕೆ ನಾನು ಅವಕಾಶ ನೀಡುವುದಿಲ್ಲ. ಗವರ್ನರ್ ಟಿಮ್ ವಾಲ್ಜ್ ಜೊತೆಗೆ ನಾನು ಮಾತನಾಡಿದ್ದೇನೆ. ಅವರ ಸಹಾಯಕ್ಕೆ ಮಿಲಿಟರಿ ಇದೆ. ಪರಿಸ್ಥಿತಿ ಕೈ ಮೀರಿದರೆ ಮಿಲಿಟರಿ ನಿಯಂತ್ರಿಸುತ್ತದೆ. ಲೂಟಿಂಗ್ ಸ್ಟಾರ್ಟ್ ಆದಾಗ, ಶೂಟಿಂಗ್ ಸ್ಟಾರ್ಟ್ ಆಗುತ್ತದೆ'' ಎಂದು ಡೊನಾಲ್ಡ್ ಟ್ರಂಪ್ ಟ್ವೀಟಿಸಿದ್ದಾರೆ.

   ಜಾರ್ಜ್ ಫ್ಲಾಯ್ಡ್ ಮೇಲೆ ಪೊಲೀಸರ ಅಟ್ಟಹಾಸ

   ಜಾರ್ಜ್ ಫ್ಲಾಯ್ಡ್ ಮೇಲೆ ಪೊಲೀಸರ ಅಟ್ಟಹಾಸ

   ಕಳೆದ ಸೋಮವಾರ ರಾತ್ರಿ 8 ಗಂಟೆ ಸುಮಾರಿಗೆ 46 ವರ್ಷ ವಯಸ್ಸಿನ ಕಪ್ಪು ವರ್ಣೀಯ ಜಾರ್ಜ್ ಫ್ಲಾಯ್ಡ್ ಮೇಲೆ 'ಬಿಳಿ' ಪೊಲೀಸರು ಅಟ್ಟಹಾಸ ಮೆರೆದಿದ್ದರು. ರಸ್ತೆ ಮೇಲೆ ಬಿದ್ದ 'ಬ್ಲಾಕ್' ಜಾರ್ಜ್ ಫ್ಲಾಯ್ಡ್ ಕುತ್ತಿಗೆಯ ಮೇಲೆ 'ಬಿಳಿ' ಪೊಲೀಸ್ ಹಲವು ನಿಮಿಷಗಳ ಕಾಲ ಬಲವಾಗಿ ಮಂಡಿಯೂರಿದ್ದ ಪರಿಣಾಮ, ಜಾರ್ಜ್ ಫ್ಲಾಯ್ಡ್ ಸಾವನ್ನಪ್ಪಿದ್ದರು.

   ''ಉಸಿರಾಡಲು ಸಾಧ್ಯವಾಗುತ್ತಿಲ್ಲ'', ''ನನ್ನನ್ನು ಕೊಲ್ಲಬೇಡಿ'' ಎಂದು ಪದೇ ಪದೇ ಜಾರ್ಜ್ ಫ್ಲಾಯ್ಡ್ ಹೇಳುತ್ತಿದ್ದರೂ, ಆತನ ಕುತ್ತಿಗೆಯ ಮೇಲಿಂದ 'ವೈಟ್' ಪೊಲೀಸ್ ಕಾಲು ತೆಗೆಯಲಿಲ್ಲ.

   ಜಾರ್ಜ್ ಫ್ಲಾಯ್ಡ್ ಮೇಲೆ ಪೊಲೀಸರ ಮೃಗೀಯ ವರ್ತನೆ ಕ್ಯಾಮರಾದಲ್ಲಿ ಸೆರೆಯಾಗಿದ್ದು, ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

   ವಿಡಿಯೋ ನೋಡಿದ ಜನತೆ ಬಿಳಿ ಪೊಲೀಸರ ಅಟ್ಟಹಾಸವನ್ನು ಖಂಡಿಸಿ ಪ್ರತಿಭಟನೆ ನಡೆಸುತ್ತಿದ್ದಾರೆ.

   ಹಿಂಸಾಚಾರಕ್ಕೆ ತಿರುಗಿದ ಪ್ರತಿಭಟನೆ

   ಹಿಂಸಾಚಾರಕ್ಕೆ ತಿರುಗಿದ ಪ್ರತಿಭಟನೆ

   ಕಳೆದ ಮೂರು ದಿನಗಳಿಂದ ಮಿನೆಸೋಟಾದ ಮಿನ್ನಿಯಾಪೊಲಿಸ್ ನಗರದಲ್ಲಿ ಸತತವಾಗಿ ಪ್ರತಿಭಟನೆ ನಡೆಯುತ್ತಿದೆ. ಪ್ರತಿಭಟನೆ ಹಿಂಸಾಚಾರ ರೂಪಕ್ಕೆ ತಿರುಗಿದ್ದು, ನೂರಾರು ಪ್ರತಿಭಟನಾಕಾರರು ವಾಣಿಜ್ಯ ಮಳಿಗೆಗಳಿಗೆ ಬೆಂಕಿ ಹೆಚ್ಚಿದ್ದಾರೆ. ಇದರಿಂದ ಸಾರ್ವಜನಿಕ ಆಸ್ತಿ-ಪಾಸ್ತಿಗೆ ನಷ್ಟ ಉಂಟಾಗಿದೆ.

   ಕೆಲಸದಿಂದ ವಜಾ

   ಕೆಲಸದಿಂದ ವಜಾ

   ಜಾರ್ಜ್ ಫ್ಲಾಯ್ಡ್ ಸಾವಿನ ಸಂಬಂಧ ನಾಲ್ವರು ಪೊಲೀಸರನ್ನು ಕೆಲಸದಿಂದ ವಜಾಗೊಳಿಸಲಾಗಿದೆ. ನಾಲ್ವರು ಪೊಲೀಸರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಎಂಬುದು ಪ್ರತಿಭಟನಾಕಾರರ ಆಗ್ರಹವಾಗಿದೆ.

   ದಯವಿಟ್ಟು ಶಾಂತವಾಗಿರಿ

   ದಯವಿಟ್ಟು ಶಾಂತವಾಗಿರಿ

   ಸೇಂಟ್ ಪೌಲ್ ಮೇಯರ್ ಮೆಲ್ವಿನ್ ಕಾರ್ಟರ್ ಪ್ರತಿಭಟನಾಕಾರರಿಗೆ ಶಾಂತವಾಗಿರಲು, ಹಿಂಸಾಚಾರದಿಂದ ದೂರವಿರಲು ಮನವಿ ಮಾಡಿದ್ದಾರೆ. ''ದಯವಿಟ್ಟು ಮನೆಯಲ್ಲಿ ಇರಿ. ಪ್ರತಿಭಟಿಸಲು ದಯವಿಟ್ಟು ಇಲ್ಲಿಗೆ ಬರಬೇಡಿ. ಜಾರ್ಜ್ ಫ್ಲಾಯ್ಡ್ ನತ್ತ ಗಮನ ಹರಿಸಿ'' ಎಂದು ಮೆಲ್ವಿನ್ ಕಾರ್ಟರ್ ಟ್ವೀಟ್ ಮಾಡಿದ್ದರು. ಆದರೂ, ಹಿಂಸಾಚಾರ ನಿಯಂತ್ರಣಕ್ಕೆ ಬಂದಿಲ್ಲ.

   English summary
   George Floyd death: Donald Trump expressed anger over the violence in Minneapolis.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X