• search
  • Live TV
ವಾಷಿಂಗ್ಟನ್ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ಕನ್ನಡಿಗನ ಕಾರ್ಯತಂತ್ರ

|

ವಾಷಿಂಗ್ಟನ್, ಅಕ್ಟೋಬರ್ 30:ವಿದೇಶದಲ್ಲಿ ಭಾರತೀಯರ ಸಾಧನೆ ಕಡಿಮೆಯೇನಲ್ಲ. ಆದರೆ ಈಗ ವಿಶ್ವದ ಅತ್ಯಂತ ಪ್ರಭಾವಿ ಹುದ್ದೆ ಎನಿಸಿಕೊಳ್ಳುವ ಅಮೆರಿಕ ಅಧ್ಯಕ್ಷ ಸ್ಥಾನದ ಚುನಾವಣೆಯ ಕಾರ್ಯತಂತ್ರದ ಹಿಂದೆ ಕನ್ನಡಿಗರ ಪಾಲಿದೆ ಎನ್ನುವುದು ವಿಶೇಷವಾಗಿದೆ.

ಅಮೆರಿಕ ಅಧ್ಯಕ್ಷೀಯ ಚುನಾವಣೆಗೆ ಡೆಮಾಕ್ರೆಟಿಕ್ ಪಕ್ಷದ ಅಭ್ಯರ್ಥಿಯಾಗಿರುವ ಜೋ ಬಿಡನ್ ಅವರ ಚುನಾವಣಾ ಕಾರ್ಯತಂತ್ರಕ್ಕೆ ಕನ್ನಡಿಗ ಡಾ.ವಿವೇಕ್ ಮೂರ್ತಿ ಬೆನ್ನೆಲುಬಾಗಿ ನಿಂತಿದ್ದಾರೆ.

ಡೊನಾಲ್ಡ್ ಟ್ರಂಪ್ ಸೋಲುವುದು ಗ್ಯಾರಂಟಿ: ಅಮೆರಿಕದ 'ನಾಸ್ಟ್ರಡಾಮಸ್'

ಮಂಡ್ಯದ ಜಿಲ್ಲೆ ಮದ್ದೂರು ತಾಲೂಕಿನ ಹಲ್ಲೆಗೆರೆ ಗ್ರಾಮದವರಾಗಿರುವ ವಿವೇಕ್ ಮೂರ್ತಿ ಈ ಹಿಂದೆ ಒಬಾಮಾ ಅವರ ಸರ್ಜನ್ ಜನರಲ್ ಆಗಿದ್ದರು. ಆ ಮೂಲಕ ಒಬಾಮಾ ಆಡಳಿತ ಅವಧಿಯ ಆರೋಗ್ಯ ಕ್ಷೇತ್ರದ ಮುಖವಾಣಿಯಂತೆ ಬಿಂಬಿತರಾಗಿದ್ದರು.

ಹಾಗೆಯೇ 2008 ಮತ್ತು 2012ರ ಒಬಾಮಾ ಚುನಾವಣಾ ಪ್ರಚಾರದಲ್ಲೂ ಕನ್ನಡಿಗ ಮೂರ್ತಿ ಪ್ರಮುಖ ಪಾತ್ರವಹಿಸಿದ್ದರು.ಈಗ ಜೋ ಬಿಡನ್ ಗೆದ್ದರೆ ಅಮೆರಿಕ ಅಧ್ಯಕ್ಷರ ಆಡಳಿತದಲ್ಲಿ ಅತ್ಯಂತ ಪ್ರಭಾವಿ ಹುದ್ದೆಯನ್ನು ಅಲಂಕರಿಸುವ ಎಲ್ಲಾ ಸಾಧ್ಯತೆಗಳು ಗೋಚರಿಸುತ್ತಿವೆ.

ಬ್ರಿಟನ್‌ನಲ್ಲಿ ಹುಟ್ಟಿ ಅಮೆರಿಕದಲ್ಲಿ ಬೆಳೆದಿರುವ ವಿವೇಕ್ ಮೂರ್ತಿ, ಮಂಡ್ಯದ ಮದ್ದೂರಿನವರು, ಇವರ ಅಜ್ಜ ಎಚ್ ನಾರಾಯಣಶೆಟ್ಟಿ ಮಾಜಿ ಮುಖ್ಯಮಂತ್ರಿ ದೇವರಾಜ ಅರಸು ಅವರ ಆಪ್ತರಾಗಿದ್ದರು.

ಇವರ ತಂದೆಲಕ್ಷ್ಮೀನರಸಿಂಹ ಮೂರ್ತಿ ಮೈಸೂರು ವೈದ್ಯಕೀಯ ಕಾಲೇಜಿನಲ್ಲಿ ಪ್ರೊಫೆಸರ್ ಆಗಿದ್ದರು. ವಿವೇಕ್ ಮೂರ್ತಿ ಹಾರ್ವರ್ಡ್ ವಿಶ್ವವಿದ್ಯಾಲಯದಲ್ಲಿ ಬಿಎ ಹಾಗೂ ಎಂಬಿಎ ಪದವಿ ಪಡೆದು ಬಳಿಕ ಏಲ್ಸ್ ವಿಶ್ವವಿದ್ಯಾಲಯದಲ್ಲಿ ವೈದ್ಯಕೀಯ ಸ್ನಾತಕೋತ್ತರ ಪದವಿ ಪಡೆದಿದ್ದಾರೆ.

ಇವರ ಸಹೋದರಿ ರಶ್ಮಿ ಕೂಡ ಅಮೆರಿಕದ ಫ್ಲೋರಿಡಾದಲ್ಲಿ ವೈದ್ಯರಾಗಿದ್ದಾರೆ.

English summary
Among those advising him on the pandemic are Dr Vivek Murthy, former US Surgeon General who was appointed by President Barack Obama and Harvard economist Raj Chetty is among those who have briefed Biden on economic issues.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X