ಅಮೆರಿಕದ ಮಾಜಿ ಅಧ್ಯಕ್ಷ ಜಾರ್ಜ್ ಎಚ್ ಡಬ್ಲ್ಯು ಬುಷ್ ನಿಧನ
Recommended Video

ಟೆಕ್ಸಾಸ್, ಡಿಸೆಂಬರ್ 01: ಅಮೆರಿಕ ಸಂಯುಕ್ತ ಸಂಸ್ಥಾನದ 41 ನೇ ಅಧ್ಯಕ್ಷರಾಗಿದ್ದ ಜಾರ್ಜ್ ಎಚ್ ಡಬ್ಲ್ಯು ಬುಷ್ ಶುಕ್ರವಾರ ರಾತ್ರಿ(ಅಮೆರಿಕ ಕಾಲಮಾನ) ಮೃತರಾಗಿದ್ದಾರೆ.
ಅವರ ಪುತ್ರ ಮತ್ತು ಅಮೆರಿಕದ 43 ನೇ ಅಧ್ಯಕ್ಷರಾಗಿದ್ದ ಜಾರ್ಜ್ ಡಬ್ಲ್ಯು ಬುಷ್ ಅವರು ತಂದೆ ಬುಷ್ ಅವರ ನಿಧನದ ಸುದ್ದಿಯನ್ನು ಟ್ವೀಟ್ ಮಾಡಿದ್ದಾರೆ.
"94 ವರ್ಷ ವಯಸ್ಸಿನ ನಮ್ಮ ಪ್ರೀತಿಯ ತಂದೆ ಮೃತರಾಗಿದ್ದಾರೆಂದು ತಿಳಿಸಲು ವಿಷಾದಿಸುತ್ತೇವೆ. ಜಾರ್ಜ್ ಬುಷ್ ಒಬ್ಬ ಅತ್ಯುನ್ನತ ವ್ಯಕ್ತಿ, ಯಾವ ಪುತ್ರ, ಪುತ್ರಿಯೇ ಆದರೂ ಇಂಥದೇ ತಂದೆ ಬೇಕು ಎನ್ನಬಹುದಾದ ವ್ಯಕ್ತತ್ವ. ನಮ್ಮ ತಂದೆಯವರ ಆರೋಗ್ಯಕ್ಕಾಗಿ ಪ್ರಾರ್ಥಿಸಿದ ಎಲ್ಲರಿಗೂ ಕೃತಜ್ಞತೆಗಳು" ಎಂದು ಬುಷ್ ಅವರ ಅಧಿಕೃತ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

1989 ರಿಂದ 1993 ರವರೆಗೆ ಅಮೆರಿಕದ ಅಧ್ಯಕ್ಷರಾಗಿದ್ದ ಬುಷ್ ಅವರು, ಕಳೆದ ಕೆಲವು ವರ್ಷಳಿಂದ ವ್ಹೀಲ್ ಚೇರ್ ನಲ್ಲೇ ಬದುಕು ಸವೆಸುತ್ತಿದ್ದರು. ಅವರು ಪಾರ್ಕಿನ್ ಸನ್ ಕಾಯಿಲೆಯಿಂದ ಬಳಲುತ್ತಿದ್ದರು ಎನ್ನಲಾಗಿದೆ. ಅವರ ಅಗಲಿಕೆಗೆ ವಿಶ್ವದ ಗಣ್ಯರು ಕಂಬನಿ ಮಿಡಿದಿದ್ದಾರೆ.











Click it and Unblock the Notifications