just in: ಪೊಲೀಸರನ್ನು ಬೈಯಲು 12,000ಕ್ಕೂ ಹೆಚ್ಚು ಕರೆ, ಮಹಿಳೆ ಬಂಧನ
ವಾಷಿಂಗ್ಟನ್, ಆಗಸ್ಟ್ 19: 51 ವರ್ಷದ ಫ್ಲೋರಿಡಾದ ಮಹಿಳೆಯೊಬ್ಬರು ಈ ವರ್ಷವೊಂದರಲ್ಲೇ 12,000 ಕ್ಕೂ ಹೆಚ್ಚು ಬಾರಿ 911 ಕರೆ ಮಾಡಿ ಅಧಿಕಾರಿಗಳಿಗೆ ಕಿರುಕುಳ ಮತ್ತು ಕೀಳರಿಮೆಯನ್ನುಂಟು ಮಾಡಿದ ಕಾರಣ ಆಕೆಯನ್ನು ಬಂಧಿಸಲಾಗಿದೆ.
ಪಿನೆಲ್ಲಾಸ್ ಕೌಂಟಿಯ ಕಾರ್ಲಾ ಜೆಫರ್ಸನ್ ಅವರು ಈ ವರ್ಷ ಬರೋಬ್ಬರಿ 12,512 ಬಾರಿ ಪೊಲೀಸ್ ಇಲಾಖೆಗೆ ತುರ್ತು ಕರೆ ಮಾಡಿದ್ದಾರೆ. ಕರೆ ಮಾಡಿ ಪೊಲೀಸರಿಗೆ ಕಿರುಕುಳ, ಕೀಳರಿಮೆ, ವಾದ ಮಾಡುವುದು ಮಾಡಿದ್ದಾರೆ. ಈ ಹಿನ್ನೆಲೆ ಆಕೆಯ ವಿರುದ್ಧ ಪ್ರಕರಣ ದಾಖಲಸಿ, ಬಂಧಿಸಲಾಗಿದೆ.
ಸೇಂಟ್ ಪೀಟರ್ಸ್‌ಬರ್ಗ್ ಪೊಲೀಸ್ ಇಲಾಖೆಗೆ ಬರುವ ಎಲ್ಲಾ ಒಳಬರುವ ಕರೆಗಳಲ್ಲಿ 10% ರಷ್ಟು ಆಕೆಯ ಪುನರಾವರ್ತಿತ ಮತ್ತು ನಿರಂತರ ಕರೆಗಳು ಇರುತ್ತವೆ. ಕರೆ ದಟ್ಟಣೆಗೂ ಆಕೆಯ ಕರೆಗಳೆ ಕಾರಣವೆಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

ಕಳೆದ ತಿಂಗಳು, ಜೆಫರ್ಸನ್ 24 ಗಂಟೆಗಳ ಅವಧಿಯಲ್ಲಿ 512 ಬಾರಿ ಪೊಲೀಸರಿಗೆ ಕರೆ ಮಾಡಿದ್ದಾರೆ. ನ್ಯಾಯಾಲಯದ ಮುಂದೆ ಪೊಲೀಸರು ಸಲ್ಲಿಸಿರುವ ಅಫಿಡವಿಟ್‌ನಲ್ಲಿ ಆಕೆಯ ಈ ಕರೆಗಳನ್ನು "ಅಶ್ಲೀಲ, ಬೆದರಿಕೆ ಮತ್ತು ಅವಾಚ್ಯ" ಎಂದು ವಿವರಿಸಿದ್ದಾರೆ.
"ಆಕೆ ಯಾವುದೇ ಪೋಲೀಸ್ ಸೇವೆಗಳನ್ನು ಪಡೆಯಲು ಕರೆ ಮಾಡುವುದಿಲ್ಲ. ಕೇವಲ ಕಿರುಕುಳ ನೀಡಲು ಮತ್ತು ಕರೆ ತೆಗೆದುಕೊಳ್ಳುವವರನ್ನು ಕೀಳುಗೊಳಿಸಲು ಕರೆ ಮಾಡುತ್ತಾರೆ. ಆಕೆಯ ಕರೆಗಳಿಂದ ಸಾಮಾನ್ಯ ನಿವಾಸಿಗಳಿಗೆ ಪ್ರತಿಕ್ರಿಯಿಸುವ ನಮ್ಮ ಸಾಮರ್ಥ್ಯಕ್ಕೆ ಅಡ್ಡಿಯಾಗುತ್ತಿವೆ" ಎಂದು ಪೊಲೀಸ್ ವಕ್ತಾರ ಯೋಲಾಂಡಾ ಫರ್ನಾಂಡೀಸ್ ತಿಳಿಸಿದ್ದಾರೆ.
ಪೊಲೀಸರು ಜೂನ್‌ನಲ್ಲಿ ಪಿನೆಲ್ಲಾಸ್ ಕೌಂಟಿಯ ಕಾರ್ಲಾ ಜೆಫರ್ಸನ್ ಅವರಿಗೆ ನೋಟಿಸ್ ಕೂಡ ಕಳುಹಿಸಿದ್ದಾರೆ, ಆಕೆ ಸುಮ್ಮನೆ ಕರೆ ಮಾಡುವುದನ್ನು ನಿಲ್ಲಿಸದಿದ್ದರೇ ಬಂಧಿಸುವುದಾಗಿ ಬೆದರಿಕೆ ಹಾಕಿದ್ದಾರೆ. ಆದರೆ ನೋಟಿಸ್ ಪಡೆದ ನಂತರವೂ, ಆಕೆ ಪೊಲೀಸರಿಗೆ ಕರೆ ಮಾಡಿ ಅಧಿಕಾರಿಗಳು ತನ್ನನ್ನು ಬಂಧಿಸಬೇಕೆಂದು ಒತ್ತಾಯಿಸಿದ್ದಾರೆ.
ಆಕೆ ಪದೇ ಪದೇ ಕರೆ ಮಾಡುವುದನ್ನು ಮುಂದುವರೆಸಿದ ಕಾರಣ ಆಕೆಯನ್ನು ಬಂಧಿಸಲಾಗಿದೆ. ನಂತರ ಬಿಡುಗಡೆ ಮಾಡಲಾಯಿತು. ಮಹಿಳೆಯ ವಿರುದ್ಧ ಈ ಮೊದಲು ಕೂಡ ಅಪರಾಧ ಪ್ರಕರಣಗಳಿದ್ದು, ಹಲವಾರು ವರ್ಷಗಳ ಕಾಲ ಜೈಲಿನಲ್ಲಿ ಕಳೆದಿದ್ದಾರೆ ಎಂದು ಪೋಲೀಸ್ ತನ್ನ ವರದಿಯಲ್ಲಿ ತಿಳಿಸಿದೆ.
-
Gold Price: ಏಪ್ರಿಲ್ನಲ್ಲಿ ಚಿನ್ನದ ದರ ಭವಿಷ್ಯ: ಹೇಗಿರುತ್ತದೆ ಮುಂದಿನ ತಿಂಗಳು ಚಿನ್ನದ ಬೆಲೆ? ವಿಶ್ಲೇಷಣೆ -
ಅಡುಗೆ ಮನೆಗಳಿಗೆ ಇನ್ನು ನೇರ ಗ್ಯಾಸ್ ಸಂಪರ್ಕ: ಪೈಪ್ಲೈನ್ ವಿಸ್ತರಣೆಗೆ ಕೇಂದ್ರದಿಂದ ಹೊಸ ಆದೇಶ ಜಾರಿ -
Gold Rate: ಬೆಂಗಳೂರು ಸೇರಿದಂತೆ ವಿವಿಧ ನಗರಗಳಲ್ಲಿ ಎಷ್ಟಿದೆ 22 ಕ್ಯಾರಟ್ ಚಿನ್ನದ ದರ? -
Love Mocktail 3: ಕ್ರಿಪ್ಟೋಮ್ನೇಶಿಯಾ ಯಾರದ್ದೋ ಕಥೆ ಯಾರದ್ದೋ ಹೆಸರು ರೂಪಾ ರಾವ್ ಬರಹ -
ತಿಂಗಳಿಗೆ 10 ಸಾವಿರ ರೂ. ಥೆರಪಿಗೆ, 3 ಸಾವಿರ ನೇಲ್ ಆರ್ಟ್ಗೆ! ಬೆಂಗಳೂರು ಯುವತಿಯ 'Gen Z’' ಖರ್ಚಿನ ಪಟ್ಟಿ Viral -
Jobs: ಕಂದಾಯ ಇಲಾಖೆಯಲ್ಲಿ 500 ಹೊಸ ಗ್ರಾಮ ಆಡಳಿತ ಅಧಿಕಾರಿ ಹುದ್ದೆಗಳಿಗೆ ಶೀಘ್ರದಲ್ಲೇ ನೇಮಕಾತಿ -
ಕೂಲಿಗೆ ಹೋಗಿದ್ದ ವಿದ್ಯಾರ್ಥಿನಿಯನ್ನು ದ್ರಾಕ್ಷಿ ತೋಟದಿಂದಲೇ ಕರೆತಂದು SSLC ಪರೀಕ್ಷೆ ಬರೆಸಿದ ಗದಗ ಬಿಇಒ -
Bengaluru: ಬೆಳ್ಳಂಬೆಳಗ್ಗೆ ಬೆಂಗಳೂರಿನ ಸಮಸ್ಯೆಗಳು: ಬೇರೆ ಊರುಗಳಿಂದ ಬಂದ ಮೆಜೆಸ್ಟಿಕ್ನಲ್ಲಿ ಸಂಕಷ್ಟ, 7 ಪ್ರಮುಖ ಸಂಕಷ್ಟಗಳು -
Ananya Birla: ಆರ್ಸಿಬಿ ಅಭಿಮಾನಿಗಳು ಹಾಗೂ ಸಹೋದರನಿಗೆ ಅನನ್ಯಾ ಬಿರ್ಲಾ ವಿಶೇಷ ಸಂದೇಶ -
Karnataka Weather: ಬಿಸಿಲಿನಿಂದ ಕಂಗೆಟ್ಟಿದ್ದ ಕರುನಾಡಿಗೆ ತಂಪೆರೆಯಲಿದ್ದಾನೆ ವರುಣ; ಎಲ್ಲೆಲ್ಲಿ ಮಳೆ? ಇಲ್ಲಿದೆ ಮಾಹಿತಿ -
Karnataka Weather: ಇಂದು ರಾಜ್ಯದ ಈ ಜಿಲ್ಲೆಗಳಲ್ಲಿ ಗುಡುಗು, ಬಿರುಗಾಳಿ ಸಹಿತ ಮಳೆಯಾಗುವ ಮುನ್ಸೂಚನೆ -
ಕಾಂತಾರ ವಿವಾದ: ಮೈಸೂರು ಚಾಮುಂಡಿ ಬೆಟ್ಟಕ್ಕೆ ಬರ್ತೀನಿ, ಕ್ಷಮೆಯೂ ಕೇಳ್ತೀನಿ ಎಂದ ನಟ ರಣವೀರ್ ಸಿಂಗ್












Click it and Unblock the Notifications