ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪರಿಹಾರ ಪ್ಯಾಕೇಜ್‌ಗೆ ಕೊನೆಗೂ ಡೊನಾಲ್ಡ್ ಟ್ರಂಪ್ ಸಹಿ

|
Google Oneindia Kannada News

ವಾಷಿಂಗ್ಟನ್, ಡಿಸೆಂಬರ್ 28: ಕೊರೊನಾ ವೈರಸ್‌ನಿಂದ ಸಂಕಷ್ಟಕ್ಕೆ ಒಳಗಾದ ಜನತೆಗೆ ಪರಿಹಾರವಾಗಿ 900 ಬಿಲಿಯನ್ ಡಾಲರ್ (66 ಲಕ್ಷ ಕೋಟಿ ರೂ) ಪ್ಯಾಕೇಜ್ ನೀಡುವ ಅಮೆರಿಕ ಸಂಸತ್‌ನ ಪ್ರಸ್ತಾಪಕ್ಕೆ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನಾಟಕೀಯ ಬೆಳವಣಿಗೆಗಳ ಬಳಿಕ ಕೊನೆಗೂ ಸಹಿ ಹಾಕಿದ್ದಾರೆ. ಸಂಸತ್ತು ಅಂಗೀಕರಿಸಿದ್ದ ಪರಿಹಾರ ಮೊತ್ತ ಸಾಲುವುದಿಲ್ಲ ಎಂದು ಕಿರಿಕ್ ಮಾಡಿದ್ದ ಟ್ರಂಪ್, ಅದಕ್ಕೆ ಸಹಿ ಹಾಕುವುದಿಲ್ಲ ಎಂದು ತಕರಾರು ತೆಗೆದಿದ್ದರು.

ಕೊರೊನಾ ವೈರಸ್ ಕಾರಣದಿಂದ ಸ್ಥಗಿತಗೊಂಡಿರುವ ಉದ್ಯಮಗಳು ಮತ್ತು ವೈಯಕ್ತಿಕ ವ್ಯಾಪಾರ ಚಟುವಟಿಕೆಗಳಿಗೆ ಪುನಶ್ಚೇತನ ನೀಡಲು ಆರ್ಥಿಕ ಸವಲತ್ತು ಒದಗಿಸುವ ಸಲುವಾಗಿ ಈ ಪ್ಯಾಕೇಜ್ ಪ್ರಕಟಿಸಲಾಗಿತ್ತು. ನಗದು ಆಧಾರಿತ ವ್ಯವಸ್ಥೆ ಮತ್ತು ಆಹಾರ ಪ್ರಯೋಜನಗಳಂತಹ ಆದ್ಯತೆಯ ಸಂಗತಿಗಳಿಗೆ ನೆರವಾಗಲು ಅನುದಾನ ನೀಡುವ ಸರ್ಕಾರ 1.4 ಟ್ರಿಲಿಯನ್ ಡಾಲರ್ ಮೊತ್ತವನ್ನು ಈ ಬೃಹತ್ ಮಸೂದೆ ಒಳಗೊಂಡಿದೆ.

ಸಂಸತ್‌ನ ಆರ್ಥಿಕ ಪ್ಯಾಕೇಜ್‌ಗೆ ಸಹಿ ಹಾಕಲು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಕಿರಿಕ್ಸಂಸತ್‌ನ ಆರ್ಥಿಕ ಪ್ಯಾಕೇಜ್‌ಗೆ ಸಹಿ ಹಾಕಲು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಕಿರಿಕ್

ಈಗಿನ ಪರಿಹಾರ ಪ್ಯಾಕೇಜ್ ಪ್ರಕಾರ ಪ್ರತಿ ಅಮೆರಿಕನ್ನರಿಗೆ 600 ಡಾಲರ್‌ನ ಚೆಕ್ ಮಾತ್ರ ಸಿಗುತ್ತದೆ. ಇದನ್ನು 2,000 ಡಾಲರ್‌ಗೆ ಹೆಚ್ಚಿಸಬೇಕು ಎಂದು ಹೇಳಿದ್ದ ಟ್ರಂಪ್, ಕೋವಿಡ್ ಪರಿಹಾರ ಪ್ಯಾಕೇಜ್ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದರು. ಸರ್ಕಾರ ಅನಗತ್ಯವಾಗಿ ವೆಚ್ಚ ಮಾಡುತ್ತಿದೆ ಎಂದು ಮಸೂದೆಯಲ್ಲಿನ ಅಂಶಗಳ ಬಗ್ಗೆ ಟೀಕಿಸಿದ್ದರಯ. ಆದರೆ ಟ್ರಂಪ್ ಆಕ್ಷೇಪವನ್ನು ಅವರ ರಿಪಬ್ಲಿಕನ್ ಸಹೋದ್ಯೋಗಿಗಳು ತಿರಸ್ಕರಿಸಿದ್ದರು. ಹೀಗಾಗಿ ಟ್ರಂಪ್ ಅವರು ಭಾನುವಾರ ರಾತ್ರಿ ತಮ್ಮ ಹಠ ಬದಲಿಸಿದ್ದಾರೆ.

Donald Trump Signs Coronavirus Relief And Massive Measure Funding Bill

'ವ್ಯರ್ಥವಾದ ಅಂಶಗಳನ್ನು ತೆಗೆದುಹಾಕಬೇಕು ಎಂಬ ಕಾಂಗ್ರೆಸ್‌ಗೆ ಬಲವಾದ ಸಂದೇಶದೊಂದಿಗೆ ನಾನು ವಿವಿಧೋದ್ದೇಶಗಳ ಮತ್ತು ಕೋವಿಡ್ ಪ್ಯಾಕೇಜ್‌ಗೆ ಸಹಿಹಾಕುತ್ತಿದ್ದೇನೆ' ಎಂದು ಡೊನಾಲ್ಡ್ ಟ್ರಂಪ್ ಹೇಳಿಕೆ ನೀಡಿದ್ದಾರೆ.

ದಲೈಲಾಮ ನೇಮಕ:

ಇದರ ಜತೆಗೆ ಮತ್ತೊಂದು ಮಹತ್ವದ ಮಸೂದೆಗೂ ಟ್ರಂಪ್ ಸಹಿ ಹಾಕಿದ್ದಾರೆ. ಚೀನಾದ ಹಸ್ತಕ್ಷೇಪವಿಲ್ಲದೆ ಟಿಬೆಟ್‌ನ ಬೌದ್ಧ ಸಮುದಾಯವು ಸ್ವತಂತ್ರವಾಗಿ ಮುಂದಿನ ದಲೈಲಾಮ ಅವರನ್ನು ನೇಮಿಸುವುದನ್ನು ಖಾತರಿಪಡಿಸಲು ಟಿಬೆಟ್‌ನಲ್ಲಿನ ಅಮೆರಿಕದ ರಾಯಭಾರ ಕಚೇರಿಯ ಧೋರಣೆಯನ್ನು ಪ್ರತಿಪಾದಿಸುವ ಮತ್ತು ಇದಕ್ಕೆ ಅಂತಾರಾಷ್ಟ್ರೀಯ ಸಹಭಾಗಿತ್ವವನ್ನು ರಚಿಸುವ ಅಂಶವು ಇದರಲ್ಲಿದೆ.

English summary
US President Donald Trump on Sunday night singned Coronavirus relief and massive measure funding bill of $1.4 trillion.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X