• search
  • Live TV
ವಾಷಿಂಗ್ಟನ್ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ವಿಶ್ವ ಆರೋಗ್ಯ ಸಂಸ್ಥೆಗೆ ಗುಡ್‌ಬೈ ಹೇಳಿದ ಡೊನಾಲ್ಡ್ ಟ್ರಂಪ್

|

ವಾಷಿಂಗ್ಟನ್, ಮೇ 30:ಕೊರೊನಾವೈರಸ್ ವಿಷಯದಲ್ಲಿ ವಿಶ್ವ ಆರೋಗ್ಯ ಸಂಸ್ಥೆ ಚೀನಾ ಪರ ಪಕ್ಷಪಾತ ಮಾಡುತ್ತಿದೆ ಎಂದು ನಿರಂತರವಾಗಿ ಆರೋಪ ಮಾಡುತ್ತಾ ಬಂದಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ವಿಶ್ವ ಆರೋಗ್ಯ ಜೊತೆಗಿನ ಸಂಬಂಧವನ್ನು ಕಳೆದುಕೊಂಡಿದ್ದಾರೆ.

ಪ್ರತಿ ವರ್ಷ ವಿಶ್ವ ಆರೋಗ್ಯ ಸಂಸ್ಥೆಗೆ ಚೀನಾ 300 ಕೋಟಿ ರೂ. ನೀಡುತ್ತಿದೆ. ನಾವು 3 ಸಾವಿರ ಕೋಟಿ ರೂ. ನೀಡುತ್ತಿದ್ದೇವೆ. ಆದಾಗ್ಯೂ ವಿಶ್ವ ಆರೋಗ್ಯ ಸಂಸ್ಥೆ ಮೇಲೆ ಚೀನಾ ಸಂಪೂರ್ಣ ನಿಯಂತ್ರಣವನ್ನು ಹೊಂದಿದೆ ಎಂದು ಟ್ರಂಪ್ ಕಿಡಿಕಾರಿದ್ದಾರೆ.

ಕೊರೊನಾ ವೈರಸ್ ಸೋಂಕಿನ 'ಎರಡನೇ ಅಲೆ' ಬಗ್ಗೆ WHO ನೀಡಿದ ವಾರ್ನಿಂಗ್ ಏನು?ಕೊರೊನಾ ವೈರಸ್ ಸೋಂಕಿನ 'ಎರಡನೇ ಅಲೆ' ಬಗ್ಗೆ WHO ನೀಡಿದ ವಾರ್ನಿಂಗ್ ಏನು?

ವಿಶ್ ಆರೋಗ್ಯ ಸಂಸ್ಥೆಗೆ ನೀಡುವ ಹಣವನ್ನು ಜಾಗತಿಕ ಆರೋಗ್ಯ ಕ್ಷೇತ್ರಕ್ಕೆ ಸಂಬಂಧಿಸಿದ ಇತರೆ ಸಂಸ್ಥೆಗಳಿಗೆ ನೀಡಲಾಗುವುದು ಎಂದು ಅವರು ಹೇಳಿದ್ದಾರೆ.

ಹಾಂಕಾಂಗ್‌ಗೆ ಅಮೆರಿಕ ಈವರೆಗೆ ನೀಡಿಕೊಂಡು ಬಂದಿದ್ದ ವಿಶೇಷ ಸ್ಥಾನಮಾನವನ್ನು ರದ್ದುಗೊಳಿಸಲಿದೆ. ಚೀನಾ ರೀತಿಯೇ ಅದನ್ನೂ ಕಾಣಲಿದೆ. ಅಮೆರಿಕ ವಿವಿ ಹಾಗೂ ಕಾಲೇಜುಗಳಲ್ಲಿ ಕೆಲ ಚೀನಾ ವಿದ್ಯಾರ್ಥಿಗಳ ಪ್ರವೇಶಕ್ಕೆ ತಡೆಯೊಡ್ಡಲಾಗುತ್ತಿದೆ ಎಂದು ಅವರು ತಿಳಿಸಿದ್ದಾರೆ.

ಕೊರೊನಾ ಹುಟ್ಟು: ಟ್ರಂಪ್ ಮೇಲಿನ ಕೋಪ, ಮತ್ತೆ ಚೀನಾ ಪರ ನಿಂತ WHOಕೊರೊನಾ ಹುಟ್ಟು: ಟ್ರಂಪ್ ಮೇಲಿನ ಕೋಪ, ಮತ್ತೆ ಚೀನಾ ಪರ ನಿಂತ WHO

ಅಮೆರಿಕದಲ್ಲಿ ಕೊರೊನಾವೈರಸ್‌ನಿಂದ ಇದುವರೆಗೂ ಒಂದು ಲಕ್ಷ ಮಂದಿ ಮೃತಪಟ್ಟಿದ್ದಾರೆ. ವಿಶ್ವ ಆರೋಗ್ಯ ಸಂಸ್ಥೆಗೆ ನೀಡುತ್ತಿದ್ದ ಅನುದಾನವನ್ನು ಶಾಶ್ವತವಾಗಿ ತಡೆಹಿಡಿದಿದ್ದಾರೆ.

English summary
US President Trump announced that the United States would be ending its relationship with the World Health Organization as he blames them and China for the impact of coronavirus.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X