ಡೊನಾಲ್ಡ್ ಟ್ರಂಪ್ ಆರೋಗ್ಯದ ಬಗ್ಗೆ ವೈಟ್‌ಹೌಸ್ ವೈದ್ಯರು ಹೇಳಿದ್ದೇನು?

ವಾಷಿಂಗ್ಟನ್ , ಅಕ್ಟೋಬರ್ 07: ಇತ್ತೀಚೆಗಷ್ಟೇ ಕೊರೊನಾ ಸೋಂಕಿಗೆ ತುತ್ತಾಗಿದ್ದ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಆರೋಗ್ಯ ಸ್ಥಿರವಾಗಿದೆ ಎಂದು ವೈಟ್‌ಹೌಸ್ ವೈದ್ಯರು ಹೇಳಿದ್ದಾರೆ.

ಡೊನಾಲ್ಡ್ ಟ್ರಂಪ್ ಅವರಿಗೆ ಕೊವಿಡ್ 19 ರೋಗದ ಯಾವುದೇ ಲಕ್ಷಣಗಳಿಲ್ಲ, ಅವರು ಆರಾಮವಾಗಿ ಇದ್ದಾರೆ ಎಂದಿದ್ದಾರೆ.

ಕಳೆದ 24 ಗಂಟೆಯಿಂದ ಯಾವುದೇ ರೀತಿಯ ಲಕ್ಷಣಗಳಿಲ್ಲ ಎಂದು ಕೋನ್ಲಿ ತಿಳಿಸಿದ್ದಾರೆ. ಡೊನಾಲ್ಡ್ ಟ್ರಂಪ್ ಅನುಮತಿ ಪಡೆದುಕೊಂಡು ಕೋನ್ಲಿ ಮಾಹಿತಿ ನೀಡಿದ್ದಾರೆ.

Donald Trump Is Now Symptom-Free And Stable, White House Doctor Says

ಅವರು ಮಿಲಿಟರಿ ಆಸ್ಪತ್ರೆಗೆ ದಾಖಲಾಗಿದ್ದರು.ಅವರಿಗೆ ಈಗ ಜ್ವರವಿಲ್ಲ, ಆಸ್ಪತ್ರೆಯಲ್ಲಿದ್ದಾಗ ಕೂಡ ಕೃತಕ ಉಸಿರಾಟ ವ್ಯವಸ್ಥೆಯ ಅಗತ್ಯವಿರಲಿಲ್ಲ. ಟ್ರಂಪ್

ಅವರು ಆಸ್ಪತ್ರೆಯಿಂದ ಹೊರ ಬಂದು ಅಭಿಮಾನಿಗಳಿಗೆ ಧನ್ಯವಾದ ತಿಳಿಸಿದ್ದು ಸಾಕಷ್ಟು ಮಂದಿ ಆಕ್ರೋಶಕ್ಕೆ ಕಾರಣವಾಗಿತ್ತು. ಆದರೆ ಬಳಿಕ ಟ್ರಂಪ್ ಟ್ವೀಟ್ ಮಾಡಿ ಒಂದೊಮ್ಮೆ ನಾನು ಹಾಗೆ ಮಾಡದಿದ್ದರೆ ನನ್ನನ್ನು ಜನರು ಒರಟ ಎಂದು ಕರೆಯುತ್ತಿದ್ದರು ಎಂದಿದ್ದರು. ಈಗ ಆಸ್ಪತ್ರೆಯಿಂದ ಬಿಡುಗಡೆ ಹೊಂದಿ ನಿವಾಸಕ್ಕೆ ತೆರಳಿದ್ದಾರೆ.

ಕೊರೊನಾ ವೈರಸ್ ಕುರಿತು ತಪ್ಪು ಮಾಹಿತಿ ನೀಡಿದ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಪೋಸ್ಟ್‌ಅನ್ನು ಟ್ವಿಟ್ಟರ್ ಮತ್ತು ಫೇಸ್‌ಬುಕ್‌ಗಳು ಅವರ ಖಾತೆಯಿಂದ ಕಿತ್ತುಹಾಕಿವೆ.

ಕೋವಿಡ್ 19 ಕೇವಲ ಒಂದು ಫ್ಲೂ ಅಷ್ಟೇ ಎನ್ನುವ ಮೂಲಕ ಕೊರೊನಾ ವೈರಸ್ ಬಗ್ಗೆ ತಪ್ಪು ಮಾಹಿತಿ ನೀಡಿ ನಿಯಮಗಳನ್ನು ಉಲ್ಲಂಘನೆ ಮಾಡಿದ್ದಕ್ಕಾಗಿ ಸಾಮಾಜಿಕ ಜಾಲತಾಣ ಸಂಸ್ಥೆಗಳು ಈ ಕ್ರಮ ಕೈಗೊಂಡಿವೆ.

ಆದರೆ ಫೇಸ್‌ಬುಕ್‌ನಲ್ಲಿ ಪೋಸ್ಟ್ ಅಳಿಸಿ ಹಾಕುವ ಮುನ್ನ ಅದನ್ನು 26,000ಕ್ಕೂ ಅಧಿಕ ಸಲ ಶೇರ್ ಮಾಡಲಾಗಿತ್ತು ಎಂದು ಫೇಸ್ ಬುಕ್ ಕಂಪೆನಿಯ ಕ್ರೌಡ್ ಟ್ಯಾಂಗಲ್ ಮಾಹಿತಿ ನೀಡಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+