ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅದ್ಭುತ ಕೆಲಸ ಮಾಡಿದ್ದೀರಿ ಎಂದು ಮೆಚ್ಚಿದ ಮೋದಿ: ಡೊನಾಲ್ಡ್ ಟ್ರಂಪ್ ಹೇಳಿಕೆ

|
Google Oneindia Kannada News

ವಾಷಿಂಗ್ಟನ್, ಸೆಪ್ಟೆಂಬರ್ 14: ಕೊರೊನಾ ವೈರಸ್ ಪರೀಕ್ಷೆಯಲ್ಲಿ ಅದ್ಭುತವಾದ ಕೆಲಸ ಮಾಡಿದ್ದೀರಿ ಎಂದು ಪ್ರಧಾನಿ ನರೇಂದ್ರ ಮೋದಿ ತಮ್ಮನ್ನು ಶ್ಲಾಘಿಸಿದ್ದಾರೆ ಎಂಬುದಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿಕೊಂಡಿದ್ದಾರೆ. ತಮ್ಮ ಹಿಂದಿನ ಸರ್ಕಾರವು ಎಚ್‌1ಎನ್1 ನಿರ್ವಹಣೆಯಲ್ಲಿ ಸಂಪೂರ್ಣವಾಗಿ ವಿಫಲವಾಗಿತ್ತು ಎನ್ನುವ ಮೂಲಕ ಡೆಮಾಕ್ರಟಿಕ್ ಪಕ್ಷದ ತಮ್ಮ ಎದುರಾಳಿ ಜೋ ಬಿಡೆನ್ ಅವರ ವಿರುದ್ಧದ ಟೀಕೆಯನ್ನು ಟ್ರಂಪ್ ಮುಂದುವರಿಸಿದ್ದಾರೆ.

'ಭಾರತದಲ್ಲಿ ಮಾಡಿರುವುದಕ್ಕಿಂತಲೂ, ಅನೇಕ ದೊಡ್ಡ ದೇಶಗಳು ಜತೆಗೂಡಿಸಿದಾಗ ಮಾಡಿರುವುದಕ್ಕಿಂತಲೂ ಹೆಚ್ಚು ಜನರನ್ನು ಪರೀಕ್ಷಿಸಿದ್ದೇವೆ. ಕೊರೊನಾ ವೈರಸ್ ಪರೀಕ್ಷೆಯಲ್ಲಿ ಅಮೆರಿಕದ ಬಳಿಕ ಭಾರತ ಎರಡನೆಯ ಸ್ಥಾನದಲ್ಲಿದೆ. ನಾವು ಭಾರತಕ್ಕಿಂತ 44 ಮಿಲಿಯನ್ ಪರೀಕ್ಷೆಗಳ ಮುಂದೆ ಇದ್ದೇವೆ. ಅವರಲ್ಲಿ 1.5 ಬಿಲಿಯನ್ ಜನರಿದ್ದಾರೆ. ಪರೀಕ್ಷೆಯಲ್ಲಿ ನೀವು ಎಂತಹ ಅದ್ಭುತ ಕೆಲಸ ಮಾಡಿದ್ದೀರಿ ಎಂಬುದಾಗಿ ಪ್ರಧಾನಿ ನರೇಂದ್ರ ಮೋದಿ ನನಗೆ ಕರೆ ಮಾಡಿ ಹೇಳುತ್ತಾರೆ' ಎಂದು ಟ್ರಂಪ್ ಚುನಾವಣಾ ಸಮಾವೇಶದಲ್ಲಿ ಹೇಳಿದ್ದಾರೆ.

ನೊಬೆಲ್ ಶಾಂತಿ ಪ್ರಶಸ್ತಿಗೆ ಡೊನಾಲ್ಡ್ ಟ್ರಂಪ್ ಹೆಸರು ಶಿಫಾರಸು!ನೊಬೆಲ್ ಶಾಂತಿ ಪ್ರಶಸ್ತಿಗೆ ಡೊನಾಲ್ಡ್ ಟ್ರಂಪ್ ಹೆಸರು ಶಿಫಾರಸು!

'ಈ ಅಪ್ರಾಮಾಣಿಕ ಜನರಿಗೆ (ಮಾಧ್ಯಮ ಜನರು) ಅದನ್ನು ವಿವರಿಸಿ ಎಂದೆ. ಚೀನಾ ವೈರಸ್ ಆಗಮಿಸಿದ ಸಂದರ್ಭದಲ್ಲಿ ಅವರು ಅಧ್ಯಕ್ಷರಾಗಿದ್ದರೆ ನೂರಾರು ಸಾವಿರಾರು ಜನರು ಸಾಯುತ್ತಿದ್ದರು ಎಂಬುದನ್ನು ಬಿಡೆನ್ ದಾಖಲೆಗಳೇ ತೋರಿಸುತ್ತವೆ. ಉಪಾಧ್ಯಕ್ಷರಾಗಿ ಅವರು ತೀವ್ರ ಕುಸಿತದ ಬಳಿಕ ಅತ್ಯಂತ ಕೆಟ್ಟ ಹಾಗೂ ದುರ್ಬಲ ಮತ್ತು ಮಂದಗತಿಯ ಆರ್ಥಿಕ ಪ್ರಗತಿಯನ್ನು ಕಂಡಿದ್ದಾರೆ' ಎಂದು ಟೀಕಿಸಿದ್ದಾರೆ.

Donald Trump Claims We Are 44 Millions Tests Ahead Of India And PM Modi Praised Him

Recommended Video

ಶತಮಾನದ ಇತಿಹಾಸ ಹೊಂದಿರುವ Pamban ಸೇತುವೆಯ ವಿಶೇಷತೆಗಳು | Oneindia kannada

ಅಮೆರಿಕದ ಜನರಿಗೆ ಉದ್ಯೋಗಗಳನ್ನು ಮರಳಿ ತರುವುದಕ್ಕೆ, ಗಡಿಗಳನ್ನು ಭದ್ರಪಡಿಸಲು, ಸೇನೆಯನ್ನು ಪುನರ್ ರಚಿಸಲು ಮತ್ತು ಹಿಂದೆಂದೂ ಯಾರೂ ಮಾಡಿರದಂತೆ ಚೀನಾ ವಿರುದ್ಧ ನಿಲ್ಲಲು ಕಳೆದ ನಾಲ್ಕು ವರ್ಷವನ್ನು ವಿನಿಯೋಗಿಸಿದ್ದಾಗಿ ಟ್ರಂಪ್ ತಿಳಿಸಿದ್ದಾರೆ.

English summary
US President Donald Trump said, PM Narendra Modi praised him for doing a great job in Coronavirus testing. We have 44 million tests ahead of India.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X