ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವುಹಾನ್ ಲ್ಯಾಬ್ ನಲ್ಲೇ ಕೊರೊನಾ ಜನ್ಮ: 'ಸಾಕ್ಷಿ' ಇದೆ ಎಂದ ಡೊನಾಲ್ಡ್ ಟ್ರಂಪ್!

|
Google Oneindia Kannada News

ವಾಷಿಂಗ್ಟನ್, ಮೇ 1: ವಿಶ್ವದಾದ್ಯಂತ ಇಲ್ಲಿಯವರೆಗೂ 33,08,323 ಜನರಿಗೆ ಡೆಡ್ಲಿ ಕೊರೊನಾ ವೈರಸ್ ಸೋಂಕು ತಗುಲಿದೆ. ಈವರೆಗೂ 2,34,112 ಜನರನ್ನ ಕೊರೊನಾ ವೈರಸ್ ಬಲಿ ಪಡೆದಿದೆ.

ಅತ್ತ ದಿನಗಳು ಉರುಳಿದಂತೆ ಕೊರೊನಾ ಅಟ್ಟಹಾಸ ಹೆಚ್ಚುತ್ತಲೇ ಇದ್ದರೆ, ಇತ್ತ ಕೊರೊನಾ ವೈರಸ್ ಹುಟ್ಟಿನ ಬಗ್ಗೆ ಚರ್ಚೆ ಆಗುತ್ತಲೇ ಇದೆ. ಚೀನಾದ ವುಹಾನ್ ನಲ್ಲಿರುವ ವೈರಾಲಜಿ ಲ್ಯಾಬ್ ನಿಂದಲೇ ಕೊರೊನಾ ವೈರಸ್ ಸೋರಿಕೆ ಆಗಿದೆ ಎಂದು ಹಲವರು ವಾದಿಸುತ್ತಿದ್ದಾರೆ.

ಕೊರೊನಾ ಜನ್ಮ ರಹಸ್ಯದ ವ್ಯೂಹ ಬೇಧಿಸಲು ಹೊರಟ ಅಮೇರಿಕಾ.!ಕೊರೊನಾ ಜನ್ಮ ರಹಸ್ಯದ ವ್ಯೂಹ ಬೇಧಿಸಲು ಹೊರಟ ಅಮೇರಿಕಾ.!

ಕೊರೊನಾ ಜನ್ಮ ರಹಸ್ಯವನ್ನು ತಿಳಿದುಕೊಳ್ಳಲು ಅಮೇರಿಕಾ ತನಿಖೆ ಆರಂಭಿಸಿತ್ತು. ಇದೀಗ ನೋಡಿದ್ರೆ, ಅಮೇರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಪ್ರಕಾರ, ವುಹಾನ್ ಇನ್ಸ್ಟಿಟ್ಯೂಟ್ ಆಫ್ ವೈರಾಲಜಿ ಲ್ಯಾಬ್ ನಲ್ಲೇ ಕೊರೊನಾ ವೈರಸ್ 'ಜನ್ಮ'ವಾಗಿದೆ.! ಅದಕ್ಕೆ ಡೊನಾಲ್ಡ್ ಟ್ರಂಪ್ ಬಳಿ ಸಾಕ್ಷಿ ಕೂಡ ಇದ್ಯಂತೆ.!

ಬಲವಾದ ಪುರಾವೆ ಇದೆಯೇ?

ಬಲವಾದ ಪುರಾವೆ ಇದೆಯೇ?

''ವುಹಾನ್ ಇನ್ಸ್ಟಿಟ್ಯೂಟ್ ಆಫ್ ವೈರಾಲಜಿ ಲ್ಯಾಬ್ ನಲ್ಲೇ ಕೊರೊನಾ ವೈರಸ್ ಜನ್ಮ ತಾಳಿತು ಎಂಬುದಕ್ಕೆ ನಿಮ್ಮ ಬಳಿ ಏನಾದರೂ ಬಲವಾದ ಪುರಾವೆ ಇದೆಯಾ?'' ಎಂದು ಗುರುವಾರದ ನ್ಯೂಸ್ ಬ್ರೀಫಿಂಗ್ ವೇಳೆ ಪತ್ರಕರ್ತರೊಬ್ಬರು ಪ್ರಶ್ನಿಸಿದ್ದರು. ಅದಕ್ಕೆ ಉತ್ತರಿಸಿದ ಡೊನಾಲ್ಡ್ ಟ್ರಂಪ್, ''ಹೌದು, ನನ್ನ ಬಳಿ ಸಾಕ್ಷಿ ಇದೆ'' ಎಂದಿದ್ದಾರೆ.

ನಾಚಿಕೆ ಆಗಬೇಕು

ನಾಚಿಕೆ ಆಗಬೇಕು

''ಚೀನಾ ಮಾಡಿರುವ ದೊಡ್ಡ ಪ್ರಮಾದದಿಂದಾಗಿ ಲಕ್ಷಾಂತರ ಮಂದಿ ಸಾವನ್ನಪ್ಪಿದ್ದಾರೆ. ಹೀಗಿರುವಾಗ ಅವರು ತಪ್ಪಿಸಿಕೊಳ್ಳುವ ಹಾಗಿಲ್ಲ. ವಿಶ್ವ ಆರೋಗ್ಯ ಸಂಸ್ಥೆಗೆ ನಾಚಿಕೆ ಆಗಬೇಕು'' ಎಂದು ವೈಟ್ ಹೌಸ್ ನಲ್ಲಿ ಡೊನಾಲ್ಡ್ ಟ್ರಂಪ್ ಗುಡುಗಿದ್ದಾರೆ.

ಗೊತ್ತಿದ್ದೂ ಚೀನಾ ತಪ್ಪೆಸಗಿದ್ದರೆ, ಪ್ರತೀಕಾರ ನಿಶ್ಚಿತ: ಗುಡುಗಿದ ಡೊನಾಲ್ಡ್ ಟ್ರಂಪ್!ಗೊತ್ತಿದ್ದೂ ಚೀನಾ ತಪ್ಪೆಸಗಿದ್ದರೆ, ಪ್ರತೀಕಾರ ನಿಶ್ಚಿತ: ಗುಡುಗಿದ ಡೊನಾಲ್ಡ್ ಟ್ರಂಪ್!

ಸ್ವಾಭಾವಿಕವಾಗಿ ಜನ್ಮ ತಾಳಿದ ವೈರಸ್ ಅಲ್ಲ?

ಸ್ವಾಭಾವಿಕವಾಗಿ ಜನ್ಮ ತಾಳಿದ ವೈರಸ್ ಅಲ್ಲ?

''ಕೊರೊನಾ ವೈರಸ್ 'ಸ್ವಾಭಾವಿಕವಾಗಿ ಜನ್ಮ ತಾಳಿದ ವೈರಸ್ ಅಲ್ಲ' ಎಂಬುದಕ್ಕೆ ನಿಮಗೆ ಪುರಾವೆ ಸಿಕ್ಕಿದೆಯೇ?'' ಎಂದು ಪತ್ರಕರ್ತರೊಬ್ಬರು ಪ್ರಶ್ನಿಸಿದಾಗ, ''ಈ ಬಗ್ಗೆ ಹಲವು ವಾದಗಳಿವೆ. ತನಿಖೆ ಕೂಡ ನಡೆಯುತ್ತಿದೆ. ಸದ್ಯದಲ್ಲೇ ಉತ್ತರ ಸಿಗಲಿದೆ'' ಎಂದು ಡೊನಾಲ್ಡ್ ಟ್ರಂಪ್ ತಿಳಿಸಿದ್ದಾರೆ.

ಚೀನಾಗೆ ಹೆಚ್ಚು ಸುಂಕ

ಚೀನಾಗೆ ಹೆಚ್ಚು ಸುಂಕ

ಈ ವರ್ಷದ ನವೆಂಬರ್ ನಲ್ಲಿ ಅಮೇರಿಕಾ ಅಧ್ಯಕ್ಷೀಯ ಚುನಾವಣೆ ನಡೆಯಲಿದೆ. ಚುನಾವಣೆಯ ಪ್ರಚಾರ ಅಸ್ತ್ರವಾಗಿ ಚೀನಾ ಮತ್ತು ಕೊರೊನಾ ವಿಚಾರವನ್ನು ಟ್ರಂಪ್ ಬಳಸಿಕೊಳ್ಳುತ್ತಿದ್ದಾರೆ ಎಂಬ ಆಪಾದನೆಯೂ ಕೇಳಿಬರುತ್ತಿದೆ. ಹೀಗಿರುವಾಗಲೇ, ಚೀನಾಗೆ ಹೆಚ್ಚು ಸುಂಕ ವಿಧಿಸುವ ಬಗ್ಗೆಯೂ ಡೊನಾಲ್ಡ್ ಟ್ರಂಪ್ ಮಾತನಾಡಿದ್ದಾರೆ.

English summary
Donald Trump claims he has evidence that the coronavirus originated in Wuhan lab.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X