ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಡೊನಾಲ್ಡ್ ವಿರುದ್ಧ ಗಂಭೀರ ಆರೋಪ, ಸರಿಯಾಗಿ ತೆರಿಗೆ ಕಟ್ಟಲಿಲ್ವಾ ಟ್ರಂಪ್..?

|
Google Oneindia Kannada News

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಚುನಾವಣೆ ಸಮೀಪಿಸುತ್ತಿರುವ ಸಂದರ್ಭದಲ್ಲೇ ಮತ್ತೊಂದು ವಿವಾದಕ್ಕೆ ಸಿಲುಕಿದ್ದಾರೆ. ಲೈಂಗಿಕ ದೌರ್ಜನ್ಯದ ಆರೋಪವಾಯ್ತು, ಕೊರೊನಾ ಒಳ್ಳೆಯದು ಎಂದು ಪೇಚಿಗೆ ಸಿಲುಕಿದ್ದೂ ಆಯ್ತು. ಕಡೆಗೆ ಕ್ಯಾಲಿಫೋರ್ನಿಯ ಕಾಡ್ಗಿಚ್ಚು, ಜಾಗತಿಕ ತಾಪಮಾನ ಏರಿಕೆಯ ಬಗ್ಗೆ ಬೇಕಾಬಿಟ್ಟಿ ಹೇಳಿಕೆಗಳನ್ನ ನೀಡಿ ವಿಪಕ್ಷಗಳ ಟೀಕೆಗಳಿಂದ ವಿಲವಿಲ ಒದ್ದಾಡಿದ್ದ ಟ್ರಂಪ್ ಅಂತಿಮವಾಗಿ ತೆರಿಗೆ ಮೋಸದ ಆರೋಪವನ್ನೂ ಎದುರಿಸುವಂತಾಗಿದೆ.

ಅಮೆರಿಕ ಅಧ್ಯಕ್ಷರಾಗಿ ಟ್ರಂಪ್‌ ಆಯ್ಕೆಯಾದ 2016ನೇ ವರ್ಷದಲ್ಲಿ ಕೇವಲ 55,000 ರೂಪಾಯಿ, ಅಂದರೆ 750 ಡಾಲರ್ ಮಾತ್ರ ತೆರಿಗೆಯನ್ನ ಪಾವತಿಸಿದ್ದಾರೆ ಎಂದು ಅಮೆರಿಕದ ಪ್ರತಿಷ್ಠಿತ ಪತ್ರಿಕೆ ತನಿಖಾ ವರದಿ ಪ್ರಕಟಿಸಿದೆ. 15 ವರ್ಷದಲ್ಲಿ 10 ವರ್ಷ ಕಾಲ ಟ್ರಂಪ್ ಆದಾಯ ತೆರಿಗೆಯನ್ನೇ ಪಾವತಿಸಿಲ್ಲ ಎಂದು ನ್ಯೂಯಾರ್ಕ್‌ ಟೈಮ್ಸ್‌ ವರದಿಯಲ್ಲಿ ವಿವರಿಸಲಾಗಿದೆ.

ಟಿಕ್ ಟಾಕ್ ನಿರ್ಬಂಧ: ಟ್ರಂಪ್‌ ಆದೇಶಕ್ಕೆ ಕೋರ್ಟಿಂದ ತಡೆಟಿಕ್ ಟಾಕ್ ನಿರ್ಬಂಧ: ಟ್ರಂಪ್‌ ಆದೇಶಕ್ಕೆ ಕೋರ್ಟಿಂದ ತಡೆ

ಇನ್ನು ಟ್ರಂಪ್ ಆದಾಯಕ್ಕಿಂತ ನಷ್ಟವೇ ಹೆಚ್ಚು ಎಂಬುದಾಗಿ ಲೆಕ್ಕ ತೋರಿಸಿ ಕಡಿಮೆ ತೆರಿಗೆ ಕಟ್ಟಿದ್ದಾರೆಂದು ಈ ವರದಿಯಲ್ಲಿ ಉಲ್ಲೇಖಿಸಲಾಗಿದೆ. ಈಗಾಗಲೇ ಸೋಲಿನ ಸುಳಿಗೆ ಸಿಲುಕಿರುವ ಟ್ರಂಪ್‌ಗೆ ಈ ವರದಿ ಸಾಕಷ್ಟು ಹಿನ್ನಡೆ ಉಂಟು ಮಾಡಿದೆ.

Donald Trump avoided paying taxes for years, only $750 paid in 2016: Report

ಭಾರತದಲ್ಲಿ ₹1.06 ಕೋಟಿ ಆದಾಯ ತೆರಿಗೆ..?

ಟ್ರಂಪ್ ಹೀಗೆ 55,000 ರೂಪಾಯಿ ಅಥವಾ 750 ಡಾಲರ್ ತೆರಿಗೆ ಕಟ್ಟಿರೋದು 2016ರಲ್ಲಿ ಮಾತ್ರವಲ್ಲ, 2017ರಲ್ಲೂ ಇದು ಮುಂದುವರಿದಿದೆ. 2017ರಲ್ಲೂ ಟ್ರಂಪ್ ಇಷ್ಟೇ ಪ್ರಮಾಣದ ತೆರಿಗೆ ಪಾವತಿಸಿದ್ದರೆಂದು ವರದಿಯಲ್ಲಿ ಉಲ್ಲೇಖ ಮಾಡಲಾಗಿದೆ. ಆದರೆ 2017ರಲ್ಲಿ ಭಾರತದಲ್ಲಿ ಟ್ರಂಪ್ ಮಾಲೀಕತ್ವದ ಕಂಪನಿಗಳು ₹1.06 ಕೋಟಿ ಆದಾಯ ತೆರಿಗೆ ಪಾವತಿಸಿವೆ ಎನ್ನಲಾಗಿದೆ. ಮುಂಬೈನಲ್ಲಿ 'ಟ್ರಂಪ್ ಟವರ್ಸ್' ಸೇರಿದಂತೆ ಭಾರತದಲ್ಲಿ ಹಲವು ಉದ್ಯಮಗಳನ್ನು ಅಮೆರಿಕ ಅಧ್ಯಕ್ಷ ಟ್ರಂಪ್ ಒಡೆತನದ ಕಂಪನಿಗಳು ನಡೆಸುತ್ತಿವೆ.

'ಅದು ಸುಳ್ಳು ಸುದ್ದಿ' ಎಂದ ಟ್ರಂಪ್..!

ಇನ್ನು ತಮ್ಮ ವಿರುದ್ಧದ ಗಂಭೀರ ಆರೋಪಕ್ಕೆ ಪ್ರತಿಕ್ರಿಯೆ ನೀಡಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಅದು ಸುಳ್ಳು ಸುದ್ದಿ ಎಂದಿದ್ದಾರೆ. ನಾನು ತೆರಿಗೆ ಪಾವತಿಸಿದ್ದು, ಲೆಕ್ಕಪರಿಶೋಧನೆ ನಡೆಯುತ್ತಿದೆ ಅಂತಾ ಈ ಆರೋಪವನ್ನು ಸಾರಾಸಗಟಾಗಿ ತಳ್ಳಿಹಾಕಿದ್ದಾರೆ. ಈ ಮೂಲಕ ಅಮೆರಿಕ ಅಧ್ಯಕ್ಷೀಯ ಚುನಾವಣೆ ಸಂದರ್ಭ ತಮ್ಮ ವಿರುದ್ಧ ಕೇಳಿಬಂದಿರುವ ಗಂಭೀರ ಆರೋಪಕ್ಕೆ ಒನ್‌ಲೈನ್ ಉತ್ತರ ನೀಡಿದ್ದಾರೆ ಡೊನಾಲ್ಡ್ ಟ್ರಂಪ್. ಡೆಮಾಕ್ರಟಿಕ್‌ ಪಕ್ಷದ ಅಭ್ಯರ್ಥಿ ಹಾಗೂ ಟ್ರಂಪ್‌ ಎದುರಾಳಿ ಜೋ ಬಿಡೆನ್ ಜೊತೆ ಸೆಪ್ಟೆಂಬರ್ 29ರಂದು 'ಎಲೆಕ್ಷನ್ ಡಿಬೆಟ್' ನಡೆಯಲಿದ್ದು, ಅದಕ್ಕೂ ಮೊದಲೇ ಟ್ರಂಪ್ ಹೀಗೆ ವಿಪಕ್ಷಕ್ಕೆ ಇಕ್ಕಳದಲ್ಲಿ ಸಿಲುಕಿದ್ದಾರೆ.

English summary
President Trump denied that he paid only $750 in federal income tax in 2016 and 2017, telling reporter that a lengthy examination of his tax information.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X