• search
  • Live TV
ವಾಷಿಂಗ್ಟನ್ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಕೊರೊನಾ ಆಯ್ತು ಈಗ ಜಪಾನ್‌ನಿಂದ ಅಮೆರಿಕಕ್ಕೆ ಕಾಲಿಟ್ಟ 'ಮರ್ಡರ್ ಹಾರ್ನೆಟ್'

|

ವಾಷಿಂಗ್ಟನ್, ಮೇ 5: ವಿಶ್ವದ ದೈತ್ಯ ಕೀಟ' ಮರ್ಡರ್ ಹಾರ್ನೆಟ್' (ಕಡು ಜೀರಿಗೆ ಹುಳು) ವಾಯುವ್ಯ ಅಮೆರಿಕದಲ್ಲಿ ಪತ್ತೆಯಾಗಿದೆ. ಇವುಗಳಿಗೆ ಜೇನು ನೊಣಗಳೇ ಆಹಾರ, ಇದು 2 ಇಂಚುಗಳಷ್ಟು ಉದ್ದವಿದ್ದು ಅಮೆರಿಕದ ವಾಷಿಂಗ್ಟನ್‌ ಅಲ್ಲಿ ಕಾಣಿಸಿಕೊಂಡಿದೆ.

ಏಷ್ಯಾದ ಅತಿ ದೊಡ್ಡ ಕೀಟಗಳಲ್ಲಿ ಇದು ಕೂಡ ಒಂದಾಗಿದೆ. ಹಾಗೆಯೇ ಜಪಾನ್‌ನಿಂದ ಇದು ಅಮೆರಿಕಕ್ಕೆ ಬಂದಿದೆ ಎಂದು ಹೇಳಲಾಗಿದೆ. ಈ ಕೀಟವು ಮನುಷ್ಯನನ್ನು ಒಂದಕ್ಕಿಂತ ಹೆಚ್ಚು ಬಾರಿ ಕಚ್ಚಿದರೆ ಮೃತ್ಯ ಸಂಭವಿಸುತ್ತಿದೆ ಎಂದು ಅಮೆರಿಕದ ವಿಶ್ವವಿದ್ಯಾಲಯ ಹೇಳಿದೆ. ಇದು ವಿಶ್ವದಾದ್ಯಂತ 60 ಮಂದಿಯ ಜೀವವನ್ನು ಕಸಿದಿದೆ.

ಕೊರೊನಾ ವೈರಸ್ ಅಲ್ಲ ಭಾರತಕ್ಕೆ ಮಿಡತೆಗಳೇ ದೊಡ್ಡ ಸವಾಲು!

ಮನುಷ್ಯನ ಆರೋಗ್ಯಕ್ಕೆ ಮಾರಕವಾಗಬಲ್ಲ ಈ ಕೀಟವು ಚಳಿಗಾಲದಲ್ಲಿ ಕಾಣಿಸಿಕೊಳ್ಳಲು ಆರಂಭಿಸಿದೆ.ಅಮೆರಿಕದ ಪಾಲಿಗೆ 2020 ಕೆಟ್ಟ ವರ್ಷವೇ ಆಗಿದ್ದು ಒಂದಾದ ಮೇಲೊಂದು ತೊಂದರೆ ಕಾಣಿಸಿಕೊಳ್ಳುತ್ತಿದೆ. ಈಗಾಗಲೇ ಕೊರೊನಾ ವೈರಸ್‌ನಿಂದ 68 ಮಂದಿ ಸಾವನ್ನಪ್ಪಿದ್ದಾರೆ.

ಅದು ಹಳದಿ ಹಾಗೂ ಕಿತ್ತಲೆ ಬಣ್ಣದ ಮುಖವನ್ನು ಹೊಂದಿದೆ ಎಂದು ತಜ್ಞರು ಹೇಳಿದ್ದಾರೆ.ಅದನ್ನು ಅಮೆರಿಕದಲ್ಲಿ ಅದನ್ನು ಕಾಣದಂತೆ ಮಾಡಲು ಸಾಕಷ್ಟು ಪ್ರಯತ್ನಗಳು ನಡೆಯುತ್ತಿವೆ. ಇದು ಮನುಷ್ಯನಿಗೂ ಮಾರಕ ಜೊತೆಗೆ ಎಲ್ಲಾ ಜೇನುನೊಣಗಳನ್ನು ಇವುಗಳು ತಿಂದುಬಿಡುತ್ತವೆ ಎಂದು ತಜ್ಞರು ಮಾಹಿತಿ ನೀಡಿದ್ದಾರೆ.

2019ರ ಡಿಸೆಂಬರ್‌ನಲ್ಲಿ ಮೊದಲ ಬಾರಿಗೆ ಗೋಚರವಾಗಿತ್ತು

2019ರ ಡಿಸೆಂಬರ್‌ನಲ್ಲಿ ಮೊದಲ ಬಾರಿಗೆ ಗೋಚರವಾಗಿತ್ತು

ಕಳೆದ ಡಿಸೆಂಬರ್‌ನಲ್ಲಿ ಅಮೆರಿಕದಲ್ಲಿ ಮೊದಲ ಬಾರಿಗೆ ಹಾರ್ನೆಟ್‌ಗಳು ಪತ್ತೆಯಾಗಿತ್ತು. ಬ್ಲೈನ್ ಹಾಗೂ ವಾಷಿಂಗ್ಟನ್ ಎರಡು ಪ್ರದೇಶಗಳಲ್ಲಿ ಈ ಮರ್ಡರ್ ಹಾರ್ನೆಟ್‌ಗಳಿವೆ ಎಂದು ತಜ್ಞರು ಗುರುತಿಸಿದ್ದರು.

ಏಳು ಪಟ್ಟು ಹೆಚ್ಚು ವಿಷ

ಏಳು ಪಟ್ಟು ಹೆಚ್ಚು ವಿಷ

ಸಾಮಾನ್ಯ ಜೇನುನೊಣಗಳಿಗಿಂತ ಏಳು ಪಟ್ಟು ಹೆಚ್ಚು ವಿಷವನ್ನು ಇವುಗಳು ಹೊರಸೂಸುತ್ತವೆ. ಅವುಗಳಿಂದ ಬಚಾವಾಗಲು ಚೀನಾದಿಂದ ಸ್ಯೂಟ್‌ಗಳನ್ನು ತರಿಸಿಕೊಳ್ಳಲಾಗಿದೆ. ಇದು ಸಾಮಾನ್ಯವಾಗಿ ಪೂರ್ವ ಮತ್ತು ಆಗ್ನೇಯ ಏಷ್ಯಾದ ಕಾಡುಗಳಲ್ಲಿ ಮತ್ತು ಕಡಿಮೆ ಪರ್ವತದ ಪ್ರದೇಶಗಳಲ್ಲಿ ವಾಸಿಸುತ್ತವೆ. ಜೇನುನೊಣಗಳು ಸೇರಿದಂತೆ ದೊಡ್ಡ ಕೀಟಗಳನ್ನು ಇವುಗಳು ತಿನ್ನುತ್ತವೆ. ಇದನ್ನು ಜಪಾನ್‌ನಲ್ಲಿ ಮರ್ಡರ್ ಹಾರ್ನೆಟ್ ಎಂದೇ ಕರೆಯಲ್ಪಟ್ಟಿದೆ. ಅಲ್ಲಿ ಸಾಕಷ್ಟು ಮಂದಿಗೆ ಸಾವಿಗೆ ಇದು ಕಾರಣವಾಗಿದೆ.

ಹಾರ್ನೆಟ್‌ಗಳ ಹುಟ್ಟು ಯಾವಾಗ?

ಹಾರ್ನೆಟ್‌ಗಳ ಹುಟ್ಟು ಯಾವಾಗ?

ಹಾರ್ನೆಟ್‌ಗಳು ಏಪ್ರಿಲ್ ತಿಂಗಳಿನಲ್ಲಿ ಹುಟ್ಟಿಕೊಳ್ಳುತ್ತದೆ. ಮೊದಲು ಹಣ್ಣುಗಳನ್ನು ತಿನ್ನುತ್ತವೆ.ಗೂಡುಗಳನ್ನು ನಿರ್ಮಿಸುತ್ತವೆ. ಬೇಸಿಗೆಯ ಕೊನೆಯ ದಿನಗಳಲ್ಲಿ ಇದರ ಆಕ್ರಮಣ ಹೆಚ್ಚಿರುತ್ತದೆ. ಜೇನು ಗೂಡುಗಳ ಮೇಲೆ ದಾಳಿ ಮಾಡಿ ವಯಸ್ಕ ಜೇನುನೊಣಗಳನ್ನು ಕೊಂದು ಅಲ್ಲಿರುವ ಲಾರ್ವಾ ಮತ್ತು ಪೂಪವನ್ನು ತಿನ್ನುತ್ತವೆ. ಒಮ್ಮೆ ಕಚ್ಚಿದರೆ ಜೇನುನೊಣದ ಕಡಿತಕ್ಕಿಂತಲೂ ಹೆಚ್ಚು ನೋವನ್ನು ಉಂಟು ಮಾಡುತ್ತವೆ. ಇದರಿಂದ ಮನುಷ್ಯರಿಗೆ ಅಲರ್ಜಿ ಆರಂಭವಾಗುತ್ತದೆ ಎಂದು ತಜ್ಞರು ತಿಳಿಸಿದ್ದಾರೆ.

ಹಣ್ಣುಗಳ ಪರಾಗಸ್ಪರ್ಶಕ್ಕೆ ಜೇನು ಬೇಕೇಬೇಕು

ಹಣ್ಣುಗಳ ಪರಾಗಸ್ಪರ್ಶಕ್ಕೆ ಜೇನು ಬೇಕೇಬೇಕು

ಸೇಬು, ಬೆರಿಹಣ್ಣುಗಳು, ಚೆರಿ ಹಣ್ಣುನಂತಹ ಸಾಕಷ್ಟು ಹಣ್ಣುಗಳಿಗೆ ಪರಾಗಸ್ಪರ್ಶ ಮಾಡಲು ರೈತರು ಜೇನುನೊಣವನ್ನೇ ನಂಬಿಕೊಂಡಿದ್ದಾರೆ. ಹೀಗಾಗಿ ಜೇಣುನೊಣಗಳು ತಮ್ಮ ಗೂಡುಗಳನ್ನು ಬೇರೆಡೆಗೆ ಸ್ಥಳಾಂತರಿಸಲು ಹೆದರುತ್ತವೆ ಎಂದು ವಿಜ್ಞಾನಿ ಲಾರೆನ್ಸ್ ಹೇಳಿದ್ದಾರೆ. ಒಂದೊಮ್ಮೆ ಎಲ್ಲಾದರೂ ಹುಳುಗಳ ಗೂಡು ಕಂಡು ಬಂದರೆ ಅವುಗಳನ್ನು ಹೊರಹಾಕಲು ಸ್ವತಃ ನೀವೇ ಪ್ರಯತ್ನ ಪಡಬೇಡಿ ಎಂದು ತಜ್ಞರು ತಿಳಿಸಿದ್ದಾರೆ.

English summary
Hundreds of Asian giant hornets, an invasive, predatory insect dubbed the “murder hornet,” have turned up in Washington state near the Canadian border, where they pose a threat to humans and the beekeeping industry, state agriculture officials said on Monday.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X