ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರಕ್ಷಣಾ ಸಿಬ್ಬಂದಿಗೆ ಕೊರೊನಾ: ಕ್ವಾರಂಟೈನ್ ಆಗದ ಅಮೇರಿಕಾ ಉಪಾಧ್ಯಕ್ಷ!

|
Google Oneindia Kannada News

ವಾಷಿಂಗ್ಟನ್, ಮೇ 11: ಕಳೆದ ಗುರುವಾರ ವೈಟ್ ಹೌಸ್ ನಲ್ಲಿ ಕಾರ್ಯ ನಿರ್ವಹಿಸುವ ಯುಎಸ್ ಮಿಲಿಟರಿ ಪಡೆಯ ಸಿಬ್ಬಂದಿಯೊಬ್ಬರಿಗೆ ಕೋವಿಡ್-19 ಪಾಸಿಟಿವ್ ಕಂಡುಬಂದಿತ್ತು. ಇದಾದ ಬಳಿಕ ಅಮೇರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ಉಪಾಧ್ಯಕ್ಷ ಮೈಕ್ ಪೆನ್ಸ್ ಕೂಡ ಕೋವಿಡ್-19 ಪರೀಕ್ಷೆಗೆ ಒಳಗಾಗಿದ್ದು, ಫಲಿತಾಂಶದಲ್ಲಿ ಇಬ್ಬರಿಗೂ 'ನೆಗೆಟಿವ್' ಬಂದಿದೆ.

ಸೋಂಕಿತ ರಕ್ಷಣಾ ಸಿಬ್ಬಂದಿಯ ಸಂಪರ್ಕಕ್ಕೆ ಬಂದಿರುವ ಪರಿಣಾಮ, ಉಪಾಧ್ಯಕ್ಷ ಮೈಕ್ ಪೆನ್ಸ್ 'ಸೆಲ್ಫ್ ಕ್ವಾರಂಟೈನ್' ಆಗುತ್ತಾರೆ ಎಂದೇ ಭಾವಿಸಲಾಗಿತ್ತು. ಆದರೆ, ''ಮೈಕ್ ಪೆನ್ಸ್ ಸೆಲ್ಫ್ ಕ್ವಾರಂಟೈನ್ ಆಗಲ್ಲ'' ಎಂದು ಅವರ ವಕ್ತಾರ ಡೆವಿನ್ ಓ ಮ್ಯಾಲಿ ಹೇಳಿದ್ದಾರೆ.

ಅಮೇರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಗೆ ಕೋವಿಡ್-19 'ನೆಗೆಟಿವ್'!ಅಮೇರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಗೆ ಕೋವಿಡ್-19 'ನೆಗೆಟಿವ್'!

''ವೈಟ್ ಹೌಸ್ ನಲ್ಲಿರುವ ವೈದ್ಯಕೀಯ ತಂಡದ ನಿರಂತರ ಸಲಹೆ ಪಡೆಯುತ್ತಿರುವ ಮೈಕ್ ಪೆನ್ಸ್, ಪ್ರತಿ ದಿನವೂ ಕೋವಿಡ್-19 ಪರೀಕ್ಷೆಗೆ ಒಳಗಾಗುತ್ತಿದ್ದಾರೆ. ಇಲ್ಲಿಯವರೆಗೂ ಎಲ್ಲಾ ಟೆಸ್ಟ್ ನಲ್ಲೂ ನೆಗೆಟಿವ್ ಬಂದಿದೆ'' ಅಂತ ಡೆವಿನ್ ಓ ಮ್ಯಾಲಿ ತಿಳಿಸಿದ್ದಾರೆ.

Covid 19: US Vice President Mike Pence Is Not Planning To Undergo Self Quarantine

ಅಂದ್ಹಾಗೆ, ಅಮೇರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಕೂಡ ಕ್ವಾರಂಟೈನ್ ಆಗಿಲ್ಲ. ಪ್ರತಿ ದಿನವೂ ಡೊನಾಲ್ಡ್ ಟ್ರಂಪ್ ಕೋವಿಡ್-19 ಪರೀಕ್ಷೆಗೆ ಒಳಗಾಗುತ್ತಿದ್ದಾರೆ.

ಅಮೆರಿಕಾ ಶ್ವೇತಭವನದಲ್ಲಿ ಮೂವರಿಗೆ ಕೊರೊನಾ ವೈರಸ್ ಪಾಸಿಟಿವ್! ಅಮೆರಿಕಾ ಶ್ವೇತಭವನದಲ್ಲಿ ಮೂವರಿಗೆ ಕೊರೊನಾ ವೈರಸ್ ಪಾಸಿಟಿವ್!

* ಅಮೇರಿಕಾದ ಅಂಕಿ-ಅಂಶ

ಇಲ್ಲಿಯವರೆಗಿನ ಕೊರೊನಾ ವೈರಸ್ ಸೋಂಕಿತರು - 13,67,638

ಇಲ್ಲಿಯವರೆಗೂ ಮೃತಪಟ್ಟಿರುವವರು - 80,787

ಸಂಪೂರ್ಣವಾಗಿ ಗುಣಮುಖರಾಗಿರುವವರು - 256,336

ಚಿಂತಾಜನಕ ಆರೋಗ್ಯ ಸ್ಥಿತಿಯಲ್ಲಿ ಇರುವವರು - 16,514

English summary
Covid 19: US Vice President Mike Pence is not planning to undergo self quarantine.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X