• search
  • Live TV
ವಾಷಿಂಗ್ಟನ್ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಕೊರೊನಾ ಕೊನೆಯ ಸಾಂಕ್ರಾಮಿಕವಲ್ಲ, ಮುಂದಿನ ಸವಾಲಿಗೆ ಸಿದ್ಧರಾಗಿ: WHO

|

ವಾಷಿಂಗ್ಟನ್, ಡಿಸೆಂಬರ್ 27:ಕೊರೊನಾ ವೈರಸ್ ಕೊನೆಯ ಸಾಂಕ್ರಾಮಿಕವಲ್ಲ, ಮುಂದಿನ ಸವಾಲಿಗೆ ಸಿದ್ಧರಾಗಿ ಎಂದು ವಿಶ್ವ ಆರೋಗ್ಯ ಸಂಸ್ಥೆ ಎಚ್ಚರಿಕೆ ನೀಡಿದೆ.

ಹವಾಮಾನ ಸುಧಾರಣೆ ಹಾಗೂ ಪ್ರಾಣಿಗಳನ್ನು ಉಳಿಸಿಕೊಳ್ಳದಿದ್ದರೆ ಮಾನವನ ಆರೋಗ್ಯ ಮತ್ತಷ್ಟು ಕ್ಷೀಣಿಸುತ್ತಾ ಹೋಗುತ್ತದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಹೇಳಿದೆ.

ಕೊರೊನಾದಿಂದ ಪಾಠವನ್ನು ಕಲಿಯುವ ಸಮಯ ಬಂದಿದೆ. ಜಗತ್ತು ಬಹಳ ವರ್ಷಗಳಿಂದ ಭೀತಿ ಹಾಗೂ ನಿರ್ಲಕ್ಷ್ಯದ ಚಕ್ರದಲ್ಲಿ ಕಾರ್ಯನಿರ್ವಹಿಸುತ್ತಿದೆ. ಒಮ್ಮೆ ಒಂದು ರೋಗ ಬಂತೆಂದರೆ ಸಾಕು ಹೆಚ್ಚೆಚ್ಚು ಹಣ ಸುರಿಯುತ್ತೇವೆ, ರೋಗವನ್ನು ಗುಣಪಡಿಸಿಕೊಳ್ಳುತ್ತೇವೆ. ಅದು ಗುಣವಾದ ನಂತರ ಮತ್ತದರ ಮೇಲೆ ಯೋಚನೆಯೇ ಇರುವುದಿಲ್ಲ.

ಕೆನಡಾದಲ್ಲಿ ಇಬ್ಬರಿಗೆ ಬ್ರಿಟನ್ ಮಾದರಿಯ ಕೊರೊನಾ ಸೋಂಕು

ಆದರೆ ಮುಂದೆ ಬರಲಿರುವ ರೋಗಗಳ ಕಡೆ ಕೂಡ ಜಾಗ್ರತೆ ವಹಿಸಬೇಕು. ಆದರೆ ಅದನ್ನು ಅರ್ಥಮಾಡಿಕೊಳ್ಳುವುದು ಕಷ್ಟ ಆದರೆ ನಮ್ಮ ಜೀವನಶೈಲಿಯನ್ನು ಬದಲಾಯಿಸಿಕೊಂಡರೆ ಖಂಡಿತವಾಗಿಯೂ ರೋಗ ನಮಗೆ ಬರದಂತೆ ತಡೆಯಬಹುದಾಗಿದೆ.

ಕೊರೊನಾ ಸೋಂಕಿನಿಂದ ಮೃತಪಟ್ಟವರು

ಕೊರೊನಾ ಸೋಂಕಿನಿಂದ ಮೃತಪಟ್ಟವರು

ಸಾಂಕ್ರಾಮಿಕ ರೋಗಗಳು ಜೀವನದ ಒಂದು ಸತ್ಯ, ಮಾನವರು, ಪ್ರಾಣಿಗಳ ಆರೋಗ್ಯದ ನಡುವಿನ ನಿಕಟ ಸಂಪರ್ಕವನ್ನು ಎತ್ತಿ ತೋರಿಸುತ್ತದೆ.

ಕೊರೊನಾವೈರಸ್‌ನಿಂದ 1.75 ಮಿಲಿಯನ್ ಮಂದಿಯನ್ನು ಬಲಿಪಡೆದುಕೊಂಡಿದೆ. 80 ಮಿಲಿಯನ್ ಮಂದಿಗೆ ಸೋಂಕು ತಗುಲಿದೆ.

ಕೊರೊನಾವೈರಸ್ ಕೊನೆಯ ಸಾಂಕ್ರಾಮಿಕವಲ್ಲ

ಕೊರೊನಾವೈರಸ್ ಕೊನೆಯ ಸಾಂಕ್ರಾಮಿಕವಲ್ಲ

ವಿಶ್ವ ಆರೋಗ್ಯ ಸಂಸ್ಥೆ ಮಹಾನಿರ್ದೇಶಕ ಟೆಡ್ರೊಸ್ ಅಡೆನೊಮ್ ಗೆಬ್ರೇಯೆಸಸ್ ಮಾತನಾಡಿ ಕೊರೊನಾವೈರಸ್ ಸೋಂಕು ಕೊನೆಯ ಸಾಂಕ್ರಾಮಿಕವಲ್ಲ ಮತ್ತು ಭವಿಷ್ಯದ ಬಿಕ್ಕಟ್ಟುಗಳಿಗೆ ವಿಶ್ವದಾದ್ಯಂತ ದೇಶಗಳು ಸಿದ್ಧರಾಗಿರಬೇಕು. ಇದು ಮಾತ್ರವಲ್ಲ, ನಾವು ಯಾವುದೇ ಸಮಸ್ಯೆಯನ್ನು ನಿಭಾಯಿಸಬಹುದು, ಇದಕ್ಕಾಗಿ ಎಲ್ಲಾ ದೇಶಗಳು ಆರೋಗ್ಯ ರಕ್ಷಣೆಯಲ್ಲಿ ಹೂಡಿಕೆ ಮಾಡಬೇಕಾಗುತ್ತದೆ ಎಂದು ಕರೆ ನೀಡಿದ್ದಾರೆ.

ಸಾಂಕ್ರಾಮಿಕ ರೋಗಗಳು ಜೀವನದ ಒಂದು ಭಾಗ

ಸಾಂಕ್ರಾಮಿಕ ರೋಗಗಳು ಜೀವನದ ಒಂದು ಭಾಗ

ಇದು ಕೊನೆಯ ಸಾಂಕ್ರಾಮಿಕವಾಗುವುದಿಲ್ಲ. ಸಾಂಕ್ರಾಮಿಕ ರೋಗಗಳು ಜೀವನದ ಒಂದು ಭಾಗ ಎಂದು ಇತಿಹಾಸ ನಮಗೆ ಕಲಿಸಿದೆ. ಆದರೆ ಮುಂದಿನ ಬಾರಿ ಸಾಂಕ್ರಾಮಿಕ ರೋಗ ಬಂದಾಗ, ನಾವೆಲ್ಲರೂ ಅದಕ್ಕೆ ಸಿದ್ಧರಾಗಿರಬೇಕು. ತಂತ್ರಜ್ಞಾನಗಳಲ್ಲಿ ಹೆಚ್ಚಿನ ಪ್ರಗತಿಯ ಹೊರತಾಗಿಯೂ, ಅನೇಕ ದೇಶಗಳು ಇನ್ನೂ ತಮ್ಮ ಸಾರ್ವಜನಿಕ ಆರೋಗ್ಯ ವ್ಯವಸ್ಥೆಗಳ ಬಗ್ಗೆ ಸರಿಯಾದ ದಿಕ್ಕಿನಲ್ಲಿ ಗಮನಹರಿಸಿಲ್ಲ. ಅಂತಹ ಪರಿಸ್ಥಿತಿಯಲ್ಲಿ ಎಲ್ಲಾ ದೇಶಗಳು ಸಾರ್ವಜನಿಕ ಆರೋಗ್ಯ ಸೇವೆಗಾಗಿ ಹೆಚ್ಚು ಹೂಡಿಕೆ ಮಾಡಬೇಕಾಗುತ್ತದೆ ಎಂದು ಅವರು ಹೇಳಿದರು.

ಕೊರೊನಾ ಜಾಗತಿಕ ಸಾಂಕ್ರಾಮಿಕ

ಕೊರೊನಾ ಜಾಗತಿಕ ಸಾಂಕ್ರಾಮಿಕ

ಕೋವಿಡ್-19 (ಅನ್ನು ಮಾರ್ಚ್ 11 ರಂದು ಸಾಂಕ್ರಾಮಿಕ ರೋಗವನ್ನು ಘೋಷಿಸಲಾಯಿತು. ಗಮನಾರ್ಹವಾಗಿ ಮಾರ್ಚ್ 11 ರಂದು WHO ಕೊರೊನಾವೈರಸ್‌ ಸೋಂಕನ್ನು ಜಾಗತಿಕ ಸಾಂಕ್ರಾಮಿಕ ಎಂದು ಘೋಷಿಸಿತು. ಸೋಮವಾರ ಬಿಡುಗಡೆಯಾದ ಅಂಕಿಅಂಶಗಳ ಪ್ರಕಾರ ಈ ಸಾಂಕ್ರಾಮಿಕ ರೋಗದಿಂದಾಗಿ 890,000ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ. ಸೋಂಕಿಗೆ ತುತ್ತಾದ ದೇಶಗಳಲ್ಲಿ ಭಾರತವು ಈಗ ಅಮೆರಿಕ ನಂತರದ ಸ್ಥಾನ ಅಂದರೆ ಎರಡನೇ ಸ್ಥಾನವನ್ನು ತಲುಪಿದೆ.

English summary
The coronavirus crisis will not be the last pandemic, and attempts to improve human health are "doomed" without tackling climate change and animal welfare, the World Health Organization's chief said.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X